ರಾಹು-ಕೇತು ನಕ್ಷತ್ರ ಬದಲಾವಣೆ: ಯಾವ ಮೂರು ರಾಶಿಯವರಿಗೆ ಧನ ಲಾಭ ನೋಡಿ..!

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ಶುಭ ಹಾಗೂ ಅಶುಭದ ಸಂಕೇತವಾಗಿ ಪರಿಗಣಿಸಲಾಗಿದೆ. ಹಾಗೆ ಈ ಎರಡು ಗ್ರಹಗಳನ್ನು ನೆರಳು ಮತ್ತು ಪಾಪದ ಗ್ರಹ ಎಂದು ಕೂಡ ಕರೆಯಲಾಗಿದೆ. ಯಾರ ರಾಶಿಯವರಲ್ಲಿ ಹಾಗೂ ಜಾತಕದಲ್ಲಿ ರಾಹು-ಕೇತುಗಳ ಅಶುಭ ಪರಿಣಾಮ ಇರಲಿದ್ಯೋ ಅವರು ಜೀವನದಲ್ಲಿ ಬಹಳಷ್ಟು ಸಮಸ್ಯೆಗಳ ಎದುರಿಸಬೇಕಾಗುತ್ತದೆ. ರಾಹು-ಕೇತು ದೋಷವು ವ್ಯಕ್ತಿಯೊಬ್ಬರ ಜೀವನವನ್ನೇ ಬದಲಾಯಿಸಬಹುದು.

ಈಗ ರಾಹು ಮೀನ ರಾಶಿಯಲ್ಲಿ ಹಾಗೆ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿವೆ. ಹಾಗೆ ಈ ರಾಹು ಮತ್ತು ಕೇತು ಮಾರ್ಚ್ 16ರಂದು ತಮ್ಮ ನಕ್ಷತ್ರಗಳ ಬದಲಾಯಿಸಯತ್ತಿವೆ. ಈ ಸಮಯದಲ್ಲಿ ರಾಹು ಪೂರ್ವ ಭಾದ್ರಪದ ಹಾಗು ಕೇತು ಉತ್ತರ ನಕ್ಷತ್ರಕ್ಕೆ ಚಲಿಸುತ್ತದೆ. ಇದರಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.

Rahu-Ketu Nakshatra Gochar These 3 Zodiac Sign Blessed With Luck

ಈ ಸಮಯದಲ್ಲಿ ಎಲ್ಲಾ ರಾಶಿಯವರ ಮೇಲೆಯೂ ಪರಿಣಾಮ ಬೀರಲಿದೆ. ಅದರಲ್ಲೂ ಕೆಲವೊಂದು ರಾಶಿಯವರಲ್ಲಿ ಇದು ಲಾಭದಾಯಕವಾಗಿ, ಶುಭ ಫಲಗಳ ತರಲಿದೆ. ಹಾಗಾದ್ರೆ ರಾಹು ಕೇತುವಿನ ನಕ್ಷತ್ರ ಬದಲಾವಣೆಯೂ ಯಾವ ರೀತಿ ಯಾವ ರಾಶಿಯವರಿಗೆ ಶುಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ತುಲಾ ರಾಶಿ

ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ತುಲಾ ರಾಶಿಯವರಲ್ಲಿ ಆದಾಯ ಹೆಚ್ಚಳ ಆಗುವುದು ನೋಡಬಹುದು. ಹಲವು ವರ್ಷದಿಂದ ನಿಮ್ಮ ಕಾಡುತ್ತಿದ್ದ ಸಮಸ್ಯೆಯೊಂದು ಬಗೆಹರಿಯುವ ನಿರೀಕ್ಷೆ ಇದೆ. ಇಷ್ಟು ದಿನದಿಂದ ಫಲಿಸದ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ವ್ಯಪಾರಸ್ಥರಿಗೆ ಬಹಳ ಲಾಭದಾಯಕ ಸಮಯವಾಗಲಿದೆ. ನೀವು ಹೊಸದಾಗಿ ಉದ್ಯಮ ಆರಂಭಿಸುವವರಾಗಿದ್ದರೆ ಒಳಿತಾಗುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದಲ್ಲಿ , ಕುಟುಂಬಸ್ಥರ ಆದಾಯದಕ್ಕೂ ಏರಿಕೆ ಸಾಧ್ಯ. ಅವಿವಾಹಿತರಲ್ಲಿ ಈ ಸಮಯ ಬಹಳ ಉತ್ತಮವಾಗುತ್ತಿದೆ.

ಮೇಷ ರಾಶಿ

ರಾಹು ಮತ್ತು ಕೇತುವಿನ ಸಂಚಾರದಿಂದಾಗಿ ಮೇಷ ರಾಶಿಯ ಜನರಲ್ಲಿ ಅತ್ಯುತ್ತಮ ದಿನಗಳು ಬರಲಿದೆ. ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವಿದೇಶ ಪ್ರಯಾಣದಂತಹ ಯೋಗ ನಿಮಗೆ ಒಲಿಯಬಹುದು. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಹಳ ಲಾಭವಾಗಲಿದೆ, ನಿಮ್ಮ ಅಧ್ಯಯನದಲ್ಲಿ ಯಶಸ್ಸು ಕೂಡ ಸಿಗಲಿದೆ. ನಿಮ್ಮ ಹಣಕಾಸು ಪರಿಸ್ಥಿತಿಗಳಲ್ಲಿ ನೀವು ಅಂದುಕೊಂಡಿರುವಂತೆ ಬದಲಾವಣೆ ನೋಡಬಹುದು. ಅದರಲ್ಲೂ ಹೊಸ ಆದಾಯ ಮೂಲ ಹೆಚ್ಚಾಗಲಿದೆ. ಕುಟುಂಬಸ್ಥರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ.

ಕರ್ಕ ರಾಶಿ

ರಾಹು- ಕೇತು ನಕ್ಷತ್ರ ಸಂಚಾರವು ಕರ್ಕ ರಾಶಿಯವರಲ್ಲಿ ಧನಲಾಭಕ್ಕೆ ಕಾರಣವಾಗುತ್ತಿದೆ. ನಿಮ್ಮ ತಿಂಗಳ ವರಮಾನದಲ್ಲಿ ಹೆಚ್ಚಳವಾಗಲಿದೆ. ಹಾಗೆ ಮನೆಗೆ ಹೊಸ ಐಷಾರಾಮಿ ವಸ್ತುವನ್ನು ನೀವು ಖರೀದಿಸಬಹುದು. ಅದರಲ್ಲೂ ಸುಲಭವಾಗಿ ನಿಮ್ಮ ಕಾರ್ಯಗಳು ನಡೆಯುತ್ತವೆ. ನೀವು ಶುಭ ಕಾರ್ಯಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಹಾಗೆ ದೂರ ಪ್ರಯಾಣಗಳು, ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸದಲ್ಲಿ ಭಾಗಿಯಾಗುತ್ತೀರಿ. ಬಹುಕಾಲದಿಂದ ನಿಮಗೆ ಕಾಡುತ್ತಿದ್ದ ಕೆಲಸದಲ್ಲಿನ ಸಮಸ್ಯೆ ದೂರಾಗಲಿದೆ. ಹಳೆಯ ಬಾಕಿ ಸಾಲ ಮರುಪಾವತಿಯಂತಹ ಲಾಭ ನೋಡಬಹುದು. ನೀವು ಪ್ರೀತಿ ಜೀವನದಲ್ಲಿ ಯಶಸ್ಸು ಹಾಗೆ ದಾಂಪತ್ಯದಲ್ಲಿ ಸುಖ ಜೀವನ ನೀಡುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Rahu-Ketu Nakshatra Gochar: These 3 Zodiac Sign Blessed With Luck

Rahu is in Pisces and Ketu is in Virgo. Rahu and Ketu will change their positions on March 16. At this time, Rahu will move to Purva Bhadrapada and Ketu to Uttara Nakshatra.
Story first published: Thursday, February 13, 2025, 18:26 [IST]
X
Desktop Bottom Promotion