Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 2 ರಾಶಿಗಳಲ್ಲಿ ಲಗ್ನ ಮನೆಯಲ್ಲಿರುವ ರಾಹು-ಕೇತು: ಮೇ 18ರಿಂದ ಒಂದೂವರೆ ವರ್ಷ ಈ 2 ರಾಶಿಯವರು ಜಾಗ್ರತೆ
ರಾಹು-ಕೇತು ನೆರಳಿನ ಗ್ರಹ, ಈ ಗ್ರಹಗಳು ಯಾವಾಗಲೂ ಹಿಮ್ಮುಖ ಚಲನೆ ಮಾಡುತ್ತವೆ, 18 ತಿಂಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ. ಹೀಗೆ ರಾಹು-ಕೇತು ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ ದ್ವಾದಶ ರಾಶಿಗಳ ಮೇಲಿರುತ್ತದೆ. ರಾಹು-ಕೇತು ಎಲ್ಲಾ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲ್ಲ, ಇತರ ಗ್ರಹಗಳಂತೆ ಅದು ಯಾವ ಮನೆಯಲ್ಲಿದೆಯೋ ಆ ಸ್ಥಾನಕ್ಕೆ ತಕ್ಕಂತೆ ಪ್ರತಿಫಲ ನೀಡುವ ಗ್ರಹವಾಗಿದೆ. ಕೆಲವರಿಗೆ ತುಂಬಾನೇ ಅದೃಷ್ಟದ ಗ್ರಹಗಳಾದರೆ ಇನಮ್ನು ಕೆಲವರು ರಾಹು-ಕೇತುವಿನಿಂದಾಗಿ ತೊಂದರೆ ಅನುಭವಿಸಬೇಕಾಗುತ್ತದೆ.

ಈ ವರ್ಷ ರಾಹು ಮತು ಕೇತು ಯಾವ ರಾಶಿ ಬಿಟ್ಟು ಯಾವ ರಾಶಿಗೆ ಸಂಚರಿಸಲಿದೆ?
ಈ ವರ್ಷ ಮೇ 18ರಂದು ರಾಹು ಮೀನ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಸಂಚರಿಸಿದರೆ ಕೇತು ಕನ್ಯಾ ರಾಶಿಯನ್ನು ಬಿಟ್ಟು ಸಿಂಹ ರಾಶಿಗೆ ಪ್ರವೇಶಿಸಲಿದೆ. ಇನ್ನು 18 ತಿಂಗಳು ಈ ನೆರಳಿನ ಗ್ರಹಗಳು ಈಗ ಸಂಚಾರ ಮಾಡಿರುವ ರಾಶಿಯಲ್ಲೇ ಇರಲಿದೆ.
ಕುಂಭದಲ್ಲಿ ರಾಹು, ಸಿಂಹದಲ್ಲಿ ಕೇತು ಲಗ್ನ ಮನೆಯಲ್ಲದ್ದಾಗ ಈ ರಾಇಯವರು ಹೆಚ್ಚು ಜಾಗ್ರತೆವಹಿಸಬೇಕು.
ಕುಂಭದಲ್ಲಿ ರಾಹುವಿನ ಪ್ರಭಾವ
ರಾಹು ಕುಂಭ ರಾಶಿಯನ್ನು ಪ್ರವೇಶ ಮಾಡಿದಾಗ ಕುಂಭ ರಾಶಿಯವರು ರಾಹುವಿನಿಂದಾಗಿ ಕೆಲ ಸಮಸ್ಯೆಯನ್ನು ಎದುರಿಸಬಹುದು, ಈ ಅವಧಿಯಲ್ಲಿ ಸಂಬಂಧದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ರಾಹು ಗಂಡ-ಹೆಂಡತಿ ಸಂಬಂಧದ ಮೇಲೆ ನಕರಾತ್ಮಕ ಪ್ರಭಾವ ಬೀರಬಹುದು. ಅನುಮಾನ-ಭಿನ್ನಾಭಿಪ್ರಾಯದಿಂದ ಸಂಬಂಧದಲ್ಲಿ ಸಮಸ್ಯೆ ಹೆಚ್ಚಾಗಬಹುದು. ಅವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಲು ಹಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ವೃತ್ತಿ ಬದುಕಿನಲ್ಲಿ ಹಲವು ಗೊಂದಲದ ಪರಿಸ್ಥಿತಿ ಎದುರಿಸಬಹುದು. ಕೆಲಸದಲ್ಲಿ ತುಂಬಾನೇ ಒತ್ತಡವಿರಬಹುದು, ಕೆಲಸ ಬಿಟ್ಟರೆ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗಬಹುದು, ಹಾಗಾಗಿ ಒಂದು ಕೆಲಸ ಸಿಗುವವರೆಗೆ ಇರುವ ಕೆಲಸ ಬಿಡದಿರುವುದು ಜಾಣತನ.
ಹಣಕಾಸಿನ ವಿಷಯದಲ್ಲಿಯೂ ಹಲವು ಸವಾಲುಗಳನ್ನು ತರಬಹುದು, ಆದಾಯಕ್ಕಿಂತ ಖರ್ಚು ಹೆಚ್ಚಿರಬಹುದು. ಹಣಕ್ಕೆ ಸಂಬಂಧಿಸಿದ ಪ್ರಯತ್ನಗಳು ವಿಫಲವಾದಾಗ ತುಂಬಾನೇ ನಿರಾಸೆ ಉಂಟಾಗಬಹುದು. ನಿಮ್ಮ ಗುರಿ ಕಡೆಗೆ ಗಮನಹರಿಸುವುದು ಕಷ್ಟವಾಗುವುದು. ನೀವು ತಾಳ್ಮೆಯಿಂದ ನಡೆದುಕೊಳ್ಳಿ, ಅಲ್ಲದೆ ಕೆಲಸದಲ್ಲಿ ಹೆಚ್ಚಿನ ಪರಿಶ್ರಮ ಹಾಕಿ,ಇದರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವುದು.
ಪರಿಹಾರವೇನು?
ರಾಹು ಬೀಜ ಮಂತ್ರ ಪ್ರತಿದಿನ ಪಠಿಸಿ
ಸರಸ್ವತಿ ಪೂಜೆ ಮಾಡಿ, ಇದರಿಂದ ವೃತ್ತಿ ಬದುಕಿನ ಸವಾಲುಗಳು ದೂರಾಗುವುದು
ಗಾಯತ್ರಿ ಮಂತ್ರ ಪಠಿಸಿ
ದುರ್ಗಾ ಚಾಲೀಸ ಪಠಿಸಿ.
ಪ್ರತಿ ಸೋಮವಾರ ಶಿವನನ್ನು ಪೂಜಿಸಿ.
ಸಿಂಹ ರಾಶಿಗೆ ಕೇತು ಸಂಚಾರ
ಸಿಂಹ ರಾಶಿಗೆ ಕೇತು ಸಂಚಾರದಿಂದ ಈ ರಾಶಿಯವರು ಆರೋಗ್ಯ ಸಂಬಂಧಿತ ಸಮಸ್ಯೆ ಎದುರಿಸಬಹುದು. ನಿಮ್ಮ ಗುರಿಯಲ್ಲಿ ಹಲವು ಅಡೆತಡೆ ಉಂಟಾಗಬಹುದು, ಉದ್ಯೋಗ ಹಾಗೂ ವ್ಯವಹಾರದಲ್ಲಿ ಬದಲಾವಣೆಯನ್ನು ಎದುರಿಸಬೇಕಾಗುತ್ತದೆ. ಕುಟುಂಬ ಬದುಕಿನ ಮೇಲೆ ಪರಿಣಾಮ ಬೀರಬಹುದು. ಈ ಅವಧಿಯಲ್ಲಿ ಸವಾಲುಗಳನ್ನು ನೀವು ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಬೇಕು. ಉದ್ಯೋಗದಲ್ಲಿನ ಬದಲಾವಣೆ ಆರಂಭದಲ್ಲಿ ಸವಾಲು ಅನಿಸಿದರೂ ಅದು ನಿಮ್ಮ ಜೀವನದ ದಿಕ್ಕು ಬದಲಾಯಿಸುತ್ತದೆ.
ಪರಿಹಾರ
ಶ್ರೀ ಗಣೇಶನ ಆರಾಧನೆ ಮಾಡಿ, ಇದರಿಂದ ಕೇತು ದೋಷವಿದ್ದರೆ ಅದು ದೂರಾಗಲಿದೆ.
ಓಂ ಕೀಂ ಕೇತುವೇ ನಮಃ ಮಂತ್ರ ಪಠಿಸಿ
ನಿರ್ಗತಿಕರಿಗೆ ದಾನ ಮಾಡಿ
ಮಂಗಳವಾರ ಉಪವಾಸವಿದ್ದು ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ
ಕೇತು ಶಾಂತಿ ಪೂಜೆ ಮಾಡಿಸಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











