Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಜನವರಿ 21ಕ್ಕೆ ಪುತ್ರದಾ ಏಕಾದಶಿಯಂದು ಈ ಪರಿಹಾರ ಮಾಡಿದರೆ ನಿಮ್ಮ ಸಮಸ್ಯೆ ದೂರಾಗುವುದು
ಜನವರಿ 21ರಂದು ಪುತ್ರದಾ ಏಕಾದಶಿ ಆಚರಿಸಲಾಗುವುದು. ಸಂತಾನ ಭಾಗ್ಯಕ್ಕಾಗಿ, ಮಕ್ಕಳ ಶ್ರೇಯಸ್ಸಿಗಾಗಿ ಈ ಏಕಾದಶಿಯನ್ನು ಆಚರಿಸಲಾಗುವುದು. ಈ ದಿನ ಕೆಲವೊಂದು ಪರಿಹಾರ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು, ಅದೇನು ಎಂದು ನೋಡೋಣ ಬನ್ನಿ:
ಪುಷ್ಯ ಶುಕ್ಲ ಏಕಾದಶಿ ದಿನಾಂಕ ಪ್ರಾರಂಭ: 20 ಜನವರಿ ಸಂಜೆ 07:27 ರಿಂದ
ಪುಷ್ಯ ಶುಕ್ಲ ಏಕಾದಶಿ ದಿನಾಂಕ ಮುಕ್ತಾಯ: 21 ಜನವರಿ ಸಂಜೆ 07:28 ಕ್ಕೆ
ಏಕಾದಶಿ ಉಪವಾಸವು ಯಾವಾಗಲೂ ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ, ಆದ್ದರಿಂದ ಪುಷ್ಯ ಪುತ್ರಾದ ಏಕಾದಶಿ ಉಪವಾಸವನ್ನು ಜನವರಿ 21 ರಂದು ಆಚರಿಸಲಾಗುತ್ತದೆ.

ಶ್ರೀ ವಿಷ್ಣುವಿನ ಪೂಜೆಗೆ ಸಮು
ಬೆಳಗ್ಗೆ 08:34 ರಿಂದ ಮಧ್ಯಾಹ್ನ 12:32 ರವರೆಗೆ ಪುಷ್ಯ ಪುತ್ರದ ಏಕಾದಶಿ
ಪಾರಣ ಸಮಯ- 22 ಜನವರಿ 07:14 ರಿಂದ 09:21 ರವರೆಗೆ
ಸಂತಾನ ಭಾಗ್ಯಕ್ಕೆ
ಪುತ್ರದಾ ಏಕಾದಶಿಯ ದಿನದಂದು ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ವಿಧಿವಿಧಾನಗಳ ಪ್ರಕಾರ ಉಪವಾಸ ಮಾಡಿ ಚಕ್ರಧಾರಿ ವಿಷ್ಣುವನ್ನು ಪೂಜಿಸುವ ಪ್ರತಿಜ್ಞೆ ಮಾಡಿ. ಯೋಗ್ಯ ಸಂತಾನ ಹೊಂದಲು ದಂಪತಿಗಳು ಈ ದಿನ ತುಳಸಿ ಜಪಮಾಲೆಯೊಂದಿಗೆ 'ಓಂ ದೇವಕೀಸುತ್ ಗೋವಿಂದ ವಾಸುದೇವ ಜಗತ್ಪತೇ, ದೇಹಿ ಮೇ ತನಯಂ ಕೃಷ್ಣ ತ್ವಮಹಂ ಶರಣಂ ಗತಃ' ಎಂಬ ಮಂತ್ರವನ್ನು ಕನಿಷ್ಠ 5 ಬಾರಿ ಜಪಿಸಬೇಕು. ಸಂತಾನ ಗೋಪಾಲ್ ಮಂತ್ರವು ಮಗುವನ್ನು ಹೊಂದಲು ತುಂಬಾ ಪ್ರಯೋಜನಕಾರಿ ಎಂದು ಧಾರ್ಮಿಕ ನಂಬಿಕೆ ಇದೆ. ಈ ದಿನ ಲಡ್ಡು ಗೋಪಾಲನ ಪೂಜೆ ಮಾಡಬೇಕು. ಈ ದಿನ ಲಡ್ಡು ಗೋಪಾಲನಿಗೆ ಪಂಚಾಮೃತ ಸ್ನಾನ ಮಾಡಿಸಿ. ಇದರಿಂದ ಸಂತಾನ ಬಾಗ್ಯ ದೊರೆಯುವುದು ಎಂದು ಹೇಳಲಾಗುವುದು.
ದಾಂಪತ್ಯ ಜೀವನ ಸುಖಮಯವಾಗಿರಲು
ಏಕಾದಶಿಯ ದಿನದಂದು ಶ್ರೀ ವಿಷ್ಣು ಸಹಸ್ತ್ರನಾಮ ಸ್ತೋತ್ರವನ್ನು ಪಠಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ಪಾರಾಯಣ ಮಾಡುವುದರಿಂದ ಮನೆಯಲ್ಲಿ ಸಂಪತ್ತು, ಸುಖ, ಸಮೃದ್ಧಿ ನೆಲೆಸುತ್ತದೆ. ತಮ್ಮ ದಾಂಪತ್ಯದಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿರುವವರು ಇದನ್ನು ಖಂಡಿತವಾಗಿ ಪಠಿಸಬೇಕು. ದಾಂಪತ್ಯ ಜೀವನದಲ್ಲಿ ಘರ್ಷಣೆಗಳಿದ್ದರೆ ಲಕ್ಷ್ಮಿ-ನಾರಾಯಣನ ವಿಗ್ರಹವನ್ನು ಪ್ರತಿಷ್ಠಾಪಿ ಪಾರಾಯಣ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು.
ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು
ಪುತ್ರಾದ ಏಕಾದಶಿಯ ದಿನದಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದರಿಂದ ಮತ್ತು 'ಓಂ ನಮೋ ಭಗವತೇ ವಾಸುದೇವಾಯ' ಎಂದು ಪಠಿಸುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರಾಗುವುದು, ವಿಷ್ಣು ಸಹಸ್ರನಾಮ ಪಠಣೆ ಮಾಡುವುದರಿಂದ ಸಂತೋಷ, ಶಾಂತಿ, ಯಶಸ್ಸನ್ನು ತರುತ್ತದೆ.
ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು
ಶ್ರೀವಿಷ್ಣುವಿಗೆ ಹಳದಿ ಹೂವುಗಳು, ಹಣ್ಣುಗಳನ್ನು ಅರ್ಪಿಸಿ ಆರಾಧಿಸಿ. ಶ್ರೀ ಹರಿಗೆ ಶ್ರೀಗಂಧದ ತಿಲಕವನ್ನು ಹಣೆಯ ಮೇಲೆ ಹಚ್ಚಿದರೆ ಶುಭ ಫಲಗಳು ದೊರೆಯುತ್ತವೆ. ಈ ರೀತಿ ಶ್ರೀವಿಷ್ಣುವನ್ನು ಆರಾಧನೆ ಮಾಡಿದರೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗುವುದು ಎಂದು ಹೇಳಲಾಗಿದೆ.
ಆರ್ಥಿಕ ಕಷ್ಟ ದೂರಾಗಲು
ಈ ದಿನ ಶ್ರೀವಿಷ್ಣುವಿನ ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ, ತುಪ್ಪದ ದೀಪವನ್ನು ಹಚ್ಚಿ, ವಿಷ್ಣು ಹಾಗೂ ಲಕ್ಷ್ಮಿ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications