Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುಷ್ಯ ಪುತ್ರದ ಏಕಾದಶಿ ಯಾವಾಗ? ಇದರ ಮಹತ್ವವೇನು?
ಪ್ರತಿ ತಿಂಗಳು ಎರಡು ಏಕಾದಶಿ ಬರುತ್ತದೆ, ವರ್ಷದಲ್ಲಿ 24 ಏಕಾದಶಿಗಳಿರುತ್ತದೆ, ಈ ವರ್ಷದ ಎರಡನೇ ಏಕಾದಶಿ, ಅದು ಪುಷ್ಯ ಪುತ್ರದ ಏಕಾದಶಿ. ಪುಷ್ಯ ಮಾಸದ ಶುಕ್ಲ ಪಕ್ಷದಂದು ಏಕಾದಶಿಯನ್ನು ಆಚರಿಸಲಾಗುವುದು. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು. ವರ್ಷದಲ್ಲಿ ಎರಡು ಬಾರಿ ಪುತ್ರದಾ ಏಕಾದಶಿ ಬರುತ್ತದೆ.
ಮೊದಲನೆಯದು ಜುಲೈ-ಆಗಸ್ಟ್ ತಿಂಗಳಲ್ಲಿ ಬರುವ ಶ್ರಾವಣ ಪುತ್ರಾದ ಏಕಾದಶಿ ಮತ್ತು ಎರಡನೆಯದು ಡಿಸೆಂಬರ್-ಜನವರಿ ತಿಂಗಳಲ್ಲಿ ಬರುವ ಪುಷ್ಯ ಪುತ್ರಾದ ಏಕಾದಶಿ. ಉತ್ತರ ಭಾರತದಲ್ಲಿ ಪುಷ್ಯ ಪುತ್ರಾದ ಏಕಾದಶಿ ಹೆಚ್ಚು ಜನಪ್ರಿಯವಾಗಿದೆ. ವಿಷ್ಣುವಿನ ಅನುಯಾಯಿಗಳಾದ ವೈಷ್ಣವರು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.

ಪುಷ್ಯ ಪುತ್ರಾದ ಏಕಾದಶಿ ಉಪವಾಸವನ್ನು ಎಲ್ಲಾ ವಿವಾಹಿತ ಸ್ತ್ರೀಯರು ಮತ್ತು ಮಕ್ಕಳಿಲ್ಲದ ಪುರುಷರು ಆಚರಿಸುತ್ತಾರೆ. ಸಂತಾನ ಭಾಗ್ಯ ದೊರೆಯಲಿ, ಮಕ್ಕಳಿಗೆ ಇದ್ದ ತೊಂದರೆಗಳು ದೂರಾಗಲಿ ಎಂದು ಪುತ್ರದ ಏಕಾದಶಿ ಆಚರಿಸಲಾಗುವುದು. ಶ್ರೀ ವಿಷ್ಣುವಿನ ಆಶೀರ್ವಾದದಿಂದ ನಮ್ಮ ಮಕ್ಕಳಿಗೆ ಒಳಿತಾಗಲಿ ಎಂದು ಈ ವ್ರತವನ್ನು ಮಾಡಲಾಗುವುದು.
ಪುಷ್ಯ ಪುತ್ರದಾ ಏಕಾದಶಿ ಈ ತಿಂಗಳಿನಲ್ಲಿ ಯಾವಾಗ ಆಚರಿಸಲಾಗುವುದು?
ಪುಷ್ಯ ಶುಕ್ಲ ಏಕಾದಶಿ ದಿನಾಂಕ ಪ್ರಾರಂಭ: 20 ಜನವರಿ ಸಂಜೆ 07:27 ರಿಂದ
ಪುಷ್ಯ ಶುಕ್ಲ ಏಕಾದಶಿ ದಿನಾಂಕ ಮುಕ್ತಾಯ: 21 ಜನವರಿ ಸಂಜೆ 07:28 ಕ್ಕೆ
21ರಂದು ಏಕಾದಶಿ ಆಚರಣೆ
ಏಕಾದಶಿ ಉಪವಾಸವು ಯಾವಾಗಲೂ ಸೂರ್ಯೋದಯದೊಂದಿಗೆ ಪ್ರಾರಂಭವಾಗುತ್ತದೆ, ಆದ್ದರಿಂದ ಉದಯದ ದಿನಾಂಕದ ಪ್ರಕಾರ, ಪುಷ್ಯ ಪುತ್ರಾದ ಏಕಾದಶಿ ಉಪವಾಸವನ್ನು ಜನವರಿ 21 ರಂದು ಆಚರಿಸಲಾಗುತ್ತದೆ.
ವಿಷ್ಣು ಪೂಜೆಯ ಸಮಯ - ಬೆಳಗ್ಗೆ 08:34 ರಿಂದ ಮಧ್ಯಾಹ್ನ 12:32 ರವರೆಗೆ
ಪುಷ್ಯ ಪುತ್ರದ ಏಕಾದಶಿ ಪಾರಣ ಸಮಯ- 22 ಜನವರಿ 07:14 ರಿಂದ 09:21 ರವರೆಗೆ
ಪುಷ್ಯ ಪುತ್ರಾದ ಏಕಾದಶಿಯ ಮಹತ್ವ
'ಪುತ್ರದ' ಪದವು 'ಪುತ್ರರನ್ನು ಕೊಡುವವನು' ಎಂದರ್ಥ. ಪುಷ್ಯ ಮಾಸದಲ್ಲಿ ಬರುವುದರಿಂದ 'ಪುಷ್ಯ ಪುತ್ರದ ಏಕಾದಶಿ' ಎಂದು ಕರೆಯಲಾಗುತ್ತದೆ. ವರ್ಷದಲ್ಲಿ ಎರಡು ಪುತ್ರಾದಾ ಏಕಾದಶಿಗಳು ಬರುತ್ತವೆ. ಮೊದಲ ಪುತ್ರಾದಾ ಏಕಾದಶಿಯು ಪುಷ್ಯ ಮಾಸದಲ್ಲಿ ಮತ್ತು ಎರಡನೇ ಪುತ್ರಾದಾ ಏಕಾದಶಿ ಶ್ರಾವಣ ಮಾಸದಲ್ಲಿ ಬರುತ್ತದೆ. ಈ ಏಕಾದಶಿಯನ್ನು ಮುಖ್ಯವಾಗಿ ಮಗುವನ್ನು ಹೊಂದಲು ಬಯಸುವ ದಂಪತಿಗಳು ಆಚರಿಸುತ್ತಾರೆ. ಪೂರ್ಣ ಭಕ್ತಿ ಮತ್ತು ಸಮರ್ಪಣೆಯೊಂದಿಗೆ ಉಪವಾಸವನ್ನು ಆಚರಿಸುವ ಭಕ್ತರಿಗೆ ಭಗವಂತ ವಿಷ್ಣುವು ಆಶೀರ್ವದಿಸುತ್ತಾನೆ, ಸಂತೋಷ, ಸಮೃದ್ಧಿ ಮತ್ತು ಬಯಸಿದ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಪುಷ್ಯ ಪುತ್ರದ ಏಕಾದಶಿಯನ್ನು 'ವೈಕುಂಠ ಏಕಾದಶಿ', 'ಸ್ವರ್ಗಾವತಿ ಏಕಾದಶಿ' ಅಥವಾ 'ಮುಕ್ಕೋಟಿ ಏಕಾದಶಿ' ಎಂದು ಆಚರಿಸಲಾಗುವುದು. ಈ ವ್ರತದ ಮಹಿಮೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ, ಮಕ್ಕಳಿಗೆ ವೃತ್ತಿಯಲ್ಲಿ ಲಾಭಗಳು ಸಿಗುತ್ತವೆ.
ಪುತ್ರದಾ ಏಕಾದಶಿಯ ಮಹತ್ವ
ಹಿಂದೂ ಧರ್ಮದಲ್ಲಿ, ಮರಣದ ಸಮಯದಲ್ಲಿ ಮಗ ಪ್ರಮುಖ ವಿಧಿಗಳನ್ನು ಮಾಡಬೇಕೆಂದು ಹೇಳಲಾಗುತ್ತದೆ. ಮಗ ತಂದೆ ತಾಯಿಯ ಅಂತಿಮ ಸಂಸ್ಕಾರದಿಂದ ಮಾತ್ರ ತಂದೆತಾಯಿಗಳ ಆತ್ಮವು ಮೋಕ್ಷವನ್ನು ಪಡೆಯುತ್ತದೆ. ಪುತ್ರ ಸಂತಾನದ ಸಂತೋಷವನ್ನು ಪಡೆಯಲು, ಪುತ್ರದ ಏಕಾದಶಿಯಂದು ಉಪವಾಸವನ್ನು ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications