Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಪಿತೃಪಕ್ಷ: ಶಾಸ್ತ್ರ ಪ್ರಕಾರ ಅಕ್ಟೋಬರ್ 2ರವರೆಗೆ ಈ ವಸ್ತುಗಳನ್ನು ಖರೀದಿಸಲೇಬಾರದು
ಶಾಸ್ತ್ರದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಲಾಗಿದೆ. ಆ ನಂಬಿಕೆಗಳನ್ನು ಹೆಚ್ಚಿನವರು ಪಾಲಿಸುತ್ತಾ ಬಂದಿದ್ದಾರೆ, ಶಾಸ್ತ್ರದಲ್ಲಿ ಹೇಳಿದಂತೆ ಪಾಲಿಸಿದರೆ ಒಳಿತಾಗುವುದು ಎಂಬ ನಂಬಿಕೆ.
ಇದೀಗ ಪಿತೃಪಕ್ಷ ನಡೆಯುತ್ತಿದೆ, ಅಕ್ಟೋಬರ್ 2ಕ್ಕೆ ಪಿತೃಪಕ್ಷ ಮುಕ್ತಾಯವಾಗಲಿದೆ. ಪಿತೃಪಕ್ಷದಲ್ಲಿ ಶ್ರಾದ್ಧ ಅಥವಾ ತರ್ಪಣ ಕಾರ್ಯವನ್ನು ಮಾಡಲು ಎಷ್ಟು ಒಳ್ಳೆಯದೋ ಕೆಲವೊಂದು ಕಾರ್ಯಗಳಿಗೆ ಶುಭ ಸಮಯ ಅಲ್ವೇಅಲ್ಲ. ಹಾಗಾಗಿ ಅಕ್ಟೋಬರ್ 2ರವರೆಗೆ ಈ ಕಾರ್ಯಗಳನ್ನು ಮಾಡಲೇಬೇಡಿ:

ಹೊಸ ಗಾಡಿ ಅಥವಾ ಆಸ್ತಿ ಖರೀದಿ: ಈ ಸಮಯದಲ್ಲಿ ಯಾವುದೇ ಹೊಸ ಗಾಡಿ ಅಥವಾ ಆಸ್ತಿ ಖರೀದಿಸಬೇಡಿ. ಈ ಅವಧಿಯಲ್ಲಿ ನೀವು ಹೊಸ ಗಾಡಿ ಅಥವಾ ಆಸ್ತಿ ಖರೀದಿಸಿದರೆ ಅದರಿಂದ ಅನುಕೂಲಕಕ್ಕಿಂತ ಅನಾನುಕೂಲಗಳೇ ಹೆಚ್ಚು.
ಬೆಲೆ ಬಾಳುವ ವಸ್ತುಗಳು, ಆಭರಣ
ನೀವು ಬೆಲೆ ಬಾಳುವ ವಸ್ತುಗಳು ಅಥವಾ ಆಭರಣ ಖರೀದಿ ಮಾಡಬೇಕೆಂದಿದ್ದರೆ ಅಕ್ಟೋಬರ್ 2ರ ಬಳಿಕ ಅನೇಕ ಶುಭ ದಿನಗಲಿವೆ, ಆವಾಗ ಖರೀದಿಸಿ, ಈ ಅವಧಿಯಲ್ಲಿ ಆಭರಣಗಳನ್ನು ಖರೀದಿಸಬಾರದು ಎಂಬ ನಂಬಿಕೆ ಹಿಂದೂಗಳಲ್ಲಿದೆ. ಈ ಬಗೆಯ ವಸ್ತುಗಳ ಖರೀದಿ ನಾವು ಪೂರ್ವಜರನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ, ಅವರಿಕ್ಕಿಂತ ವಸ್ತುಗಳ ಕಡೆಗೆ ಆಕರ್ಷಿತರಾಗಿದ್ದೇವೆ ಎಂಬುವುದನ್ನು ಸೂಚಿಸುತ್ತದೆ. ಪಿತೃ ಪಕ್ಷದಲ್ಲಿ ತೀರಿ ಹೋದ ಹಿರಿಯರಿಗೆ ಮೋಕ್ಷ ಕೊಡಿಸುವುದರ ಬಗ್ಗೆ ಮಾತ್ರ ಆಲೋಚಿಸಬೇಕು.
ಎಲೆಕ್ಟ್ರಾನಿಕ್ಸ್ ವಸ್ತುಗಳನ್ನೂ ಖರೀದಿಸಬಾರದು
ಬರಿ ಗಾಡಿ, ಚಿನ್ನ ಇಂಥ ವಸ್ತುಗಳು ಮಾತ್ರವಲ್ಲ ಎಲೆಕ್ಟ್ರಾನಿಕ್ಸ್ ವಸ್ತು ಕೂಡ ಖರೀದಿಸಬಾರದು. ನೀವು ಈ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತು ಖರೀದಿಸುವುದಿದ್ದರೆ ಅಕ್ಟೋಬರ್ 2ರ ನಂತರ ಖರೀದಿಸಿ.
ಮದುವೆಗೆ ವಸ್ತುಗಳು
ಮುಂದಿನ ತಿಂಗಳು ಮದುವೆಯಿದ್ದರೆ ಈ ಪಿತೃಪಕ್ಷದಲ್ಲಿ ಅದಕ್ಕೆ ಸಂಬಂಧಿಸಿದ ಕಾರ್ಯ ಮಾಡಬಾರದು. ಏಕೆಂದರೆ ಮದುವೆ ಎಂಬುವುದು ಶುಭ ಕಾರ್ಯ. ಪಿತೃಪಕ್ಷದಲ್ಲಿ ತೀರಿ ಹೋದವರಿಗೆ ತರ್ಪಣ ನೀಡಲಾಗುವುದು, ಈ ದಿನಗಳಲ್ಲಿ ಮದುವೆಗೆ ಅಗ್ಯತವಿರುವ ವಸ್ತುಗಳ ಶಾಪಿಂಗ್ ಮಾಡಬೇಡಿ.
ದೇವರ ಮೂರ್ತಿ
ಪಿತೃಪಕ್ಷದಲ್ಲಿ ದೇವರ ಮೂರ್ತಿಯನ್ನು ಮನೆಗೆ ತರಬಾರದು, ದೇವರ ಮೂರ್ತಿಯಲ್ಲಿ ದೈವಿಕ ಶಕ್ತಿ ಇರುತ್ತದೆ, ಅದೇ ಪಿತೃಪಕ್ಷದಲ್ಲಿ ತೀರಿ ಹೋದವರ ಆರಾಧನೆ ಮಾಡಲಾಗುವುದು, ಈ ಸಮಯದಲ್ಲಿ ದೇವರ ಫೋಟೋ ಅಥವಾ ಮೂರ್ತಿ ತರಬೇಡಿ.
ಪೊರಕೆ: ಮನೆಗೆ ಕಸ ಹೊಡೆಯಲು ಹೊಸಪೊರಕೆ ಕೂಡ ತರಬಾರದು, ಒಂದು ವೇಳೆ ಪಿತೃಪಕ್ಷದಲ್ಲಿ ಪೊರಕೆ ತಂದಿದ್ದರೆ ಅದನ್ನು ಬಿಸಾಡಿ, ಬಳಸಬೇಡಿ. ಈ ಅವಧಿಯಲ್ಲಿ ಪೊರಕೆ ತಂದರೆ ಮನೆಯ ನೆಮ್ಮದಿ ಹಾಳಾಗುವುದು ಎಂದು ನಂಬಲಾಗಿದೆ.
ತುಪ್ಪ: ಇನ್ನು ಪಿತೃಪಕ್ಷದಲ್ಲಿ ಮನೆಗೆ ತುಪ್ಪವನ್ನು ಕೂಡ ಖರೀದಿಸುವಂತಿಲ್ಲ, ತುಪ್ಪದ ಖರೀದಿ ಮನೆಗೆ ಒಳಿತಲ್ಲ ಎಂದು ಹೇಳಲಾಗುವುದು.
ಉಪ್ಪು: ಉಪ್ಪನ್ನು ಯಾರ ಬಳಿಯಿಂದ ಸಾಲ ತರಬೇಡಿ ಎಂದು ಹೇಳಲಾಗುವುದು.
ಹೀಗೆ ಪಿತೃಪಕ್ಷದಲ್ಲಿ ಈ ವಸ್ತುಗಳನ್ನು ನಿಮ್ಮ ಖರೀದಿ ಲಿಸ್ಟ್‌ನಿಂದ ಹೊರಗಿಡಿ, ಅಕ್ಟೋಬರ್ 2ರಂದ ಸರ್ವಪಿತೃ ಪಕ್ಷವಿದೆ, ಪಿತೃಪಕ್ಷ ಕೂಡ ಮುಕ್ತಾಯವಾಗಲಿದೆ, ಬಳಿಕವಷ್ಟೇ ಈ ವಸ್ತುಗಳನ್ನು ತರಬಹುದು ಎಂಬ ಶಾಸ್ತ್ರ ಹೇಳುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications