Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತುಲಾಭಾರ ಮಾಡುವಾಗ ಪೇಜಾವರ ಶ್ರೀಗಳ ತಲೆಗೆ ಬಿದ್ದ ತಕ್ಕಡಿ: ಹಿಂದೂ ಧರ್ಮದಲ್ಲಿ ಈ ತುಲಾಭಾರದ ಮಹತ್ವವೇನು?
ದೇವರ ಕಾರ್ಯ ಮಾಡುವಾಗ ತುಂಬಾನೇ ಶ್ರದ್ಧೆಯಿಂದ ಮಾಡುತ್ತೇವೆ, ಅದರಲ್ಲಿ ಸ್ವಲ್ಪ ಲೋಪ ದೋಷವಾದರೂ ಭಯ ಉಂಟಾಗುವುದು. ಇದೀಗ ಪೇಜಾವರ ಶ್ರೀಗಳ ತುಲಾಭಾರದ ಸಮಯದಲ್ಲಿ ಹಗ್ಗ ಮುರಿದು ತಕ್ಕಡಿ ಬಿದ್ದ ದೃಶ್ಯ ಸಾಮಾಜಿಕ ತಾಣದಲ್ಲಿದೆ. ಈ ದೃಶ್ಯವನ್ನು ನೋಡಿದವರು ಅಯ್ಯೋ ಶ್ರೀಗಳಿಗೆ ಹೀಗಾಯ್ತಲ್ಲ ಎಂದು ಬೇಸರವ್ಯಕ್ತ ಪಡಿಸುತ್ತಿದ್ದಾರೆ.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಲೆಗೆ ತಕ್ಕಡಿ ಬಿದ್ದಿದೆ. ಶ್ರೀಗಳಿಗೆ 60 ತುಂಬಿದ ಸಂಭ್ರಮಕ್ಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತುಲಾಭಾರ ಮಾಡಲಾಯಿತು. ಈ ಸಂದರ್ಭದಲ್ಲಿ ತಕ್ಕಡಿ ಮುರಿದು ಬಿದ್ದಿದೆ.
ಹಿಂದೂ ಧರ್ಮದಲ್ಲಿ ತುಲಾಭಾರಕ್ಕೆ ತುಂಬಾನೇ ಮಹತ್ವವಿದೆ, ಇದರ ಹಿಂದೆ ಪೌರಾಣಿಕ ಕತೆ ಇದೆ, ಇದರ ಬಗ್ಗೆ ನೋಡುವುದಾದರೆ....

ಮಹಾಭಾರತದಲ್ಲಿ ಮಹಾರಾಜ ಶಿಬಿಯ ಕತೆ ಇದೆ. ಮಹಾರಾಜ ಶಿಬಿ ತನ್ನ ನಂಬಿ ಬಂದವರನ್ನು ಎಂದಿಗೂ ಕೈ ಬಿಡುತ್ತಿರಲಿಲ್ಲ. ಮಹಾರಾಜ ಶಿಬಿಯನ್ನು ಪರೀಕ್ಷೆ ಮಾಡಲು ಇಂದ್ರ ಹಾಗೂ ಅಗ್ನಿ, ಗಿಡುಗ ಹಾಗೂ ಬಾತುಕೋಳಿಯ ರೂಪ ತಾಳುತ್ತಾರೆ. ಗಿಡುಗ ಬಾತುಕೋಳಿಯನ್ನು ಓಡಿಸುತ್ತಾ ಬರುತ್ತದೆ, ಬಾತುಕೋಳಿ ರಕ್ಷಣೆಗಾಗಿ ಶಿವಿ ಚಕ್ರವರ್ತಿ ಬಳಿ ಬರುತ್ತದೆ. ಆಗ ಶಿಬಿ ಚಕ್ರವರ್ತಿ ಬಾತುಕೋಳಿಯನ್ನು ಕೊಲ್ಲದಂತೆ ಗಿಡುಗನ ಬಳಿ ಹೇಳಿದಾಗ ಗಿಡುಗ ನನಗೆ ಹಸಿವಾಗಿದೆ, ಬೇಟೆಯಾಡಿ ತಿನ್ನುವುದು ನನ್ನ ಧರ್ಮ ಎಂದು ಹೇಳುತ್ತದೆ. ಆಗ ಶಿಬಿ ಚಕ್ರವರ್ತಿ ಬಾತುಕೋಳಿ ತೂಕದ ಮಾಂಸವನ್ನು ನನ್ನ ತೊಡೆ ಕತ್ತರಿಸಿ ಕೊಡುತ್ತೇನೆ ಎಂದು ಹೇಳುತ್ತದೆ. ಅದಕ್ಕೆ ಗಿಡುಗ ಒಪ್ಪಿಗೆ ಸೂಚಿಸುತ್ತದೆ. ಅದರೆ ಶಿಬಿ ಚಕ್ರವರ್ತಿ ಬಾತುಕೋಳಿಯನ್ನು ತಕ್ಕಡಿಯಲ್ಲಿ ಕೂರಿಸಿ ತನ್ನ ತೊಡೆಯ ಮಾಂಸವನ್ನು ಕತ್ತರಿಸಿ ಹಾಕುತ್ತಾನೆ, ಎಷ್ಟೇ ತೂಗಿದರೂ ತಕ್ಕಡಿ ಸಮವಾಗಿ ತೂಗಲ್ಲ, ಕೊನೆಗೆ ಶಿಬಿ ಚಕ್ರವರ್ತಿಯೇ ತಕ್ಕಡಿಯಲ್ಲಿ ಕುಳಿತುಕೊಳ್ಳುತ್ತಾನೆ. ಆವಾಗ ಶಿಬಿಚಕ್ರವರ್ತಿಯ ಗುಣಕ್ಕೆ ಮೆಚ್ಚಿ ಇಂದ್ರ,ಅಗ್ನಿ ಪ್ರತ್ಯಕ್ಷರಾಗಿ ವರ ನೀಡುತ್ತಾರೆ.
ಪ್ರಮುಖ ಹಿಂದೂ ದೇವಾಲಯಗಳಲ್ಲಿ ತುಲಾಭಾರ ಸೇವೆಯಿದೆ
ಹಿಂದೂ ದೇವಾಲಯಗಳಲ್ಲಿ ತುಲಾಭಾರವಿರುತ್ತದೆ. ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತರು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ತಾವು ಬಯಸಿದಂತೆ ದೇವರ ದಯೆಯಿಂದ ಎಲ್ಲಾ ಸರಿಯಾದಾಗ ಭಕ್ತರು ದೇವಾಲಯಕ್ಕೆ ಬಂದು ತುಲಾಭಾರವನ್ನು ಮಾಡುತ್ತಾರೆ.
ತುಲಾಭಾರ ಮಾಡಿಸುವವರು ತಾವು ಯಾವ ವಸ್ತುವಿನಿಂದ ತುಲಾ ಭಾರ ಮಾಡಿಸುತ್ತೇವೆ ಎಂದು ಮೊದಲೇ ಬೇಡಿಕೊಂಡಿರುತ್ತಾರೆ, ದೇವಾಲಯಕ್ಕೆ ಬಂದು ಆ ವಸ್ತುಗಳನ್ನು ಅರ್ಪಿಸಿ ತುಲಾಭಾರ ಮಾಡಲಾಗುವುದು.
ಸಾಲ ಬಾಧೆ ನಿವಾರಣೆಗೆ , ಆರೋಗ್ಯ ಸಮಸ್ಯೆ ನಿವಾರಣೆ, ಮನೆ ಕಟ್ಟಲು, ಋಣ ಬಾಧೆ ನಿವಾರಣೆಗೆ, ಸಂತಾನ ಭಾಗ್ಯಕ್ಕೆ ಹೀಗೆ ಭಕ್ತರು ಅನೇಕ ಬೇಡಿಕೆಗಳನ್ನು ಇಟ್ಟು ತುಲಾಭಾರದ ಹರಿಕೆ ಹೊತ್ತುಕೊಳ್ಳುತ್ತಾರೆ. ಆ ಹರಿಕೆ ನೆರವೇರಿದಾಗ ದೇವರ ಸನ್ನಿಧಾನಕ್ಕೆ ಬಂದು ಹರಿಕೆ ತೀರಿಸಲಾಗುವುದು.
ತೆಂಗಿನಕಾಯಿ, ಅಕ್ಕಿ, ಉಪ್ಪು, ಧಾನ್ಯಗಳು, ನಾನ್ಯ, ಬಾಳೆಹಣ್ಣು, ಎಳನೀರು ಹೀಗೆ ಅನೇಕ ವಸ್ತುಗಳಿಂದ ತುಲಾಭಾರ ಮಾಡಲಾಗುವುದು. ಸಾಲಭಾದೆಯಿಂದ ಮುಕ್ತರಾಗಲು ಉಪ್ಪಿನ ತುಲಾಭಾರ ಮಾಡಿಸುತ್ತಾರೆ. ಆರೋಗ್ಯ ಸಮಸ್ಯೆ ನಿವಾರಣೆಗೆ ಅಕ್ಕಿಯ ತುಲಾಭಾರ ಮಾಡಲಾಗುವುದು. ಗಣಪತಿ ದೇವಾಲಯದಲ್ಲಿ ಬೆಲ್ಲದ ತುಲಾಭಾರ ಮಾಡಿದರೆ ಮದುವೆ ಭಾಗ್ಯ ಕೂಡಿಬರುವುದು ಎಂಬ ನಂಬಿಕೆಯಿದೆ.
ಭಕ್ತಿಯಿಂದ ತೂಗಿದಾಗ ಮಾತ್ರ ವಸ್ತುಗಳು ತೂಗುತ್ತದೆ. ಇಲ್ಲದಿದ್ದರೆ ಎಷ್ಟೇ ವಸ್ತುಗಳನ್ನು ಹಾಕಿದರೂ ತೂಗುವುದಿಲ್ಲ ಎಂದು ಹೇಳಲಾಗುವುದು.
ಚಾತುರ್ಮಾಸ ಮುಗಿದಿರುವುದರಿಂದ ಪೇಜಾವರ ಶ್ರೀಗಳು ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ್ದರು, ಅಲ್ಲಿ ತುಲಾಭಾರ ಕಾರ್ಯಕ್ರಮವಿತ್ತು. ಆವಾಗ ಹಗ್ಗ ಕಟ್ಟಾಗಿ ತಕ್ಕಡಿ ಶ್ರೀಗಳ ಹಣೆಗೆ ಬಿದ್ದು ಗಾಯವಾಗಿದೆ.
ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು 'ನಾನು ಚೆನ್ನಾಗಿದ್ದೇನೆ, ಗಾಯವೂ ಸಂಪೂರ್ಣ ಒಣಗಿದೆ, ದೊಡ್ಡ ಗಾಯವೇನೂ ಆಗಿಲ್ಲ ಎಂಬುವುದಾಗಿ ಶ್ರೀಗಳು ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
