Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಾಳ ಸರ್ಪ ದೋಷದಲ್ಲಿ ಘಟಕ್ ಕಾಳಸರ್ಪ ದೋಷ ತುಂಬಾ ಅಪಾಯಕಾರಿ: ಈ ದೋಷದ ಲಕ್ಷಣವೇನು, ಪರಿಹಾರವೇನು?
ಕಾಳ ಸರ್ಪ ದೋಷವಿದ್ದರೆ ಆ ವ್ಯಕ್ತಿ ಬದುಕಿನಲ್ಲಿ ಹಲವು ಕಷ್ಟಗಳನ್ನು ಎದುರಿಸ ಬೇಕಾಗುತ್ತದೆ. ಈ ಕಾಳ ಸರ್ಪ ದೊಷದಲ್ಲಿ ಹಲವು ವಿಧಗಳಿಗೆ ಅದರಲ್ಲೊಂದು ಪಟಕ್ ಕಾಳ ಸರ್ಪ ದೋಷ. ಈ ದೋಷ ತುಂಬಾನೇ ಕಠೋರವಾಗಿರಲಿದೆ. ಈ ಘಟಕ್ ಕಾಳ ಸರ್ಪ ದೋಷವಿದೆ ಎಂದು ತಿಳಿಯುವುದು ಹೇಗೆ? ಇದಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಕಾಳ ಸರ್ಪ ದೋಷ ಎಂದರೇನು?
ವ್ಯಕ್ತಿಯ ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು ಮತ್ತು ಕೇತುಗಳ ನಡುವೆ ಬಂದಾಗ, ಕಾಲ ಸರ್ಪ ದೋಷ ಉಂಟಾಗುವುದು, ಈ ರೀತಿಯಾದಾಗ ವ್ಯಕ್ತಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಘಟಕ್ ಕಾಲಸರ್ಪ್ ದೋಷಕ್ಕೆ ಕಾರಣವೇನು?
ಹತ್ತನೇ ಮನೆಯಲ್ಲಿ ರಾಹು ಮತ್ತು ನಾಲ್ಕನೇ ಮನೆಯಲ್ಲಿ ಕೇತು ಇರುವಾಗ ಈ ಪಟಕ್ ಕಾಳ ಸರ್ಪ ಯೋಗ ಉಂಟಾಗುವುದು. ಒಟ್ಟು 12 ಬಗೆಯ ಸರ್ಪ ದೋಷವಿರುತ್ತದೆ, ಅದರಲ್ಲೊಂದು ಘಟಕ್ ಕಾಳ ಸರ್ಪ ದೋಷ. ಈ ಸರ್ಪ ದೋಷವಿರುವವರು ತುಂಬಾನೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕಾಳ ಸರ್ಪ ದೋಷದಿಂದ ಏನಾಗುತ್ತದೆ?
ವ್ಯಕ್ತಿಯ ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಕುಟುಂಬದಲ್ಲಿ, ಒಡಹುಟ್ಟಿದವರೊಂದಿಗೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ.
ಉದ್ಯೋಗವಿರಲಿ, ವ್ಯಾಪಾರವಿರಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುವುದು. ಆರ್ಥಿಕವಾಗಿ ತುಂಬಾನೇ ಕಷ್ಟ ಎದುರಿಸಬೇಕಾಗುತ್ತದೆ. ಹಣ ಸಾಲ ಕೇಳಿದರೂ ಪಡೆಯಲು ಕಷ್ಟವಾಗುವುದು.
ಕಾಳ ಸರ್ಪ ದೋಷವಿದೆ ಎಂದು ತಿಳಿಯುವುದು ಹೇಗೆ?
ಜಾತಕದಲ್ಲಿ ಘಟಕ್ ಕಾಳ ಸರ್ಪ್ ದೋಷವಿದ್ದರೆ, ವ್ಯಕ್ತಿಯುಗೆ ದೇಹದ ಮೇಲೆ ಹಾವುಗಳು ಹರಿದಾಡುವಂತೆ ಅಥವಾ ಹಾವು ಕಚ್ಚುವಂತೆ ಪದೇ ಪದೇ ಕನಸು ಬೀಳುವುದು. ಈ ರೀತಿಯ ಕನಸು ನಿಮಗೆ ಸರ್ಪ ದೋಷವಿದೆ ಎಂಬುವುದನ್ನು ಸೂಚಿಸುತ್ತದೆ.
ಸತ್ತವರು ಕನಸಿನಲ್ಲಿ ಬರುತ್ತಾರೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ಉಂಟಾಗುವುದು.
ಸರ್ಪ ದೋಷದಿಂದ ಉಂಟಾಗುವ ಸಮಸ್ಯೆಗಳು
- ಸರ್ಪದೋಷವಿದ್ದರೆ ವ್ಯಕ್ತಿಯ ಬದುಕಿನಲ್ಲಿ ಹಲವಾರು ಸಮಸ್ಯೆಗಳಿರುತ್ತದೆ: ಒಂದು ಸಮಸ್ಯೆ ಹಿಂದಿ ಮತ್ತೊಂದು ಎಂಬಂತೆ ಸಮಸ್ಯೆಗಳು ಬರುತ್ತಲೇ ಇರುತ್ತದೆ
- ಕುಟುಂಬದಲ್ಲಿ ನೆಮ್ಮದಿ ಇರಲ್ಲ: ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ನೆಮ್ಮದಿ ಇಲ್ಲದಿರುವುದು ಹೀಗೆ ಹಲವು ಬಗೆಯ ಸಮಸ್ಯೆ ಗಳಿರುವುದು
- ಬ್ಯುಸ್‌ನೆಸ್‌ನಲ್ಲಿ ನಷ್ಟ ಉಂಟಾಗುವುದು: ಯಾವುದೇ ಕೆಲಸ ಮಾಡಿದರೂ ಕೆಲಸ ಕೈ ಹಿಡಿಯುವುದಿಲ್ಲ, ವ್ಯಾಪಾರದಲ್ಲಿ ಇಟ್ಟ ಹೆಜ್ಜೆಯಲ್ಲಿ ಸೋಲು ಅನುಭವಿಸಬೇಕಾಗುವುದು.
- ಆರೋಗ್ಯ ಸಮಸ್ಯೆಗಳಿರುವುದು, ಕಣ್ಣು, ಗಂಟಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆವಿರುವುದು
- ಮದುವೆ ವಿಳಂಬವಾಗುವುದು, ಯಾವುದೇ ಸಂಬಂಧ ನೋಡಿದರೂ ಅದು ಸರಿಬರಲ್ಲ
- ಎಷ್ಟೇ ಕಠಿಣ ಪ್ರಯತ್ನ ಹಾಕಿದರೂ ಯಶಸ್ಸು ಸಿಗುವುದಿಲ್ಲ
- ಈ ರೀತಿಯೆಲ್ಲಾ ಆಗುತ್ತಿದ್ದರೆ ಅದು ಸರ್ಪದೋಷದ ಲಕ್ಷಣಗಳಿರುವುದು.
- ಸರ್ಪ ದೋಷವಿದೆಯೇ ಎಂಬುವುದು ಕುಂಡಲಿ ನೋಡಿದರೆ ತಿಳಿಯುತ್ತೆ.
ಹಾವು ಕೊಂದರೂ ಸರ್ಪ ದೋಷ ಉಂಟಾಗುತ್ತೆ
ಕೆಲವರು ಹಾವು ಕೊಲ್ಲುತ್ತಾರೆ, ಅಂಥವರು ಸರ್ಪ ದೋಷ ಅನುಭವಿಸಬೇಕಾಗುತ್ತೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾಗಿ ಹಾವು ಕೊಲ್ಲಬಾರದು.
ನಾಗದೋಷಕ್ಕೆ ಪೂಜೆಗಳೇನು?
ನಾಗ ಪ್ರತಿಷ್ಠೆ
ಬಾಗಬಲಿ
ನಾಗ ತಾಂಬೂಲ
ನಾಗ ಪುತಲಿಕ ವಿಧಿ
ನವಗ್ರಹ ಶಾಂತಿ
ಕಾಳಸರ್ಪ ಶಾಂತಿ
ಈ ಬಗೆಯ ಪೂಜೆಗಳನ್ನು ಮಾಡಿಸುವುದು ಒಳ್ಳೆಯದು.
ಪರಿಹಾರವೇನು?
ಜಾತಕದಲ್ಲಿ ಕಾಳ ಸರ್ಪದೋಷವಿದ್ದರೆ ನಿತ್ಯವೂ ಶಿವನ ಆರಾಧನೆ ಮಾಡುವುದು ಒಳ್ಳೆಯದು. ಶಿವನಿಗೆ ರುದ್ರಾಭಿಷೇಕ ಮಾಡಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗುವುದು.
ಪ್ರತಿ ಶನಿವಾರ ಅಥವಾ ಮಂಗಳವಾರ ಸುಂದರಕಾಂಡವನ್ನು ಪಠಿಸಿ.
ಪ್ರತಿದಿನ ಸ್ನಾನದ ನಂತರ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿ.
ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ.
ಹೀಗೆ ಮಾಡುವುದರಿಂದ ನಾಗದೋಷಕ್ಕೆ ಪರಿಹಾರ ಸಿಗುವುದು, ಬದುಕಿನಲ್ಲಿರುವ ಸಮಸ್ಯೆಗಳು ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











