Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಗ್ರಹ ದೋಷಕ್ಕೆ ನವರಾತ್ರಿಯಲ್ಲಿ ಈ ಪರಿಹಾರ ಮಾಡಿದರೆ ಶುಭ ಫಲ ದೊರೆಯಲಿದೆ
ಗ್ರಹ ದೋಷವಿದ್ದರೆ ಆ ದೋಷ ಪರಿಹಾರಕ್ಕೆ ನವರಾತ್ರಿ ಸಮಯದಲ್ಲಿ ಆ ಗ್ರಹಗಳಿಗೆ ಸಂಬಂಧಿಸಿದ ಆಹಾರ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ನವಗ್ರಹಗಳಲ್ಲಿ ಯಾವ ಗ್ರಹಕ್ಕೆ ಯಾವ ಪರಿಹಾರ ಒಳ್ಳೆಯದು ಎಂದು ನೋಡೋಣ ಬನ್ನಿ:

ಸೂರ್ಯ: ಸೂರ್ಯ ದೋಷವಿದ್ದರೆ ಸೂರ್ಯ ಗಾಯತ್ರಿ ಮಂತ್ರ ಪಠಿಸಿ. ನಂತರ ಬೆಲ್ಲ ಹಾಗೂ ಗೋಧಿ ಆಹಾರವನ್ನು ದಾನ ಮಾಡಿದರೆ ಒಳ್ಳೆಯದು. ನವರಾತ್ರಿ ಸಮಯದಲ್ಲಿ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಈ ಆಹಾರ ವಸ್ತುಗಳನ್ನು ದಾನ ಮಾಡಿ.
ಚಂದ್ರ: ಓಂ ಸೋಮಾಯ ನಮಃ ಎಂಬ ಮಂತ್ರ ಪಠಿಸಿ, ಬಿಳಿ ಬಣ್ಣದ ಆಹಾರ ವಸ್ತುಗಳನ್ನು ದಾನ ಮಾಡಿ. ಹಾಲು, ಅಕ್ಕಿ, ಬಿಳಿ ಸಿಹಿ ತಿಂಡಿಗಳು ಈ ಬಗೆಯ ಆಹಾರ ವಸ್ತುಗಳನ್ನು ದಾನ ಮಾಡಿ.
ಮಂಗಳ ಗ್ರಹ: ಮಂಗಳ ಗ್ರಹ ದೋಷವಿದ್ದರೆ ಕುಂಕುಮ ಜೊತೆಗೆ ಆಹಾರ ವಸ್ತುಗಳನ್ನು ಬಡವರಿಗೆ ದಾನ ಮಾಡಿ. ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ.
ಬುಧ ಗ್ರಹ: ಓಂ ಬುಧಾಯ ನಮಃ ಪಠಣೆ ಮಾಡಿ. ಹಸಿರು ಧಾನ್ಯಗಳು, ತರಕಾರಿಗಳು ಇವುಗಳನ್ನು ಸೇವಿಸಿ. ಹಸಿರು ಬಣ್ಣದ ವಸ್ತ್ರಗಳು ಇವುಗಳನ್ನು ದಾನ ಮಾಡಿದರೆ ಒಳ್ಳೆಯದು.
ಗುರು ಗ್ರಹ: ಗುರು ಗ್ರಹದ ಶುಭ ಫಲವನ್ನು ಪಡೆಯಲು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಬಾಳೆಹಣ್ಣು, ಬೇಳೆ ಈ ಬಗೆಯ ಆಹಾರ ವಸ್ತುಗಳನ್ನು ಅರಿಶಿಣದೊಂದಿಗೆ ದಾನ ಮಾಡಿ. ಹಳದಿ ಬಣ್ಣದ ವಸ್ತ್ರವನ್ನು ಕೂಡ ದಾನ ಮಾಡಬಹುದು.
ಶುಕ್ರ
ಶುಕ್ರನ ಒಲಿಸಿಕೊಳ್ಳಲು ಓಂ ಶುಕ್ರಾಯ ನಮಃ ಎಂಬ ಮಂತ್ರ ಪಠಣೆ ಮಾಡಿ. ನೀವು ಹಾಲು, ಅಕ್ಕಿ, ಧಾನ್ಯಗಳು ಈ ಬಗೆಯ ಆಹಾರ ವಸ್ತುಗಳು, ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು, ಸಿಹಿ ತಿನಿಸುಗಳನ್ನು ದಾನ ಮಾಡಿ.
ಶನಿ ಗ್ರಹ
ಓಂ ಶನೇಶ್ವರಾಯ ನಮಃ ಮಂತ್ರ ಪಠಣೆ ಮಾಡಿ. ಸಾಸಿವೆಯೆಣ್ಣೆ ಅಥವಾ ಎಳ್ಳೆಣ್ಣೆ ಹಾಗೂ ಕಪ್ಪು ಕಂಬಳಿಯನ್ನು ದಾನ ಮಾಡಿ. ಶನಿ ದೋಷವಿದ್ದರೆ ನವರಾತ್ರಿ ಸಮಯದಲ್ಲಿ ಶನಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆಎ ಸಲ್ಲಿಸುವುದು ಕೂಡ ಒಳ್ಳೆಯದು.
ರಾಹು ದೋಷ
ರಾಹು ದೋಷ ಕಡಿಮೆ ಮಾಡಲು ಓಂ ರಾಹವೇ ನಮಃ ಎಂಬ ಮಂತ್ರ ಪಠಣೆ ಮಾಡಿ. ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ. ಬಾರ್ಲಿ, ಸಾಸಿವೆ ಇವುಗಳನ್ನೂ ದಾನ ಮಾಡಬೇಕು.
ಕೇತು ದೋಷ
ಕೇತು ದೋಷ ಕಡಿಮೆ ಮಾಡಲು ಕಂಬಳಿಯನ್ನು , ತೆಂಗಿನಕಾಯಿಯನ್ನು ದಾನ ಮಾಡಿ. ಬಡವರಿಗೆ ಆಹಾರವಸ್ತುಗಳನ್ನು ನೀಡುವುದರಿಂದ ಗ್ರಹಗಳ ದೋಷ ಕಡಿಮೆಯಾಗುವುದು.
ನವರಾತ್ರಿ ಹಬ್ಬದ ಸಮಯದಲ್ಲಿ ದುರ್ಗೆ ಪೂಜೆಯ ಜೊತೆಗೆ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ನಿಮಗೆ ಯಾವ ಗ್ರಹ ದೋಷವಿದೆ ಎಂದು ಗೊತ್ತಿಲ್ಲ, ಆದರೆ ಕೆಲವು ಸವಾಲುಗಳು ಎದುರಾಗುತ್ತಿದೆ ಎಂದಾದರೆ ಅದರ ನಿವಾರಣೆ, ನಿಮ್ಮ ಕೆಲಸ ಕಾರ್ಯಗಳು ಸರಾಗವಾಗು ನಡೆಯಲು ದುರ್ಗಾಷ್ಟಮಿ ಹಾಗೂ ನವಮಿಯಂದು ಬಡವರಿಗೆ ಆಹಾರವಸ್ತುಗಳು, ವಸ್ತ್ರವನ್ನು ದಾನ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications