Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ನಾಗರ ಪಂಚಮಿ: ಈ ದಿನ ಹೀಗೆ ಮಾಡಿದರೆ ರಾಹು-ಕೇತು ದೋಷ, ನಾಗ ದೋಷ ದೂರಾಗುವುದು
ನಾಗರ ಪಂಚಮಿ ಧಾರ್ಮಿಕವಾಗಿ, ಸಾಂಪ್ರದಾಯಕವಾಗಿ ತುಂಬಾ ಮಹತ್ವದ ದಿನವಾಗಿದೆ. ಈ ದಿನ ನಾಗನಿಗೆ ಪೂಜೆ ಸಲ್ಲಿಸಲಾಗುವುದು. ಈ ನಾಗನ ಪೂಜೆ ಮಾಡಿದರೆ ರಾಹು-ಕೇತು ದೋಷ, ನಾಗ ದೋಷ ದೂರಾಗುವುದು ಎಂದು ಹೇಳಲಾಗುವುದು.
ನಾಗರ ಪಂಚಮಿಯಂದು ಈ ಪರಿಹಾರ ಮಾಡಿ ರಾಹು-ಕೇತು, ನಾಗದೋಷಗಳು ದೂರಾಗುವುದು.

ಶಿವನಿಗೆ ಅಭಿಷೇಕ ಮಾಡಿಸಿ
ನಾಗರ ಪಂಚಮಿಯಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು. ಶಿವಲಿಂಗಕ್ಕೆ ಗಂಗಾಜಲ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಇವುಗಳಿಂದ ಅಭಿಷೇಕ ಮಾಡಿದರೆ ಒಳ್ಳೆಯದು, ದೋಷಗಳು ನಿವಾರಣೆಯಾಗುವುದು ಎಂದು ಎಂದು ನಂಬಲಾಗಿದೆ. ಅಲ್ಲದೆ ಈ ದಿನ ಶಿವನನ್ನು ಆರಾಧಿಸುವಾಗ ಬಿಲ್ವೆಪತ್ರೆಯನ್ನು ಅರ್ಪಿಸಿ, ಶಂಖ ಪುಷ್ಪವನ್ನು ಅರ್ಪಿಸಿ.
ಸರ್ಪದೋಷಕ್ಕೆ ಪರಿಹಾರ
ಸರ್ಪದೊಷ ಇರುವವರು ಈ ದಿನ ಬೆಳ್ಳಿಯ ಜೋಡಿ ಹಾವಿನ ಮೂರ್ತಿಗಳನ್ನು ಪೂಜಿಸಿ, ನಂತರ ಅವುಗಳಿಗೆ ಹಾಲಿನಿಂದ ಅಭಿಷೇಕ ಮಾಡಿ, ಇದರಿಂದ ನಾಗದೋಷ ದೂರಾಗುವುದು.
ಈ ದಿನ ದಾನ ಮಾಡುವುದು ಒಳ್ಳೆಯದು
ಈ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ, ಬಟ್ಟೆ ಅಥವಾ ಇತರ ವಸ್ತುಗಳನ್ನು ದಾನ ಮಾಡಿದರೆ ಇದರಿಂದ ಪುಣ್ಯದ ಫಲ ಸಿಗುವುದು, ನಮ್ಮ ಕುಂಡಲಿಯಲ್ಲಿರುವ ದೋಷಗಳು ಪರಿಹಾರವಾಗುವುದು. ಇದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರಲಿದೆ.
ನಾಗ ಪಂಚಮಿಯ ಕಥೆ
ನಾಗರ ಪಂಚಮಿಯ ಕತೆಯನ್ನು ಕೇಳಿ ಅಥವಾ ಓದುವುದು ಮಾಡಿ, ಇದರಿಂದ ಧಾರ್ಮಿಕ ಒಲವು ಹೆಚ್ಚಾಗುವುದು.
ನಾಗರ ಪಂಚಮಿ ಹಬ್ಬ ಆಚರಿಸುವಾಗ ಹೆಂಗಳೆಯರು ಒಟ್ಟಾಗಿ ಈ ಹಾಡು ಹೇಳುತ್ತಾ ಹಬ್ಬವನ್ನು ಆಚರಿಸಿ:
ಪಂಚಮಿ ನಾಗನಿಗಂತೆ | ಪರಶಿವನಾ ಕೊರಳಾ ಸಖಗಂತೆ |
ಪಾರ್ವತಿ ತನಯನಿಗಂತೆ | ಪೂಜಿಸೆ ವರನೀಡುವವಗಂತೆ || ಪ ||
ಶ್ರಾವಣದೈದನೇ ದಿನವಂತೆ |
ಶುದ್ಧ ಮಡಿಯಿಂದವನ ಪೂಜಿಸಬೇಕಂತೆ |
ವಲ್ಮೀಕವಾಸಗೆ ವಿಧವಿಧದಾ ಉಪಚಾರ |
ಬಹುಭಕ್ತಿ ಭಾವದಿಂದಂತೆ || ೧ ||
ಕೇದಿಗೆ ಹೂವು ಪೂಜೆಗಂತೆ |
ಚಿಗಳಿ ಮೊದಲಾದ ಭಕ್ಷ್ಯ ಭೋಜನವಂತೆ |
ಅರಳು ನೆನೆಸಿದ ಕಡಲೆ ಕಾಳುಗಳಂತೆ |
ಸುಬ್ರಹ್ಮಣ್ಯಗೆ ಪ್ರಿಯವಂತೆ || ೨ ||
ಅಂಬಾಸುತನು ಇವನಂತೆ |
ಇವನ ಅರಿತಾಗ ನಿಜದೆ ಭಯವಿಲ್ಲವಂತೆ |
ಆಡಿ ನಲಿದಾಡುವ ಈತನಂತೆ |
ಭಕ್ತಿ ಬಾವದಸ್ವರ ಇರಬೇಕಂತೆ || ೩ ||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











