Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Mars Retrograde: ಮಂಗಳನ ಹಿಮ್ಮುಖ ಚಲನೆ: ಆರೋಗ್ಯ ಏರುಪೇರು, ನಷ್ಟ, ಕೈಹಿಡಿಯಲ್ಲ ಹಣ!
Mars Retrograde: ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಗಳನ್ನು ಬಹಳ ಮುಖ್ಯ ಅಂಶವೆಂದು ಪರಿಗಣಿಸಲಾಗಿದೆ. ಗ್ರಹಗಳು ನಿರಂತರ ಚಲನೆಯಲ್ಲಿದ್ದರೂ, ಅವು ಕೆಲವೊಮ್ಮೆ ಹಿಮ್ಮುಖ ಚಲನೆಗೆ ಒಳಗಾಗುವುದು ನೋಡಬಹುದು. ಗ್ರಹಗಳ ಚಲನೆ ಹೇಗಿದ್ದರೂ ಅದರು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು. ಈ ಚಲನೆ ಕೆಲವು ರಾಶಿ ಜನರಿಗೆ ಸಕಾರಾತ್ಮಕವಾಗಿರುತ್ತವೆ ಮತ್ತು ಕೆಲವು ರಾಶಿ ಜನರಿಗೆ ನಕಾರಾತ್ಮಕವಾಗಿರುತ್ತವೆ.
ಗ್ರಹಗಳ ಅಧಿಪತಿಯಾದ ಮಂಗಳ ಮೇಷ ರಾಶಿಯನ್ನು ಆಳುತ್ತಾನೆ ಮತ್ತು ಡಿಸೆಂಬರ್ ತಿಂಗಳಲ್ಲಿ ಮಂಗಳ ಗ್ರಹವು ಹಿಮ್ಮುಖ ಚಲನೆಯಲ್ಲಿರುವುದು ನೋಡಬಹುದು. ಮಂಗಳನ ಹಿಮ್ಮುಖ ಸಂಚಾರವು ಕೆಲವು ರಾಶಿಗಳಿಗೆ ಆತಂಕ, ಆರ್ಥಿಕ ಬಿಕ್ಕಟ್ಟು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗೆ ಕೆಲವು ರಾಶಿಗಳಿಗೆ ಮಂಗಳನಿಂದ ಹಲವು ರೀತಿ ಸಮಸ್ಯೆಗಳು ಎದುರಾಗಬಹುದು.

ಹಾಗಾದ್ರೆ ಬರೋಬ್ಬರಿ 80 ದಿನಗಳ ಕಾಲ ಮಂಗಳನ ಈ ಹಿಮ್ಮುಖ ಚಲನೆಯು ಯಾವೆಲ್ಲಾ ರಾಶಿಗಳಿಗೆ ಸಮಸ್ಯೆಗಳ ತರಲಿದೆ. ಯಾರಿಗೆ ಅಶುಭಕಾರಕ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ಮಂಗಳನ ಹಿಮ್ಮುಖ ಸಂಚಾರವು ವೃಷಭ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಉಂಟು ಮಾಡಲಿದೆ. ನಿಮ್ಮ ಹಣಕಾಸು ವಿಚಾರವಾಗಿ ಹಲವು ರೀತಿಯ ಅಡೆತಡೆಗಳ ನೋಡಬಹುದು. ಮಾತಿನ ಮೂಲಕ ನಿಮ್ಮ ಹಲವು ಸಮಸ್ಯೆಗಳು ಹುಟ್ಟಿಕೊಳ್ಳಬಹುದು, ಅಂದ್ರೆ ಮಾತು ನೀಡುವುದು ಅಥವಾ ಇತರರೊಂದಿಗೆ ಯಾವುದಾದರು ಚರ್ಚೆಯಲ್ಲಿ ಕಲಹಗಳು ಮೂಡಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಅವರು ತುಂಬಾ ಶ್ರಮಿಸಬೇಕಾಗುತ್ತದೆ. ವೃತ್ತಿಪರವಾಗಿ ಮಂಗಳನ ಈ ಹಿಮ್ಮುಖ ಚಲನೆಯು ಪ್ರಗತಿಯ ಅವಕಾಶ ನಿಮ್ಮಿಂದ ಕಸಿದುಕೊಳ್ಳಬಹುದು. ಆರೋಗ್ಯ ವಿಚಾರವಾಗಿ ನಿಮ್ಮಲ್ಲಿ ದೊಡ್ಡ ಸಮಸ್ಯೆಗಳು ಬರಬಹುದು.
ಕರ್ಕಾಟಕ ರ್ರಾಶಿ
ಮಂಗಳನ ಹಿಮ್ಮುಖ ಚಲನೆ ಕರ್ಕಾಟಕ ರಾಶಿಯವರಿಗೆ ಕೆಟ್ಟ ಫಲಿತಾಂಶಗಳನ್ನು ತರಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸಮಸ್ಯಾತ್ಮಕವಾಗಿ ಪರಿಣಮಿಸಬಹುದು. ನಿಮ್ಮ ಹಲವು ಹೂಡಿಕೆಗಳು ಲಾಭ ತರುವ ಬದಲಾಗಿ ಯಥಾಸ್ಥಿತಿಯಲ್ಲಿ ಇರಲಿವೆ. ನಿಮ್ಮ ಬಹಳ ಸಮಯದ ಉಳಿತಾಯದ ಹಣವು ಅನಗತ್ಯ ವಿಚಾರವಾಗಿ ಖರ್ಚು ಮಾಡಬಹುದು. ಇದು ನಿಮಗೆ ಮಾನಸಿಕ ನೆಮ್ಮದಿ ಹಾಳು ಮಾಡಲು ಕಾರಣವಾಗಲಿದೆ.
ವೈವಾಹಿಕ ಜೀವನದಲ್ಲಿ ಜಗಳ ಸಾಧ್ಯತೆಗಳಿವೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಕ್ತ ಸಂವಾದ ಅಗತ್ಯ. ಆಸ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು. ಪಂಚೇಂದ್ರಿಯ ಸಂಬಂಧಿಸಿದ ಯಾವುದಾದರು ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ.
ವೃಶ್ಚಿಕ ರಾಶಿ
ಮಂಗಳನ ಹಿಮ್ಮುಖ ಚಲನೆಯು ವೃಶ್ಚಿಕ ರಾಶಿಯ ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹಿನ್ನಡೆ ಎದುರಿಸಬೇಕಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಉದ್ಯೋಗ ಸಂಬಂಧಿತ ಸಮಸ್ಯೆಗಳು ದೊಡ್ಡದಾಗಬಹುದು. ಹಾಗೆ ವಿದ್ಯಾರ್ಥಿಗಳಿಗೆ ಹಿನ್ನೆಡೆ, ವ್ಯಾಪಾರ, ವ್ಯವಹಾರದಲ್ಲಿ ನಿಮಗೆ ಅಡೆತಡೆ ಇದೆ. ಹಣ ನಿಮ್ಮ ಕೈ ಸೇರುವುದು ಮತ್ತಷ್ಟು ತಡವಾಗಬಹುದು. ಸಂಬಂಧಿಕರಿಂದ ನೋವಿನ ನುಡಿಗಳು ಕೇಳಿರುವ ಸಮಯ ಇದು. ಹಾಗೆ ನಿಮ್ಮ ಮೇಲೆ ಆಧಾರ ರಹಿತ ಆರೋಪಗಳು ಬರಬಹುದು. ದೀರ್ಘಕಾಲದವರೆಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಅವಧಿಯಲ್ಲಿ ಅದು ಹೆಚ್ಚು ಗಂಭೀರವಾಗುವ ಸಾಧ್ಯತೆಯಿದೆ. ವಾಹನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications