Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದೂವರೆ ವರ್ಷದ ಬಳಿಕ ಮಂಗಳ ನಕ್ಷತ್ರ ಬದಲಾವಣೆ: ಮೂರು ರಾಶಿಯವರ ಜೀವನ ಬದಲು..!
ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಮಂಗಳನ ಸಂಚಾರದಲ್ಲಿ ಬದಲಾವಣೆ ಆಗುವುದು ನೋಡಬಹುದು. ಅದರಲ್ಲೂ ಗ್ರಹಗಳ ಅಧಿಪತಿ ಎಂದು ಕರೆಯಲಾಗುವಂತಹ ಮಂಗಳನು ಧೈರ್ಯ, ಶೌರ್ಯ, ಶಕ್ತಿ, ಆಸ್ತಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹಾಗೆ ಮಂಗಳನು ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿ ಎಂದು ಸಹ ಹೇಳಲಾಗಿದೆ. ಮಂಗಳ 45 ದಿನಗಳ ಕಾಲ ಒಂದೇ ಗ್ರಹದಲ್ಲಿ ಚಲಿಸುತ್ತಾನೆ.
ಈ ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳಲ್ಲಿ ಮಂಗಳನು ತನ್ನ ನಕ್ಷತ್ರವನ್ನು ಕೂಡ ಬದಲಾಯಿಸುತ್ತಾನೆ. ಮಂಗಳ 18 ತಿಂಗಳ ಕಾಳ ಒಂದೇ ನಕ್ಷತ್ರದಲ್ಲಿ ಇರಲಿದ್ದಾನೆ. ಈಗ ಮಂಗಳನು ಸ್ವಾತಿ ನಕ್ಷತ್ರಕ್ಕೆ ಚಲಿಸುತ್ತಾನೆ. ತುಲಾ ರಾಶಿಯಲ್ಲಿದ್ದು, ಆತ ಸ್ವಾತಿ ನಕ್ಷತ್ರದೊಂದಿಗೆ ಚಲಿಸಲಿದ್ದಾನೆ. ಇದು ಹಲವು ರಾಶಿಗಳ ಪಾಲಿಗೆ ಅದೃಷ್ಟ ತರಲಿದೆ.

ವಿಶೇಷವಾಗಿ ಕೆಲವು ರಾಶಿ ಜನರು ಈ ಸಂಚಾರದಿಂದಾಗಿ ಅದೃಷ್ಟದ ಬೆಂಬಲವನ್ನು ಪಡೆಯುತ್ತವೆ. ಅವರ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಸೇರಿದಂತೆ ಹಲವು ರೀತಿಯಲ್ಲಿ ಲಾಭ ಪಡೆಯಲಿದ್ದಾರೆ. ಮಂಗಳನ ಆಶೀರ್ವಾದದಿಂದಾಗಿ ಹಲವರಿಗೆ ಜೀವನದ ಪ್ರಮುಖ ಲಾಭ ನೋಡಬಹುದಾಗಿದೆ. ಹಾಗಾದ್ರೆ ಸ್ವಾತಿ ನಕ್ಷತ್ರಕ್ಕೆ ಮಂಗಳ ಚಲನೆಯು ಯಾವ ರೀತಿ ಲಾಭ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಮಂಗಳ ಗ್ರಹದ ಸಂಚಾರದಿಂದಾಗಿ ಹೊಸ ಮನೆ ಮತ್ತು ವಾಹನ ಖರೀದಿಸುವ ಅವಕಾಶಗಳ ಪಡೆಯುತ್ತಾರೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಸಿಗುವ ಸಾಧ್ಯತೆ ಅಧಿಕವಾಗಿದೆ. ನಿಮ್ಮ ವ್ಯಾಪಾರ ಅಥವಾ ಉದ್ಯಮಿಗಳಿಗೆ ಈ ಸಮ ಲಾಭದಾಯಕವಾಗುತ್ತಿದೆ. ನಿಮ್ಮ ನಾಯಕತ್ವ ಗುಣಗಳ ಕಾರಣದಿಂದಾಗಿ ಗಮನ ಸೆಳೆಯುತ್ತೀರಿ. ಹಾಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರೆ ಬಹಳ ಲಾಭವಿದೆ. ಸಂಬಂಧಗಳು ಗಟ್ಟಿಯಾಗುವ ಸಮಯವಿದು. ಮನೆಯಲ್ಲಿ ಬಹಳ ಸಮಯದಿಂದ ಕಾಡಿದ್ದ ಆರ್ಥಿಕ ಸಮಸ್ಯೆಯೊಂದು ಬಗೆಹರಿಯಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಮಂಗಳ ಗ್ರಹದ ಸಂಚಾರದಿಮದಾಗಿ ಉತ್ತಮ ಅವಕಾಶಗಳು, ಲಾಭಗಳ ಅನುವಿಸುತ್ತಾರೆ. ಹೊಸ ವಸ್ತು ಖರೀದಿ, ಆದಾಯ ಹೆಚ್ಚಳದಂತೆ ಕೆಲಸದಲ್ಲಿ ಉತ್ತಮ ಲಾಭ ನೋಡಬಹುದು. ವ್ಯವಹಾರದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಸ್ವ ಉದ್ಯೋಗಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯಕ್ತಿತ್ವದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ನಿಮ್ಮ ಹೂಡಿಕೆ ಲಾಭಕರವಾಗಬಹುದು. ಹಣ ಉಳಿತಾಯ ಮಾಡುವಂತಹ ಸಮಯ ಎನ್ನಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರು ಮಂಗಳನ ಸ್ವಾತಿ ನಕ್ಷತ್ರದ ಚಲನೆಯಿಂದಾಗಿ ವ್ಯವಹಾರ ಪ್ರಗತಿ ನೋಡುವಿರಿ. ಹಾಗೆ ನಿಮ್ಮ ಹಲವು ಕಾಲದ ಸಮಸ್ಯೆಯೊಂದು ಬಗೆಹರಿಯಲಿದೆ. ಸ್ವಂತ ಉದ್ಯೋಗ ಮಾಡುವವರು ಲಾಭ ನೋಡುವರು. ಯಾರ ಬಳಿಯಾದರು ನಿಮ್ಮ ಹಣ ಸಿಲುಕಿದ್ದರೆ ಈ ಸಮಯದಲ್ಲಿ ಕೈ ಸೇರಬಹುದು. ಸಾಲದಿಂದ ಮುಕ್ತಿ ಪಡೆಯಲು ಇದು ಬಹಳ ಉತ್ತಮ ಸಮಯ. ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಬಯಸಿದ ದಿನ ಎನ್ನಬಹುದು. ನಿಮ್ಮ ಬಹಳ ಸಮಯದ ಪ್ರವಾಸದ ಕನಸು ನನಸಾಗಲಿದೆ. ವೆಚ್ಚಗಳು ಕಡಿಮೆಯಾಗಲಿದೆ. ನಿಮ್ಮ ವಾಹನ ಸಂಬಂಧಿ ಸಮಸ್ಯೆ ಕೂಡ ದೂರಾಗಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ಶುಭ ಸುದ್ದಿ ಬರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications