Latest Updates
-
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ!
ಹೋಳಿ ಹಬ್ಬದಂದೇ ಚಂದ್ರಗ್ರಹಣ: ಈ ರಾಶಿಯವರಿಗೆ ಸಾಲು ಸಾಲು ಸಮಸ್ಯೆಗಳು! ಯಾರಿಗೆ ಲಾಭ, ಯಾರಿಗೆ ನಷ್ಟ?
ಹೋಳಿ ಹಬ್ಬದಂದೇ 2026ರ ಮೊದಲ ಚಂದ್ರಗ್ರಹಣ! ಈ ರಾಶಿಯವರು ಅತೀ ಎಚ್ಚರಿಕೆಯಿಂದ ಇರಲೇಬೇಕು. ನಿಮ್ಮ ರಾಶಿಯ ಮೇಲೆ ಪ್ರಭಾವ ಹೇಗಿದೆ, ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟ? ಇಲ್ಲಿದೆ ಮಾಹಿತಿ. ಹೌದು, ಹೋಳಿ ಸಂಭ್ರಮದ ನಡುವೆ ಗ್ರಹಣದ (Lunar Eclipse 2026) ಆತಂಕ ಮನೆಮಾಡಿದೆ. ಕೆಲವು ರಾಶಿಯವರಿಗೆ ಸಾಲು ಸಾಲು ಸಮಸ್ಯೆ ತರಲಿದೆ.
ಮಾರ್ಚ್ 3, 2026 ರಂದು ಹೋಳಿ ಹಬ್ಬದ (Chandra Grahan on Holi 2026) ದಿನವೇ ಚಂದ್ರಗ್ರಹಣ (Chandra Grahan 2026) ಸಂಭವಿಸುತ್ತಿದೆ. ಫಾಲ್ಗುಣ ಮಾಸದ ಪೂರ್ಣಿಮೆಯಂದು ಗೋಚರಿಸಲಿರುವ ಈ ಗ್ರಹಣ, 2026ರ ಪ್ರಮುಖ ಖಗೋಳ ವಿದ್ಯಮಾನಗಳಲ್ಲಿ ಒಂದಾಗಿದೆ. ಹೋಲಿಕಾ ದಹನದ ದಿನವೇ ಗ್ರಹಣ ಕಾಣಿಸಿಕೊಳ್ಳುತ್ತಿರುವುದು ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಹೋಳಿ (Holi 2026) ಬಣ್ಣಗಳ ಮತ್ತು ಸಂಭ್ರಮದ ಹಬ್ಬವಾದರೂ, ಚಂದ್ರಗ್ರಹಣ ಇರುವುದರಿಂದ ಪೂಜಾ ವಿಧಿವಿಧಾನಗಳು ಹಾಗೂ ಆಚರಣೆಗಳ ಮೇಲೆ 'ಸೂತಕ ಕಾಲ'ದ ಪ್ರಭಾವ ಬೀಳಲಿದೆ. ಶಾಸ್ತ್ರಗಳ ಪ್ರಕಾರ, ಗ್ರಹಣದಲ್ಲಿ ದಾನ ಮತ್ತು ಮಂತ್ರ ಜಪಕ್ಕೆ ವಿಶೇಷ ಶಕ್ತಿಯಿದ್ದರೂ, ರಾಶಿಚಕ್ರಗಳ ಮೇಲೆ ಇದರ ಋಣಾತ್ಮಕ ಪರಿಣಾಮವನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ.
ಚಂದ್ರನು ಮನಸ್ಸಿನ ಕಾರಕನಾದ ಕಾರಣ, ಗ್ರಹಣದ ಸಮಯ ಮಾನಸಿಕ ಅಶಾಂತಿ ಮತ್ತು ಹಠಾತ್ ಬದಲಾವಣೆಗಳನ್ನು ತರಬಲ್ಲದು. ಈ ಚಂದ್ರಗ್ರಹಣವು ವಿಶೇಷವಾಗಿ ಮೂರು ರಾಶಿಗಳಿಗೆ ಸವಾಲಾಗಿ ಪರಿಣಮಿಸಬಹುದು. ಆ ರಾಶಿಗಳು ಯಾವುವು, ಗ್ರಹಣದ ಪರಿಣಾಮಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದರ ವಿವರ ಇಲ್ಲಿದೆ.
ಕರ್ಕಾಟಕ
ಕಟಕ ರಾಶಿಯ ಅಧಿಪತಿ ಚಂದ್ರನಾಗಿರುವುದರಿಂದ, ಗ್ರಹಣದ ನೇರ ಪ್ರಭಾವ ಅವರ ಮೇಲಿರುತ್ತದೆ. ಗ್ರಹಣವು ನಿಮ್ಮ 'ಧನ ಭಾವದಲ್ಲಿ' ಸಂಭವಿಸುತ್ತಿರುವುದರಿಂದ ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಹೂಡಿಕೆ ಅಥವಾ ಹಣದ ವ್ಯವಹಾರ ಮಾಡಬೇಡಿ; ಹಠಾತ್ ನಿರ್ಧಾರಗಳು ನಷ್ಟ ತರಬಹುದು. ಮಾತಿನ ಮೇಲೆ ಹತೋಟಿ ಇರಲಿ. ಮಾನಸಿಕ ಶಾಂತಿಗಾಗಿ ದೀಪಾರಾಧನೆ ಅಥವಾ ಮಂತ್ರ ಪಠಣ ಉತ್ತಮ.
ಕನ್ಯಾ
ಕನ್ಯಾ ರಾಶಿಯವರಿಗೆ ಈ ಗ್ರಹಣವು 'ದ್ವಾದಶ ಭಾವದಲ್ಲಿ' (12ನೇ ಮನೆ) ಪ್ರಭಾವ ಬೀರಲಿದೆ. ಇದು ಖರ್ಚು ಮತ್ತು ನಷ್ಟದ ಸ್ಥಾನ. ಅನಿರೀಕ್ಷಿತ ಅಪಘಾತ ಅಥವಾ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ದೂರವಿದ್ದು, ಕಚೇರಿ ರಹಸ್ಯ ಹಂಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಶಿವನ ಆರಾಧನೆ ಪ್ರಯೋಜನಕಾರಿ.
ಮೀನ
ಮೀನ ರಾಶಿಗೆ ಚಂದ್ರಗ್ರಹಣವು ಆರನೇ ಭಾವದಲ್ಲಿ ಸಂಭವಿಸುತ್ತಿದೆ. ಇದು ಶತ್ರು, ರೋಗ ಮತ್ತು ಸಂಘರ್ಷದ ಸ್ಥಾನ. ನಿಮ್ಮ ವಿರೋಧಿಗಳು ಸಕ್ರಿಯರಾಗಿ ಕೆಲಸಗಳಿಗೆ ಅಡ್ಡಿಪಡಿಸಬಹುದು. ಯಾರನ್ನೂ ಕುರುಡಾಗಿ ನಂಬಬೇಡಿ. ಆರ್ಥಿಕ ವಂಚನೆ ನಡೆಯುವ ಸಾಧ್ಯತೆಯಿರುವುದರಿಂದ, ದಾಖಲೆಗಳಿಗೆ ಸಹಿ ಮಾಡುವ ಮುನ್ನ ಸರಿಯಾಗಿ ಓದಿ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.
ಶುಭ ಕಾರ್ಯ ಮಾಡಂಗಿಲ್ಲ!
ಗ್ರಹಣವಿರುವಾಗ ದೇವಸ್ಥಾನಗಳ ಬಾಗಿಲು ಮುಚ್ಚಲಾಗುತ್ತದೆ ಮತ್ತು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಹೋಲಿಕಾ ದಹನದ ಸಮಯ ಮತ್ತು ಪೂಜೆಯ ಮುಹೂರ್ತ ಗ್ರಹಣದ ಸಮಯಕ್ಕೆ ಅನುಗುಣವಾಗಿ ಬದಲಾಗಬಹುದು. ನಿಮ್ಮ ಪ್ರದೇಶದ ಪಂಚಾಂಗವನ್ನು ಗಮನಿಸಿ ಪೂಜೆ ಮಾಡುವುದು ಶ್ರೇಯಸ್ಕರ.
ಪರಿಹಾರ ಏನು?
ಗ್ರಹಣದ ಋಣಾತ್ಮಕ ಪರಿಣಾಮ ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರ ಸೂಚಿಸಲಾಗಿದೆ. ಗ್ರಹಣ ಕಾಲದಲ್ಲಿ 'ಓಂ ನಮಃ ಶಿವಾಯ' ಅಥವಾ ನಿಮ್ಮ ಇಷ್ಟ ದೇವತೆಯ ಮಂತ್ರ ಜಪಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಮಾನಸಿಕ ಶಾಂತಿಗೂ ಸಹಕಾರಿ.
ಗ್ರಹಣ ಮುಗಿದ ನಂತರ ಅಕ್ಕಿ, ಹಾಲು ಅಥವಾ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದು ಮಂಗಳಕರ. ಗ್ರಹಣದ ನಂತರ ಸ್ನಾನ ಮಾಡಿ ಮನೆಯನ್ನು ಗಂಗಾಜಲದಿಂದ ಶುದ್ಧೀಕರಿಸಿ, ನಕಾರಾತ್ಮಕ ಶಕ್ತಿಯು ಮನೆಯಿಂದ ದೂರಾಗುತ್ತದೆ ಎಂದು ಹೇಳಲಾಗುತ್ತದೆ.
ಒಟ್ಟಾರೆ, ಗ್ರಹಣವು ಕೇವಲ ಸಂಕಷ್ಟವನ್ನಷ್ಟೇ ತರುವುದಿಲ್ಲ, ಆತ್ಮಾವಲೋಕನದ ಸಮಯವೂ ಹೌದು. ಈ ಮೂರು ರಾಶಿಯವರು ಎಚ್ಚರಿಕೆ ವಹಿಸಿ ಮತ್ತು ತಾಳ್ಮೆಯಿಂದ ವರ್ತಿಸಿದರೆ, ಮುಂಬರುವ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











