Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Chandra Grahan 2025: ಭಾರತದಲ್ಲಿ ಚಂದ್ರಗ್ರಹಣ, ಇಲ್ಲಿವೆ ವಿಡಿಯೋಗಳು!
ಇಂದು ಅಪರೂಪದ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದು ಕೂಡ ಕರೆಯಲಾಗಿದೆ. ಸೆಪ್ಟೆಂಬರ್ 7ರಂದು ಆರಂಭಗೊಂಡು ಸೆಪ್ಟೆಂಬರ್ 8ರಂದು ಕೊನೆಯಾಗುತ್ತಿದೆ. ಈ ಚಂದ್ರ ಗ್ರಹಣ ಭಾರತ ಮತ್ತು ಏಷ್ಯಾ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಯುರೋಪಿನ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ.

ಭಾರತದಲ್ಲಿ ಬರೋಬ್ಬರಿ 82 ನಿಮಿಷಗಳ ಕಾಲ ಚಂದ್ರಗ್ರಹಣದ ಒಟ್ಟು ಸಮಯ ಇರಲಿದೆ. ಇದು ದಶಕದ ಅತ್ಯಂತ ದೀರ್ಘ ಚಂದ್ರಗ್ರಹಣ ಎಂದು ಕರೆಯಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆಯ ಪ್ರಕಾರ ಭಾರತದಲ್ಲಿ ಚಂದ್ರಗ್ರಹಣವು ಸೆಪ್ಟೆಂಬರ್ 7 ರ ಭಾನುವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 8 ರ ಸೋಮವಾರದ ಮುಂಜಾನೆಯವರೆಗೆ ಮುಂದುವರಿಯುತ್ತದೆ. ಆಕಾಶದಲ್ಲಿ ಮೋಡ ಇರಲಿದ್ದರೆ ಭಾರತದ ಎಲ್ಲಾ ಭಾಗದಿಂದಲೂ ಇದನ್ನು ನೋಡಬಹುದು.
ಭಾರತೀಯ ಕಾಲಮಾನ ಸೆಪ್ಟೆಂಬರ್ 7ರ ರಾತ್ರಿ 9:56ರಿಂದ ಆರಂಭಗೊಳ್ಳುವ ಗ್ರಹಣವು 11:42ರಲ್ಲಿ ಉತ್ತುಂಗದಲ್ಲಿರುವುದು ನೋಡಬಹುದು. ಈ ಸಮಯದಲ್ಲಿ ಎಲ್ಲಾ ಭಾಗದಲ್ಲು ಗ್ರಹಣ ಗೋಚರವಾಗಲಿದೆ.
ಭಾರತದಲ್ಲಿ 2025 ರ ಚಂದ್ರಗ್ರಹಣದ ಗೋಚರತೆ
ಭಾರತದಲ್ಲಿ ಸೆಪ್ಟೆಂಬರ್ 2025 ರಲ್ಲಿ ಸಂಭವಿಸುವ ಸಂಪೂರ್ಣ ಚಂದ್ರಗ್ರಹಣವು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಪುಣೆ, ಲಕ್ನೋ, ಪಾಟ್ನಾ ಮತ್ತು ಜೈಪುರ ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ನಗರಗಳಲ್ಲಿ ನೋಡಬಹುದು. ವೀಕ್ಷಕರು ಪೆನಂಬ್ರಲ್‌ನಿಂದ ಭಾಗಶಃ ಮತ್ತು ಪೂರ್ಣ ರಕ್ತ ಚಂದ್ರ ಗ್ರಹಣದವರೆಗೆ ಚಂದ್ರಗ್ರಹಣದ ಎಲ್ಲಾ ಹಂತಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಹಾಗೆ ಯಾವುದೆ ಸುರಕ್ಷತಾ ವಿಧಾನ ಬಳಸದೆಯೂ ಚಂದ್ರಗ್ರಹಣ ಬರಿಗಣ್ಣನಿಂದಲೂ ವೀಕ್ಷಿಸಬಹುದು. ಇದರಿಂದ ಹಾನಿ ಆಗುವುದಿಲ್ಲ.
ಈ ಚಂದ್ರಗ್ರಹಣ ಅಪರೂಪ ಏಕೆ?
ಈ ಚಂದ್ರಗ್ರಹಣವು 2022ರ ನಂತರ ಸಂಭವಿಸುತ್ತಿರುವ ದೀರ್ಘ ಗ್ರಹಣ ಎನಿಸಿದೆ. ಹಾಗೆ ಜಾಗತಿಕವಾಗಿ ಬಹುತೇಕ ಮಂದಿಯ ವೀಕ್ಷಣೆಗೆ ಲಭ್ಯವಾಗುತ್ತಿರುವ ಗ್ರಹಣ ಕೂಡ ಇದಾಗಿದೆ. ಒಟ್ಟು 6.27 ಶತಕೋಟಿ ಮಂದಿ ಈ ಸಂಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಲಿದ್ದಾರೆ. ಹಾಗೆ ಭಾರತದಲ್ಲಿ ಕೊನೆಯ ಬಾರಿಗೆ 2023ರ ಅಕ್ಟೋಬರ್ 28ರಂದು ಭಾಗಶಃ ಚಂದ್ರಗ್ರಹಣ ವೀಕ್ಷಿಸಿದ್ದರು. ಈ ಚಂದ್ರಗ್ರಹಣ ಮುಗಿದ ಬಳಿಕ 2026ರ ಮಾರ್ಚ್ 3ರಂದು ಮುಂದಿನ ಚಂದ್ರಗ್ರಹಣ ಸಂಭವಿಸುತ್ತಿದೆ.
ಇದಕ್ಕೂ ಮೊದಲು ಮಾರ್ಚ್ 14ರ ಹೋಳಿ ಹುಣ್ಣಿಮೆಯಂದೇ ಚಂದ್ರಗ್ರಹಣ ಸಂಭವಿಸಿತ್ತು. ಆದ್ರೆ ಭಾರತದಲ್ಲಿ ಗೋಚರವಾಗಿರಲಿಲ್ಲ. ಆದರೆ ಪರಿಣಾಮಗಳನ್ನು ಎದುರಿಸಬೇಕಾಯಿತು. ಈಗ ಸಂಭವಿಸುತ್ತಿರುವ ಚಂದ್ರಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರವಾಗುತ್ತಿದೆ.
ಭಾರತದಲ್ಲಿ ಗ್ರಹಣ ಸಮಯ
ಗ್ರಹಣ ಆರಂಭ ಅಥವಾ ಸ್ಪರ್ಶಕಾಲ- ರಾತ್ರಿ 9:56
ನಿಮೀಲನ ಕಾಲ- ರಾತ್ 11:01 ಗಂಟೆ
ಮಧ್ಯಕಾಲ- ರಾತ್ರಿ 11:42
ಉನ್ಮೀಲನ ಕಾಲ- ರಾತ್ರಿ 12:23
ಗ್ರಹಣ ಮೋಕ್ಷ ಕಾಲ ಅಥವಾ ಮುಗಿಯುವ ಕಾಲ- ರಾತ್ರಿ 1:26
ಒಟ್ಟು ಗ್ರಹಣ ಕಾಲ: 3 ಗಂಟೆ 31 ನಿಮಿಷ
ಸೂತಕ ಕಾಲ: 5 ಗಂಟೆ 24 ನಿಮಿಷಗಳು
ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಸಂಪೂರ್ಣವಾಗಿ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಸೂರ್ಯನ ಬೆಳಕು ಚಂದ್ರನ ಡಿಸ್ಕ್ ಅನ್ನು ಬೆಳಗಿಸುತ್ತದೆ. ಭೂಮಿಯು ಮಧ್ಯದಲ್ಲಿ ಬರುವ ಕಾರಣದಿಂದಾಗಿ ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯನ್ನು ಹಾದು ಮುಂದೆ ಸಾಗುತ್ತದೆ.



Click it and Unblock the Notifications

