Latest Updates
-
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ
Love Horoscope 2024: 2024 ಪ್ರೇಮಿಗಳಿಗೆ ಹೇಗಿರಲಿದೆ?ಯಾವೆಲ್ಲಾ ರಾಶಿಯವರು ವಿವಾಹವಾಗಬಹುದು?
ಹೊಸ ವರ್ಷ ಬರುತ್ತಿದೆ, ಹೊಸ ವರ್ಷದಲ್ಲಿ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? ಮದುವೆಯಾಗಬಹುದೇ, ಏನಾದರೂ ಸಮಸ್ಯೆಗಳು ಬರಲಿದೆಯೇ? ವೈದಿಕಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ....
ಮೇಷ ರಾಶಿ
ನೀವು ನಿಜವಾದ ಪ್ರೀತಿಯಲ್ಲಿದ್ದರೆ ಈ ವರ್ಷ ನಿಮಗೆ ತುಂಬಾ ಅದ್ಭುತವಾಗಿರಲಿದೆ. ಪ್ರೀತಿ ವಿಷಯದಲ್ಲಿ ಈ ವರ್ಷ ಅನುಕೂಲಕರವಾಗಿದೆ, ಕೆಲವೊಂದು ಏರಳಿತಗಳಿರಲಿದೆ, ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಆದರೆ ನಿಜವಾದ ಪ್ರೀತಿ ಬದುಕು ಗೆಲ್ಲಲು ಪ್ರೇರೇಪಿಸುತ್ತದೆ.

ವೃಷಭ ರಾಶಿ
ವೃಷಭ ರಾಶಿಯ ಪ್ರೇಮಿಗಳಿಗೆ 2024 ಅದ್ಭುತವಾಗಿರಲಿದೆ, ಜೀವನದಲ್ಲಿ ಹೊಸ ಆರಂಭವಾಗಲಿದೆ, ಪ್ರತಿಯೊಂದು ಸವಾಲುಗಳನ್ನು ಪಾಸಿಟಿವ್ ದೃಷ್ಟಿಯಿಂದ ನೋಡುತ್ತೀರಿ, ಇದರಿಂದ ಎಲ್ಲವೂ ಒಳಿತಾಗಲಿದೆ.
ಮಿಥುನ ರಾಶಿ
ನಿಮ್ಮ ಸಂಗಾತಿಯ ಬೆಂಬಲವಿರುವುದರಿಂದ ನಿಮ್ಮ ಬದುಕಿನಲ್ಲಿ ಬಯಸಿದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ, ಪ್ರೇಮ ಸಂಬಂಧದಲ್ಲಿ ಕಮಿಟ್‌ಮೆಂಟ್ ಇರಲಿದೆ, ಒಂದು ಸಂದರ್ಭದಲ್ಲಿ ನೀವು ಒಂಟಿ ಅನಿಸಬಹುದು, ಆದರೆ ನಂತರ ಎಲ್ಲವೂ ಸರಿಯಾಗಲಿದೆ, ನಿಮ್ಮಿಬ್ಬರ ನಡುವೆ ಪ್ರೀತಿಯ ಮಾಧುರ್ಯ ಹೆಚ್ಚಾಗಲಿದೆ.
ಕರ್ಕ ರಾಶಿ
ಮಂಗಳನ ಪ್ರಭಾವದಿಂದ ಕೆಲವು ಸವಾಲುಗಳು ಎದುರಾಗಬಹುದು, ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಬಹುದು, ನೀವು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಬೇಕು.
ಸಿಂಹ ರಾಶಿ
ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು, ಆದರೆ ಎಲ್ಲವೂ ಒಳಿತಾಗಲಿದೆ, ನಿಮ್ಮ ಪ್ರೇಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ 2024 ಉತ್ತಮ ವರ್ಷವಾಗಲಿದೆ, ಪ್ರೇಮ ಸಂಬಂಧದಲ್ಲಿನ ಸಮಸ್ಯೆಗಳು ದೂರಾಗಲಿದೆ, ಆದರೆ ವಿವಾಹಿತರು ಕೆಲ ಸಮಸ್ಯೆ ಎದುರಿಸಬಹುದು.
ತುಲಾ ರಾಶಿ
ಈ ವರ್ಷದಲ್ಲಿ ನಿಮ್ಮ ಪ್ರೀತಿಗೆ ಮನೆಯವರ ಬೆಂಬಲ ಸಿಗಲಿದೆ, ನಿಮ್ಮ ಕಷ್ಟಕಾಲದಲ್ಲಿ ನಮಗೆ ಬೆಂಬಲ ಸೂಚಿಸುತ್ತಾರೆ. ಆಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳುಗಳು ನಿಮಗೆ ಒಳ್ಳೆಯದಲ್ಲ. ಈ ಸಮಯದಲ್ಲಿ, ನಿಮ್ಮ ನಡುವಿನ ವ್ಯತ್ಯಾಸಗಳು ಹೆಚ್ಚಾಗಬಹುದು. ಕೆಲವು ತಪ್ಪು ತಿಳುವಳಿಕೆಗಳಿಂದಾಗಿ ನಿಮ್ಮ ಸಂಬಂಧ ಹದಗೆಡಬಹುದು. ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುತ್ತದೆ . ಈ ವರ್ಷ ವಿವಾಹವಾಗಲು ಬಯಸಿದರೆ ನಿಮ್ಮ ಮದುವೆ ನಡೆಯಲಿದೆ.
ವೃಶ್ಚಿಕ ರಾಶಿ
ಹೊಸ ವರ್ಷದಲ್ಲಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಈ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು.
ಧನು ರಾಶಿ
ಜೂನ್ ನಿಂದ ಜುಲೈವರೆಗಿನ ಅವಧಿಯು ನಿಮಗೆ ಉತ್ತಮವಾಗಿರುತ್ತದೆ, ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗಲಿದೆ. ವರ್ಷದ ಕೊನೆಯ ದಿನಗಳಲ್ಲಿ, ನೀವು ನಿಮ್ಮ ವೈವಾಹಿಕ ಜೀವನವನ್ನು ಬಹಳ ಸಂತೋಷದಿಂದ ಕಳೆಯಬಹುದು.
ಮಕರ ರಾಶಿ
ಮಕರ ರಾಶಿಯಬರಿಗೆ ಜುಲೈ ಮತ್ತು ಡಿಸೆಂಬರ್ ತಿಂಗಳುಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಮದುವೆಯಾಗುವ ಸಾಧ್ಯತೆಗಳಿವೆ. ನಿಮ್ಮ ಜೀವನದಲ್ಲಿ ಯಾರಾದರೂ ಬರುತ್ತಾರೆ ಎಂದು ಕಾಯುತ್ತಿದ್ದರೆ, ಮಾರ್ಚ್‌ನಿಂದ-ಜೂನ್ ನಡುವೆ ನಿಮ್ಮ ಜೀವನಕ್ಕೆ ವಿಸೇಷ ವ್ಯಕ್ತಿಯ ಆಗಮವಾಗಲಿದೆ.
ಕುಂಭ ರಾಶಿ: ಪ್ರೇಮಿಗಳಿಗೆ ವರ್ಷದ ಆರಂಭವು ಸ್ವಲ್ಪ ದುರ್ಬಲವಾಗಿರುತ್ತದೆ, ನಿಮ್ಮಿಬ್ಬರ ನಡುವೆ ಹೊಂದಾಣಿಕೆಯಲ್ಲಿ ಸಮಸ್ಯೆ ಇರಲಿದೆ, ಆದರೆ ನಂತರ ಎಲ್ಲಾ ಬಗೆಹರಿದು ನಿಮ್ಮ ನಡುವೆ ಪ್ರೀತಿ ಹೆಚ್ಚಾಗಲಿದೆ, ಮದುವೆಯಾಗುವುದರ ಬಗ್ಗೆ ಕೂಡ ನಿರ್ಧಾರ ತೆಗೆದುಕೊಳ್ಳಬಹುದು.
ಮೀನ ರಾಶಿ
ನಿಮ್ಮ ಪ್ರೇಮ ಸಂಬಂಧಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು, ನಿಮ್ಮ ಸಂಗಾತಿಗೆ ಸಮಯ ನೀಡಿ. ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ವರ್ಷ ಸಂಬಂಧ ಕೂಡಿ ಬರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











