Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕುಂಭ ಸಂಕ್ರಾಂತಿಯಂದು ಮಾಡಬೇಕಾದ ಧಾರ್ಮಿಕ ಕಾರ್ಯಗಳು ಹಾಗೂ ಪಠಿಸಬೇಕಾದ ಮಂತ್ರಗಳು
ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಬದಲಾಯಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುವುದು, ಇದೀಗ ಸೂರ್ಯ ಮಕರ ರಾಶಿಯಲ್ಲಿದೆ, ಮಕರದಿಂದ ಕುಂಭ ರಾಶಿಗೆ ಸಂಚರಿಸಿದಾಗ ಕುಂಭ ಸಂಕ್ರಾಂತಿ ಉಂಟಾಗುವುದು.
ಈ ದಿನ ಧಾರ್ಮಿಕ ದೃಷ್ಟಿಯಿಂದ ಮಹತ್ವದ್ದಾಗಿದೆ, ಯಾವಾಗ ಕುಂಭ ಸಂಕ್ರಾಂತಿ? ಈ ದಿನ ಮಾಡಬೇಕಾದ ಧಾರ್ಮಿಕ ಕಾರ್ಯಗಳೇನು ಎಂದು ನೋಡೋಣ ಬನ್ನಿ:

ಕುಂಭ ಸಂಕ್ರಾಂತಿ ಯಾವಾಗ?
ಫೆಬ್ರವರಿ 13 ಮಧ್ಯಾಹ್ನ 3:31ಕ್ಕೆ ಮಕರ ಆಶಿಯನ್ನು ಬಿಟ್ಟು ಕುಂಭರಾಶಿಗೆ ಸಂಚರಿಸಲಿದೆ. ಕುಂಭ ಸಂಕ್ರಾಂತಿಯನ್ನು ಮಾಘ ಮಾಸದಲ್ಲಿ ಆಚರಿಸಲಾಗುತ್ತದೆ. ಒಂದೊಂದು ಸಂಕ್ರಾಂತಿಗೂ ದಾನ, ಧರ್ಮ ಕಾರ್ಯಗಳು ಭಿನ್ನವಾಗಿರುತ್ತದೆ. ಕುಂಭ ಸಂಕ್ರಾಂತಿಯಂದು ಗೋದಾನ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಅಲ್ಲದೆ ಈ ದಿನ ಗಂಗೆ ಸ್ನಾನಕ್ಕೂ ತುಂಬಾನೇ ಮಹತ್ವವುದೆ. ಈ ದಿನ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು.
ಕುಂಭ ಸಂಕ್ರಾಂತಿಯ ಮಹತ್ವವೇನು?
ಕುಂಭ ಸಂಕ್ರಾಂತಿಯ ದಿನದಂದು ಗಂಗೆ,ಗೋದಾವರಿ ಮತ್ತು ಯಮುನಾ, ಕಾವೇರಿ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು. ಈ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಸುಖ, ಸೌಭಾಗ್ಯ ಮತ್ತು ಮೋಕ್ಷವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಈ ದಿನ ಈ ಕಾರ್ಯಗಳನ್ನು ಮಾಡಿದರೆ ಒಳ್ಲೆಯದು ಎಂದು ಹೇಳಲಾಗುವುದು:
ಶನಿ ಸಾಡೆ ಸತಿ ಮತ್ತು ಶನಿ ಧೈಯ್ಯಾ ದೋಷವಿರುವವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುವುದು, ಈ ಕಷ್ಟಗಳನ್ನು ಕಡಿಮೆ ಮಾಡಲು ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಕಪ್ಪು ಎಳ್ಳು ಕೂಡ ಅರ್ಪಿಸಿ.
ಈ ದಿನ ಗೋದಾನ ಮಾಡಿದರೆ ಸಂಪತ್ತು ಹೆಚ್ಚಾಗುವುದು
--ಸಂಕ್ರಾಂತಿಯ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡಿದರೆ ಅದೃಷ್ಟ ಒಲಿಯುವುದು ಎಂದು ಹೇಳಲಾಗುವುದು. ನೀವು ಆರ್ಥಿಕವಾಗಿ ಸಬಲರಾಗಿದ್ದರೆ ಬಡವರಿಗೆ ಆಹಾರ ನೀಡಿ.
* ಈ ದಿನ ಸಂಜೆ ಮನೆ ಮುಂಬಾಗಿಲಲ್ಲಿ ಎರಡು ತುಪ್ಪದ ದೀಪಗಳನ್ನು ಹಚ್ಚಿ. ಇದರಿಂದ ಭಗವಾನ್ ಶ್ರೀ ಹರಿವಿಷ್ಣು ಮತ್ತು ತಾಯಿ ಲಕ್ಷ್ಮಿ ಸಂತುಷ್ಟಳಾಗುತ್ತಾಳೆ
ಪೂಜಾ ವಿಧಾನ
ಈ ದಿನ, ಬ್ರಹ್ಮ ಮುಹೂರ್ತದಲ್ಲಿ ಎದ್ದು ಭಗವಾನ್ ಶ್ರೀ ಹರಿವಿಷ್ಣುವಿನ ಸ್ಮರಣೆ ಮಾಡಿ ನದಿಯಲ್ಲಿ ಸ್ನಾನ ಮಾಡಿ ನಂತರ ಸೂರ್ಯನಿಗೆ ಆರ್ರಗ್ಯ ಅರ್ಪಿಸಬೇಕು.
ಸೂರ್ಯ ಮಂತ್ರ ಪಠಿಸಿ
ಸೂರ್ಯ ನಮಸ್ಕಾರ ಮಂತ್ರ :
ಓಂ ಮಿತ್ರಾಯ ನಮಃ
ಓಂ ರವಾಯ್ರೇ ನಮಃ
ಓಂ ಸೂರ್ಯಾಯ ನಮಃ
ಓಂ ಭಾನವೇ ನಮಃ
ಓಂ ಖಗಾಯ ನಮಃ
ಓಂ ಪುಷ್ನೇ ನಮಃ
ಓಂ ಹಿರಣ್ಯಗರ್ಭಾಯ ನಮಃ
ಓಂ ಮರೀಚಯೇ ನಮಃ ಓಂ ಆದಿತ್ಯಾಯ ನಮಃ
ಓಂ ಸವಿತ್ರೇ ನಮಃ
ಓಂ ಅರ್ಕಾಯ ನಮಃ
ಓಂ ಭಾಸ್ಕರಾಯ ನಮಃ
ಸೂರ್ಯ ಬೀಜ ಮಂತ್ರ : ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ : ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್ ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್ ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
ಆದಿತ್ಯ ಹೃದಯಂ ಮಂತ್ರ :
ಆದಿತ್ಯನ ಹೃದಯದ ಪುಣ್ಯವೇ ಶತ್ರುನಾಶ ಜಯವಹಂ ಜಪೇನ್ನಿತ್ಯಂ ಅಕ್ಷಯ ಪರಂ ಶಿವಮ್
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
