Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ವಿಜಯದಶಮಿಯಂದು ಕೇಂದ್ರ ದೃಷ್ಟಿಯೋಗ: ಬುಧ-ಗುರುವಿನ ಕೃಪೆಯಿಂದ ಜಾಕ್‌ಪಾಟ್, ಹಣ ಡಬಲ್!
Kendra Drishti Yoga On Vijayadashami: ವೈದಿಕ ಶಾಸ್ತ್ರದಲ್ಲಿ ಪ್ರತಿಯೊಂದು ಹಬ್ಬದ ಸಮಯವು ಶುಭ ತರುವ ಸಮಯ ಎಂದು ಪರಿಗಣಿಸಲಾಗಿದೆ. ಅದೇ ರೀತಿ ಅಕ್ಟೋಬರ್ 2ರಂದು ವಿಜಯದಶಮಿ ಆಚರಿಸಲಾಗುತ್ತಿದೆ. ಈ ದಿನ ಹಲವು ರೀತಿಯ ಶುಭ ಯೋಗಗಳು ರೂಪುಗೊಳ್ಳುವುದು ನೋಡಬಹುದು. ಈ ಬಾರಿಯ ವಿಜಯ ದಶಮಿಯು ಹಿಂದೆಂದಿಗಿಂತಲೂ ವಿಶೇಷ ಎಂದು ಪರಿಗಣಿಸಲಾಗಿದೆ.
ಈ ವಿಜಯದಶಮಿಯ ದಿನದಂದು ಗುರುವಿನ ಸ್ಥಾನದಲ್ಲಾಗುವ ಬದಲಾವಣೆಯು ಹಲವು ರೀತಿಯ ಶುಭ ಯೋಗವನ್ನು ತರಲಿದೆ. ಗುರು ಈಗ ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಆದ್ರೆ ನಾಳೆ ಆತ ಬುಧನೊಂದಿಗೆ ಸಂಯೋಗವಾಗುತ್ತಿದ್ದು, ಇದರಿಂದ ಕೇಂದ್ರ ದೃಷ್ಟಿ ಯೋಗ ರೂಪುಗೊಳ್ಳುತ್ತಿದೆ.
ಅಕ್ಟೋಬರ್ 2 ರಂದು ಬುಧ ಮತ್ತು ಗುರು ಪರಸ್ಪರ 90 ಡಿಗ್ರಿಗಳಲ್ಲಿ ಕೇಂದ್ರ ದೃಷ್ಟಿ ಯೋಗವನ್ನು ರೂಪಿಸುತ್ತಾರೆ.

ಈ ಯೋಗದ ಪ್ರಭಾವವು ಎಲ್ಲಾ ರಾಶಿ ಜೀವನದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿದೆ. ಬುಧನನ್ನು ಐಶ್ವರ್ಯ, ಸಂಪತ್ತು, ಪ್ರಗತಿ ಹಾಗೂ ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆ ಗುರುವನ್ನು ಕೂಡ ಆರ್ಥಿಕ ಅಭಿವೃದ್ಧಿ, ವೈಯಕ್ತಿಕ ಪ್ರಗತಿಯಂತಹ ವಿಚಾರದಲ್ಲಿ ಪ್ರಬಲ ಯೋಗ ತರುವು ಗ್ರಹ ಎಂದು ನಂಬಲಾಗಿದೆ. ಬುಧ ಮತ್ತು ಗುರುಗಳಿಂದ ರೂಪುಗೊಂಡ ಕೇಂದ್ರ ದೃಷ್ಟಿ ಯೋಗದಿಂದಾಗಿ ಯಾವ ರಾಶಿಗಳಿಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರ ದೃಷ್ಟಿ ಯೋಗ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ನಿಮಗೆ ಹಲವು ಮೂಲಗಳಿಂದ ಒಳ್ಳೆಯ ಸುದ್ದಿಗಳು ಬರುತ್ತವೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಪರಿಣಾಮಕಾರಿಯಾದ ಬದಲಾವಣೆ ನೋಡಬಹುದು. ನ್ಯಾಯಾಲಯ ಸಂಬಂಧಿ ವಿಚಾರಗಳು, ಆಸ್ತಿ ವಿಚಾರ, ಸಾಲದ ವಿಚಾರಗಳಲ್ಲಿ ನಿಮ್ಮ ಕೈ ಮೇಲಾಗಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭದ ದಿನಗಳಿವೆ. ಹೊಸ ಒಪ್ಪಂದ ಮಾಡಿಕೊಳ್ಳುವ ಮೂಲಕ ಲಾಭ ಮಾಡುತ್ತೀರಿ. ವಾಹನ ಲಾಭ ನೋಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಕೇಂದ್ರ ದೃಷ್ಟಿ ಯೋಗವು ಅದೃಷ್ಟ ತರಲಿದೆ. ಅದೂ ಸಹ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ಜನರ ಸ್ನೇಹ ನಿಮಗೆ ಸಿಗುತ್ತದೆ. ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ. ಹಲವು ವರ್ಷದಿಂದ ನಿಮ್ಮಲ್ಲಿನ ಹಣಕಾಸು ಸಮಸ್ಯೆಯಿಂದಾಗಿ ಬಗೆಹರಿಯದೆ ಉಳಿದಂತಹ ವಿಚಾರವೊಂದು ಬಗೆಹರಿಯಲಿದೆ. ಬಹಳ ಹಿಂದಿನ ಕೆಲಸವೊಂದರ ಪರಿಣಾಮ ನೀವು ಪ್ರಯಾಣ ಮಾಡಬೇಕಾಗುತ್ತದೆ. ನೀವು ಬಡ್ತಿ, ವರ್ಗಾವಣೆಯಂತಹ ವಿಚಾರದಲ್ಲಿ ಹಿನ್ನಡೆ ಅನುಭವಿಸಿದ್ದರೆ ಈ ಸಮಯದಲ್ಲಿ ಧನಾತ್ಮಕ ವಿಚಾರಗಳ ಕೇಳುವಿರಿ.
ಧನು ರಾಶಿ
ಕೇಂದ್ರ ದೃಷ್ಟಿ ಯೋಗದಿಂದಾಗಿ ಧನು ರಾಶಿಯವರು ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯುತ್ತಾರೆ. ಉದ್ಯಮಿಗಳು ಹೊಸ ಆದಾಯ ಮೂಲಗಳ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ದೊಡ್ಡ ಲಾಭವಿದೆ. ಹೊಸದಾಗಿ ಸಾಲ ಮಾಡುವ ಉದ್ದೇಶದಿಂದ ಅಥವಾ ವಸ್ತು ಖರೀದಿ ಉದ್ದೇಶಗಳು ಈಡೇರಲಿವೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆ ಅಥವಾ ಚಿಂತೆಯೊಂದು ದೂರಾಗಲಿದೆ. ಅನೇಕರಲ್ಲಿ ಈ ಸಮಯವು ವಾಹನ ಲಾಭದಲ್ಲಿ ಧನಾತ್ಮಕವಾಗಿರಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications