Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಕಾರ್ತಿಕ ಸೋಮವಾರ:ಪ್ರದೋಷ ಸಮಯದಲ್ಲಿ ಈ ರೀತಿ ಶಿವನ ಆರಾಧನೆ ಮಾಡಿದರೆ ಇಷ್ಟಾರ್ಥ ನೆರವೇರುವುದು
ಕಾರ್ತಿಕ ಮಾಸದಲ್ಲಿ ಪ್ರತಿಯೊಂದು ದಿನವೂ ಶಿವ ಪೂಜೆಗೆ ವಿಶೇಷವಾದ ದಿನ ಅದರಲ್ಲಿಯೂ ಕಾರ್ತಿಕ ಸೋಮವಾರ ಇನ್ನೂ ವಿಶೇಷ, ಕಾರ್ತಿಕ ಸೋಮವಾರದಂದು ಶಿವನಿಗೆ ಪೂಜೆ ಮಾಡುವುದರಿಂದ ಅದರಿಂದ ಸಿಗುವ ಪ್ರಯೋಜನನ ಹೆಚ್ಚಾಗುವುದು ಎಂಬುವುದು ಧಾರ್ಮಿಕ ನಂಬಿಕೆ.
ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪವನ್ನು ಪ್ರದೋಷ ಸಮಯದಲ್ಲಿ ಹಚ್ಚಿ ಪೂಜಿಸಲಾಗುವುದು. ಕಾರ್ತಿಕ ಸೋಮವಾರ ಈ ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದು ಎಂಬುವುದು ಧಾರ್ಮಿಕ ನಂಬಿಕೆ:

ಏಕಾದಶ ರುದ್ರಾಭಿಷೇಕ
ಕಾರ್ತಿಕ ಸೋಮವಾರದಂದು ರುದ್ರಾಭಿಷೇಕ ಮಾಡಿದರೆ ಒಳ್ಳೆಯದು. ಮನೆಯಲ್ಲಿ ಶಿವಲಿಂಗ ಇಟ್ಟು ಪೂಜಿಸುವ ವಿಧಾನ ಗೊತ್ತಿಲ್ಲದವರು ಶಿವನ ದೇವಾಲಯಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಬಹುದು.
ಈ ದಿನ ಮಾಡುವ ದೀಪ ದಾನಕ್ಕೂ ತುಂಬಾನೇ ಮಹತ್ವವಿದೆ:
ಈ ದಿನ ದೇವಾಲಯಕ್ಕೆ ದೀಪ ದಾನ ಅಂದರೆ ಹಣತೆಗೆ ಎಣ್ಣೆಯನ್ನು ದಾನ ಮಾಡಿ. ಈ ದಿನದಂದು ಹಣತೆ ಹಚ್ಚುವುದರಿಂದ ಗೊತ್ತಿಲ್ಲದೆ ಮಾಡಿದ ಪಾಲ ನಿವಾರಣೆಯಾಗುತ್ತದೆ, ಮೋಕ್ಷ ಸಿಗುವುದು. ಬದುಕಿನಲ್ಲಿ ಏನಾದರು ಸಮಸ್ಯೆ ಎದುರಿಸುತ್ತಿದ್ದರೆ ಅದು ನಿವಾರಣೆಯಾಗುವುದು ಎಂದು ನಂಬಲಾಗಿದೆ.
ಕಾರ್ತಿಕ ಸೋಮವಾರದ ಉಪವಾಸದ ಮಹತ್ವ
ಕಾರ್ತಿಕ ಸೋಮವಾರದಂದು ಉಪವಾಸವಿದ್ದು ಶಿವನ ಆರಾಧೆ ಮಾಡಲಾಗುವುದು, ಈ ರೀತಿ ಉಪವಾಸವಿದ್ದು ರುದ್ರಾಭಿಷೇಕ ಮಾಡಿದರೆ ಕಷ್ಟಗಳು ದೂರಾಗುವುದು, ನೀವು ಮನಸ್ಸಿನಲ್ಲಿ ಏನಾದರು ಅಂದುಕೊಂಡಿದ್ದರೆ ಅದು ನೆರವೇರುವುದು ಎಂದು ನಂಬಲಾಗಿದೆ. ಶಿವನನ್ನು ಬೆಂಕಿ ಸ್ವರೂಪದಲ್ಲಿ ಅಂದರೆ ಉರಿಯುತ್ತಿರುವ ಹಣತೆಯ ಸ್ವರೂಪದಲ್ಲಿ ಕಾಣಲಾಗುವುದು, ಹೀಗಾಗಿ ಮಣ್ಣನ ಹಣತೆಯಲ್ಲಿ ದೀಪ ಹಚ್ಚಿ ಆರಾಧನೆ ಮಾಡಲಾಗುವುದು.
ಕಾರ್ತಿಕ ಸೋಮವಾರ ವ್ರತ ಮಾಡುವುದರಿಂದ ದೊರೆಯುವ ಪ್ರಯೋಜನಗಳು
- ಕಾರ್ತಿಕ ಸೋಮವಾರ ವ್ರತ ಮಾಡುವುದರಿಂದ ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ
- ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು, ಉಪವಾಸ ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ
- ಸಾಲ ಬಾಧೆಯಿಂದ ಮುಕ್ತರಾಗುತ್ತೇವೆ
- ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಬೆಳವಣಿಗೆ ಕಂಡು ಬರಲಿದೆ
- ಮನಸ್ಸಿಗೆ ನೆಮ್ಮದಿ ದೊರೆಯಲಿದೆ
- ನಾವು ತುಂಬಾ ಸಮಯದಿಂದ ಬಯಸುತ್ತಿದ್ದ ವಿಷಯ ನೆರವೇರಲಿದೆ.
ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ಈ ಮಂತ್ರ ಪಠಣೆ ಮಾಡಿ:
ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಶಿವ ಗಾಯತ್ರಿ ಮಂತ್ರ:
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರ ಪ್ರಚೋದಯಾತ್
ರುದ್ರ ಮಂತ್ರ:
ಓಂ ನಮೋ ಭಗವತೇ ರುದ್ರಾಯ
ಶಿವ ಧ್ಯಾನ ಮಂತ್ರ:
ಕರ್ಚರಾಂಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವನ್ನಾಯಂಜಂ ವಾ ಮಾನಸಂ ವಾ ಪಾರದಂ|
ವಿಹಿತಂ ವಿಹಿತಂ ವಾ ಸರ್ವ ಮೇತತ್ ಕ್ಷಮಸ್ವ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ||
ಮಹಾಮೃತ್ಯುಂಜಯ ಮಂತ್ರ:
ಓಂ ತ್ರಯಂಬಕಂ ಯಜಾಮಹೇ '
ಸುಗಂಧಿಂ ಪುಷ್ಠಿವಧನಂ
ಊರ್ವರುಕಮಿವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಮೃತಾತ್
ಶಿವ ಮಂತ್ರ:
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications