ಮಿಥುನ ರಾಶಿಗೆ ಗುರು ಸಂಚಾರ: ಮೂರು ರಾಶಿಯವರಲ್ಲಿ ಆರ್ಥಿಕ ಸ್ವಾವಲಂಬನೆ

ಜ್ಯೋತಿಷ್ಯದಲ್ಲಿ ರಾಶಿಗಳಿಗಿಂತಲೂ ಗ್ರಹಗಳಿಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರತಿಯೊಂದು ಗ್ರಹದ ಚಲನೆಯು ಒಂದೊಂದು ರೀತಿಯಲ್ಲಿ ಲಾಭದಾಯಕವಾಗಲಿದೆ. ಹಾಗೆ ಎಲ್ಲಾ 12 ರಾಶಿಗಳಿಗೂ ಕೂಡ ಅದರಿಂದ ಪ್ರಭಾವಕ್ಕೆ ಒಳಗಾಗುವುದು ನೋಡಬಹುದು. ಈಗ ಗುರು ಗ್ರಹದ ಸಂಚಾರದಿಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತಿರುವುದು ಕೂಡ ನೋಡಬಹುದಾಗಿದೆ.

ಧನು ಹಾಗೂ ಮೀನ ರಾಶಿಯ ಆಧಿಪತಿಯಾಗಿರುವ ಗುರು ಗ್ರಹವು ಈಗ ಮಿಥುನ ರಾಶಿಗೆ ಚಲಿಸಲಿದೆ. ಬುಧನ ಅಧಿಪತ್ಯ ಇರುವ ಮಿಥುನ ರಾಶಿಗೆ ಗುರುವಿನ ಸಂಚಾರವು ಹಲವರಲ್ಲಿ ಲಾಭದಾಯಕವಾಗುತ್ತಿದೆ. ಗುರುವನ್ನು ದೇವತೆಗಳ ಗುರು ಎಂದು ಪರಿಗಣಿಸಲಾಗಿದೆ. ಹಾಗೆ ಗುರುವಿನ ಆಶೀರ್ವಾದಕ್ಕೆ ಒಳಗಾದರೆ ನಿಮಗೆ ಲಾಭ ನೋಡಬಹುದು.

Jupiter Transits Gemini Will Lead Financial Independence For These Zodiac Signs

ಈ ಮಿಥುನ ರಾಶಿಯ ಅಧಿಪತಿ ಬುಧ ಆಗಿದ್ದು, ಮುಂದಿನ ಒಂದು ವರ್ಷ ಗುರು ಗ್ರಹವು ಬುಧನ ರಾಶಿಯಲ್ಲಿ ಚಲಿಸಲಿದ್ದಾನೆ. ಇದು ಮಿಥುನ ರಾಶಿ ಸೇರಿದಂತೆ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಹಾಗಾದ್ರೆ ಜೂನ್‌ನಲ್ಲಿ ಮಿಥುನ ರಾಶಿಗೆ ಗುರು ಸಂಚಾರವು ಯಾರಿಗೆ ಲಾಭದಾಯಕ? ಗುರುವನ್ನು ಸಂಪತ್ತಿನ ಗ್ರಹವಾಗಿ ಪರಿಗಣಿಸುವುದರಿಂದ ಯಾರಿಗೆಲ್ಲಾ ಲಾಭದಾಯಕ ನೋಡೋಣ.

ಮೇಷ ರಾಶಿ

ಗುರು ಗ್ರಹವು ಮೇಷ ರಾಶಿಯ 3ನೇ ಮನೆಯಲ್ಲಿ ಅಸ್ತಮಿಸಲಿದೆ. ಇದು ಮೇಷ ರಾಶಿಯವರಲ್ಲಿ ಧನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ನಿಮ್ಮ ಆರ್ಥಿಕ ವ್ಯವಹಾರಗಳಲ್ಲಿ ಇದ್ದ ಅಡೆತಡೆಗಳ ನಿವಾರಣೆಗೆ ಇದು ಸಹಕಾರಿ. ಬಹಳ ಕಾಲದಿಂದಲೂ ನೀವು ಯಾವುದಾದರು ಆರ್ಥಿಕ ಸಮಸ್ಯೆಗಳಿಗೆ ಒಳಗಾಗಿದ್ದರೆ ಈ ಸಮಯದಲ್ಲಿ ನಿಮಗೆ ಅದರಿಂದ ಮುಕ್ತಿ ಸಿಗಬಹುದು. ವಿವಾಹಿತರಲ್ಲಿ ಸಂತೋಷದ ಕ್ಷಣಗಳು ಎದುರಾಗಲಿವೆ. ನೀವು ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಅದರಿಂದ ಬಹಳಷ್ಟು ಲಾಭ ನೋಡುತ್ತೀರಿ. ಹಾಗೆ ದಾಂಪತ್ಯ ಜೀವನದಲ್ಲಿದ್ದ ಸಮಸ್ಯೆಗಳು ಕೂಡ ಕೊನೆಯಾಗಲಿವೆ. ಉದ್ಯೋಗ ಹುಕುತ್ತಿದ್ದವರಿಗೆ, ವರ್ಗಾವಣೆ, ಬಡ್ತಿಯ ನಿರೀಕ್ಷೆಯಲ್ಲಿದ್ದವರಿಗೂ ಈ ಸಮಯದಲ್ಲಿ ಬಹಳ ಲಾಭವಾಗುವುದು.

ವೃಷಭ ರಾಶಿ

ವೃಷಭ ರಾಶಿಯ ಎರಡನೇ ಮನೆಯಲ್ಲಿ ಗುರು ಗ್ರಹವು ಸಂಚರಿಸಲಿದೆ. ಈ ರಾಶಿ ಜನರು ಹಠಾತ್ ಆರ್ಥಿಕ ಲಾಭ ಪಡೆಯುತ್ತಾರೆ. ನಿಮ್ಮ ವ್ಯವಹಾರಗಳು ಇಷ್ಟು ದಿನದಿಂದ ಕುಂಟುತ್ತಾ ಸಾಗಿದ್ದರೆ ಈ ಸಮಯದಲ್ಲಿ ವೇಗ ಪಡೆಯಲಿದೆ. ಹಾಗೆ ಇದರಿಂದ ನಿಮಗೆ ಹೆಸರು, ಲಾಭ ಕೂಡ ಸಿಗಲಿದೆ. ನೀವು ಕೆಲಸದ ಕುರಿತು ಆಸಕ್ತಿ ಹೊಂದುತ್ತೀರಿ. ಹೆಚ್ಚು ಹೆಚ್ಚು ಶ್ರಮ ಹಾಕಿ ಕೆಲಸ ಮಾಡುವುದು ನಿಮಗೆ ಉತ್ತಮ ಫಲಿತಾಂಶ ನೀಡಲಿದೆ. ವಾಹನ ಖರೀದಿ, ಅಥವಾ ಮನೆಗಾಗಿ ವಸ್ತುಗಳ ಖರೀದಿಸಲು ನೀವು ಮುಂದಾಗಬಹುದು. ಇದರಿಂದ ಉತ್ತಮ ಪ್ರಶಂಸೆ ಕೇಳಬಹುದು. ಕುಟುಂಬದಲ್ಲಿದ್ದ ಹಣಕಾಸು ಒತ್ತಡ ಅಥವಾ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆಧ್ಯಾತ್ಮಿಕವಾಗಿಯೂ ಈ ಸಮಯದಲ್ಲಿ ನೀವು ಬಲವಾಗುತ್ತೀರಿ.

ಮೀನ ರಾಶಿ

ಗುರು ಗ್ರಹವು ಮೀನ ರಾಶಿಯ 4 ನೇ ಮನೆಯಲ್ಲಿ ಅಸ್ತಮಿಸಲಿದೆ. ಇದರಿಂದಾಗಿ ಈ ರಾಶಿಯ ಮಂದಿಗೆ ತಮ್ಮ ಕುಟುಂಬದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದು ಕೊನೆಗೊಳ್ಳುತ್ತದೆ. ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ನೋಡಬಹುದು. ನೀವು ಯಾರಿಗಾದರು ಹಣದ ಸಹಾಯ ಮಾಡಿ ವಾಪಾಸು ಪಡೆಯಲು ಬಹಳ ಕಷ್ಟಪಡುತ್ತಿದ್ದರೆ ಈ ಸಮಯದಲ್ಲಿ ಮರಳಿ ಪಡೆಯುವ ಸಾಧ್ಯತೆ ಅಧಿಕವಾಗಿದೆ. ನೀವು ರಿಯಲ್ ಎಸ್ಟೇಟ್ ಸೇರಿದಂತೆ ಯಾವುದಾದರು ಭೂಮಿ, ಮನೆ ಮೇಲೆ ಹಣ ಹೂಡಿಕೆ ಮಾಡಲು ಮುಂದಾದರೆ ಅದರಿಂದ ಲಾಭ ಮಾಡಬಹುದು. ದೀರ್ಘ ಕಾಲದ ಬಳಿಕ ನೀವು ಪವಿತ್ರ ಸ್ಥಳಗಳ ಯಾತ್ರೆಗೆ ಮುಂದಾಗುವ ಮನಸ್ಸು ಮಾಡಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jupiter Transits Gemini Will Lead Financial Independence For These Zodiac Signs

Jupiter, the ruler of Sagittarius and Pisces, will now move into Gemini. Jupiter's transit into Gemini, ruled by Mercury, is proving beneficial for many.
Story first published: Tuesday, May 20, 2025, 19:30 [IST]
X
Desktop Bottom Promotion