Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ರಾಮ ಮಂದಿರ ಉದ್ಘಾಟನೆ: ಪ್ರಾಣಪ್ರತಿಷ್ಠಾಪನೆ ಸುವರ್ಣ ಘಳಿಗೆ ನೀವು ಕಣ್ತುಂಬಿಕೊಳ್ಳಬಹುದು, ಹೇಗೆ?
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಆ ಒಂದು ಕ್ಷಣಕ್ಕಾಗಿ ಭಾರತ ಭಕ್ತಿಯಿಂದ ಎದುರು ನೋಡುತ್ತಿದೆ, ಭಾರತದ ಅಯೋಧ್ಯೆಯಲ್ಲಿ ನಡೆಯಲಿರುವ ಈ ಭವ್ಯ ಘಳಿಗೆ ಹೇಗಿರಲಿದೆ ಎಂದು ವಿಶ್ವದ ಎದುರು ಕುತೂಹಲದಿಂದ ಕಾಯುತ್ತಿದೆ.
ಜನವರಿ 22ಕ್ಕೆ ಶ್ರೀರಾಮ ಪ್ರಾಣಪ್ರತಿಷ್ಠಾಪೆ ಮಾಡುವಾಗ ಅದನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆ ಪ್ರತಿಯೊಬ್ಬ ರಾಮ ಭಕ್ತರಲ್ಲಿ ಇದೆ, ಆದರೆ ಆ ದಿನ ಪ್ರಧಾನ ಅರ್ಚಕರಾದ ಲಕ್ಷ್ಮಿ ಕಾಂತ್ ದೀಕ್ಷಿತ್, ಪ್ರಧಾನಿ ಮೋದಿ ಸೇರಿದಂತೆ ಮಂದಿರೊಳಗೆ ಬರೀ ಐವರು ಸೇರಿ ಪ್ರಾಣಪ್ರತಿಷ್ಠಾಪನೆ ಮಾಡಲಿದ್ದಾರೆ, ಆದ್ದರಿಂದ ಈ ದಿನ ಭಕ್ತರು ದೇವಾಲಯದೊಳಗೆ ಪ್ರವೇಶ ಮಾಡುವಂತಿಲ್ಲ, ಜನವರಿ 23ರಿಂದ ಶ್ರೀರಾಮ ಮಂದಿರದೊಳಗೆ ಭಕ್ತರಿಗೆ ಮುಕ್ತ ಅವಕಾಶವಿದೆ.

ಭಕ್ತರು ಕಣ್ತುಂಬಿಕೊಳ್ಳಬಹುದು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ
ಮಂದಿರದೊಳಗೆ ಹೋಗಿ ಪ್ರಾಣಪ್ರತಿಷ್ಠಾಪನೆ ನೋಡಲು ಸಾಧ್ಯವಾಗದೇ ಇರಬಹುದು, ಆದರೆ ಬೇಸರ ಪಡುವಂತಿಲ್ಲ ನೀವು ಲೈವ್‌ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಸಮಯ ಜನವರಿ 22 ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನೀವು ಲೈವ್ ವೀಕ್ಷಿಸಬಹುದು.
ಲೈವ್ ಟೆಲಿಕಾಸ್ಟ್ ಯಾವುದರಲ್ಲಿ ನೋಡಬಹುದು?
ಲೈವ್ ಟೆಲಿಕಾಸ್ಟ್ (ನೇರ ಪ್ರಸಾರ)ಕ್ಕೆ ಎಲ್ಲವೂ ವ್ಯವಸ್ಥೆ ಮಾಡಲಾಗುವುದು. ಪ್ರಾಣ ಪ್ರತಿಷ್ಠಾಪನೆ ಪೂಜೆಯನ್ನು ನೀವು DD ನ್ಯಾಷನಲ್ ಚಾನಲ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಇತರ ನ್ಯೂಸ್ ಏಜೆನ್ಸಿಗಳಿಗೂ ಫೀಡ್ ನೀಡಲಿದೆ, ಅಲ್ಲದೆ ದೂರದರ್ಶನ ಯೂಟ್ಯೂಬ್ ಲಿಂಕ್‌ನಲ್ಲಿಯೂ ವೀಕ್ಷಿಸಬಹುದು.
40 ಕ್ಯಾಮರಾ ಅಳವಡಿಸಲಾಗಿದೆ
ಅಯೋಧ್ಯೆಯ ಬೇರೆ-ಬೇರೆ ಭಾಗಗಳಲ್ಲಿ 40 ಕ್ಯಾಮರಾ ಅಳವಡಿಸಲಾಗಿದೆ, ರಾಮ ಮಂದಿರದ ಆವರಣದಿಂದ ಹಿಡಿದು ಗರ್ಭಗುಡಿಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಎಲ್ಲವೂ ಲೈವ್‌ನಲ್ಲಿದೆ. ಈ ಬ್ರಾಡ್‌ಕಾಸ್ಟ್‌ಗೆ 4K ತಂತ್ರಜ್ಞಾನ ಬಳಸಲಾಗುವುದು ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸರಾಯು ಸಮೀಪದಲ್ಲಿರುವ ರಾಮ್ ಕಿ ಪೈಡಿ, ಜಟಾಯು ವಿಗ್ರಹ ಹೀಗೆ ವಿವಿಧ ಭಾಗಗಳಿಂದ ಲೈವ್ ಕವರೇಜ್ ನೀಡಲಾಗುವುದು.
G20ಯಲ್ಲಿ 4K ತಂತ್ರಜ್ಞಾನ ಬಳಸಿ ಕವರ್ ಮಾಡಲಾಗಿತ್ತು, ಅದರಂತೆ ಅಯೋಧ್ಯೆ ಕಾರ್ಯಕ್ರಮದಲ್ಲಿಯೂ 4K ತಂತ್ರಜ್ಞಾನ ಬಳಸಲಾಗುವುದು. ಬೇರೆ-ಬೇರೆ ಭಾಷೆಗಳಲ್ಲಿ ಲೈವ್ ಕವರೇಜ್ ಆಗಲಿದೆ, ಅಲ್ಲದೆ ದೂರದರ್ಶನ ಸೆರೆ ಹಿಡಿದ ದೃಶ್ಯಗಳನ್ನು ಇತರ ಖಾಸಗಿ ಚಾನಲ್‌ನವರು ಬಳಸಿಕೊಳ್ಳಲಿದ್ದಾರೆ.
ಭಕ್ತರಿಗೆ ಖುಷಿ ತಂದಿದೆ
ನೀವು ನೇರವಾಗಿ ಅಲ್ಲದಿದ್ದರೂ ನೇರ ಪ್ರಸಾರದಲ್ಲಿ ಆ ಸುವರ್ಣ ಘಳಿಗೆಯನ್ನು ಕಣ್ತುಂಬಿಕೊಳ್ಳಬಹುದು ಎಂಬ ಖುಷಿಯಲ್ಲಿದ್ದಾರೆ. ಆ ದಿನ ಒಂದು ವೇಳೆ ಎಲ್ಲರಿಗೆ ಅವಕಾಶವಿದ್ದರೆ ಖಂಡಿತ ಜನರನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು, ಆದರೆ ಆ ದಿನ ಪ್ರಧಾನ ಅರ್ಚಕರು, ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್‌ರಷ್ಟೇ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications