Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ನವೆಂಬರ್‌ನಲ್ಲಿ ಗಜಕೇಸರಿ ಯೋಗ: ಯಾವೆಲ್ಲಾ ರಾಶಿಯವರ ಜೀವನ ಬದಲು! ಯಾರಿಗೆಲ್ಲಾ ಜಾಕ್‌ಪಾಟ್?
ವೈದಿಕ ಜ್ಯೋತಿಷ್ಯದಲ್ಲಿ ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರು ಅತ್ಯಂತ ಪ್ರಭಾವಶಾಲಿಯಾದ ಗ್ರಹ, ಗುರುವಿನ ಸಂಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುವುದು ನೋಡಬಹುದು. ಗುರುವನ್ನು ಜ್ಞಾನ, ಧರ್ಮ, ಸಂಪತ್ತು, ಶಿಕ್ಷಣ, ನ್ಯಾಯ ಹಾಗೆ ಬುದ್ದಿವಂತಿಕೆಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ.
ಇನ್ನು ಗುರು ಗ್ರಹದೊಂದಿಗೆ ಕೆಲವು ಗ್ರಹಗಳ ಸಂಯೋಗವು ಹಲವು ರೀತಿಯ ಯೋಗಗಳ ರೂಪಿಸುವುದು ಸಹ ನೋಡಬಹುದು. ಗುರು ಒಂದೇ ರಾಶಿಯಲ್ಲಿ 12 ತಿಂಗಳ ಕಾಲ ನೆಲೆಸಲಿದ್ದಾನೆ. ಇದರಿಂದಾಗಿ ಹಲವು ಗ್ರಹಗಳ ಸಂಯೋಗವಾಗುವುದು ನೋಡಬಹುದು. ಇದು ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿದೆ.

ಸದ್ಯ ಈಗ ಗುರು ಅಕ್ಟೋಬರ್ 18 ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಡಿಸೆಂಬರ್‌ನಲ್ಲಿ ಈ ಚಲನೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದ್ರೆ ಚಂದ್ರನು ನವೆಂಬರ್ 10 ರಂದು ಮಧ್ಯಾಹ್ನ 1:02 ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗುರು ಮತ್ತು ಚಂದ್ರನ ಸಂಯೋಗದಿಂದಾಗಿ ಇದು ಗಜಕೇಸರಿ ರಾಜಯೋಗವನ್ನು ಸೃಷ್ಟಿಸಲಿದೆ.
ಹಾಗೆ ಗುರುವಿನೊಂದಿಗೆ ಅಪರೂಪದ ಚಂದ್ರನ ಸಂಯೋಗವು ಪಂಚ ಪುರುಷ ಯೋಗಗಳಲ್ಲಿ ಒಂದಾಗಿರುವ ಹಂಸ ರಾಜಯೋಗವನ್ನು ಸಹ ಸೃಷ್ಟಿಸಲಿದೆ. ಹಾಗಾದ್ರೆ ನಾವಿಂದು ಗುರುವಿಂದ ಉಂಟಾಗುತ್ತಿರುವ ಈ ಗಜಕೇಸರಿ ರಾಜಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಶುಭವಾಗುತ್ತಿದೆ ಯಾರಿಗೆ ಉತ್ತಮ ಸಮಯ ಕಾದಿದೆ ಎಂಬುದನ್ನು ತಿಳಿದುಕೊಳ್ಳಿ.
ಮೇಷ ರಾಶಿ
ಈ ಮೇಷ ರಾಶಿಯ ನಾಲ್ಕನೇ ಮನೆಯಲ್ಲಿ ಗುರು ಮತ್ತು ಚಂದ್ರನ ಸಂಯೋಗವಾಗಿ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಇದರಿಂದ ನಿಮ್ಮಲ್ಲಿ ಅದೃಷ್ಟದ ದಿನಗಳು ಬರಲಿವೆ. ಸ್ಥಳೀಯರು ತಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದನ್ನು ನೋಡಬಹುದು. ಕೆಲಸದಲ್ಲಿ ಪ್ರಗತಿಗೆ ಅವಕಾಶಗಳನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ. ನಿಮ್ಮ ಹಲವು ವ್ಯವಹಾರಗಳಲ್ಲಿ ಶುಭವಿದೆ. ಬ್ಯಾಂಕ್‌ನಿಂದ ಸಾಲ ಪಡೆಯುವ ನಿಮ್ಮ ಬಹುಕಾಲದ ಬಯಕೆ ಈಡೇರಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಚಂದ್ರನ ನೇರ ಸಂಯೋಗ ನಡೆಯಲಿದೆ. ಇದರಿಂದ ನಿಮ್ಮ ಹಲವು ಕಷ್ಟಗಳು ನಿವಾರಣೆಯಾಗಲಿದೆ. ದೀರ್ಘಕಾಲದಿಂದ ಬಾಕಿ ಇರುವ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಈ ಸಮಯ ಉದ್ಯೋಗದಲ್ಲಿರುವವರಿಗೆ ಅತ್ಯಂತ ಶುಭವಾಗಿರುತ್ತದೆ. ನಿಮ್ಮಲ್ಲಿ ಹೊಸ ಆದಾಯ ಮೂಲಗಳು ಹುಟ್ಟಿಕೊಳ್ಳಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಹೋಟೆಲ್ ಉದ್ಯಮಿಗಳಿಗೆ ಬಹಳ ಲಾಭವಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಯೋಗವು 9ನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಇದನ್ನು ಅದೃಷ್ಟದ ಮನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿಮ್ಮ ಅದೃಷ್ಟ ಕೂಡ ಹೊಳೆಯಲಿದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಶುಭ ಇರಲಿದೆ. ನಿಮ್ಮ ನಾಯಕತ್ವದ ಕೌಶಲ್ಯಗಳು ಸುಧಾರಿಸಲಿವೆ. ನಿಮ್ಮ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಉತ್ತಮ ಅವಕಾಶಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಈ ಎರಡು ತಿಂಗಳು ನಿಮಗೆ ಶುಭಕರವಾಗಿರಲಿದೆ. ಸಾಲದ ಪ್ರಮಾಣ ಕಡಿಮೆಯಾಗಲಿದೆ, ನಿಮ್ಮ ವಾಹನ ಖರೀದಿಯ ಆಲೋಚನೆಗೆ ಮತ್ತೆ ಜೀವ ಬರಲಿದೆ. ವ್ಯಾಪಾರಿಗಳು ಈ ಎರಡು ತಿಂಗಳು ನೆಮ್ಮದಿ ಜೀವನ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











