ವೈದಿಕ ಶಾಸ್ತ್ರ ಪ್ರಕಾರ ಯಾವ ನಕ್ಷತ್ರದವರು ಯಾರನ್ನು ಮದುವೆಯಾದರೆ ಬಾಳ್ವೆ ಚೆನ್ನಾಗಿರುತ್ತದೆ?

ವೈದಿಕಶಾಸ್ತ್ರದಲ್ಲಿ ಮದುವೆ ಎಂದಾಗ ಹಿಂದೂ ಧರ್ಮದಲ್ಲಿ ನಕ್ಷತ್ರಗಳ ಹೊಂದಾಣಿಕೆಯಾಗುವುದೇ, ಗಣಗಳ ಹೊಂದಾಣಿಕೆಯಾಗುವುದೇ ಎಂದೆಲ್ಲಾ ನೋಡಿ ನಂತರ ಈ ಜೋಡಿಗಳಿಗೆ ಮದುವೆ ಮಾಡಬಹುದೇ ಎಂದು ಹೇಳಲಾಗುವುದು.

ಗಣಗಳು ಹೊಂದಾಣಿಕೆಯಾಗದಿದ್ದರೆ, ನಕ್ಷತ್ರಗಳು ಹೊಂದಾಣಿಕೆಯಾಗದಿದ್ದರೆ ಅವರಿಬ್ಬರ ಬದುಕು ಚೆನ್ನಾಗಿರಲ್ಲ ಎಂಬ ನಂಬಿಕೆ ಆದ್ದರಿಂದ ಈ ನಕ್ಷತ್ರಗಳ ಹೊಂದಾಣಿಕೆಯ ಬಗ್ಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುವುದು.

ನೀವು ಇದರಲ್ಲಿ ನಂಬಿಕೆ ಇರುವವರು ಆಗಿದ್ದರೆ ಯಾವ ನಕ್ಷತ್ರದವರಿಗೆ ಯಾವ ನಕ್ಷತ್ರದವರು ಹೊಂದಾಣಿಕೆಯಾಗುತ್ತಿದ್ದಾರೆ ಎಂದು ನೋಡೋಣ ಬನ್ನಿ:

Marriage Prediction

ಅಶ್ವಿನಿ ನಕ್ಷತ್ರದವರಿಗೆ ಶ್ವಿನಿ, ಭರಣಿ, ರೋಹಿಣಿ, ಪುಷ್ಯ, ಸ್ವಾತಿ, ಆಶ್ಲೇಷ, ಅನುರಾಧ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಚಿತ್ರ, ಹಸ್ತ, ಧನಿಷ್ಟ, ಆರ್ದ್ರ ನಕ್ಷತ್ರವರು ಒಳ್ಳೆಯ ಮ್ಯಾಚ್ ಆಗುತ್ತಾರೆ.

ಭರಣಿ ನಕ್ಷತ್ರದವರಿಗೆ ಅಶ್ವಿನಿ, ಕೃತ್ತಿಕಾ, ಪುನರ್ವಸು, ಆಶ್ಲೇಷ, ಮಾಘ, ಉತ್ತರ ಆಷಾಢ, ಚಿತ್ರ, ಸ್ವಾತಿ, ಶ್ರವಣ, ಶತಭಿಷ ನಕ್ಷತ್ರದವರ ಜೊತೆ ಮದುವೆಯಾದರೆ ತುಂಬಾ ಒಳ್ಳೆಯದು.

ಕೃತ್ತಿಕಾ ನಕ್ಷತ್ರದವರಿಗೆ ಅಶ್ವಿನಿ, ಭರಣಿ, ರೋಹಿಣಿ, ಶ್ರವಣ, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಠ ನಕ್ಷತ್ರದವರು ಒಳ್ಳೆಯ ಮ್ಯಾಚ್ ಆಗುತ್ತಾರೆ.

ರೋಹಿಣಿ ನಕ್ಷತ್ರದವರಿಗೆ ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಉತ್ತರ ಆಷಾಢ, ಚಿತ್ರ, ವಿಶಾಖ, ಧನಿಷ್ಟದವರ ಜೊತೆ ಮದುವೆಗೆ ಒಳ್ಳೆಯ ಮ್ಯಾಚ್ ಆಗಿದೆ.

ಮೃಗಶಿರ ನಕ್ಷತ್ರದವರಿಗೆ ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪೂರ್ವ ಫಲ್ಗುಣಿ, ಹಸ್ತ, ಚಿತ್ರ, ವಿಶಾಖ, ಜ್ಯೇಷ್ಠ, ಶತಭಿಷ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.

ಪುನರ್ವಸು ನಕ್ಷತ್ರದವರಿಗೆ ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಆರ್ದ್ರ, ಪುನರ್ವಸು, ಪುಷ್ಯ, ಮಾಘ, ಉತ್ತರ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಮೂಲ, ಉತ್ತರ ಆಷಾಢ, ಶತಭಿಷ ನಕ್ಷತ್ರದವರ ಜೊತೆ ಹೊಂದಾಣಿಕೆ ಚೆನ್ನಾಗಿರುತ್ತದೆ.

ಪುಷ್ಯ ನಕ್ಷತ್ರದವರಿಗೆ ಆರ್ದ್ರ, ಪುಷ್ಯ, ಆಶ್ಲೇಷ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಪೂರ್ವ ಆಷಾಢ, ಶ್ರವಣ, ರೇವತಿಯರ ಜೊತೆ ಹೊಂದಾಣಿಕೆ ಚೆನ್ನಾಗಿರಲಿದೆ.

ಆಶ್ಲೇಷ ನಕ್ಷತ್ರದವರಿಗೆ ಅಶ್ವಿನಿ, ಮಾಘ, ಉತ್ತರ ಫಲ್ಗುಣಿ, ವಿಶಾಖ, ಮೂಲ, ಉತ್ತರ ಭದ್ರ ಧನಿಷ್ಟ, ಉತ್ತರ ಆಷಾಢದವರು ಒಳ್ಳೆಯ ಜೋಡಿಯಾಗಬಹುದು.

ಮಾಘ ನಕ್ಷತ್ರದವರಿಗೆ ಭರಣಿ, ಕೃತಿಕಾ, ರೋಹಿಣಿ, ಆರ್ದ್ರ, ಪುನರ್ವಸು, ಆಶ್ಲೇಷ, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಜ್ಯೇಷ್ಠ, ಶ್ರವಣ, ಶತಭಿಷ ನಕ್ಷತ್ರದವರು ಮದುವೆಗೆ ಸೂಕ್ತ ಜೋಡಿಯಾಗುತ್ತಾರೆ ಎಂದು ಹೇಳಲಾಗುವುದು.

ಪೂರ್ವ ಫಲ್ಗುಣಿ ನಕ್ಷತ್ರದವರಿಗೆ ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಮಾಘ, ಉತ್ತರ ಆಷಾಢ, ಶತಭಿಷ, ಜ್ಯೇಷ್ಠ, ಮೂಲ, ಧನಿಷ್ಠ ನಕ್ಷತ್ರದವರ ಜೊತೆಗೆ ಹೊಂದಾಣಿಕೆ ಚೆನ್ನಾಗಿರಲಿದೆ.

ಉತ್ತರ ಫಲ್ಗುಣಿ ನಕ್ಷತ್ರದವರಿಗೆ ಅಶ್ವಿನಿ, ಭರಣಿ, ರೋಹಿಣಿ, ಆರ್ದ್ರ, ಹಸ್ತ, ಸ್ವಾತಿ, ಅನುರಾಧ, ಪೂರ್ವ ಆಷಾಢ, ಶ್ರವಣ, ಶತಭಿಷ, ಉತ್ತರ ಭದ್ರ ನಕ್ಷತ್ರದವರ ಜೊತೆಗೆ ಹೊಂದಾಣಿಕೆಯಾಗಲಿದೆ.

ಹಸ್ತ ನಕ್ಷತ್ರದವರಿಗೆ ಮೃಗಶಿರ, ಪುನರ್ವಸು, ಹಸ್ತ, ಚಿತ್ರ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಉತ್ತರ ಆಷಾಢ, ಧನಿಷ್ಠ ನಕ್ಷತ್ರದವರಿಗೆ ತುಂಬಾ ಸೂಕ್ತವಾಗಿದೆ.

ಚಿತ್ರ ನಕ್ಷತ್ರದವರಿಗೆ ಚಿತ್ರ, ರೋಹಿಣಿ, ಆರ್ದ್ರ, ಉತ್ತರ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಶ್ರವಣ, ಶತಭಿಷ, ಉತ್ತರ ಭದ್ರ ನಕ್ಷತ್ರದವರು ಸೂಕ್ತ ಜೋಡಿಯಾಗುತ್ತಾರೆ.

ಸ್ವಾತಿ ನಕ್ಷತ್ರದವರಿಗೆ ಭರಣಿ, ಮೃಗಶಿರ, ಪುನರ್ವಸು, ಚಿತ್ರ, ಸ್ವಾತಿ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಪೂರ್ವ ಭದ್ರ, ರೇವತಿ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.

ವಿಶಾಖ ನಕ್ಷತ್ರಕ್ಕೆ ಹೊಂದಾಣಿಕೆ ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘ, ಅನುರಾಧ, ಮೂಲ, ಧನಿಷ್ಟ, ಶತಭಿಷ, ಉತ್ತರ ಭದ್ರ

ಅನುರಾಧಾ ನಕ್ಷತ್ರದವರಿಗೆ ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಅನುರಾಧ, ಜ್ಯೇಷ್ಠ, ಪೂರ್ವ ಆಷಾಢ, ಶ್ರವಣ, ಶತಭಿಷ, ಪೂರ್ವ ಭದ್ರ, ರೇವತಿ ನಕ್ಷತ್ರದವರು ತುಂಬಾ ಒಳ್ಳೆಯ ಜೋಡಿಯಾಗುತ್ತಾರೆ.

ಜ್ಯೇಷ್ಠ ನಕ್ಷತ್ರದವರಿಗೆ ಕೃತ್ತಿಕಾ, ಉತ್ತರ ಫಲ್ಗುಣಿ, ಧನಿಷ್ಟ, ಪೂರ್ವ ಭದ್ರ, ಉತ್ತರ ಭದ್ರ, ರೋಹಿಣಿ, ಮೃಗಶಿರ, ಪುನರ್ವಸು ನಕ್ಷತ್ರದವರ ಜೊತೆಗೆ ಹೊಂದಾಣಿಕೆ ಚೆನ್ನಾಗಿರಲಿದೆ.

ಮೂಲ ನಕ್ಷತ್ರದವರಿಗೆ ಭರಣಿ, ಆರ್ದ್ರ, ಪೂರ್ವ ಫಲ್ಗುಣಿ, ಹಸ್ತ, ಪೂರ್ವ ಆಷಾಢ, ಶ್ರವಣ, ಶತಭಿಷ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.

ಪೂರ್ವ ಆಷಾಢ ನಕ್ಷತ್ರದವರಿಗೆ ಉತ್ತರ ಆಷಾಢ, ಚಿತ್ರ, ವಿಶಾಖ, ಉತ್ತರ ಫಲ್ಗುಣಿ, ಧನಿಷ್ಟ, ಪೂರ್ವ ಭದ್ರ, ರೇವತಿ ನಕ್ಷತ್ರದವರ ಜೊತೆ ಹೊಂದಾಣಿಕೆ ಚೆನ್ನಾಗಿರಲಿದೆ.

ಉತ್ತರ ಆಷಾಢ ನಕ್ಷತ್ರದವರಿಗೆ ಅಶ್ವಿನಿ, ರೋಹಿಣಿ, ಆರ್ದ್ರ, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಶ್ರವಣ, ಶತಭಿಷ ನಕ್ಷತ್ರದವರು ಒಳ್ಳೆಯ ಜೋಡಿಯಾಗುತ್ತಾರೆ.

ಶ್ರವಣ ನಕ್ಷತ್ರದವರಿಗೆ ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಲ್ಗುಣಿ, ಚಿತ್ರ, ವಿಶಾಖ, ಜ್ಯೇಷ್ಠ, ಉತ್ತರ ಆಷಾಢ, ಶ್ರವಣ, ಧನಿಷ್ಟ, ಪೂರ್ವ ಭದ್ರ, ರೇವತಿ ನಕ್ಷತ್ರದವರು ಉತ್ತಮ ಜೋಡಿ

ಧನಿಷ್ಟ ನಕ್ಷತ್ರದವರಿಗೆ ಅಶ್ವಿನಿ, ಕೃತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘ, ಉತ್ತರ ಆಷಾಢ, ಹಸ್ತ, ಸ್ವಾತಿ, ಅನುರಾಧ, ಮೂಲ, ಉತ್ತರ ಫಲ್ಗುಣಿ, ಶ್ರವಣ, ಧನಿಷ್ಟ, ಪೂರ್ವ ಭದ್ರ, ರೇವತಿ ನಕ್ಷತ್ರದವರು ಚೆನ್ನಾಗಿ ಹೊಂದಾಣಿಕೆ ಇರಲಿದೆ.

ಶತಭಿಷ ನಕ್ಷತ್ರದವರಿಗೆ ಭರಣಿ, ಮೃಗಶಿರ, ಪುನರ್ವಸು, ಮಾಘ, ಉತ್ತರ ಫಲ್ಗುಣಿ, ಚಿತ್ರ, ಪೂರ್ವ ಫಲ್ಗುಣಿ, ವಿಶಾಖ, ಜ್ಯೇಷ್ಠ, ಪೂರ್ವ ಆಷಾಢ, ಧನಿಷ್ಟ, ಪೂರ್ವ ಭದ್ರ, ರೇವತಿ ನಕ್ಷತ್ರದವರ ಜೊತೆ ಮದುವೆ ಮಾಡಬಹುದು.

ಪೂರ್ವ ಭದ್ರ ನಕ್ಷತ್ರದವರಿಗೆ ಅಶ್ವಿನಿ, ಮೃಗಶಿರ, ಆರ್ದ್ರ, ಪುಷ್ಯ, ಮಾಘ, ಉತ್ತರ ಫಲ್ಗುಣಿ, ಚಿತ್ರ, ಸ್ವಾತಿ, ಅನುರಾಧ, ಮೂಲ ನಕ್ಷತ್ರದವರ ಹೊಂದಾಣಿಕೆ ಚೆನ್ನಾಗಿರಲಿದೆ.

ಉತ್ತರ ಭದ್ರ ನಕ್ಷತ್ರದವರಿಗೆ ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಮಾಘ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಜ್ಯೇಷ್ಠ, ಶ್ರವಣ, ಪೂರ್ವ ಆಷಾಢ, ರೇವತಿ ನಕ್ಷತ್ರದವರು ಹೊಂದಾಣಿಕೆಯಾಗುತ್ತಾರೆ.

ರೇವತಿ ನಕ್ಷತ್ರದವರಿಗೆ ಅಶ್ವಿನಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಪುಷ್ಯ, ಮಾಘ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ ನಕ್ಷತ್ರದವರು ಹೊಂದಾಣಿಕೆಯಾಗುತ್ತಾರೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

For Your Nakshtra Which Nakshtra Will Match For Marriage

Marriage Prediction: For Your Nakshtra Which Nakshtra Will Match For Marriage, read on..
Story first published: Thursday, February 1, 2024, 10:51 [IST]
X
Desktop Bottom Promotion