ದೀಪಾವಳಿಯಲ್ಲಿ ಎಷ್ಟು ದೀಪಗಳನ್ನು ಹಚ್ಚಿಡಬೇಕು? ಅದರ ಹಿಂದಿನ ಧಾರ್ಮಿಕ ಮಹತ್ವವೇನು?

ದೀಪಾವಳಿಯೆಂಬುವುದು ಬರಿ ಹಬ್ಬವಲ್ಲ, ಈ ದೀಪಾವಳಿ ಆಚರಣೆಯ ಹಿಂದೆ ಹಲವು ಧಾರ್ಮಿಕ ನಂಬಿಕೆಗಳಿವೆ, ಆಚರಣೆಗಳಿವೆ, ಕೆಲವೊಂದು ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗುವುದು.

ದೀಪಾವಳಿ ಸಂಪತ್ತು, ಸಮೃದ್ಧಿಯನ್ನು ತರುತ್ತದೆ, ಕತ್ತಲಿನಲ್ಲಿ ದೀಪ ಬೆಳಗಿದಾಗ ಅದರ ಬೆಳಕು ಕತ್ತಲನ್ನು ದೂರ ಮಾಡುವಂತೆ ನಮ್ಮ ಬದುಕಿನಲ್ಲಿನ ಎಲ್ಲಾ ಸಮಸ್ಯೆ ದೂರ ಮಾಡುತ್ತದೆ ಎಂಬುವುದೇ ದೀಪಾವಳಿಯಲ್ಲಿ ದೀಪಗಳನ್ನು ಹಚ್ಚಿಡುವುದರ ಉದ್ದೇಶವಾಗಿದೆ. ದೀಪಾವಳಿಗೆ ಕೆಲವೊಂದು ಪೂಜಾ ಕ್ರಮಗಳಿವ, ಅವುಗಳ ಬಗ್ಗೆ ನೋಡುವುದಾದರೆ...

Deepavali Rituals

ಗಣೇಶ-ಲಕ್ಷ್ಮಿ ಪೂಜೆ
ದೀಪಾವಳಿಯಲ್ಲಿ ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕ ಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುವುದು. ದೀಪಾವಳಿಯಂದು ಗಣೇಶ ಲಕ್ಷ್ಮಿ ಪೂಜೆ ಮಾಡುವುದರಿಂದ ಮಂಗಳ ಮತ್ತು ಕೇತುವಿನಿಂದ ಏನಾದರೂ ಸಮಸ್ಯೆವಿದ್ದರೆ ಅದು ದೂರಾಗಲಿದೆ, ಅಲ್ಲದೆ ನಮ್ಮ ರಾಶಿಯಲ್ಲಿ ಶುಕ್ರನ ಸ್ಥಾನ ಬಲಪಡಿಸುತ್ತದೆ, ಶುಕ್ರನು ಬಲವಾದರೆ ಆದಾಯ ಹೆಚ್ಚಾಗಲಿದೆ.

ದೀಪಾವಳಿ 13 ದೀಪಗಳನ್ನು ಹಚ್ಚಿಡಬೇಕು?
ದೀಪಗಳ ಹಬ್ಬ ದೀಪಾವಳಿಯಲ್ಲಿ ಎಷ್ಟು ದೀಪಗಳನ್ನು ಹಚ್ಚಿಡಬೇಕು ಎಂಬ ನಿಯಮ ಕೂಡ ಇದೆ. ಏಕೆ 13 ದೀಪಗಳನ್ನು ಹಚ್ಚಬೇಕು ಎಂದು ನೋಡುವುದಾದರೆ 12 ದೀಪಗಳು ನಮ್ಮ ರಾಶಿಯ 12 ಮನೆಯನ್ನು ಸೂಚಿಸುತ್ತದೆ, 13ನೇ ದೀಪ ಸಾಮರಸ್ಯ, ಪ್ರಗತಿಯನ್ನು ಸೂಚಿಸುತ್ತದೆ. 13 ದೀಪಗಳು ಋಣಾತ್ಮಕ ಶಕ್ತಿಯನ್ನು ಹೊರಹಾಕಿ ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಶನಿ ದೋಷಕ್ಕೆ ಪರಿಹಾರ
ಶನಿದೋಷದಿಂದ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ಸಾಡೇಸಾತಿ ಸಮಸ್ಯೆ ಇರುವವರು ಈ ದಿನ ಶಿವನನಿಗೆ ರುದ್ರಾಭಿಷೇಕ ಮಾಡಿಸಿದರೆ ಕಷ್ಟಗಳು ಕಡಿಮೆಯಾಗುವುದು ಎಂದು ಹೇಳಲಾಗುವುದು. ಈ ದಿನ ಶಿವನ ದೇವಾಲಯಕ್ಕೆ ಬೇಟಿ ನೀಡಿದರೆ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ.

ರಾಹು ದೋಷ
ಈ ರಾಹು-ಕೇತುವನ್ನು ನೆರಳಿನ ಗ್ರಹಗಳೆಂದು ಕರೆಯಲಾಗುವುದು. ಈ ಗ್ರಹಗಳ ಸ್ಥಾನವು ನಮಗೆ ಅನುಕೂಲಕರವಾಗಿರದಿದ್ದರೆ ತುಂಬಾನೇ ಸಮಸ್ಯೆ ಉಂಟಾಗುವುದು. ರಾಹು-ಕೇತು ದೋಷ ಪರಿಹಾರಕ್ಕೂ ಶಿವನ ಆರಾಧನೆ ಮಾಡಿದರೆ ಒಳ್ಳೆಯದು.

ಮನೆ ಮುಂದೆ ದೀಪಗಳನ್ನು ಹಚ್ಚಿಡುವುದರಿಂದ
ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ
ದೀಪಾವಳಿ ದಿನ ಮನೆ ತುಂಬಾನೇ ವಿಶೇಷವಾಗಿ ಕಾಣುವುದು, ಹಚ್ಚಿಟ್ಟ ಹಣತೆಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮನೆಯಲ್ಲಿನ ಧನಾತ್ಮಕ ಶಕ್ತಿ ಆ ಮನೆಯಲ್ಲಿ ವಾಸವಿರುವ ಮನಸ್ಸಿನ ಮೇಲೆ ಕೂಡ ಪ್ರಭಾವ ಬೀರುವುದು.

ಗ್ರಹಗಳ ದೋಷವಿದ್ದರೆ ನಿವಾರಣೆ ಮಾಡುತ್ತದೆ
ದೀಪಾವಳಿಗೆ ದೀಪಗಳನ್ನು ಹಚ್ಚಿಟ್ಟರೆ ಗ್ರಹಗಳ ದೋಷ ದೂರ ಮಾಡುತ್ತದೆ, ಇದರಿಂದ ನಮ್ಮ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಸಿಗಲಿದೆ. ಗ್ರಹಗಳ ಋಣಾತ್ಮಕ ಪ್ರಭಾವ ದೂರ ಮಾಡಿ ಧನಾತ್ಮಕ ಪ್ರಭಾವ ಹೆಚ್ಚಿಸುತ್ತದೆ.

ಹಣ, ಸಂಪತ್ತು ಆಕರ್ಷಿಸುತ್ತದೆ
ದೀಪಾವಳಿಗೆ ಮಾಡಿದ ಮನೆಯ ಅಲಂಕಾರ ಸಂಪತ್ತುಆಕರ್ಷಿಸುತ್ತದೆ, ದೀಪಾವಳಿಯ ಪೂಜೆ ಲಕ್ಷ್ಮಿಯನ್ನು ಆಕರ್ಷಣೆ ಮಾಡುತ್ತದೆ, ಸಂಪತ್ತು ವೃದ್ಧಿಸುತ್ತದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Diwali Ritual: How Many Light Should Use For Diwali, Ritual To Follow On These Day

Diwali 2024: How many lamp should light on Deepavali, what are the significance, read on...
Story first published: Friday, October 25, 2024, 11:26 [IST]
X
Desktop Bottom Promotion