Latest Updates
-
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್!
ಜ್ಯೋತಿಷ್ಯ ಪ್ರಕಾರ ದೀಪಾವಳಿಯಂದು ನಿಮ್ಮ ರಾಶಿ ಪ್ರಕಾರ ಪೂಜಿಸಿದರೆ ಸಮೃದ್ಧಿ ಹೆಚ್ಚಲಿದೆ
ದೀಪಾವಳಿ ನಮ್ಮೆಲ್ಲರ ಬದುಕಿನಲ್ಲಿ ಹೊಸ ಬೆಳಕು ತುಂಬಲಿ, ಸಂತೋಷ, ಸಮೃದ್ಧಿ ಹೆಚ್ಚಾಗಲಿ ಎಂದ ಆಶಯದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ಈ ದೀಪಾವಳಿಯಲ್ಲಿ ರಾಶಿಪ್ರಕಾರ ಹಬ್ಬ ಆಚರಣೆ ಮಾಡಿದರೆ ಸಮೃದ್ಧಿ, ಸಂಪತ್ತು, ಸಂತೋಷ ಹೆಚ್ಚಾಗಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಈ ದೀಪಾವಳಿಗೆ ನಿಮ್ಮ ರಾಶಿಗೆ ಏನು ಪರಿಹಾರಕ್ರಮ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:
ಮೇಷ ರಾಶಿ
ದೀಪಾವಳಿ ನಿಮಗೆ ತುಂಬಾನೇ ಶುಭವಾಗಿರಲಿದೆ. ನೀವು ದೀಪಾವಳಿ ಹಬ್ಬದಲ್ಲಿ ತುಂಬಾನೇ ಚಟುವಟಿಕೆಯಿಂದ ಭಾಗಿಯಾಗುತ್ತೀರಿ. ನೀವು ಬಯಸಿದ್ದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ನೀವು ನಿಮ್ಮ ಗುರಿಯತ್ತ ಗಮನಹರಿಸಿದರೆ ಒಳ್ಳೆಯದು.
ಮೇಷ ರಾಶಿಯವರು ಕೆಂಪು ವಸ್ತ್ರ ಹಾಗೂ ಕೆಂಪು ಕ್ಯಾಂಡಲ್ ದಾನ ಮಾಡಿದರೆ ಒಳ್ಳೆಯದು.

ವೃಷಭ ರಾಶಿ
ನೀವು ಮನೆಯ ಸೌಕರ್ಯದತ್ತ ಹೆಚ್ಚು ಗಮನಹರಿಸುತ್ತೀರಿ. ಮಣ್ಣಿನ ಹಣತೆಯನ್ನು ಬೆಳಗುವುದರಿಂದ ಶುಕ್ರನನ್ನು ಆರಾಧಿಸುತ್ತದೆ. ಲಕ್ಷ್ಮಿ ಪೂಜೆ ಮಾಡಿ ಇದರಿಂದ ಸಮೃದ್ಧಿ ಹೆಚ್ಚಾಗಲಿದೆ.
ಪೂಜೆಯಲ್ಲಿ ಸುಗಂಧ ವಾಸನೆಯ ಹೂವುಗಳನ್ನು ಬಳಸಿ, ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ದಾನ ಮಾಡಿ, ಇದು ಶುಕ್ರನನ್ನು ಆಕರ್ಷಿಸುತ್ತದೆ.
ಮಿಥುನ ರಾಶಿ
ದೀಪಾವಳಿ ಸಮಯದಲ್ಲಿ ಹಳೆಯ ಸ್ನೇಹಿತರು ಸಿಗಲಿದ್ದಾರೆ, ನಿಮ್ಮ ಸ್ವಭಾವ ದೀಪಾವಳಿ ಪಾರ್ಟಿಯಲ್ಲಿ ಸಂಭ್ರಮ ಹೆಚ್ಚಿಸಲಿದೆ. ದೀಪಾವಳಿಗೆ ಮನೆಯನ್ನು ತುಂಬಾ ಕ್ರಿಯೇಟಿವ್‌ವಾಗಿ ಅಲಂಕರಿಸಿ. ಈ ದಿನ ಲಕ್ಷ್ಮಿ ಚಾಲೀಸ ಪಠಿಸಿ.
ಕರ್ಕ ರಾಶಿ
ನಿಮ್ಮ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಲು ಸಾಧ್ಯವಾಗುವುದು. ದೀಪಾವಳಿ ಸಮಯದಲ್ಲಿ ನೀವು ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೀರಿ, ಅದು ಸಾಧ್ಯವಾಗುವುದು.
ಈ ದಿನ ಬಿಳಿ ವಸ್ರ, ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ದಾನ ಮಾಡಿ. ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ದಾನ ಮಾಡಿ.
ಸಿಂಹ ರಾಶಿ
ನೀವು ದೀಪಾವಳಿಯಲ್ಲಿ ಮನೆಯ ಅಲಂಕಾರದ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಗಳಲ್ಲಿ ಕೂಡ ಭಾಗಿಯಾಗುತ್ತೀರಿ, ಇದು ನಿಮ್ಮ ವರ್ಚಸ್ಸು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಸೂರ್ಯ ಮಂತ್ರ ಪಠಣೆ ಮಾಡಿ ನಂತರ ದೀಪಾವಳಿಯ ಸಂಭ್ರಮ ಶುರು ಮಾಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರೂ ಈ ದೀಪಾವಳಿಯಲ್ಲಿ ದಾನ ಧರ್ಮದ ಕಡೆಗೆ ಹೆಚ್ಚಿನ ಒಲವು ತೋರಬಹುದು, ಇದು ನಿಮಗೆ ಹೆಚ್ಚು ಒಳ್ಳೆಯ ಫಲವನ್ನು ನೀಡಲಿದೆ. ದೀಪಾವಳಿಯ ಖುಷಿಯನ್ನು ಇತರರಿಗೂ ಹಂಚುವ ನಿಮ್ಮ ಪ್ರಯತ್ನ ಮೆಚ್ಚುವಂಥದ್ದೇ. ಈ ದಿನ ವಿಷ್ಣು ಸಹಸ್ರನಾಮ ಪಠಣೆ ನಿಮಗೆ ಒಳಿತನ್ನು ಉಂಟು ಮಾಡುತ್ತದೆ.
ತುಲಾ ರಾಶಿ
ನಿಮ್ಮ ಕುಟುಂಬ ಜೀವನ ಉತ್ತಮವಾಗಲಿದೆ, ದೀಪಾವಳಿಯಂದು ನೀವು ದೀಪಗ ಅಲಂಕಾರ ಮಾಡುವಾಗ ಮನೆಯನ್ನು ಪಿಂಕ್ ಬಣ್ಣದಿಂದ ಅಲಂಕರಿಸಿ. ಈ ದಿನ ಲಕ್ಷ್ಮಿಯ ಮಂತ್ರ ಪಠಣೆ ಮಾಡಿ. ಗುರು ಮಂತ್ರ ಪಠಣೆ ಕೂಡ ನಿಮಗೆ ಅದೃಷ್ಟ ತರಲಿದೆ.
ವೃಶ್ಚಿಕ ರಾಶಿ
ದೀಪಾವಳಿಯಂದು ನೀವು ಬಡವರಿಗೆ ದಾನ ಮಾಡಿ ದೀಪಾವಳಿಯನ್ನು ಸಂಭ್ರಮಿಸಿ, ಹೀಗೆ ಮಾಡುವ ದಾನ ಮುಂದಿನ ನಿಮ್ಮ ಭವಿಷ್ಯಕ್ಕೆ ಒಳಿತು ಮಾಡಲಿದೆ.
ಧನು ರಾಶಿ
ಧನು ರಾಶಿಯವರು ದೀಪಾವಳಿಗೆ ಮನೆಯ ಅಲಂಕಾರವನ್ನು ಮಾಡುವಾಗ ನೀಲಿ ಬಣ್ಣಕ್ಕೆ ಹೆಚ್ಚು ಒತ್ತು ನೀಡುವುದು ಒಳ್ಳೆಯದು, ಇದರಿಂದ ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರ ಮಾಡಿ ಹಬ್ಬದ ಸಂಭ್ರಮ ಹೆಚ್ಚಿಸಲಿದೆ. ಗುರು ಮಂತ್ರ ಪಠಿಸಿ.
ಮಕರ ರಾಶಿ
ದೀಪಾವಳಿಯಂದು ಶನಿ ದೇವನಿಗೆ ಪೂಜೆ ಸಲ್ಲಿಸಿ ನಂತರ ದೀಪಾವಳಿ ಹಬ್ಬವನ್ನು ಪ್ರಾರಂಭಿಸಿ ಇದರಿಂದ ಕಷ್ಟಗಳು ಕಡಿಮೆಯಾಗಲಿದೆ, ಈ ದೀಪಾವಳಿ ಬದುಕಿನಲ್ಲಿನ ಕತ್ತಲು ಕಳೆದು ಬೆಳಕು ತುಂಬಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ದೀಪಾವಳಿಯಂದು ನಿರ್ಗತಿಕರಿಗೆ ದಾನ ಮಾಡಿ ಅವರಲ್ಲಿ ಸಂತೋಷ ತುಂಬಿ, ಇದರಿಂದ ಈ ದೀಪಾವಳಿನಿಮಗೆ ಮತ್ತಷ್ಟು ವಿಶೇಷವಾಗಲಿದೆ. ಶಿವನಿಗೆ ಈ ದಿನ ವಿಶೇಷ ಪೂಜೆ ಸಲ್ಲಿಸುವುದು ಒಳ್ಳೆಯದು.
ಮೀನ ರಾಶಿ
ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಿ, ಮನೆಯ ಅಲಂಕಾರದಲ್ಲಿಯೂ ಹಸಿರು ಬಣ್ಣಕ್ಕೆ ಒತ್ತು ನೀಡಿ, ಇದು ನಿಮ್ಮನ್ನು ಸಮೃದ್ಧಿಯತ್ತ ಪ್ರೇರೇಪಿಸುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications