Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಜುಲೈ 17ಕ್ಕೆ ದೇವಶಯನಿ ಏಕಾದಶಿ: ಈ ಕಾರ್ಯಗಳನ್ನು ಮಾಡಿದರೆ ಇಷ್ಟಾರ್ಥ ನೆರವೇರುವುದು
ಧಾರ್ಮಿಕ ದೃಷ್ಟಿಯಿಂದ ದೇವಶಯನಿ ಏಕಾದಶಿ ತುಂಬನೇ ವಿಶೇಷವಾಗಿದೆ, ಏಕೆಂದರೆ ಈ ದಿನದಿಂದ ಶ್ರೀವಿಷ್ಣು ಯೋಗನಿದ್ರೆಗೆ ಜಾರುತ್ತಾನೆ, ಇದನ್ನು ಚಾತುರ್ಮಾಸ ಎಂದು ಕರೆಯಲಾಗುವುದು. ಈ ಏಕಾದಶಿಯನ್ನು ಪದ್ಮ ಏಕಾದಶಿ, ಆಷಾಢ ಏಕಾದಶಿ, ಹರಿ ಶಯನಿ ಏಕಾದಶಿ ಎಂದೂ ಕರೆಯಲಾಗುವುದು.
ದೇವ ಶಯನಿ ಏಕಾದಶಿಯ ಪೂಜಾ ಸಮಯ ಯಾವಾಗ? ಪೂಜಾ ವಿಧಿಗಳೇನು? ಇದರ ಪ್ರಾಮುಖ್ಯತೆ ಏನು ಎಂದು ನೋಡೋಣ ಬನ್ನಿ:

ದೇವಶಯನಿ ಏಕಾದಶಿ ಜುಲೈ 17, ಬುಧವಾರ
ಏಕಾದಶಿ ತಿಥಿ ಪ್ರಾರಂಭ: ಜುಲೈ 16 ರಾತ್ರಿ 08:33ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಜುಲೈ 17 ರಾತ್ರಿ 09:02ಕ್ಕೆ
ಪಾರಣ ಸಮಯ: ಜುಲೈ 18, ಬೆಳಗ್ಗೆ 05:35ರಿಂದ 08:20ರವರೆಗೆ
ಏಕಾದಶಿಯ ವ್ರತ ನಿಯಮವನ್ನು ದಶಮಿಯಂದೇ ಮಾಡಲಾಗುವುದು
- ಏಕಾದಶಿ ವ್ರತ ನಿಯಮವನ್ನು ದಶಮಿಯಂದು ಅಂದರೆ ಈ ವರ್ಷ ಜುಲೈ 16ರಿಂದಲೇ ಪಾಲಿಸಬೇಕು.
- ಈ ದಿನ ಏಕಾದಶಿ ಮಾಡುವವರು ಉಪ್ಪು ಬಳಸಬಾರದು, ಅಲ್ಲದೆ ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು.
- ಈ ದಿನದಂದು ವ್ಯಕ್ತಿಯ ಹಾಸಿಗೆ ಮೇಲೆ ಮಲಗಬಾರದು, ಚಾಪೆ ಹಾಕಿ ನೆಲದ ಮೇಲೆ ಮಲಗಬೇಕು
- ದಶಮಿ ಹಾಗೂ ಏಕಾದಶಿಯಂದು ಯಾವುದೇ ಸುಳ್ಳುಗಳನ್ನು ಹೇಳಬಾರದು
- ಏಕಾದಶಿಯ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಬೇಕು.
- ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಬಳಿಕ ದೇವರ ಕೋಣೆ, ಶ್ರೀ ವಿಷ್ಣುವಿನ ಮೂರ್ತಿಯನ್ನು ಸ್ವಚ್ಛ ಮಾಡಿ, ಹೊಸ ವಸ್ತ್ರ, ಹೂಗಳು, ಹಣ್ಣುಗಳಿಂದ ಅಲಂಕರಿಸಿ, ಹೀಗೆ ಅಲಂಕರಿಸುವಾಗ ತುಳಸಿ ಅರ್ಪಿಸಲು ಮರೆಯಬೇಡಿ.
- ಶ್ರೀ ವಿಷ್ಣುವಿಗೆ ಪೂಜೆ ಸಲ್ಲಿಸುವಾಗ ಹಳದಿ ಬಣ್ಣದ ವಸ್ತ್ರ ಧರಿಸಿ, ಹಳದಿ ಹೂವುಗಳು ಹಾಗೂ ಹಣ್ಣುಗಳನ್ನು ಅರ್ಪಿಸಿ
- ದೇವರಿಗೆ ತುಪ್ಪದ ದೀಪ ಹಚ್ಚಿ
ದೇವಶಯನಿ ಏಕಾದಶಿಯ ಮಹತ್ವವೇನು?
ಈ ದಿನ ಶ್ರೀವಿಷ್ಣುವಿನ ಪೂಜೆಗೆ ಮೀಸಲಾದ ದಿನ. ಇದು ಆಷಾಢ ಮಾಸದ 11ನೇ ದಿನದಂದು ಬರುತ್ತದೆ. ಈ ದಿನದ ಬಳಿಕ ಶ್ರೀವಿಷ್ಣು ಲೋಕದ ಆಡಳಿತವನ್ನು ಶಿವನಿಗೆ ಕೊಟ್ಟು ಯೋಗ ನಿದ್ದೆಗೆ ಜಾರುತ್ತಾನೆ. ಇದನ್ನು ಚಾತುರ್ಮಾಸ ಎಂದು ಕರೆಯಲಾಗುವುದು.
ದೇವಶಯನಿ ಪೂಜೆಯ ಬಳಿಕ ಹೀಗೆ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ನೀವು ಏಕಾದಶಿ ಪೂಜೆಯನ್ನು ಮುಗಿಸಿದ ಬಳಿಕ ಶ್ರೀ ವಿಷ್ಣು ಶುದ್ಧವಾದ ಬಿಳಿ ಬಟ್ಟೆಯನ್ನು ಹಾಕಿ ಆ ಮೂರ್ತಿಯ ತಲೆ ಇಡಲು ತಲೆದಿಂಬು ಮಾಡಿ ಮಲಗಿಸಿ, ಶ್ರೀವಿಷ್ಣು ನಿದ್ರಿಸುತ್ತಿದ್ದಾನೆ ಎಂದರ್ಥ, ಬಳಿಕ ದಾನ ಧರ್ಮಗಳನ್ನು ಮಾಡಿದರೆ ಪುಣ್ಯದ ಫಲ ಸಿಗುವುದು.
ಶ್ರೀ ವಿಷ್ಣು ಮಂತ್ರ ಪಠಿಸಿ
ವಿಷ್ಣು ಮಂತ್ರಗಳು:
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
. ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ,
ಸರ್ವಲೋಕೈಕನಾಥಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











