Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
BBK12: ಗಿಲ್ಲಿ ಬಿಗ್‌ಬಾಸ್ ವಿನ್ನರ್ ಆಗಲ್ಲ, ಟಾಪ್ 3ಗೆ ಹೋಗೋದು ಇವ್ರೇ; ಖ್ಯಾತ ಜ್ಯೋತಿಷಿ ಭವಿಷ್ಯ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವೀಕ್ ಹತ್ತಿರವಾಗುತ್ತಿದೆ. ಈ ಬಾರಿ ಯಾರ್ಯಾರು ದೊಡ್ಮನೆಯಲ್ಲಿ 100 ದಿನ ಪೂರೈಸ್ತಾರೆ? ಯಾರು ಟ್ರೋಫಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಬಹುತೇಕರು ಗಿಲ್ಲಿ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಕಾಮಿಡಿ, ಜೋಕ್ಸ್ ಬಗ್ಗೆ ಬಿಡಿಸ ಹೇಳಬೇಕಿಲ್ಲ.
ಈಗಾಗಲೇ ಎಲಿಮಿನೇಟ್ ಆಗಿ ಹೊರ ಬಂದವರು ಕೂಡ ಗಿಲ್ಲಿ ಗೆಲ್ತಾನೆ ಎಂದೇ ಭವಿಷ್ಯ ನುಡಿಯುತ್ತಿದ್ದಾರೆ. ಅಷ್ಟರಮಟ್ಟಿಗೆ ಶೋ ಎಂಟರ್‌ಟೈನರ್ ಆಗಿ ಆತನ ಕಮಾಲ್ ಮಾಡುತ್ತಿದ್ದಾನೆ. ಒಂದಷ್ಟು ಜನ ಆತನ ಕಾಮಿಡಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ಮಿತಿಮೀರಿ ಜೋಕ್ ಮಾಡುತ್ತಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಗಿಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ನರ್ ಆಗಲ್ಲ ಎಂದು ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ.

ಪ್ರಶಾಂತ್ ಕಿಣಿ ನುಡಿದ ಕೆಲ ಭವಿಷ್ಯ ನಿಜವಾಗಿದೆ. ಬಹಳ ಹಿಂದೆಯೇ ನಟಿ ಸಮಂತಾ ರುತ್‌ಪ್ರಭು 2ನೇ ಮದುವೆ ಬಗ್ಗೆ ಅವರು ಹೇಳಿದ್ದರು. 2025ರಲ್ಲಿ ಸಮಂತಾ ಮತ್ತೊಂದು ಮದುವೆ ಆಗ್ತಾರೆ ಎಂದಿದ್ದರು. ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು ಜೊತೆ ಆಕೆಯ ಮದುವೆ ನಡೆದಿತ್ತು. ಈ ಹಿಂದೆ ಕೂಡ ಇದೇ ರೀತಿ ಪ್ರಶಾಂತ್ ಕಿಣಿ ನುಡಿದ ಭವಿಷ್ಯ ನಿಜವಾಗಿರುವ ಉದಾಹರಣೆಗಳಿವೆ. ಸದ್ಯ ಬಿಗ್‌ಬಾಸ್ ಕನ್ನಡ 12ರ ಫೈನಲಿಸ್ಟ್ ಹಾಗೂ ವಿನ್ನರ್ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ಎಲ್ಲರ ಫೇವರಿಟ್ ಸ್ಪರ್ಧಿ ಗಿಲ್ಲಿ ಈ ಬಾರಿ ಶೋ ವಿನ್ನರ್ ಆಗಲ್ಲ ಎಂದು ಪ್ರಶಾಂತ್ ಕಿಣಿ ಹೇಳಿದ್ದಾರೆ. ಮಹಿಳಾ ಸ್ಪರ್ಧಿಯೊಬ್ಬರು ಈ ಬಾರಿ ಗೆಲ್ತಾರೆ. ಟಾಪ್ 3 ಹಂತಕ್ಕೆ ಗಿಲ್ಲಿ ನಟ, ಕಾವ್ಯ ಶೈವ ಹಾಗೂ ರಕ್ಷಿತಾ ಶೆಟ್ಟಿ ಹೋಗುತ್ತಾರೆ ಎಂದು ಕೂಡ ಕಿಣಿ ಭವಿಷ್ಯ ನುಡಿದಿದ್ದಾರೆ. ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಪವನ್ ಕಲ್ಯಾಣ್ ಪದಲ ಹಾಗೂ ತನುಜಾ ಟಾಪ್-2ವರೆಗೆ ಹೋಗ್ತಾರೆ ಎಂದು ಕಿಣಿ ಹೇಳಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್-3ರಲ್ಲಿ ನಟಿ ಶ್ರುತಿ ಟ್ರೋಫಿ ಗೆದ್ದಿದ್ದರು. ಬಳಿಕ ಯಾವುದೇ ಮಹಿಳಾ ಸ್ಪರ್ಧಿ ಈ ಸಾಧನೆ ಮಾಡಿಲ್ಲ. ಪ್ರತಿ ಬಾರಿ ಪ್ರಬಲ ಮಹಿಳಾ ಸ್ಪರ್ಧಿಗಳನ್ನು ನೋಡಿದಾಗ ಗೆಲ್ಲುತ್ತಾರೆ ಎಂದೇ ಊಹಿಸಲಾಗುತ್ತಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಈ ಬಾರಿ ಕೂಡ ಅಶ್ವಿನಿ ಗೌಡ ಟ್ರೋಫಿ ಗೆಲ್ಲಲು ಸಮರ್ಥರು ಎಂದು ಕೆಲವರು ಹೇಳುತ್ತಿದ್ದಾರೆ. ಎಲಿಮಿನೇಟ್ ಆಗಿ ಹೊರ ಬಂದ ಜಾಹ್ನವಿ ಕೂಡ ಇದೇ ಮಾತು ಹೇಳಿದ್ದಾರೆ.
ಸದ್ಯ ಈ ಬಾರಿಯ ಸೀಸನ್ 80 ದಿನ ಪೂರೈಸಿದೆ. ಫಿನಾಲೆಗೆ 4 ವಾರಗಳು ಬಾಕಿಯಿದೆ. ಸೀಕ್ರೆಟ್ ರೂಮ್ ಟ್ವಿಸ್ಟ್ ಕಳೆದ ವೀಕೆಂಡ್ ಸಿಕ್ಕಿದೆ. ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್ ಸೇರಿದ್ದಾರೆ. ಆದರೆ ಮನೆ ಮಂದಿ ಲೆಕ್ಕದಲ್ಲಿ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಈ ಬಗ್ಗೆ ಕೆಲವರಿಗೆ ಅನುಮಾನ ಕೂಡ ಬಂದಿದೆ.
ಸೀಕ್ರೆಟ್ ರೂಮ್ ಅಲ್ಲಿರುವ ಧ್ರುವಂತ್ ಹಾಗೂ ರಕ್ಷಿತಾ ಸೇರಿ ಸದ್ಯ ಮನೆಯಲ್ಲಿ 13 ಮಂದಿ ಸ್ಪರ್ಧಿಗಳಿದ್ದಾರೆ. ರಜತ್ ಹಾಗೂ ಚೈತ್ರಾ ಅತಿಥಿಗಳಾಗಿ ಒಳಗಡೆ ಹೋಗಿದ್ದಾರೆ. ಶೀಘ್ರದಲ್ಲೇ ಇಬ್ಬರೂ ಹೊರ ಬರಲಿದ್ದಾರೆ. ಇನ್ನುಳಿದಂತೆ 11 ಮಂದಿ ಸ್ಪರ್ಧಿಗಳಲ್ಲಿ ಈ ವಾರ ಇಬ್ಬರು ಹೊರ ಬರುವ ನಿರೀಕ್ಷೆಯಿದೆ. ಡಬಲ್ ಎಲಿಮಿನೇಷನ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಹಾಗಿದ್ದರೆ ಯಾರು ಈ ವಾರ ಬಿಗ್‌ಬಾಸ್ ಜರ್ನಿ ಮುಗಿಸುತ್ತಾರೆ ಕಾದು ನೋಡಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
