Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಯ್ಯಪ್ಪ ಸ್ವಾಮಿಯ ಈ ಮಂತ್ರ ಪಠಣೆ ಮಾಡಿದರೆ ಯಾವುದೇ ನಕರಾತ್ಮಕ ಶಕ್ತಿ ಬಾಧಿಸಲ್ಲ!
ಶಬರಿಮಲೆ ಅಯ್ಯಪ್ಪ ಸ್ವಾಮಿ ಮಂಡಲ ಕಾಲ ನವೆಂಬರ್ 17ರಿಂದ ಶುರುವಾಗಿದೆ. ಇಂದಿನಿಂದ ಜನವರಿ 14 ಮಕರ ವಿಳಕ್ಕುವರೆಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಭಕ್ತರಿಗಾಗಿ ತೆರೆದಿರುತ್ತಾರೆ. ಈ ಸಮಯದಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಬಂದು ಅಯ್ಯಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಮಂಡಲ ಪೂಜೆ ಹಾಗೂ ಮಕರವಿಳಕ್ಕು ಸಮಯದಲ್ಲಿ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನ ಪಡೆಯಲು ಕಠಿಣ ವ್ರತ ನಿಯಮ ಪಾಲಿಸಿ ಇಲ್ಲಿಗೆ ಬರುತ್ತಾರೆ. ಅಯ್ಯಪ್ಪ ಮಾಲೆ ಹಾಕಿದವರು ಪ್ರತಿದಿನ ದೇವರನ್ನು ಸ್ಮರಿಸುತ್ತಲೇ ಇರುತ್ತಾರೆ. ಅಯ್ಯಪ್ಪ ಮಂತ್ರಗಳನ್ನು ಪಠಿಸುತ್ತಾರೆ.

ಈ ಲೇಖನದಲ್ಲಿ ಅಯ್ಯಪ್ಪ ಸ್ವಾಮಿಯ ಗಾಯತ್ರಿ ಮಂತ್ರ ಹಾಗೂ ಈ ಮಂತ್ರ ಪಠಣೆ ಮಾಡುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ ನೋಡಿ
ಅಯ್ಯಪ್ಪ ಸ್ವಾಮಿ ಗಾಯತ್ರಿ ಮಂತ್ರ
ಓಂ ಭೂತಾದಿಪಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ಶಾಸ್ತಾ ಪ್ರಚೋದಯಾತ್||
ಓಂ ಭೂತಾದಿಪಾಯ ವಿದ್ಮಹೇ
ಭವ ಪುತ್ರಾಯ ಧೀಮಹಿ
ತನ್ನೋ ಶಾಸ್ತಾ ಪ್ರಚೋದಯಾತ್ |
ಓಂ ಭೂತಾದಿಪಾಯ ವಿದ್ಮಹೇ
ಭವ ನಂದನಾಯ ಧೀಮಹಿ
ತನ್ನೋ ಶಾಸ್ತಾ ಪ್ರಚೋದಯಾತ್ ||
ಈ ಮಂತ್ರ ಪಠಣೆ ಮಾಡುವಾಗ ಪಾಲಿಸಬೇಕಾದ ನಿಯಮಗಳು
* ಗಾಯತ್ರಿ ಮಂತ್ರವನ್ನು ಶ್ರದ್ಧೆಯಿಂದ 108 ಬಾರಿ ಪಠಿಸಿ
* ಈ ಮಂತ್ರ ಪಠಣೆಯನ್ನು ಬೆಳಗ್ಗೆ ಅಥವಾ ಸಂಜೆ ಮಾಡಬಹುದು
* ಉಚ್ಛಾರಣೆ ಮಾಡುವಾಗ ತಪ್ಪುಗಳನ್ನು ಮಾಡದಿರಿ
ಅಯ್ಯಪ್ಪಸ್ವಾಮಿ ಗಾಯತ್ರಿ ಮಂತ್ರದ ಪ್ರಯೋಜನಗಳು
* ಅಯ್ಯಪ್ಪ ಸ್ವಾಮಿ ಗಾಯತ್ರಿ ಮಂತ್ರ ಫವರ್‌ಫುಲ್ ಆದ ಮಂತ್ರವಾಗಿದ್ದು ಇದನ್ನು ಪಠಣೆ ಮಾಡುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು.
* ಈ ಮಂತ್ರ ಪಠಣೆ ಮಾಡುವುದರಿಂದ ಮಾಟ, ಋಣಾತ್ಮಕ ಶಕ್ತಿಗಳ ಕಾಟ ಯಾವುದೂ ಬಾಧಿಸುವುದಿಲ್ಲ. ಭೂತ-ಪ್ರೇತದ ಭಯ ಇರುವುದಿಲ್ಲ
* ಈ ಮಂತ್ರ ಪಠಣೆ ಮಾಡುವುದರಿಂದ ಕುಟುಂಬದಲ್ಲಿರುವ ಸಮಸ್ಯೆಗಳು ದೂರಾಗುವುದು
* ಈ ಮಂತ್ರ ಪಠಣೆ ಮಾಡುವುದರಿಂದ ಆರೋಗ್ಯ ಸಮಸ್ಯೆ ದೂರಾಗುವುದು
* ಈ ಮಂತ್ರ ಪಠಣೆ ಮಾಡುವುದರಿಂದ ಮಾನಸಿಕ ಶಕ್ತಿ, ಆತ್ಮವಿಶ್ವಾಸ ಹೆಚ್ಚಾಗುವುದು.
ಅಯ್ಯಪ್ಪ ಸ್ವಾಮಿ ವ್ರತ ನಿಯಮಗಳು
* ಅಯ್ಯಪ್ಪ ಮಾಲೆ ಹಾಕಿದ ಭಕ್ತರು ಕಠಿಣ ನಿಯಮ ಪಾಲಿಸಬೇಕು.
* 41 ದಿನಗಳ ಕಾಲ ಕಠಿಣ ವ್ರತ ನಿಮಯ ಪಾಲಿಸುತ್ತಾರೆ.
* ಅಯ್ಯಪ್ಪಮಾಲೆ ಧರಿಸಿದ ಮೇಲೆ ಯಾವುದೇ ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗುವುದಿಲ್ಲ, ಮದುವೆ, ನಾಮಕರಣ ಅಂತ ಹೋಗುವುದಿಲ್ಲ.
* ಈ ದಿನಗಳಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು
* ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಪೂಜಿಸಬೇಕು.
* ಸಂಜೆ ಹೊತ್ತಿನಲ್ಲಿಯೂ ಪೂಜಿಸಬೇಕು.
* ಕಾಲಿಗೆ ಚಪ್ಪಲಿ ಹಾಕುವಂತಿಲ್ಲ
* ಹಾಸಿಗೆಯಲ್ಲಿ ಮಲಗಬಾರದು
* ಸ್ತ್ರೀ ಸಂಪರ್ಕ ಮಾಡಬಾರದು
* ನೆಲದಲ್ಲಿ ಮಲಗಬೇಕು.
* ಕಪ್ಪು ಅಥವಾ ನೀಲಿ ವಸ್ತ್ರಗಳನ್ನು ಮಾತ್ರ ಧರಿಸಬೇಕು.
* ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಮಾಡಬಾರದು
* ಕೆಟ್ಟ ಆಲೋಚನೆ ಮಾಡಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ದಿನದ 24 ಗಂಟೆಯೂ ಅಯ್ಯಪ್ಪನ ಸ್ಮರಣೆಯಲ್ಲಿಯೇ ಇರುತ್ತಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











