Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ನಿದ್ರೆ ಪ್ರಿಯರಾ? ಈ 4 ರಾಶಿಗಳು ಹುಟ್ಟಿರೋದೇ ಮಲಗೋಕೆ! ಆದ್ರೆ ಸೋಮಾರಿಗಳಲ್ಲ
ಈ 4 ರಾಶಿಯವರು ಮಲಗೋಕೆ ಮಾತ್ರ ಹುಟ್ಟಿರೋದು! ಇವರು ಯಾಕೆ ಇಷ್ಟೊಂದು ನಿದ್ರಿಸ್ತಾರೆ? ನಿದ್ರೆ (Sleep೦ ಎಲ್ಲರಿಗೂ ಅತ್ಯಗತ್ಯ. ಆದರೆ, ಕೆಲವರಿಗೆ ಅದು ಕೇವಲ ಅವಶ್ಯಕತೆಗಿಂತ ಹೆಚ್ಚಾಗಿ ಒಂದು ಆನಂದ. ಒಂದು ಹವ್ಯಾಸವೇ ಸರಿ. 'ನಿದ್ರೆಯೇ ನನ್ನ ಅಚ್ಚುಮೆಚ್ಚಿನ ಹವ್ಯಾಸ' ಅಂತ ಹೇಳುವವರೂ ಇದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದವರು ನಿದ್ರೆಯನ್ನು (best sleep zodiac signs) ಹೆಚ್ಚು ಇಷ್ಟಪಡುತ್ತಾರೆ. ಇವರು ಬೇರೆಯವರಿಗಿಂತ ಹೆಚ್ಚು ಸಮಯ ನಿದ್ರಿಸಲು ಬಯಸುತ್ತಾರೆ. ಆದರೆ, ಇವರು ಸೋಮಾರಿಗಳಲ್ಲ. ಬದಲಿಗೆ, ಇವರಿಗೆ ವಿಶ್ರಾಂತಿಗಾಗಿ ಹೆಚ್ಚು ನಿದ್ರೆ ಬೇಕು. ಹಾಗಿದ್ರೆ, ನಿಮ್ಮ ರಾಶಿಯೂ ಈ ಪಟ್ಟಿಯಲ್ಲಿ ಇದೆಯೇ? ಎಂದು ತಿಳಿಯೋಣ ಬನ್ನಿ.
ನೀವು ಪದೇ ಪದೆ ಅಲಾರಾಂ ಆಫ್ ಮಾಡಿ ಮಲಗ್ತೀರಾ? ಅಥವಾ ಅಲಾರಾಂ ಕಿರಿಕಿರಿ ಇದ್ದರೂ ಏಳದೇ ನಿದ್ದೆ ಮಾಡೋರನ್ನು ಬಲ್ಲಿರಾ? ಹೌದು, ನಿಮ್ಮ ಈ ಗುಣಕ್ಕೆ ನಿಮ್ಮ ರಾಶಿ ಕಾರಣ. ಕೆಲವು ರಾಶಿಯವರು ದೀರ್ಘ ಮತ್ತು ಗಾಢವಾದ ನಿದ್ರೆಯನ್ನು ಇಷ್ಟಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ನಿದ್ರೆಯ ನಡುವಿನ ಸಂಬಂಧದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ. ಬೇರೆಯವರಿಗಿಂತ ಹೆಚ್ಚು ನಿದ್ರೆ ಮಾಡುವ ನಾಲ್ಕು ರಾಶಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ರಾಶಿಯವರು ಏಕೆ ಹೆಚ್ಚು ಹೊತ್ತು ನಿದ್ರಿಸುತ್ತಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಗುಣಮಟ್ಟದ ನಿದ್ರೆ ತುಂಬಾ ಮುಖ್ಯ. ಯಾರಾದರೂ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೆ, ಇವರಿಗೆ ಸಿಟ್ಟು ಬರಬಹುದು. ಇವರು ಬೇರೆಯವರಿಗಿಂತ ಆರಾಮದಾಯಕ ಜೀವನಶೈಲಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಇವರಿಗೆ ನಿದ್ರೆ ಎಂದರೆ ಕೇವಲ ವಿಶ್ರಾಂತಿ ಅಲ್ಲ, ಅದೊಂದು ಐಷಾರಾಮಿ ಅನುಭವ. ಇವರು ಪ್ರಶಾಂತ ವಾತಾವರಣ, ಮೃದುವಾದ ಹಾಸಿಗೆ ಮತ್ತು ಯಾವುದೇ ಗಲಾಟೆ ಇಲ್ಲದೆ ನಿದ್ರಿಸಲು ಬಯಸುತ್ತಾರೆ. ತಮ್ಮ ದಿನವಿಡೀ ಕೆಲಸ ಅಥವಾ ಶ್ರಮದ ಬಳಿಕ, ವೃಷಭ ರಾಶಿಯವರಿಗೆ ದೀರ್ಘ ಮತ್ತು ಆಳವಾದ ನಿದ್ರೆ ಅತ್ಯಗತ್ಯ. ಇವರು ಹೆಚ್ಚಾಗಿ ಬೆಳಗಿನ ಜಾವದವರೆಗೂ ನಿದ್ರಿಸಬಹುದು.
ಕರ್ಕಾಟಕ ರಾಶಿ
ಕಟಕ ರಾಶಿಯ ಜನರು ಬಹಳ ಭಾವನಾತ್ಮಕ ಜೀವಿಗಳು. ಇವರು ತಮ್ಮ ಸುತ್ತಲಿನವರ ಭಾವನೆಗಳನ್ನು ಹೆಚ್ಚು ಅರಿಯುತ್ತಾರೆ. ಇದು ಅವರಮಾನಸಿಕ ದಣಿವಿಗೆ ಕಾರಣವಾಗುತ್ತದೆ. ಈ ಭಾವನಾತ್ಮಕ ಒತ್ತಡದಿಂದ ಹೊರಬರಲು ಇವರಿಗೆ ನಿದ್ರೆ ಒಂದು ರೀತಿಯ ಆಶ್ರಯ ತಾಣ. ಅವರು ಮಲಗಿದ್ದಾಗಲೂ ಮೆದುಳು ಸಕ್ರಿಯವಾಗಿರುತ್ತದೆ. ತಮ್ಮದೇ ಆದ ನೆಚ್ಚಿನ ಸ್ಥಳದಲ್ಲಿ, ಮನೆಯ ಆರಾಮದಾಯಕ ವಾತಾವರಣದಲ್ಲಿ ನಿದ್ರಿಸಲು ಇವರು ಬಯಸುತ್ತಾರೆ. ಕೆಲವೊಮ್ಮೆ, ಇವರು ವಾಸ್ತವದಿಂದ ಪಾರಾಗಲು ಸಹ ನಿದ್ರೆ ಮಾಡಬಹುದು. ಇದು ಅವರ ಮಾನಸಿಕ ಶಾಂತಿಯನ್ನು ನೀಡುತ್ತದೆ. ಹಾಗಾಗಿ, ಇವರು ಹೆಚ್ಚು ಹೊತ್ತು ನಿದ್ರಿಸುತ್ತಾರೆ.
ಸಿಂಹ ರಾಶಿ
ನಂಬಿದ್ರೆ ನಂಬಿ ಅಥವಾ ಬಿಟ್ರೆ ಬಿಡಿ. ಸಿಂಹ ರಾಶಿಯವರು ರಾಜನಂತೆ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಇವರು ಧೈರ್ಯ, ಶಕ್ತಿ ಮತ್ತು ಕ್ರಿಯಾಶೀಲ ಸ್ವಭಾವಕ್ಕೆ ಹೆಸರುವಾಸಿ. ಇವರು ಗಮನ ಸೆಳೆಯಲು ಮತ್ತು ನಾಯಕತ್ವ ವಹಿಸಲು ಇಷ್ಟಪಡುತ್ತಾರೆ. ಈ ನಿರಂತರ ಸಾಮಾಜಿಕ ಚಟುವಟಿಕೆ ಮತ್ತು ಜನರೊಂದಿಗೆ ಬೆರೆಯುವುದು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿವನ್ನು ಉಂಟುಮಾಡುತ್ತದೆ. ಹಾಗಾಗಿ, ಸಿಂಹ ರಾಶಿಯವರಿಗೆ ತಮ್ಮ ಶಕ್ತಿಯನ್ನು ಮರಳಿ ಪಡೆಯಲು ಹೆಚ್ಚು ನಿದ್ರೆ ಬೇಕು. ಉತ್ತಮ ವಿಶ್ರಾಂತಿ ಸಿಕ್ಕಾಗ ಮಾತ್ರ ಇವರು, ಮತ್ತೆ ಪೂರ್ಣ ಶಕ್ತಿಯೊಂದಿಗೆ ಮಿಂಚಲು ಸಾಧ್ಯ.
ಮೀನ ರಾಶಿ
ಮೀನ ರಾಶಿಯ ಜನರು ಕನಸುಗಾರರು. ಅತಿ ಸಂವೇದನಾಶೀಲರು. ಇವರು ತಮ್ಮದೇ ಆದ ಕಲ್ಪನಾ ಜಗತ್ತಿನಲ್ಲಿ ಬದುಕಲು ಇಷ್ಟಪಡುತ್ತಾರೆ. ನಿದ್ರೆ ಇವರಿಗೆ ವಾಸ್ತವ ಪ್ರಪಂಚದ ಜಂಜಾಟಗಳಿಂದ ತಪ್ಪಿಸಿಕೊಳ್ಳಲು ಒಂದು ಅತ್ಯುತ್ತಮ ಮಾರ್ಗ. ದೀರ್ಘ ನಿದ್ರೆಯು ಇವರ ಸೃಜನಶೀಲತೆ ಮತ್ತು ಅಂತರಂಗದ ಶಾಂತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಇವರು ಸುಮ್ಮನೆ ಮಲಗಿ, ಹಗಲುಗನಸು ಕಾಣುತ್ತಾರೆ. ನಿದ್ರೆಯಿಲ್ಲದೆ ಇವರು ಅಸಮತೋಲಿತರಾಗುತ್ತಾರೆ. ಮಲಗಿರುವಾಗ ಇವರ ಆಲೋಚನೆಗಳು ನೀರಿನಂತೆ ಹರಿಯುತ್ತವೆ.
ಒಟ್ಟಾರೆಯಾಗಿ, ನಿದ್ರೆ ಒಂದು ವಿಭಿನ್ನ ಅನುಭವ. ಪ್ರತಿಯೊಬ್ಬ ವ್ಯಕ್ತಿಗೂ ಇದು ಭಿನ್ನವಾಗಿರುತ್ತದೆ. ಈ ರಾಶಿಯವರಿಗೆ ನಿದ್ರೆ ಕೇವಲ ದೈಹಿಕ ಅಗತ್ಯವಲ್ಲ, ಬದಲಿಗೆ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅತ್ಯಗತ್ಯ. ನಿಮ್ಮ ರಾಶಿ ಯಾವುದು? ಈ ಪಟ್ಟಿಯಲ್ಲಿ ನೀವು ಇರುವಿರಾ? ಚಿಂತೆಬೇಡ, ನಿಮಗೆ ನಿದ್ರೆ ಬಂತಾ? ಚೆನ್ನಾಗಿ ನಿದ್ರೆ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications

