ಜುಲೈ 2024 ಮಾಸ ಭವಿಷ್ಯ: 12 ರಾಶಿಗಳ ಸಂಪೂರ್ಣ ರಾಶಿಫಲ

ಗ್ರಹಗತಿಗಳ ಸ್ಥಾನದ ಪ್ರಕಾರ ಜುಲೈ ಮಾಸ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಈ ಮಾಸ ನಿಮಗೆ ಶುಭವಾಗಿದೆ. ಈ ಅವಧಿಯಲ್ಲಿ ನಿಮ್ಮಾಸೆ ಈಡೇರಲಿದೆ. ಈ ಅವಧಿಯಲ್ಲಿ ಕೆಲಸದ ಒತ್ತಡ ಇರಲಿದೆ. ಕೆಲಸ ಕಾರ್ಯದಲ್ಲಿನ ಅಡೆತಡೆಗಳು ದೂರಾಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಅಲ್ಲದೆ ಕಷ್ಟದ ಸಮಯದಲ್ಲಿ ಸಂಗಾತಿಯ ಬೆಂಬಲ ಕೂಡ ಸಿಗಲಿದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಆತುರಪಡಬೇಡಿ. ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿರಲಿದೆ.
ಈ ಮಾಸ ನಿಮಗೆ ಅದೃಷ್ಟ ಸಂಖ್ಯೆಗಳು: 11, 25, 39, 45, 50
ಈ ದಿನಗಳು ಶುಭವಾಗಿದೆ: ಶುಕ್ರವಾರ, ಶನಿವಾರ, ಬುಧವಾರ, ಭಾನುವಾರ
ಅದೃಷ್ಟದ ಬಣ್ಣಗಳು: ಹಳದಿ, ಕಿತ್ತಳೆ, ಕಂದು, ಬಿಳಿ

2024 July Month Prediction

ವೃಷಭ ರಾಶಿ

ಈ ತಿಂಗಳು ಶುಭವಾಗಿರಲಿದೆ, ಇನ್ನು ಉದ್ಯೋಗ ಹುಡುಕುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಆರ್ಥಿಕವಾಗಿ ಪ್ರಗತಿಯಾಗುವುದರಿಂದ ಆರ್ಥಿಕ ಸುಧಾರಣೆ ಕಂಡು ಬರಲಿದೆ. ಈ ಸಮಯದಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಈ ಮಾಸ ನಿಮಗೆ ಅದೃಷ್ಟದ ಸಂಖ್ಯೆಗಳು: 4, 18, 29, 32, 49, 57
ಸೋಮವಾರ, ಬುಧವಾರ, ಭಾನುವಾರ, ಮಂಗಳವಾರ ಈ ದಿನಗಳು ಹೆಚ್ಚು ಶುಭವಾಗಿದೆ.
ನೇರಳೆ, ಕೆಂಗಂದು, ಹಸಿರು, ಬಿಳಿ ಈ ಬಣ್ಣಗಳು ನಿಮಗೆ ಅದೃಷ್ಟಕರ.

ಮಿಥುನ ರಾಶಿ

ಜುಲೈ ಮಾಸದಲ್ಲಿ ಉತ್ತಮ ಪ್ರಾರಂಭ ಕಾಣಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಸುಧಾರಣೆ ಕಾಣಬಹುದು. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಇನ್ನು ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಕಂಡು ಬರಲಿದೆ.
ಈ ಮಾಸ 2, 18, 26, 31, 44, 57 ಅದೃಷ್ಟ ಸಂಖ್ಯೆಗಳು
ಶುಕ್ರವಾರ, ಸೋಮವಾರ, ಬುಧವಾರ, ಶನಿವಾರ ನಿಮಗೆ ಶುಭವಾಗಿದೆ.
ಕೆಂಪು, ನೀಲಿ, ಪೀಚ್, ಗುಲಾಬಿ ಅದೃಷ್ಟದ ಬಣ್ಣಗಳು.

ಕರ್ಕ ರಾಶಿ

ಜುಲೈ ಮಾಸ ನಿಮಗೆ ಉತ್ತಮವಾಗಿದೆ. ವ್ಯವಹಾರದಲ್ಲಿನ ಸಮಸ್ಯೆ ಬಗೆಹರಿಯಲಿದೆ. ಈ ಅವಧಿಯಲ್ಲಿ ಮಾನಸಿಕ ಒತ್ತಡ ಇರಲಿದೆ, ಆದರೆ ನೀವು ಪಾಸಿಟಿವ್ ಆಗಿರಿ, ಶೀಘ್ರದಲ್ಲೇ ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಪಡೆಯುತ್ತೀರಿ. ಈ ಮಾಸ ಪ್ರಯಾಣ ಮಾಡುವಾಗ ಜಾಗ್ರತೆವಹಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ. ಈ ಮಾಸ ಅದೃಷ್ಟದ ಸಂಖ್ಯೆಗಳು: 5, 17, 24, 30, 45, 54
ಸೋಮವಾರ, ಮಂಗಳವಾರ, ಶನಿವಾರ, ಬುಧವಾರ ಶುಭ ದಿನಗಳು
ಹಸಿರು, ಕೆನೆ, ಗೋಲ್ಡನ್, ಹಳದಿ ಶುಭ ಬಣ್ಣಗಳು

ಸಿಂಹ ರಾಶಿ

ಈ ಸಮಯ ನಿಮಗೆ ಉತ್ತಮವಾಗಿದೆ, ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಉದ್ಯಮಿಗಳು ಕೆಈ ಸಮಯದಲ್ಲಿ ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ. ಮನೆಯಲ್ಲಿ ವಾತಾವರಣ ಚೆನ್ನಾಗಿರಲಿದೆ. ಇನ್ನು ಕುಟುಂಬ ಜೀವನದ ಕಡೆಗೆ ಗಮನಹರಿಸಿ. ನೀವು ಅವಿವಾಹಿತರಾಗಿದ್ದರೆ ಮತ್ತು ನಿಮ್ಮ ಅಪೇಕ್ಷಿತ ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಈ ಸಮಯವು ಆರೋಗ್ಯದಲ್ಲಿ ಏರಳಿತಗಳಿಂದ ಕೂಡಿರಲಿದೆ.
ಈ ಮಾಸ 7, 10, 19, 21, 33, 40, 55 ನಿಮಗೆ ಅದೃಷ್ಟದ ಸಂಖ್ಯೆಗಳಾಗ
ಸೋಮವಾರ, ಭಾನುವಾರ, ಶುಕ್ರವಾರ, ಗುರುವಾರ ನಿಮಗೆ ಮಂಗಲಕರ.
ಅದೃಷ್ಟದ ಬಣ್ಣಗಳು: ನೇರಳೆ, ಹಸಿರು, ಬಿಳಿ, ಹಳದಿಯಾಗಿದೆ.

ಕನ್ಯಾ ರಾಶಿ

ಪ್ರೇಮಿಗಳಿಗೆ ಈ ಮಾಸ ಅನುಕೂಲಕರವಾಗಿದೆ, ನೀವು ಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ನಿಮ್ಮ ಸಂಬಂಧವು ಮುಂದುವರಿಯಲು ನೀವು ಬಯಸಿದರೆ ನೀವು ಆತುರದಿಂದ ದೂರವಿರಬೇಕು. ವ್ಯಾಪಾರಿಗಳಿಗೆ ಲಾಭದಾಯಕವಾಗಿದೆ. ವ್ಯಾಪಾರಿಗಳು ಲಾಭ ಗಳಿಸಲು ಅನೇಕ ಅವಕಾಶಗಳನ್ನು ಪಡೆಯಬಹುದು. ಹಣದ ವಿಷಯದಲ್ಲಿ, ಜುಲೈ ತಿಂಗಳು ನಿಮಗೆ ಮಿಶ್ರ ಫಲಿತಾಂಶ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದತ್ತ ಗಮನಹರಿಸಿ.
2,12,25,33,42 ಈ ಮಾಸ ಅದೃಷ್ಟ ಸಂಖ್ಯೆಗಳು
ಗುರುವಾರ, ಬುಧವಾರ, ಮಂಗಳವಾರ, ಭಾನುವಾರ ನಿಮಗೆ ಅದೃಷ್ಟಕರ
ಕಿತ್ತಳೆ, ಪೀಚ್, ನೀಲಿ, ಕೆಂಪು ಶುಭ ಬಣ್ಣಗಳಾಗಿದೆ.

ತುಲಾ ರಾಶಿ

ಈ ತಿಂಗಳು ನೀವು ಉತ್ತಮ ಫಲಿತಾಂಶ ಸಿಗಲಿದೆ. ಆರ್ಥಿಕವಾಗಿ ಈ ಅವಧಿ ಈ ಅನುಕೂಲಕರವಾಗಿದೆ. ಹೂಡಿಕೆ ಇತ್ಯಾದಿಗಳನ್ನು ಮಾಡಲು ನಿಮಗೆ ಅವಕಾಶ ಸಿಗಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ಕೆಲಸ ಸಿಗಲಿದೆ. ಈ ಅವಧಿಯಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಈ ಅವಧಿಯಲ್ಲಿ 6, 14, 29, 33, 40, 56 ಅದೃಷ್ಟ ಸಂಖ್ಯೆಗಲಾಗಿದೆ.
ಶನಿವಾರ, ಬುಧವಾರ, ಮಂಗಳವಾರ, ಸೋಮವಾರ ಶುಭ ಕಾರ್ಯಕ್ಕೆ ಶುಭವಾಗಿದೆ.
ಕಂದು, ಹಸಿರು, ಬಿಳಿ, ನೇರಳೆ ಶುಭ ಬಣ್ಣವಾಗಿದೆ.

ವೃಶ್ಚಿಕ ರಾಶಿ

ಈ ಸಮಯದಲ್ಲಿ ನೀವು ಕೆಲಸದ ಕಡೆಗೆ ಗಮನಹರಿಸಬೇಕು, ಅಡ್ಡದಾರಿ ಬೇಡ, ಇನ್ನು ಕೋಪ ಕೂಡ ನಿಯಂತ್ರಿಸಿ. ಆರ್ಥಿಕವಾಗಿ ನೋಡುವುದಾದರೆ ಈ ಮಾಸ ಈ ತಿಂಗಳು ನಿಮಗೆ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಹೊಸ ಕೆಲಸ ಹುಡುಕುತ್ತಿದ್ದರೆ ತಿಂಗಳ ಕೊನೆಯಲ್ಲಿ ಶುಭ ಸುದ್ದಿ ಪಡೆಯುತ್ತದೆ, ಪ್ರೇಮಿಗಳಿಗೆ ಅನುಕೂಲಕವಾಗಿದೆ. ವುವಾಹಿತರು ತಮ್ಮ ಸಂಗಾತಿಯಿಂದ ಯಾವುದೇ ವಿಷಯ ಮರೆಮಾಚಬೇಡಿ. ಇನ್ನು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.
ಈ ಅವಧಿಯಲ್ಲಿ ಅದೃಷ್ಟ ಸಂಖ್ಯೆಗಳೆಂದರೆ 5, 19, 20, 31, 40, 56
ಗುರುವಾರ, ಸೋಮವಾರ, ಶನಿವಾರ, ಬುಧವಾರ ನಿಮಗೆ ಮಂಗಳಕರ ದಿನವಾಗಿದೆ.
ಮರೂನ್, ಕೆಂಪು, ಗುಲಾಬಿ, ಆಕಾಶ ನೀಲಿ ಅದೃಷ್ಟದ ಬಣ್ಣ

ಧನು ರಾಶಿ

ಈ ಮಾಸ ನಿಮಗೆ ಅದೃಷ್ಟಕರ. ಮತ್ತು ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ಆರೋಗ್ಯ ಚೆನ್ನಾಗಿರಲಿದೆ. ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಈ ಸಮಯದಲ್ಲಿ, ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನೀವು ಧನಾತ್ಮಕ ಶಕ್ತಿಯಿಂದ ಸುತ್ತುವರೆದಿರುವಿರಿ.
ಈ ಮಾಸ ಅದೃಷ್ಟದ ಸಂಖ್ಯೆಗಳು: 1, 7, 14, 21, 38, 49
ಈ ಮಾಸ ಶುಭ ದಿನಗಳು ಸೋಮವಾರ, ಗುರುವಾರ, ಶನಿವಾರ, ಬುಧವಾರ
ನಿಮಗೆ ಹಳದಿ, ಬಿಳಿ, ಕಿತ್ತಳೆ, ಕೆನೆ ಶುಭ ಬಣ್ಣಗಳಾಗಿದೆ

ಮಕರ ರಾಶಿ

ನೀವು ಕೆಲಸ ಬದಲಾವಣೆ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯ ತುಂಬಾ ಉತ್ತಮವಾಗಿದೆ. ಈ ಅವಧಿಯಲ್ಲಿ ಆತ್ಮವಿಶ್ವಾಸ ಚೆನ್ನಾಗಿರಲಿದೆ. ದಾಂಪತ್ಯ ಜೀವನ ಉತ್ತಮವಾಗಿಲಿದೆ, ಹಣದ ವಿಷಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ.
ಈ ಅವಧಿಯಲ್ಲಿ ಅದೃಷ್ಟದ ಸಂಖ್ಯೆಗಳು: 6, 18, 24, 36, 44, 54
ಬುಧವಾರ, ಭಾನುವಾರ, ಸೋಮವಾರ, ಶನಿವಾರ ಶುಭ ದಿನಗಳಾಗಿವೆ
ಕೆನೆ, ನೇರಳೆ, ಕೆಂಪು, ಕೇಸರಿ ಅದೃಷ್ಟದ ಬಣ್ಣಗಳು

ಜುಲೈ ಮಾಸದ ಭವಿಷ್ಯ ಪ್ರಕಾರ ಈ ರಾಶಿಗಳಿಗೆ ಹೆಚ್ಚು ಅದೃಷ್ಟಕರ

ಕುಂಭ ರಾಶಿ

ಈ ತಿಂಗಳುಗಳು ನೀವು ಜಾಗ್ರತೆವಹಿಸಿ, ಹಣಕಾಸಿನ ತೊಂದರೆ ದೂರಾಗುವುದು. ನೀವು ಮನೆಯಲ್ಲಿ ಹಿರಿಯರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಕೆಲಸದ ಕಡೆಗೆ ಗಮನಹರಿಸಬೇಕು. ಈ ಮಾಸ ನೀವು ಧನಾತ್ಮವಾಗಿರಿ, ಎಲ್ಲಾ ಸಮಸ್ಯೆಗಳು ದೂರಾಗಲಿದೆ.
ಈ ಅವಧಿಯಲ್ಲಿ ಅದೃಷ್ಟ ಸಂಖ್ಯೆಗಳು 4, 11, 26, 35, 44, 54
ಬುಧವಾರ, ಭಾನುವಾರ, ಗುರುವಾರ, ಮಂಗಳವಾರ ಶುಭ ದಿನಗಳಿವು
ಕೆನೆ, ಕೆಂಪು, ಕೆಂಗಂದು, ಹಸಿರು ನಿಮಗೆ ಅದೃಷ್ಟದ ಬಣ್ಣಗಳು

ಮೀನ ರಾಶಿ

ಈ ತಿಂಗಳು ನಿಮಗೆ ಉತ್ತಮವಾಗಿದೆ, ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ ಸಿಗಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಆದಾಯ ಚೆನ್ನಾಗಿರಲಿದೆ. ನೀವು ಆರೋಗ್ಯದ ಕಡೆಗೆ ಗಮನಹರಿಸಿ. ಈ ಸಮಯದಲ್ಲಿ ನೀವು ಆಹಾರಕ್ರಮದ ಕಡೆಗೆ ಗಮನಹರಿಸಿ.
ಈ ಮಾಸ ಅದೃಷ್ಟ ಸಂಖ್ಯೆಗಳು: 2,10, 20, 36, 45, 51
ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ ಮಂಗಳಕರವಾಗಿದೆ.
ಕೆಂಪು, ಹಳದಿ, ನೀಲಿ, ಗುಲಾಬಿ, ಹಸಿರು ಅದೃಷ್ಟದ ಬಣ್ಣಗಳು

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024 July Month Prediction For 12 Zodiac Signs In Kannada

Here is July month prediction for each zodiac signs read on...
X
Desktop Bottom Promotion