ಜುಲೈ ಮಾಸದ ಭವಿಷ್ಯ ಪ್ರಕಾರ ಈ ರಾಶಿಗಳಿಗೆ ಹೆಚ್ಚು ಅದೃಷ್ಟಕರ

ಜುಲೈ ಮಾಸ ಭವಿಷ್ಯದ ಪ್ರಕಾರ ಈ ಮಾಸದಲ್ಲಿ ಈ ರಾಶಿಗಳು ಹೆಚ್ಚು ಪ್ರಯೋಜನ ಪಡೆಯುತ್ತಾರೆ....

ಮೇಷ ರಾಶಿ

ಜುಲೈ ಮಾಸದಲ್ಲಿ ನಿಮ್ಮ ಜೀವನದಲ್ಲಿ ನೀವು ಧನಾತ್ಮಕ ಬದಲಾವಣೆ ಕಂಡು ಬರಲಿದೆ, ಈ ಸಮಯದಲ್ಲಿ ನಿಮ್ಮ ಆಸೆ ಈಡೇರಲಿದೆ. ಕೆಲಸದಲ್ಲಿ ಒತ್ತಡ ಇರಲಿದೆ. ಕುಟುಂಬ ಜೀವನದಲ್ಲಿ ಪ್ರೀತಿ, ಮಾಧುರ್ಯ ಇರಲಿದೆ.

July 2024 prediction

ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳಿ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಮಂಗಳ
ಅದೃಷ್ಟದ ಸಂಖ್ಯೆಗಳು: 11, 25, 39, 45, 50
ಶುಭ ದಿನಗಳು: ಶುಕ್ರವಾರ, ಶನಿವಾರ, ಬುಧವಾರ, ಭಾನುವಾರ
ಶುಭ ಬಣ್ಣಗಳು: ಹಳದಿ, ಕಿತ್ತಳೆ, ಕಂದು, ಬಿಳಿ


ವೃಷಭ ರಾಶಿ

ಈ ತಿಂಗಳು ನಿಮಗೆ ತುಂಬಾ ಮಂಗಳಕರವಾಗಿರಲಿದೆ. ನೀವು ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ನೀವು ಉತ್ತಮ ಕೆಲಸ ಸಿಗಲಿದೆ . ಇನ್ನು ಉದ್ಯೋಗಿಗಳು ಈಗ ಇರುವ ಕೆಲಸದಲ್ಲಿ ಬಡ್ತಿ ಇರಲಿದೆ. ವ್ಯಾಪಾರಿಗಳಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ಈ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ವೈಯಕ್ತಿಕ ಜೀವನ ಚೆನ್ನಾಗಿರಲಿದೆ. ಮಾನಸಿಕ ಒತ್ತಡದಿಂದ ಹೊರಬರಲು ಧ್ಯಾನದ ಕಡೆಗೆ ಗಮನಹರಿಸಿ. ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಸುಧಾರಣೆ ಕಂಡು ಬರಲಿದೆ.
ರಾಶಿಯ ಅಂಶ: ಭೂಮಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 4, 18, 29, 32, 49, 57
ಶುಭ ದಿನಗಳು: ಸೋಮವಾರ, ಬುಧವಾರ, ಭಾನುವಾರ, ಮಂಗಳವಾರ
ಶುಭ ಬಣ್ಣಗಳು: ನೇರಳೆ, ಕೆಂಗಂದು, ಹಸಿರು, ಬಿಳಿ

ಮಿಥುನ ರಾಶಿ

ಜುಲೈ ತಿಂಗಳು ನಿಮಗೆ ಉತ್ತಮವಾಗಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ಚಿಂತೆಗಳಿಂದ ನೀವು ಪರಿಹಾರ ಪಡೆಯುತ್ತೀರಿ. ಪ್ರೀತಿಪಾತ್ರರೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ನಿಮ್ಮ ಸಂಗಾತಿಯಿಂದ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಮಯದಲ್ಲಿ ಸುಧಾರಣೆ ಕಂಡು ಬರಲಿದೆ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಬುಧ
ಅದೃಷ್ಟದ ಸಂಖ್ಯೆಗಳು: 2, 18, 26, 31, 44, 57
ಶುಭ ದಿನಗಳು: ಶುಕ್ರವಾರ, ಸೋಮವಾರ, ಬುಧವಾರ, ಶನಿವಾರ
ಶುಭ ಬಣ್ಣಗಳು: ಕೆಂಪು, ನೀಲಿ, ಪೀಚ್, ಗುಲಾಬಿ

ಕರ್ಕ ರಾಶಿ

ಜುಲೈ ತಿಂಗಳು ನಿಮಗೆ ತುಂಬಾ ಚೆನ್ನಾಗಿರಲಿದೆ. ನೀವು ನಿಮ್ಮ ವ್ಯವಹಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಕೆಲಸದ ಜಾಗದಲ್ಲಿ ಮಾನಸಿಕ ಒತ್ತಡ ಇರಲಿದೆ. ಮನೆಯಲ್ಲಿ ಸಮಸ್ಯೆಯಿದ್ದರೆ ನೀವು ಮಾತಿನ ಮೂಲಕ ಬಗೆಹರಿಸಲು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಕಾಳಜಿ ವಹಿಸಿ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ಚಂದ್ರ
ಅದೃಷ್ಟದ ಸಂಖ್ಯೆಗಳು: 5, 17, 24, 30, 45, 54
ಶುಭ ದಿನಗಳು: ಸೋಮವಾರ, ಮಂಗಳವಾರ, ಶನಿವಾರ, ಬುಧವಾರ
ಶುಭ ಬಣ್ಣಗಳು: ಹಸಿರು, ಕೆನೆ, ಗೋಲ್ಡನ್, ಹಳದಿ


ಸಿಂಹ ರಾಶಿ

ಕೆಲಸದಲ್ಲಿ ಕೌಶಲ್ಯ ಉತ್ತಮವಾಗಿರಲಿದೆ. ಮತ್ತು ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯಮಿಗಳು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು, ಕುಟುಂಬ ಜೀವನ ಚೆನ್ನಾಗಿರಲಿದೆ. ಅವಾಹಿತರಿಗೆ ಈ ಅವಧಿಯಲ್ಲಿ ವಿವಾಹ ಪ್ರಸ್ತಾಪ ಬರಲಿದೆ. ಆರೋಗ್ಯದಲ್ಲಿ ಏರಳಿತವಿರಲಿದೆ.
ರಾಶಿಯ ಅಂಶ: ಬೆಂಕಿ
ರಾಶಿಯ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಶುಭ ದಿನಗಳು: ಸೋಮವಾರ, ಭಾನುವಾರ, ಶುಕ್ರವಾರ, ಗುರುವಾರ
ಶುಭ ಬಣ್ಣಗಳು: ನೇರಳೆ, ಹಸಿರು, ಬಿಳಿ, ಹಳದಿ


ತುಲಾ ರಾಶಿ

ಈ ತಿಂಗಳು ನೀವು ಉತ್ತಮ ಫಲಿತಾಂಶ ಸಿಗಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ನೀವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಬಯಸಿದ ಕೆಲಸವನ್ನು ಉತ್ತಮ ಸ್ಥಾನದಲ್ಲಿ ಪಡೆಯಬಹುದು. ಈ ಅವಧಿಯಲ್ಲಿ ನೀವು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ರಾಶಿಯ ಅಂಶ: ಗಾಳಿ
ರಾಶಿಯ ಅಧಿಪತಿ: ಶುಕ್ರ
ಅದೃಷ್ಟದ ಸಂಖ್ಯೆಗಳು: 6, 14, 29, 33, 40, 56
ಶುಭ ದಿನಗಳು: ಶನಿವಾರ, ಬುಧವಾರ, ಮಂಗಳವಾರ, ಸೋಮವಾರ
ಶುಭ ಬಣ್ಣಗಳು: ಕಂದು, ಹಸಿರು, ಬಿಳಿ, ನೇರಳೆ


ಮೀನ ರಾಶಿ

ತಿಂಗಳ ಆರಂಭವು ನಿಮಗೆ ತುಂಬಾ ಒಳ್ಳೆಯದಿದೆ. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿದೆ. ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುತ್ತೀರಿ. ನಿಮ್ಮ ಸಂಗಾತಿಯ ಆರೋಗ್ಯವು ಸ್ವಲ್ಪ ಸಮಯದವರೆಗೆ ಉತ್ತಮವಾಗಿಲ್ಲದಿದ್ದರೆ, ಅವನ / ಅವಳ ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ನೀವು ಆರೋಗ್ಯ ಬಗ್ಗೆ ವಿಶೇಷ ಕಾಳಜಿವಹಿಸಬೇಕು, ಆರೋಗ್ಯಕರ ಆಹಾರಕ್ರಮದತ್ತ ಜೀವನ ಹರಿಸಿ.
ರಾಶಿಯ ಅಂಶ: ನೀರು
ರಾಶಿಯ ಅಧಿಪತಿ: ನೆಪ್ಚೂನ್, ಗುರು
ಅದೃಷ್ಟದ ಸಂಖ್ಯೆಗಳು: 2,10, 20, 36, 45, 51
ಶುಭ ದಿನಗಳು: ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ
ಶುಭ ಬಣ್ಣಗಳು: ಕೆಂಪು, ಹಳದಿ, ನೀಲಿ, ಗುಲಾಬಿ, ಹಸಿರು

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

2024 July Month Lucky Zodiac Signs In Kannada

As per July 2024 prediction these are lucky zodiac signs, read on...
X
Desktop Bottom Promotion