Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಸೀಕ್ರೆಟ್ ಸಾಂಟಾ ಗಿಫ್ಟ್: ಈ ರೀತಿಯ ಗಿಫ್ಟ್‌ಗೆ ಹಣದ ಖರ್ಚಿಲ್ಲ, ಗಿಫ್ಟ್ ಪಡೆದವರೂ ಫುಲ್ ಖುಷಿಯಾಗುತ್ತಾರೆ
ಕ್ರಿಸ್ಮಸ್ ವಾರದಲ್ಲಿ ಸೀಕ್ರೆಟ್ ಸಾಂಟಾ ಗಿಫ್ಟ್ ತುಂಬಾನೇ ಆಕರ್ಷಕವಾದ ಚಟುವಟಿಕೆಯಾಗಿದೆ. ಯಾರೋ ಸೀಕ್ರೆಟ್ ಸಾಂಟಾ ನಮಗೆ ಗಿಫ್ಟ್ ಕಳುಹಿಸಿರುತ್ತಾನೆ/ಳೆ, ಪ್ರತಿದಿನ ಸೀಕ್ರೆಟ್ ಸಾಂಟಾ ಕಳುಹಿಸುವ ಗಿಫ್ಟ್ ಏನಿರಬಹುದು ಎಂಬ ಕುತೂಹಲ ಅದರ ಜೊತೆಗೆ, ನನ್ನ ಸೀಕ್ರೆಟ್ ಸಾಂಟಾ ಯಾರಿರಬಹುದು ಎಂಬ ಕುತೂಹಲದಲ್ಲಿ ಈ ವಾರ ಹೋಗುತ್ತದೆ.

ನಮ್ಮ ಸೀಕ್ರೆಟ್ ಸಾಂಟಾನ ಯಾರಿರಬಹುದು ಎಂದು ನಮಗೆ ತುಂಬಾ ಕುತೂಹಲ ಮೂಡಬೇಕೆಂದರೆ ಅವರು ಕಳುಹಿಸುವ ಗಿಫ್ಟ್‌ಗಳು ಆಕರ್ಷಕವಾಗಿರಬೇಕು ಅಲ್ವೇ? ಅದೇ ರೀತಿ ನಾವು ಕೂಡ ಯಾರದೋ ಒಬ್ಬರ ಸೀಕ್ರೆಟ್ ಸಾಂಟಾ ಆಗಿರುತ್ತೇವೆ, ಅವರಿಗೆ ಆಕರ್ಷಕ ಗಿಫ್ಟ್‌ಗಳನ್ನು ಕೊಡಬೇಕೆಂದು ಬಯಸುತ್ತೇವೆ, ಆದರೆ ಏನು ಕೊಡುವುದು ಎಂಬ ಕನ್‌ಫ್ಯೂಸ್, ಹೆಚ್ಚು ದುಡ್ಡು ಖರ್ಚು ಮಾಡದೆ ಗಿಫ್ಟ್ ಮಾಡಬೇಕೆಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಕೆಲ ಗಿಫ್ಟ್ ಐಡಿಯಾಗಳು.
ಈ ಗಿಫ್ಟ್ ಐಡಿಯಾಗಳು ಖಂಡಿತ ನಿಮ್ಮನ್ನು ಇಂಪ್ರೆಸ್ ಮಾಡುತ್ತದೆ, ಅಲ್ಲದೆ ಗಿಫ್ಟ್ ಪಡೆದವರೂ ಖುಷಿಯಾಗುತ್ತಾರೆ ನೋಡಿ...
ಅವರ ಬಗ್ಗೆ ಅದ್ಭುತವಾಗಿ ಒಂದು ಕವನ ಅಥವಾ ಲೆಟರ್ ಬರೆಯಿರಿ
ನಿಮಗೆ ಅವರ ಬಗ್ಗೆ ತುಂಬಾ ಗೊತ್ತಿದೆ ಎಂದಾದರೆ ನೀವು ಕವನ ಅಥವಾ ಲೆಟರ್ ಬರೆಯಬಹುದು. ನೀವು ಅವರ ಬಗ್ಗೆ ಬರೆದು ಕಳುಹಿಸುವ ಲೆಟರ್‌ಗಳನ್ನು ಓದುವಾಗ ಅವರಿಗೆ ನನ್ನ ಸೀಕ್ರೆಟ್ ಸಾಂಟಾ ಯಾರಿರಬಹುದು ಎಂಬ ಕುತೂಹಲ ಹೆಚ್ಚಾಗುವುದು.
ಅವರ ಬಗ್ಗೆ ವೀಡಿಯೋ ಮಾಡಿ
ಅವರ ಬಗ್ಗೆ ಅವರಿಗೆ ಗೊತ್ತಿಲ್ಲದೆ ಒಂದು ಸುಂದರವಾದ ವೀಡಿಯೋ ಮಾಡಿ ಅದನ್ನು ಕಳುಹಿಸಬಹುದು. ಆ ವೀಡಿಯೋದಲ್ಲಿ ಅವರ ಇಷ್ಟದ ಸ್ಥಳ, ಅವರ ಇಷ್ಟದ ಬಣ್ಣ ಇಂಥ ವಿಚಾರಗಳನ್ನು ತಿಳಿದುಕೊಂಡು ಸೇರಿಸಿದರೆ ನನ್ನ ಬಗ್ಗೆ ಇಷ್ಟೆಲ್ಲಾ ಗೊತ್ತಿರುವ ಫ್ರೆಂಡ್ ಯಾರಿರಬಹುದು ಎಂಬ ಕುತೂಹಲ ಹೆಚ್ಚಾಗುವುದು.
ಒಂದೊಳ್ಳೆಯ ಸಂದೇಶಗಳನ್ನು ಕಳುಹಿಸಿ
ಒಂದು ಚೆಂದದ ಗ್ರೀಟಿಂಗ್ ನೀವೇ ಮಾಡಿ, ಅದರಲ್ಲಿ ತುಂಬಾ ಚೆನ್ನಾಗಿರುವ ವರ್ಡ್ಸ್ ಹಾಕಿ ಒಳ್ಳೆಯ ಸಂದೇಶ ಕಳುಹಿಸಿ, ಅದು ಹೇಗಿರಬೇಕು ಎಂದರೆ ಅದನ್ನು ಪ್ರತಿದಿನ ಓದುವಂತಿರಬೇಕು, ಓದಿದಾಗೆಲ್ಲಾ ಅವರ ಮನಸ್ಸಿಗೆ ಒಂದು ಪಾಸಿಟಿವ್ ಎನರ್ಜಿ ಸಿಗುವಂತಿರಬೇಕು.
ನೀವೇ ಅವರ ಬಗ್ಗೆ ಕೋಟ್ ಬರೆದು ಹಾಕಬಹುದು ಅಥವಾ ಪುರಾಣದ ಯಾವುದಾದರೂ ಸಾಲುಗಳನ್ನು ಹಾಕಬಹುದು, ಆದರೆ ಆ ಸಾಲುಗಳು ಅವರಿಗಾಗಿಯೇ ಮಾಡಿದಂತಿರಬೇಕು.
ವಿಶೇಷ ಅಡುಗೆ ಮಾಡಿ
ನಿಮಗೆ ಚೆನ್ನಾಗಿ ಅಡುಗೆ ಮಾಡುವುದು ಗೊತ್ತಿದ್ದರೆ ಅವರ ಇಷ್ಟದ ಆಹಾರಗಳೇನು ಎಂದು ತಿಳಿದು ಅಡುಗೆ ಮಾಡಿ, ಪ್ರತಿದಿನ ಕಳುಹಿಸಿ... ಅವರು ಆ ಇಷ್ಟದ ಅಡುಗೆ ಸವಿಯುವಾಗ ಯಾರಿರಬಹುದು ನನ್ನ ಸೀಕ್ರೆಟ್ ಸಾಂಟಾ ಅಂತ ಯೋಚಿಸುತ್ತಿರುತ್ತಾರೆ, ಅಲ್ಲದೆ ನಿಮ್ಮ ಬಗ್ಗೆ ತಿಳಿಯಬೇಕೆಂಬ ಅವರ ಕುತೂಹಲ ಮತ್ತಷ್ಟು ಹೆಚ್ಚಾಗುವುದು. ನಿಮ್ಮ ಮನೆಯಲ್ಲಿ ಅಡುಗೆ ಮಾಡಲೇಬೇಕು, ಈ ದಿನ ನೀವು ಗಿಫ್ಟ್ ಉದ್ದೇಶದಿಮದ ಮಾಡುತ್ತಿರುತ್ತೀರಿ ಅಷ್ಟೇ, ಆದ್ದರಿಂದ ಈ ಐಡಿಯಾ ಕೂಡ ತುಂಬಾನೇ ವರ್ಕ್ ಆಗುತ್ತೆ.
ಡ್ರಾಯಿಂಗ್ ಮಾಡಿ
ನಿಮಗೆ ಚೆನ್ನಾಗಿ ಡ್ರಾಯಿಂಗ್ ಅಥವಾ ಪೇಂಟಿಂಗ್ ಮಾಡಲು ಗೊತ್ತಿದ್ದರೆ ಹೊರಗಿನ ಗಿಫ್ಟ್ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು, ಒಳ್ಳೊಳ್ಳೆಯ ಡ್ರಾಯಿಂಗ್ ಮಾಡಿ ಕೊಡಬಹುದು. ಹೀಗೆ ನಿಮ್ಮಲ್ಲಿರುವ ಕಲೆಯನ್ನು ಬಳಸಿಕೊಂಡು ಗಿಫ್ಟ್ ನೀಡಿ.
ಅವರಿಗಾಗಿ ಹಾಡುಗಳನ್ನು ಕಳುಹಿಸಿ
ನಿಮಗೆ ಒಂದೊಳ್ಳೆ ಹಾಡು ಬರೆಯುವ ಕಲೆಯಿದ್ದರೆ ಅವರ ಬಗ್ಗೆ ಬರೆದು ಅದನ್ನು ಹಾಡಿದ ರೂಪದಲ್ಲಿ ಪ್ರೆಸೆಂಟ್ ಮಾಡಿ, ತುಂಬಾನೇ ಖುಷಿಯಾಗುತ್ತಾರೆ. ನಮ್ಮ ಬಗ್ಗೆ ಒಬ್ಬರು ಹಾಡು ಮಾಡಿದರೆ ಯಾರಿಗೆ ತಾನೆ ಇಷ್ಟವಾಗಲ್ಲ ಅಲ್ವಾ?
ಗಿಡಗಳನ್ನು ನೀಡಬಹುದು
ಅವರು ತೋಟಗಾರಿಕೆ ಬಗ್ಗೆ ಆಸಕ್ತಿ ಹೊಂದಿದ್ದರೆ ನಿಮ್ಮ ಮನೆಯಲ್ಲಿ ವಿಶೇಷ ತಳಿಯ ಗಿಡಗಳಿದ್ದರೆ ಅದನ್ನು ಅವರಿಗೆ ಗಿಫ್ಟ್ ಆಗಿ ನೀಡಬಹುದು, ನೀವು ಇತರ ಗಿಫ್ಟ್‌ಗಳನ್ನು ನೀಡುವುದಕ್ಕಿಂತ ಈ ರೀತಿ ಕೊಟ್ಟರೆ ಅವರಿಗೆ ತುಂಬಾನೇ ಖುಷಿಯಾಗುವುದು.
ಈ ಬಗೆಯ ಗಿಫ್ಟ್‌ಗಳು ತುಂಬಾನೇ ಸ್ಪೆಷಲ್ ಆಗಿರುವುದು ಮಾತ್ರವಲ್ಲ, ಗಿಫ್ಟ್ ಪಡೆಯುವವರಿಗೂ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕಾತರ ಹೆಚ್ಚುವುದು, ಏಕೆಂದರೆ ಅವರ ಇಷ್ಟಗಳನ್ನು ತಿಳಿದು ನೀವು ಗಿಫ್ಟ್ಸ್ ನೀಡುತ್ತಿರುತ್ತೀರಿ, ಅಲ್ಲದೆ ಇಲ್ಲಿ ನೀವು ಕೊಡುವ ಗಿಫ್ಟ್ಸ್ ನಿಮ್ಮ ಕ್ರಿಯೇಟಿವ್ ಆಲೋಚನೆಯಿಂದಾಗಿ ತುಂಬಾ ಕ್ರಿಯಾತ್ಮವಾಗಿರುತ್ತದೆ, ಆದ್ದರಿಂದ ಇತರ ವಸ್ತುಗಳಿಗಿಂತ ಅದರ ಮೌಲ್ಯ ಕೂಡ ಹೆಚ್ಚುವುದು.
ನೀವು ವಸ್ತುಗಳನ್ನು ಖರೀದಿಸಿಕೊಟ್ಟರೆ ಆ ಕ್ಷಣಕ್ಕಷ್ಟೇ ಸ್ಪೆಷಲ್ ಆಗಿರುತ್ತದೆ, ಆದರೆ ಈ ಬಗೆಯ ಗಿಫ್ಟ್ಸ್ ಯಾವತ್ತಿಗೂ ಸ್ಪೆಷಲ್, ಈಗ ಹೇಳಿ ಹಣ ಖರ್ಚು ಮಾಡದೆ ಬುದ್ಧಿ ಖರ್ಚು ಮಾಡಿ ಗಿಫ್ಟ್ ಮಾಡುವ ಈ ವಿಧಾನವೇ ಎಲ್ಲಾ ರೀತಿಯಿಂದಲೂ ಬೆಸ್ಟ್ ಅಲ್ಲವೇ?



Click it and Unblock the Notifications

