Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಜಾರಿಕಾ ಅಂತ್ಯಕ್ರಿಯೆಯಲ್ಲಿ 30 ಲಕ್ಷ ಜನ: ವಿಶ್ವ ದಾಖಲೆ

ಹಜಾರಿಕಾ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗೆ ಮುನ್ನ ನ. 7ರಂದು ಎರಡು ದಿನ ಇಲ್ಲಿನ ಐತಿಹಾಸಿಕ ಜಡ್ಜ್ ಫೀಲ್ಡ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಹಜಾರಿಕಾ ಅವರ ಅಂತ್ಯಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಮತ್ತು 30 ಲಕ್ಷ ಮಂದಿ ಅಂತ್ಯಕ್ರಿಯೆಯನ್ನು ಟೆಲಿವಿಷನ್ನಲ್ಲಿ ವೀಕ್ಷಿಸಿದ್ದರು ಎಂದು ಆನ್ಲೈನ್ ಎನ್ಸೈಕ್ಲೋಪಿಡಿಯಾ ವಿಕಿಪಿಡಿಯಾ ತಿಳಿಸಿದೆ.
ಖುದ್ದು ಅಂತಿಮ ನಮನ ಸಲ್ಲಿಕೆ ಮತ್ತು ಟಿವಿಯಲ್ಲಿ ವೀಕ್ಷಿಸಿದ ಅಂದಾಜು ಸಂಖ್ಯೆಯ ಆಧಾರದಲ್ಲಿ ಐತಿಹಾಸಿಕ ಅಂತ್ಯಕ್ರಿಯೆಗಳ ಪಟ್ಟಿಯನ್ನು ವಿಕಿಪಿಡಿಯಾ ಹೊಂದಿದೆ. ಜು. 7, 2009ರಂದು ಮೈಕಲ್ ಜಾಕ್ಸನ್ ಅಂತ್ಯಕ್ರಿಯೆಯನ್ನು ಟಿವಿಯಲ್ಲಿ ವಿಶ್ವಾದ್ಯಂತ ಸುಮಾರು ಮೂರು ಕೋಟಿ ಜನರು ವೀಕ್ಷಿಸಿರುವುದು ಇದುವರೆಗಿನ ದಾಖಲೆಯಾಗಿದೆ.
ಸೆ. 1997ರಲ್ಲಿ ವೇಲ್ಸ್ ರಾಜಕುಮಾರಿ ಡಯಾನಾ ಅವರಿಗೆ 2 ಲಕ್ಷಕ್ಕೂ ಅಧಿಕ ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದರು ಮತ್ತು 2.5 ಕೋಟಿ ಮಂದಿ ಅಂತ್ಯಕ್ರಿಯೆಯನ್ನು ಟಿವಿಯಲ್ಲಿ ವೀಕ್ಷಿಸಿದ್ದರು. ಎಲ್ವಿಸ್ ಪ್ರಸ್ಲಿ, ದ್ವಿತೀಯ ಪೋಪ್ ಜಾನ್ ಪಾಲ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜೋಸೆಫ್ ಸ್ಟಾಲಿನ್, ಜೋಸೆಫ್ ಟಿಟೋ, ಜಾನ್ ಕೆನಡಿ, ರೋನಾಲ್ಡ್ ರೇಗನ್, ಆಯಾತೊಲ್ಲಾ ಖೊಮೇನಿ, ಸಿ.ಆರ್. ಅಣ್ಣಾ ದೊರೆ ಮುಂತಾದವರ ಅಂತ್ಯಕ್ರಿಯೆಗಳು ಈ ಯಾದಿಯಲ್ಲಿ ಸೇರಿವೆ.



Click it and Unblock the Notifications
