Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪೂನಂ ಪಾಂಡೆಗೆ ಸೀರೆ ಉಡಿಸುವವರು ಬೇಕಾಗಿದ್ದಾರೆ!

ಇಂಗ್ಲೆಂಡ್ ಕೈಯಲ್ಲಿ ಸದೆಬಡಿಸಿಕೊಳ್ಳುತ್ತಿರುವ ಭಾರತೀಯ ಕ್ರಿಕೆಟಿಗರನ್ನು ಹುರಿದುಂಬಿಸಲು, ಒಂದೊಂದೇ ಮ್ಯಾಚು ಗೆದ್ದರೆ ಒಂದೊಂದೆ ಬಟ್ಟೆ ಕಳಚುವುದಾಗಿ ವಾಗ್ದಾನ ಮಾಡಿದ್ದ ಕಿಂಗ್ ಫಿಷರ್ ಬೆಡಗಿ, ಹುರಿದುಂಬಿಸುವ ಕೆಲಸವನ್ನು ಅರ್ಧಕ್ಕೇ ಬಿಟ್ಟು ಮುಂಬೈನಲ್ಲಿ ಕಂಡಕಂಡಕಡೆಯೆಲ್ಲ ಶಾಪಿಂಗ್ ಮಾಡುತ್ತಿದ್ದಾಳಂತೆ.
ಶಾಪಿಂಗ್ ಮಾಡುತ್ತಿರುವುದು ಹೊಸಹೊಸ ಬ್ರಾಂಡಿನ, ಉದ್ರೇಕಿಸುವಂಥ, ಆಟಗಾರರನ್ನು ಉತ್ತೇಜಿಸುವಂಥ ಬಿಕಿನಿ ಕೊಳ್ಳಲು ಅಲ್ಲವೇ ಅಲ್ಲ. ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅನ್ನುತ್ತಿದ್ದ ಆಕೆ ಶಾಪಿಂಗ್ ಮಾಡುತ್ತಿರುವುದು ಮೈತುಂಬ ಹೊದೆದುಕೊಳ್ಳಲು ಸೀರೆಗಳನ್ನು.
ವಿಶ್ವಕಪ್ ಗೆದ್ದಾಗ ಬೆತ್ತಲಾಗುತ್ತೇನೆಂದಿದ್ದರೂ ಕಾಲಕೂಡಿ ಬಂದಿರಲಿಲ್ಲ. ಈಗ ಬಟ್ಟೆ ಬಿಚ್ಚಿ ಬೆತ್ತಲಾಗಲು ಕಾಲಕೂಡಿ ಬಂದಿದ್ದರೂ ನಮ್ಮ ಕ್ರಿಕೆಟ್ಟಿಗರು ಒಂದೇ ಒಂದು ಮ್ಯಾಚನ್ನೂ ಗೆಲ್ಲುತ್ತಿಲ್ಲ. ಹೀಗಾಗಿ ಬಟ್ಟೆಗಳನ್ನು ಮೈಮೇಲಿಂದ ಡ್ರಾಪ್ ಮಾಡುವ ಬದಲು, ಬಟ್ಟೆ ಕಳಚುವ ಪ್ಲಾನನ್ನೇ ಪೂನಂ ಡ್ರಾಪ್ ಮಾಡಿದ್ದಾಳೆ.
ಯಾವುದೇ ರೀತಿಯಿಂದಲಾದರೂ ಅಷ್ಟೇ ಎಷ್ಟೇ ಪ್ರೋತ್ಸಾಹಿಸಿದರೂ ಕ್ರಿಕೆಟಿಗರು ಪಂದ್ಯಗಳನ್ನು ಗೆಲ್ಲುವ ಮನಸ್ಸು ಮಾಡುತ್ತಿಲ್ಲ. ವಿಶ್ವಕಪ್ ಗೆದ್ದಾಗ ಏರಿದ್ದ ಕೊಬ್ಬು ಇನ್ನೂ ಇಳಿದಿಲ್ಲ. ಇಳಿದ ಮೇಲೆ ಬಟ್ಟೆಬಿಚ್ಚುವ ಮುಂದಿನ ಮಾತು ಎಂದು ಅಂಗಡಿಗಳಿಗೆ ಲಗ್ಗೆ ಹಾಕಿದ್ದಾಳೆ. ಹಾಗೆಯೆ, ಸೀರೆ ಉಡುವುದನ್ನು ಕಲಿಯಲು ಕ್ಲಾಸಿಗೆ ಸೇರಲು ನಿರ್ಧರಿಸಿದ್ದಾಳಂತೆ.



Click it and Unblock the Notifications
