Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜಾಬ್ ಚೇಂಜ್ ಬಯಸುವವರಿಗೆ ಹತ್ತು ಭಯಂಕರ ಜಾಬ್
ಕೆಲಸ ಬದಲಾಯಿಸಬೇಕು ಅಂತ ಎಷ್ಟೋ ಸಾರಿ ಅಂದುಕೊಂಡಿರಬಹುದು. ಅರೇ ನಾನ್ಯಾಕೆ ಇಲ್ಲಿದ್ದೀನಿ. ಇದು ನನಗೆ ಸೂಟ್ ಆಗೋ ಜಾಬ್ ಅಲ್ಲ. ಒಂದಿಷ್ಟು ಡಿಫರೆಂಟ್ ಆಗಿರೋ ಜಾಬ್ ಬೇಕಿತ್ತು ಅಂತ. ಹೌದೇ? ಈ ಗುಣಗಳು ಇಲ್ಲದಿದ್ದರೆ ದುಡ್ಡು ಮಾಡಲು ಸಾಧ್ಯವಿಲ್ಲ ರೀ
ನಿಮ್ಮ ಕಷ್ಟ ನಮಗರ್ಥವಾಗಿದೆ. ನಿಮಗೆ ಇಷ್ಟವಾಗುತ್ತೋ ಗೊತ್ತಿಲ್ಲ. ಇಲ್ಲಿ ಹತ್ತು ಭಯಂಕರ, ಅತಿಮಾನುಷ, ಅತಿಭಯಂಕರ, ವಿಕಾರ, ವಿಚಿತ್ರ ಉದ್ಯೋಗಗಳನ್ನು ನಿಮ್ಮ ಮುಂದಿರಿಸಿದ್ದೇವೆ. ಜಾಬ್ ಚೇಂಜ್ ಮಾಡೋದಿದ್ರೆ ಮಾಡಿಬಿಡಿ....

ಐಸ್ ಕ್ರೀಮ್ ಟೇಸ್ಟರ್
ಅರೇ ಸ್ವೀಟ್ ಜಾಬ್ ಅಲ್ವೇ? ಇಲ್ಲಿ ನಿಮ್ಮ ನಾಲಿಗೆಗೆ ಹೆಚ್ಚು ಕೆಲಸ. ವಿವಿಧ ಗುಣಮಟ್ಟದ ಐಸ್ ಕ್ರೀಮ್ ಟೇಸ್ಟ್ ಮಾಡಿ ರಿಪೋರ್ಟ್ ಮಾಡುತ್ತಿದ್ದರೆ ಸಾಕು. ಇಂತಹ ಉದ್ಯೋಗಗಳು ಪ್ರಮುಖ ಐಸ್ ಕ್ರೀಮ್ ಕಂಪನಿಗಳಲ್ಲಿ ಖಾಲಿ ಇರುತ್ತವೆ. ಈ ಕೆಲಸ ಮಾಡುವರಿಗೆ ಕಂಡಿಷನ್ ಏನಪ್ಪ ಅಂದ್ರೆ ಡ್ರಿಂಕ್ಸ್ ಮಾಡಬಾರದು, ಸ್ಮೋಕ್ ಮಾಡಬಾರದು, ಮತ್ತು ಫರ್ಪ್ಯೂಮ್ಸ್ ಹಾಕಬಾರದು.

ಬೆಂಕಿ ಪರಿವೀಕ್ಷಕ
ಫೈರ್ ಅಬ್ಸಾರ್ವರ್ ಅಂದ್ರೆ ಬೆಂಕಿ ಬೀಳದಂತೆ ನೋಡಿಕೊಳ್ಳುವರು. ಮುಖ್ಯವಾಗಿ ಅರಣ್ಯಗಳಿಗೆ ಬೆಂಕಿ ಬೀಳದಂತೆ ಎಚ್ಚರವಹಿಸುವರು. ಈ ಜಾಬ್ ಮಾಡುವರು ಎತ್ತರದ ಟವರ್ ಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಎಲ್ಲಾದರೂ ಬೆಂಕಿ ಆಕಸ್ಮಿಕ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರೆ ಸಾಕು.

ದ್ವೀಪ ಮೇಲ್ವಿಚಾರಕ
ಐಸ್ ಲ್ಯಾಂಡ್ ಗಳಲ್ಲಿ ಕೆಲಸ ಮಾಡಬಯಸುವರು ಇದಕ್ಕೆ ಅರ್ಜಿ ಹಾಕಬಹುದು. ಎಲ್ಲೋ ದೂರದ ದ್ವೀಪ ಪ್ರದೇಶಗಳಲ್ಲಿ ನಿಮಗೆ ಕೆಲಸ. ಅಲ್ಲಿ ತೋಟಗಾರಿಕೆ, ಕಾರ್ಪೆಂಟರಿ ಮತ್ತು ಇತರ ಮೈಂಟೈನ್ಸ್ ಕೆಲಸ ಮಾಡುತ್ತಿದ್ದರೆ ಸಾಕು. ಹಲವು ದ್ವೀಪಗಳ ಓನರ್ ಗಳು ಇಂತಹ ಉದ್ಯೋಗಾವಕಾಶ ನೀಡುತ್ತಿದ್ದಾರೆ.

ಮೊಟ್ಟೆ ಒಡೆಯುವರು
ಹೆಸರು ಕೇಳಿ ಇದೇನಪ್ಪ ಅನ್ನದಿರಿ. ಇದು ಮೊಟ್ಟೆ ಒಡೆದು ಅದರಿಂದ ಹಳದಿ ಮತ್ತು ಬಿಳಿ ಭಾಗಗಳನ್ನು ಬೇರೆ ಮಾಡುವ ಕೆಲಸ. ಕೆಲವು ಆಹಾರ ತಯಾರಿಸಲು ಬರೀ ಮೊಟ್ಟೆಯ ಬಿಳಿ ಬೇಕಾಗುತ್ತದೆ. ಇನ್ನು ಕೆಲವು ಆಹಾರಗಳಿಗೆ ಬರೀ ಹಳದಿ ಸಾಕಾಗುತ್ತದೆ. ಪೌಷ್ಠಿಕಾಂಶಗಳ ತಯಾರಿಕಾ ಕಂಪನಿಗಳಲ್ಲಿ ಇಂತಹ ಜಾಬ್ ಸಿಗುತ್ತದೆ.

ಬಿಯರ್ ಟೇಸ್ಟರ್
ಹೆಡ್ ಲೈನ್ ನೋಡಿಯೇ ಈ ಜಾಬ್ ಓಕೆ ಅಂದುಕೊಳ್ಳಬೇಡಿ. ಹಾಗಂತ ದಿನವಿಡಿ ಕುಡಿಯುವುದೇ ಕೆಲಸ ಅಂತ ಅಂದುಕೊಳ್ಳದಿರಿ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಬಿಯರ್ ಬ್ರಾಂಡ್ ರುಚಿ ಕುರಿತ ಜ್ಞಾನ ಇದಕ್ಕೆ ಕಡ್ಡಾಯ. ಆದರೆ ಇಂತಹ ಉದ್ಯೋಗ ಸದ್ಯ ಎಲ್ಲೂ ಖಾಲಿ ಎಲ್ಲ. ಯಾಕೆಂದರೆ ಇದಕ್ಕೆ ಸೇರಿದವರು ಇನ್ನೂ ಕೆಲಸ ಬಿಟ್ಟಿಲ್ಲ.

ಚಿಕನ್ ಸೆಕ್ಸರ್
ಹೆಸರು ನೋಡಿ ಇದೇನಪ್ಪ ಅಂದುಕೊಳ್ಳದಿರಿ. ಇದು ಕೋಳಿ ಮರಿಗಳನ್ನು ಅವುಗಳ ಲಿಂಗಕ್ಕೆ ಅನುಗುಣವಾಗಿ ಹುಂಜ/ಹೇಂಟೆ ಎಂದು ಪ್ರತ್ಯೇಕಿಸುವ ಕೆಲಸ. ಹೆಚ್ಚಿನ ಪೌಟ್ರಿಗಳಲ್ಲಿ ಇಂತಹ ಕೆಲಸವಿರುತ್ತದೆ.

ಕ್ರೈಮ್ ಸೀನ್ ಕ್ಲೀನರ್
ಈ ಉದ್ಯೋಗ ಮಾಡುವರಿಗೆ ಸ್ವಲ್ಪ ಗುಂಡಿಗೆ ಗಟ್ಟಿ ಇರಬೇಕಾದ್ದು ಕಡ್ಡಾಯ. ಅಪಘಾತವಾದರೆ, ಕೊಲೆಗಳಾದರೆ ಆ ಸ್ಥಳವನ್ನು ಪರೀಕ್ಷಿಸಿದ ನಂತರ ಸ್ವಚ್ಛಗೊಳಿಸುವುದು ಇವರ ಕೆಲಸ.

ಐಮ್ಯಾಕ್ಸ್ ಸ್ಕ್ರೀನ್ ಕ್ಲೀನರ್
ನಾವೆಲ್ಲ ಸಿನಿಮಾಕ್ಕೆ ಹೋಗ್ತಿವಿ. ಆದ್ರೆ ಒಮ್ಮೆನೂ ಯೋಚಿಸಿಲ್ಲ. ಸಿನಿಮಾದ ಅಷ್ಟು ದೊಡ್ಡ ಪರದೆ ಕ್ಲೀನ್ ಮಾಡೋದ್ಯಾರು ಅಂತ. ಸಿನಿಮಾ ಮಂದಿರಗಳಲ್ಲಿ ಪರದೆಗಳನ್ನು ನೀಟಾಗಿ ಇರುವಂತೆ ನೋಡಿಕೊಳ್ಳುವುದು ಇವರ ಪ್ರಮುಖ ಕೆಲಸ. ಜಸ್ಟ್ ಟ್ರೈ ಮಾಡಬಹುದು. ದಿನಾಲು ಸಿನಿಮಾ ಉಚಿತವಾಗಿ ನೋಡಬಹುದೆಂದನಿಸುತ್ತೆ.

ಫರ್ನಿಚರ್ ಟೆಸ್ಟರ್
ಇಂತಹ ಜಾಬ್ ಕೂಡ ಇದೆ. ಸೋಪಾ ಇತ್ಯಾದಿ ಫರ್ನಿಚರಲ್ಲಿ ಕುಳಿತು ಅದು ಎಷ್ಟು ಆರಾಮದಾಯಕವಾಗಿದೆ ಎಂದು ಟೆಸ್ಟ್ ಮಾಡುವುದು ಇವರ ಕೆಲಸ. ಕೆಲವು ದೊಡ್ಡ ಫರ್ನಿಚರ್ ಕಂಪನಿಗಳಲ್ಲಿ ಇಂತಹ ಉದ್ಯೋಗಗಳಿವೆ.ಈಗ ಇರೋ ಕೆಲಸನೇ ಬೆಟರ್ ಅನಿಸ್ತಾ ಇದ್ಯಾ! ನಿಮಿಷ್ಟ.

ಫಾರ್ಚ್ಯುನ್ ಕುಕ್ಕಿಸ್ ಬರಹಗಾರ
ನಿಮಗೆ ಕಂಟೆಂಟ್ ಬರವಣಿಗೆ, ಟೆಕ್ನಿಕಲ್ ಬರವಣಿಗೆ ಇತ್ಯಾದಿ ಗೊತ್ತು. ಆದ್ರೆ ಇದೇನಪ್ಪ ಹಣೆಬರಹ ಬರೆಯುವ ಕೆಲಸ. ಅಪಾರ್ಥ ಮಾಡಿಕೊಳ್ಳದಿರಿ. ಅದೇನೂ ಬ್ರಹ್ಮ ವಿದ್ಯೆಯಲ್ಲ. ನಿಮ್ಮಲ್ಲಿ ಕ್ರಿಯೇಟಿವ್ ಆಗಿ ಭವಿಷ್ಯ ಬರೆಯುವ ಸಾಮರ್ಥ್ಯವಿದ್ದರೆ ಫಾರ್ಚ್ಯುನ್ ಕುಕ್ಕಿಸ್ ಕಂಪನಿಗಳಲ್ಲಿ ಕೆಲಸ ಸಿಗಬಹುದು.



Click it and Unblock the Notifications
