Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಯುಕೆ ಡೌನ್ಟೌನ್ನಲ್ಲಿ ಪಿಪ್ಪಾ ಮಿಡ್ಲಟನ್ ಳದ್ದೇ ಸುದ್ದಿ

ಆಕೆ ಮತ್ತಾರೂ ಇಲ್ಲ, ಏ. 29ರಂದು ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ ಟನ್ ಸಹಸ್ರಾರು ಜನರ ಸಮ್ಮುಖದಲ್ಲಿ ಸತಿಪತಿಗಳಾದ ಸುದಿನ, ಅವರಿಬ್ಬರಿಂತ ಹೆಚ್ಚು ಕಣ್ಣುಗಳನ್ನು ಸೂಜಿಗಲ್ಲಿನಂತೆ ಸೆಳೆದ, ಹೃದಯ ಕದ್ದ ಪೋರಿ ಫಿಲಿಪ್ಪಾ ಚಾರ್ಲೊಟ್ಟಿ ಮಿಡಲ್ ಟನ್. ಶಾರ್ಟ್ ಅಂಡ್ ಸ್ವೀಟಾಗಿ ಪಿಪ್ಪಾ ಮಿಡಲ್ ಟನ್. ಪಿಪ್ಪಾ ಕೇಂಬ್ರಿಜ್ ನ ಡಚೆಸ್ ಆಗಿರುವ ಕೇಟ್ ಳ 27ರ ಹರೆಯದ ಮುದ್ದಿನ ತಂಗಿ. ಪಿಪ್ಪಾ ತನ್ನ ಅಕ್ಕ ವಿಲಿಯಂನನ್ನು ಮದುವೆಯಾಗುವ ಸಂದರ್ಭದಲ್ಲಿ ಅಕ್ಕನ ಗೌನಿನ ಚುಂಗನ್ನು ಹಿಡಿದು 'ಮೇಡ್ ಆಫ್ ಆನರ್' ಗೌರವ ಪಡೆದ ಚೆಲುವೆ.
ಫೇಸ್ ಬುಕ್ಕಲ್ಲಿ, ಟ್ವಿಟ್ಟರುಗಳಲ್ಲಿ ಅಕ್ಕನ ಮುಖ ಕೆಂಪಾಗುವಂತೆ, ಹೊಟ್ಟೆಕಿಚ್ಚಿನಿಂದ ಉರಿದಾಡುವಂತೆ ಪಿಪ್ಪಾಳ ಬಗ್ಗೆ ಚರ್ಚೆಗಳಾಗಿವೆ. ಆಕೆಯ ವದನಾರವಿಂದಕ್ಕಿಂತ ಬಳುಕುವ ಸೊಂಟದ ಬಗ್ಗೆ ಊಟ, ತಿಂಡಿ, ನಿದ್ದೆ ಬಿಟ್ಟು ವಿಚಾರಸಂಕಿರಣ ನಡೆಸಿದ್ದಾರೆ. ಟೇಪು ಹಿಡಿದು ಅಳೆದವರಂತೆ ಸೊಂಟದ ಸುತ್ತಳತೆಯ ಅಂಕಿಅಂಶಗಳನ್ನು ನೀಡಿದ್ದಾರೆ. ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನ ಬಾಲ್ಕನಿಯಲ್ಲಿ ನಿಂತ ಪಿಪ್ಪಾ ಮತ್ತು ಪ್ಲೇಬಾಯ್ ಹ್ಯಾರಿ ಜೋಡಿ ಎಷ್ಟು ಚೆಂದ ಕಾಣುತ್ತಲ್ವಾ? ಪಿಪ್ಪಾ ತನ್ನ ಇನಿಯನಿಗೆ ಕೈಕೊಟ್ಟು, ಹ್ಯಾರಿ ತನ್ನ ಪ್ರಿಯತಮೆಗೆ ಠೇಗಾ ಹಾಕಿ, ಇವರಿಬ್ಬರೂ ಮದುವೆ ಆಗೇ ಆಗುತ್ತಾರೆ ಎಂದು ಬೆಟ್ ಕಟ್ಟಿದವರಿದ್ದಾರೆ.
ಈ ಅಭಿಮಾನ ಯಾವ ಮಟ್ಟಿಗೆ ಹೋಗಿದೆಯೆಂದರೆ, ಪಿಪ್ಪಾ ಕುಂಡಿ ಕೊಂಡಾಡುವ ಸಂಘ (ಪಿಪ್ಪಾ ಮಿಡಲ್ಟನ್ ಆಸ್ ಅಪ್ರಿಸಿಯೇಷನ್ ಸೊಸೈಟಿ) ಫೇಸ್ ಬುಕ್ ಪೇಜನ್ನು ತೆರೆದು ಆಕೆಯ ಪೃಷ್ಠ ಸೌಂದರ್ಯೋಪಾಸನೆಗೆ ಮುಡುಪಾಗಿಟ್ಟಿದೆ. ಸದ್ಯಕ್ಕೆ ಪಿಪ್ಪಾ ಮಿಡಲ್ ಟನ್ ನೇರಳೆ ಬಣ್ಣದ ಕಂಚುಕ ತೊಟ್ಟು ನಲಿದಾಡುತ್ತಿರುವ ಚಿತ್ರ ರಾಜ ಮನೆತನದ ಕಣ್ಣು ಕೆಂಪಾಗಿಸಿದೆ, ವಿಶ್ವದಾದ್ಯಂತ ರಸಿಕರ ಕಣ್ಣು ತಂಪಾಗಿಸಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿವಿಡ್ ಎಂಟರ್ಟೇನ್ಮೆಂಟ್ ಎಂಬ ಸಂಸ್ಥೆ ಪಿಪ್ಪಾ ಮಿಡಲ್ ಟನ್ ಗೆ ಒಂದು ಪತ್ರ ಬರೆದಿದ್ದು, ವಯಸ್ಕರ ಸಿನೆಮಾದಲ್ಲಿ ನ್ಯಾಚುರಲ್ ಆಗಿ ನಟಿಸಬೇಕೆಂದು 50 ಲಕ್ಷ ಡಾಲರ್ ಗಂಟನ್ನು ಆಕೆಯ ಮುಂದಿಟ್ಟಿದೆ. ಜಾಸ್ತಿಯೇನು ಬೇಡ, ಒಂದೇ ಒಂದು ದೃಶ್ಯದಲ್ಲಿ ರೋಚಕ ದೃಶ್ಯದಲ್ಲಿ ನಟಿಸಿಬಿಡು, ಬೇಕಾದರೆ ನಿನ್ನ ಸಂಗಾತಿಯನ್ನು ನೀನೇ ಆಯ್ದುಕೊ ಎಂಬ ಆಪ್ಶನ್ ಮುಂದಿಟ್ಟಿದ್ದಾರೆ. ಯಾರಿಗುಂಟು ಯಾರಿಗಿಲ್ಲ? ಆದರೆ, ಈ ಸಿನೆಮಾ ಆಫರನ್ನು ಪಿಪ್ಪಾ ಒಪ್ಪಿಕೊಂಡ ಸುದ್ದಿಯಿನ್ನೂ ಬಂದಿಲ್ಲ.



Click it and Unblock the Notifications
