Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೊದಲ ಮುತ್ತಿನಿಂದ ಫಸ್ಟ್ ನೈಟ್ ವರೆಗೆ ಬೆಟ್ಟಿಂಗ್

ಇವು ಇಡೀ ಜಗತ್ತಿನ ಕಣ್ಣು ಕುಕ್ಕುತ್ತಿರುವ ವಿಲಿಯಂಸ್ ಮತ್ತು ಕೇಟ್ ಮದುವೆ ಕುರಿತಂತೆ ನಮ್ಮ ನಿಮ್ಮಂಥ ಸಾಮಾನ್ಯರು ನಡೆಸುತ್ತಿರುವಂಥ ಮಾತುಕತೆಗಳಲ್ಲ. ಕ್ರಿಕೆಟ್, ಫುಟ್ಬಾಲ್, ರಗ್ಬಿಯಂಥ ಆಟಗಳಲ್ಲೆಲ್ಲ ಲೆಕ್ಕಾಚಾರ ತಂದಿಟ್ಟ ಬೆಟ್ಟಿಂಗ್ ಈಗ ಮದುವೆ ಮನೆಯನ್ನೂ ವಕ್ಕರಿಸಿದೆ. ರಾಯಲ್ ವೆಡ್ಡಿಂಗ್ ಗೆ ಸಂಬಂಧಿಸಿದಂತೆ ಬೆಟ್ಟಿಂಗ್ ವ್ಯವಹಾರ ಭರ್ಜರಿಯಾಗಿ ಸಾಗಿದೆ. ಮದುವೆ ಶಾಸ್ತ್ರದಿಂದ ಶುರುವಾಗಿ ಮೊದಲರಾತ್ರಿಯ ಶಾಸ್ತ್ರ ಮುಗಿಯುವವರೆಗೆ ಬುಕ್ಕಿಗಳಿಗೆ ಊಟವಿಲ್ಲ, ನಿದ್ದೆಯಂತೂ ಇಲ್ಲವೇ ಇಲ್ಲ.
ಕೇಟ್ ಳ ಶಿರದಿಂದ ಉಂಗುಷ್ಟದವರೆಗೆ ಏನೇನು ಧರಿಸಲಿದ್ದಾಳೆ, ಮದುವೆ ಉಡುಗೆಯ ಬಣ್ಣ ಬಿಳಿಯೋ, ಕೆಂಪೋ, ಐವರಿಯೋ... ಬುಕ್ಕಿಗಳಿಗೆ ಭಾರೀ ವರಿ ತಂದಿಟ್ಟಿದೆ. ತಲೆಯ ಮೇಲಿಂದ ನೆಲವನ್ನು ಗುಡಿಸಿಕೊಂಡು ಬರುವ ಉದ್ದನೆಯ ಬಿಳಿಯ ವೇಲ್, ಕೇಟ್ ಳ ಅತ್ತೆ ಡಯಾನಾ ಧರಿಸಿದ್ದ ಬಟ್ಟೆಗಿಂತ ಉದ್ದವಿರುತ್ತದಾ? ಉದ್ದವಿರುತ್ತೆ ಎಂದು ಕೆಲವರು ಬೆಟ್ಟಿಂಗ್ ಕಟ್ಟಿದ್ದರೆ, ಇಲ್ಲ ಅದಕ್ಕಿಂತ ಉದ್ದ ತೊಟ್ಟು ದಿವಂಗತ ಅತ್ತೆಗೆ ಅವಮಾನ ಮಾಡಲಾರಳು ಎಂದು ಹಲವರು.
ಇದೆಲ್ಲ ಹೋಗಲಿ, ಮದುವೆ, ಮೊದಲರಾತ್ರಿಯ ಸಮಾಗಮವಾದ ಮೇಲೆ ಪ್ರಣಯ ಪಕ್ಷಿಗಳು ಮಧುಚಂದ್ರಕ್ಕೆಂದು ಎಲ್ಲಿ ಹೋಗುತ್ತಾರೆಂದು ಕೂಡ ಬುಕ್ಕಿಗಳು ಬೆಟ್ಟಿಂಗ್ ಕಟ್ಟಿದ್ದಾರೆ. ಯಾವುದನ್ನು ಭಾರೀ ಸಿಕ್ರೆಟ್ ಎಂಬ ಜಂಭ ಪಡುತ್ತಿದ್ದ ವಿಲಿಯಂಸ್ ನ ರಹಸ್ಯವನ್ನು ಬುಕ್ಕಿಗಳು ಬಟಾಬಯಲು ಮಾಡಿದ್ದಾರೆ. ಕೆರಿಬಿಯನ್ ದ್ವೀಪ, ಕೀನ್ಯಾ, ಜೋರ್ಡಾನ್, ಸ್ಪಾನಿಷ್ ಪಾರ್ಟಿ ಐಲ್ಯಾಂಡ್... ನಿನ್ನ ಆಯ್ಕೆ ಏನು ಹೇಳಪ್ಪಾ ರಾಜಪ್ಪ. ಎಲ್ಲರ ಕಣ್ಣಿಗೆ ಮಣ್ಣೆರಚಿ ಮಡಿಕೇರಿಗೆ ಹನಿಮೂನಿಗೆಂದು ಬಂದುಬಿಡಪ್ಪ.
ಇಬ್ಬರೂ ಒಬ್ಬರಿಗೊಬ್ಬರು ಪರಿಚಯವಾಗಿ, ಸ್ನೇಹ ಪ್ರೀತಿಗೆ ತಿರುಗಿ, ನಿಶ್ಚಿತಾರ್ಥ ಮುಗಿದು ಅಕ್ಷತೆ ಇನ್ನೂ ಅವರ ತಲೆಯ ಮೇಲೆ ಬಿದ್ದಿಲ್ಲ, ಆಗಲೇ ಅವರಿಬ್ಬರ ದಾಂಪತ್ಯ ಯಾವಾಗ ಮುಗಿಯಲಿದೆ ಎಂದು ಕೂಡ ಬೆಟ್ಟಿಂಗ್ ಕಟ್ಟಿದ್ದಾರೆ. ಸುಸೂತ್ರವಾಗಿ ಏ.29ರಂದು ಮದುವೆಯಾಗಲಾದರೂ ಬಿಡಲಿ. ಇನ್ನೂ ಏನೇನು ಬೆಟ್ಟಿಂಗ್ ಕಟ್ಟಿದ್ದಾರೋ, ಆ ದೇವರೇ ಬಲ್ಲ? ಸದ್ಯ, ಮೊದಲರಾತ್ರಿಯಂದು ಕೇಟ್ ಯಾವ ದಿರಿಸು ಧರಿಸುತ್ತಾಳೆಂದು ಬೆಟ್ಟಿಂಗ್ ಕಟ್ಟಿಲ್ಲ. ಅಥವಾ ಅದೂ... ಹೂ ನೋಸ್?
ದಟ್ಸ್ ಕನ್ನಡ ಟೀಮ್ ಕೂಡ ಬೆಟ್ಟಿಂಗ್ ಕಟ್ಟುತ್ತಿದೆ. ಏ.29ರಂದು ನಡೆಯುತ್ತಿರುವ ಶುಭಲಗ್ನದಂದು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಸೋನೆ ಮಳೆ ಸುರಿಯಲಿದೆ.



Click it and Unblock the Notifications
