Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಸ್ನಾನದ ವಿಷಯಕ್ಕೆ ಮದುವೆಯಾದ 40 ದಿನದಲ್ಲಿ ವಿಚ್ಛೇದನ ಕೇಳಿದ ಪತ್ನಿ
ವಿಚ್ಛೇದನಕ್ಕೆ ಕೆಲವರು ನೀಡುವ ಕಾರಣ ಕೇಳಿದರೆ ತಮಾಷೆ ಅನಿಸುವುದು, ತುಂಬಾ ಚಿಕ್ಕ ವಿಷಯಕ್ಕೆ ವಿಚ್ಚೇದನಕ್ಕೆ ಕೇಳ್ತಾರಲ್ಲ ಎಂದನಿಸುವುದು, ಇದೆಲ್ಲಾ ಸರಿಪಡಿಸಕ್ಕೆ ಆಗುವ ವಿಚಾರ ತಾನೆ ಎಂದನಿಸುವುದು, ಆದರೆ ಈ ಚಿಕ್ಕ ವಿಷಯವೇ ಅವರ ವೈವಾಹಿಕ ಬದುಕಿನಲ್ಲಿ ತುಂಬಾನೇ ದೊಡ್ಡ ಸಮಸ್ಯೆಯಾಗಿರುತ್ತದೆ.

ಈ ಜೋಡಿಗಳ ನಡುವೆ ಕೂಡ ವಿರಸಕ್ಕೆ ಕಾರಣವಾಗಿರುವುದು ಸ್ನಾನದ ವಿಷಯ. ಹೌದು ಆಕೆ ನೂರಾರು ಕನಸುಗಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾಳೆ, ಮದುವೆಯಾದ ಮೇಲೆ ಗಂಡ ನೋಡಿದರೆ ಸ್ನಾನ ಮಾಡುವುದಿಲ್ಲ, ಒಂದೆರಡು ದಿನವಲ್ಲ, ವಾರವಾದರೂ ಸ್ನಾನ ಮಾಡುತ್ತಿರಲಿಲ್ಲ.
ಸ್ನಾನ ಮಾಡಲು ಎಷ್ಟೇ ಹೇಳಿದರು ಸ್ನಾನ ಮಾಡುತ್ತಿರಲಿಲ್ಲ, ಈ ಕಾರಣಕ್ಕೆ ಪತಿ ಸಮೀಪ ಬಂದರೆ ಇವಳಿಗೆ ವಾಕರಿಗೆ ಬರ್ತಾ ಇತ್ತು, ಸ್ನಾನ ಮಾಡದೆ ಇರುವ ಕಾರಣ ಆತನ ಮೈ ರ್ದುಗಂಧ ಬೀರುತ್ತಿತ್ತು, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವಳು ಪತಿಗೆ ನೇರವಾಗಿಯೇ ಹೇಳ್ತಾಳೆ, ಆದರೆ ಆತ ಮಾತ್ರ ಕಿವಿಗೆ ಹಾಕಿಕೊಳ್ಳುವುದಿಲ್ಲ. ಈಕೆಯ ಒತ್ತಾಯಕ್ಕೆ 40 ದಿನದಲ್ಲಿ 6 ಬಾರಿ ಸ್ನಾನ ಮಾಡಿದನಂತೆ, ಹೀಗಾಗಿ ರೋಸಿ ಹೋದ ಪತ್ನಿ ಈಗ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಆತ ಬದಲಾಗುತ್ತೇನೆ ಎಂದು ಹೇಳ್ತಾ ಇದ್ದಾನೆ, ಆದರೂ ಆಕೆ ಮಾತ್ರ ಆತನನ್ನು ನಂಬಲು ಸಿದ್ಧಳಿಲ್ಲ
ಪತ್ನಿ ಕೋರ್ಟ್ ಮೆಟ್ಟಿಲೇರಿದಾಗ ಆತನಿಗೂ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದೆ, ಹೀಗಾಗಿ ನಾನು ಇನ್ಮುಂದೆ ಸ್ನಾನ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ, ಆದರೆ ಆಕೆ ಮಾತ್ರ ಇನ್ನು ನಾನು ಈತನ ಜೊತೆ ಬಾಳ್ವೆ ಮಾಡಲಾರೆ ಅಂತಿದ್ದಾಳೆ, ಪಾಪ ಅವಳು ಎಷ್ಟು ರೋಸಿ ಹೋಗಿರಬೇಡ.
ಸಂಸಾರ ಸರಿ ಹೋಗಲು ಇಬ್ಬರಿಗೂ ಕೌನ್ಸಿಲಿಂಗ್ ನೀಡಿದರೂ ಪ್ರಯೋಜನವಾಗಿಲ್ಲ
ಆತ ನಾನು ಸ್ನಾನ ಮಾಡುತ್ತೇನೆ ಇನ್ನು ಹಾಗೆ ಮಾಡುವುದಿಲ್ಲ ಎಂದು ಹೇಳ್ತಾ ಇದ್ದಾನೆ, ಅದರೆ ಪತ್ನಿ ಮಾತ್ರ ಖಂಡಿತ ನಾನು ಮಾತ್ರ ಈತನ ಜೊತೆ ಕುಟುಂಬ ನಡೆಸಲಾರೆ, ಆದರೆ ಒಂದು ಶಿಸ್ತು ಇಲ್ಲ, ಶುಚಿತ್ವ ಇಲ್ಲ ಅಂದ ಮೇಲೆ ಹೇಗೆ ತಾನೆ ಅವನು ಬದಲಾಗುತ್ತಾನೆ ಎಂದು ನಂಬಲಿ ಎಂದು ಹೇಳ್ತಾ ಇದ್ದಾಳೆ.
ಅವಳು ಏಕೆ ಅಷ್ಟೊಂದು ಹಠ ಹಿಡಿಯುತ್ತಿದ್ದಾಳೆ ಎಂದು ಇದನ್ನು ಕೇಳಿದಾಗ ಅನಿಸಬಹುದು, ಅದರೆ ಆಕೆಯ ಮಾತಿನಲ್ಲಿಯೂ ನ್ಯಾಯವಿದೆ
ಹೌದು ಮದುವೆಯಾದ ಶುರುವಿನಲ್ಲಿ ಕೆಟ್ಟ ಚಟ ಇರುವವರು ಕೂಡ ತಮ್ಮ ಅಭ್ಯಾಸ ತೋರಿಸಲ್ಲ, ಏಕೆಂದರೆ ನಮ್ಮಿಬ್ಬರ ನಡುವೆ ಒಡಕು ಉಂಟಾಗುತ್ತದೆ ಎಂದು ತುಂಬಾ ಒಳ್ಳೆಯವರಂತೆ ಮುಖವಾಡ ಹಾಕುತ್ತಾರೆ, ಆದರೆ ಇತ ಮದುವೆಯಾದಾಗಿನಿಂದ ಆಕೆ ನೋಡಿದಂತೆ ಶುಚಿತ್ವ ಕಡೆಗೆ ಗಮನ ಕೊಡಲ್ಲ, ಈಕೆ ಅಂತೂ ಶುಚಿತ್ವಕ್ಕೆ ತುಂಬಾ ಪ್ರಾಮೂಕ್ಯತೆ ನೀಡುವವಳು. ದಿನಗಳು ಕಳೆದರೂ ಗಂಡ ಸ್ನಾನ ಮಾಡುತ್ತಿಲ್ಲ ಎಂದು ಗೊತ್ತಾದಾಗ ಇವಳಿಗೆ ಆತನ ಸಮೀಪ ಹೋಗುವುದಕ್ಕೆ ಅಸಹ್ಯ ಅನಿಸಲಾರಂಭಿಸುತ್ತದೆ. ಹಾಗಾಗಿ ಈತನಿಂದ ಸಂಪೂರ್ಣ ದೂರಾಗುವ ನಿಯಂತ್ರಣಕ್ಕೆ ಬಂದಿದ್ದಾಳೆ.
ಆತ ಬದಲಾಗುತ್ತಾನೆ ಎಂದರೆ ಕೋರ್ಟ್‌ಗೆ ಹೋಗುವ ಮುನ್ನವೇ ಬದಲಾಗಿರುತ್ತಿದ್ದ
ಆಕೆ ಸೀದಾ ಕೋರ್ಟ್‌ಗೆ ಹೋಗಿಲ್ಲ, ಕೋರ್ಟ್ ಹೋಗುವ ಮುನ್ನ ಆತನನ್ನು ತಿದ್ದುವ ಪ್ರಯತ್ನ ಮಾಡಿದ್ದಳು, ಸ್ನಾನ ಮಾಡು ಅಂತ ಒತ್ತಾಯ ಮಾಡಿದಕ್ಕೆ 40 ದಿನದಲ್ಲಿ 6 ಬಾರಿಯಾದರೂ ಸ್ನಾನ ಮಾಡಿದ. ಆಕೆಗೆ ನಾನು ಸ್ನಾನ ಮಾಡದೆ ಇರುವುದು ಇಷ್ಟವಾಗುತ್ತಿಲ್ಲ ಎಂದು ತಿಳಿದಾಗಲೇ ಬದಲಾಗಬಹುದಿತ್ತು ಅಲ್ವಾ? ಹೀಗಾಗಿ ಈ ಪ್ರಕರಣದಲ್ಲಿ ಈತನಿಗಿಂತ ಆಕೆಯೇ ಸರಿ ಅನಿಸುವುದು. ಈ ಪರ್ಸನಲ್ ಹೈಜಿನ್ ಎಂಬುವುದು ತುಂಬಾನೇ ಮುಖ್ಯ ಅಲ್ವಾ? ಆಗ್ರಾ ನಿವಾಸಿ ರಾಜೇಶ್ ಬಾಳಲ್ಲಿ ಈ ಘಟನೆ ನಡೆದಿದೆ.



Click it and Unblock the Notifications