Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆ ಬಳಿಕ ಪತ್ನಿ ಬೇರೆ ಮನೆ ಮಾಡಲು ಒತ್ತಾಯಿಸುವುದೇಕೆ..? ಇದರ ಹಿಂದಿನ ಕಾರಣವೇನು?
ಕುಟುಂಬ, ವಿವಾಹ, ಸಂಸಾರ ಇವು ಭಾರತೀಯ ಸಮಾಜದಲ್ಲಿ ಹಾಸು ಹೊಕ್ಕಾಗಿರುವು ಸಂಸ್ಕೃತಿಯ ಭಾಗವಾಗಿವೆ. ಮಹಿಳೆ ತನ್ನ ಜೀವನದ ಉದ್ದಕ್ಕೂ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ಪಾತ್ರ ನಿರ್ವಹಿಸುತ್ತಾಳೆ. ಮಗಳಾಗಿ, ಸಹೋದರಿಯಾಗಿ, ಪತ್ನಿಯಾಗಿ ಸೊಸೆಯಾಗಿ, ತಾಯಿಯಾಗಿ ಕೊನೆಯದಾಗಿ ಅಜ್ಜಿಯಾಗಿ ತನ್ನ ಪಾತ್ರ ನಿರ್ವಹಿಸುತ್ತಾಳೆ.
ಹಿಂದೆಲ್ಲಾ ಕೂಡು ಕುಟುಂಬ ಅಥವಾ ಅವಿಭಕ್ತ ಕುಟುಂಬಗಳ ನೋಡುತ್ತಿದ್ದ ನಾವು ಇಂದು ವಿಭಕ್ತ ಕುಟುಂಬ ಅಥವಾ ಮೂರು ಜನರ ನಗರ ಕುಟುಂಬಳಿಗೆ ಸಾಕ್ಷಿಯಾಗಿದ್ದೇವೆ. ಅದರಲ್ಲು ಮಹಾನಗರಗಳಲ್ಲಿ ಮೂವರು ಇರುವ ಕುಟುಂಬಗಳೆ ಇಂದು ಹೆಚ್ಚಾಗಿ ಕಾಣುತ್ತವೆ.

ಮಹಿಳೆ ಈಗ ಮದುವೆಯಾದ ಬಳಿಕ ಸ್ವತಂತ್ರವಾಗಿ ಬದುಕಲು ಇಚ್ಛಿಸಿದ್ದು, ಅತ್ತೆ, ಮಾವ, ಮನೆ, ಕುಟುಂಬದಿಂದ ಮುಕ್ತಿ ಪಡೆಯುತ್ತಿದ್ದಾಳೆ. ಹಾಗಾದ್ರೆ ಮದುವೆಯಾದ ಬಳಿಕ ಅತ್ತೆ-ಮಾವನ ಜೊತೆ ಇರಲು ಮಡದಿ ಒಪ್ಪದಿರಲು ಕಾರಣವೇನು? ಇದರ ಹಿಂದಿರುವ ಸತ್ಯವೇನು ಎಂಬುದನ್ನು ರೆಡ್‌ಇಟ್ ಬಳಕೆದಾರರೊಬ್ಬರು ವಿವರಿಸಿದ್ದಾರೆ.
ಹೊಸದಾಗಿ ಮದುವೆಯಾಗಿ ಬರುವ ಆಕೆ ಬೇರೆ ಮನೆ ಮಾಡಲು ಒತ್ತಾಯಿಸುವುದೇಕೆ? ಕುಟುಂಬದಿಂದ ಹೊರಬರಲು ಈ ಅಂಶಗಳು ಪ್ರಮುಖ ಕಾರಣವಾಗುತ್ತವ ಎಂದು ಟಿಸಿಎಸ್ ಸಂಸ್ಥೆಯ ಮಾಜಿ ಸಾಫ್ಟ್‌ವೇರ್ ಇಂಜಿನಿಯರ್ ಸೃಷ್ಟಿ ರಾಜ್ ಎಂಬಾಕೆ ವಿವರಿಸಿದ್ದಾರೆ.
ವೃತ್ತಿ ಮತ್ತು ಕುಟುಂಬದ ನಡುವೆ ಆಯ್ಕೆ
ಮದುವೆಯ ನಂತರವೂ ಕೆಲವು ಮಹಿಳೆಯರು ದುಡಿಮೆಯನ್ನು ಬಿಡುವುದಿಲ್ಲ ಇದರಿಂದ ಕೌಟುಂಬಿಕ ಸ್ವಾವಲಂಭನೆ ಜೊತೆಗೆ ಕುಟುಂಬ ನಿರ್ವಹಣೆಗೂ ಸಹಾಯವಾಗುತ್ತದೆ. ಆದರೆ ಕೆಲವರಿಗೆ ಕುಟುಂಬ ಮತ್ತು ವೃತ್ತಿ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯು ಎದುರಾಗುತ್ತದೆ.
ಅತ್ತೆಯ ಜೊತೆ ಬಾಳುವುದು ಕಷ್ಟ
ಅತ್ತೆ ಜೊತೆ ಇರಲು ಬಹುಪಾಲು ಮಹಿಳೆಯರಿಗೆ ಕಷ್ಟವಾಗಲು ಕಾರಣ ಅವರು ಮನೆಯಿಂದ ಹೊರಗುಳಿಯುವುದಂತೆ. ಇತ್ತೀಚಿನ ದಿನಗಳಲ್ಲಿ ಯುವತಿಯರು ಕುಟುಂಬದೊಂದಿಗೆ ಜೀವಿಸುವುದಕ್ಕಿಂತ ಹೆಚ್ಚಾಗಿ ಮನೆಯಿಂದ ಹೊರಗುಳಿಯುತ್ತಾರೆ. ಅಂದರೆ ಓದಿಗಾಗಿ ಅವರು ದೂರದ ಊರಿಗೆ ಇಲ್ಲವೆ ಹಾಸ್ಟೆಲ್ ಜೀವನಕ್ಕೆ ಹೊಂದಿಕೊಳ್ಳುತ್ತಾರೆ. ಓದಿನ ಬಳಿಕ ವೃತ್ತಿಗಾಗಿ ಹೊಸ ನಗರದತ್ತ ಅವರು ವಲಸೆ ಹೋಗುತ್ತಾರೆ. ಅವರು ಕುಟುಂಬ ಜೀವನದಿಂದ ಹೊರಗುಳಿದಿರುತ್ತಾರೆ.
ಹೀಗಾಗಿ ಅವರು ಮದುವೆಯಾದ ಬಳಿಕ ಹೊಸ ಜನ, ಹೊಸ ಮನೆಯ ವಾತಾವರಣದಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಇದು ಕೌಟುಂಬಿಕ ಸಾಮರಸ್ಯದಲ್ಲಿ ಒಡಕು, ಮುನಿಸಿಗೆ ಕಾರಣವಾಗಬಹುದು ಎಂದು ಸೃಷ್ಟಿ ರಾಜ್ ಹೇಳಿಕೊಂಡಿದ್ದಾರೆ.
ಆಫೀಸ್‌ನಲ್ಲಿ ಮಹಿಳೆ ಕಣ್ಣೀರು
ಆಗಷ್ಟೇ ಮದುವೆಯಾಗಿ ಆಫೀಸ್‌ಗೆ ಬಂದಿದ್ದ ಮಹಿಳೆಯೊಬ್ಬರು ವಾಶ್‌ರೂಮ್‌ನಲ್ಲಿ ಅಳುತ್ತಿರುವುದನ್ನು ಸೃಷ್ಟಿ ರಾಜ್ ಗಮನಿಸಿದರಂತೆ. ಆಕೆಯನ್ನು ವಿಚಾರಿಸಿದಾಗ ಮದುವೆಯಾದ ಬಳಿಕ ಅತ್ತೆ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ ಎಂಬ ಉತ್ತರ ಬಂತಂತೆ. ಈ ವಿಚಾರದ ಬಗ್ಗೆ ಆಫೀಸ್‌ನ ಎಲ್ಲಾ ಮಹಿಳಾ ಸಿಬ್ಬಂದಿಯ ಜೊತೆ ಮಾತನಾಡಿದಾಗ ಬಹುತೇಕ ಮಂದಿಯ ನೀವು ಇದಾಗಿತ್ತಂತೆ.
ಸ್ವಾತಂತ್ರ್ಯದ ಕೊರತೆ
ಮದುವೆಯಾದ ಬಳಿಕ ಮಹಿಳೆ ಬೇರೆ ಮನೆ ಅಥವಾ ಕುಟುಂಬ ಹೊಂದಲು ಆಕೆಗೆ ಸ್ವಾತಂತ್ರ್ಯದ ಕೊರತೆಯೂ ಕಾರಣವಂತೆ. ಮದುವೆಗೂ ಮುನ್ನ ಆಕೆ ಸ್ವತಂತ್ರಳಾಗಿದ್ದಳು, ಆದರೆ ಈಗ ಆಕೆಗೆ ತನ್ನ ಭಾವನೆಗಳ ಹೊರಹಾಕಲು ಅವಕಾಶ ಸಿಗುತ್ತಿಲ್ಲ ಎಂಬ ಕೊರತೆ ಕಾಡಬಹುದು. ಮನೆಯಲ್ಲಿ ಅತ್ತೆ, ಮಾವನ ಆಸೆಯಂತೆ ಬದುಕಬೇಕಾಗುತ್ತದೆ. ಆಕೆ ಸ್ವತಂತ್ರವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಆಗದಿರುವ ಸ್ಥಿತಿಯಿಂದ ನೊಂದು ಬೇರೆ ಕುಟುಂಬದ ಬೇಡಿಕೆ ಇಡಬಹುದು ಎಂಬುದು ಸೃಷ್ಟಿ ರಾಜ್ ವಾದವಾಗಿದೆ.
ಆಕೆ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಇತ್ತೀಚಿಗೆ ಅವಿಭಾಜ್ಯ ಕುಟುಂಬಗಳು ಹೆಚ್ಚಾಗುತ್ತಿರಲು ಇದೊಂದು ಪ್ರಮುಖ ಕಾರಣ ಎನ್ನುತ್ತಿದ್ದಾರೆ. ಜೊತೆಗೆ ಸೃಷ್ಟಿ ರಾಜ್ ಅವರ ಈ ವಿಚಾರಗಳಿಗೆ ಬಹುಪಾಲು ಮಂದಿ ಸಹಮತ ಸೂಚಿಸಿದ್ಧಾರೆ.



Click it and Unblock the Notifications
