Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಪ್ರೀತಿಯಲ್ಲಿರುವವರೆಗೆ ಮಾತ್ರ ಆಗುವ ಸುಂದರ ಅನುಭವಗಳಿವು
ಪ್ರೀತಿ ಎಂದರೇನು? ಎಂದು ಕೇಳಿದರೆ ಒಬ್ಬೊಬ್ಬರು ಒಂದು ರೀತಿಯಲ್ಲಿ ವರ್ಣಿಸುತ್ತಾರೆ, ಕೆಲವರು ಆ ಅನುಭವ ಹೇಳಲು ಸಾಧ್ಯವಿಲ್ಲ, ಅದೊಂದು ಸುಂದರ ಅನುಭವ ಅಂತಾರೆ. ಪ್ರೀತಿ ಎಂಬುವುದು ಒಬ್ಬ ಮನುಷ್ಯನನ್ನು ಸಂಪೂರ್ಣ ಬದಲಾಯಿಸುತ್ತದೆ, ಪ್ರೀತಿಯಲ್ಲಿರುವಾಗ ವ್ಯಕ್ತಿಯಲ್ಲಿ ಆಗುವ ಬದಲಾವಣೆಯೆಂದರೆ:

ಪ್ರೀತಿ ಎಂಬುವುದು ತುಂಬಾ ಸಂತೋಷ ನೀಡುತ್ತೆ
ಪ್ರೀತಿಯ ಅನುಭವ ಮನಸ್ಸಿಗೆ ತುಂಬಾನೇ ಸಂತೋಷ ನೀಡುತ್ತೆ, ಪ್ರೀತಿಗಾಗಿ ನಾವು ಏನು ಮಾಡಲು ಸಿದ್ಧ, ಆ ಪ್ರೀತಿಯೇ ನನ್ನ ಪ್ರಪಂಚ, ಆ ಪ್ರಪಂಚದಲ್ಲಿ ನಾವಿಬ್ಬರು ಮಾತ್ರ ಇರಬೇಕು ಎಂದು ಅನಿಸರಲಾರಂಭಿಸುತ್ತದೆ. ಅವರ ನೆನಪು ಮನಸ್ಸಿಗೆ ಖುಷಿ ಕೊಡುತ್ತದೆ, ಅವರ ಜೊತೆ ಕಳೆಯುವ ಪ್ರತಿಯೊಂದು ಕ್ಷಣ ತುಂಬಾ ವಿಶೇಷ ಅನಿಸಲಾರಂಭಿಸುತ್ತದೆ.
ಪ್ರೀತಿಯೆಂಬುವುದು ನಾನು ತುಂಬಾ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ
ನಾವು ಪ್ರೀತಿಯಲ್ಲಿ ಇರುವಾಗ ನಮ್ಮನ್ನು ತುಂಬಾ ಇಷ್ಟಪಡುವ ವ್ಯಕ್ತಿ ಇದ್ದಾನೆ/ಳೆ ಎಂಬ ಭಾವನೆ ನಮ್ಮಲ್ಲಿ ವಿಶೇಷ ಭಾವನೆ ಮೂಡಿಸುತ್ತದೆ. ನನಗೋಸ್ಕರ ಒಂದು ಜೀವ ತುಂಬಾನೇ ಇಷ್ಟಪಡುತ್ತಿದೆ, ಅವನ/ಅವಳ ಪ್ರಪಂಚದಲ್ಲಿ ನನಗೆ ಮಾತ್ರ ಸ್ಥಾನ ಎಂಬ ಭಾವನೆನಾನು ತುಂಬಾ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ.ನಾವೇ ಅವರ ಬದುಕಿನ ವಿಶೇಷ ವ್ಯಕ್ತಿ, ಅಪ್ಪ-ಅಮ್ಮನ ಇಟ್ಟರೆ ನನ್ನ ಪ್ರೀತಿಸುವ, ನನ್ನ ಮುದ್ದಾಡುವ ಜೀವ ಎಂಬ ಭಾವನೆಯೇ ಅತಿ ಮಧುರ.
ಪ್ರೀತಿ ಎಂಬುವುದು ಭವಿಷ್ಯದ ಬಗ್ಗೆ ಸುಂದರ ಕಲ್ಪನೆಯನ್ನು ಮೂಡಿಸುತ್ತದೆ
ಪ್ರೀತಿಯೆಂಬುವುದು ಮೂಡಿದರೆ ಭವಿಷ್ಯದ ಬಗ್ಗೆ ತುಂಬಾ ಕಲ್ಪನೆ ಮೂಡಿಸುತ್ತದೆ, ನಾವು ಮುಂದೆ ಜೊತೆಯಾಗಿ ಖುಷಿಯಿಂದ ಬಾಳಬೇಕು, ನಮ್ಮದೇ ಆದ ಪುಟ್ಟ ಪ್ರಪಂಚದಲ್ಲಿ ನಾವು ಪ್ರಣಯ ಪಕ್ಷಿಗಳಂತೆ ಖುಷಿಯಿಂದ ಬಾಳಬೇಕು, ನಮ್ಮ ಬದುಕು ಹಾಗಿರಬೇಕು, ಹೀಗಿರಬೇಕು ಎಂದು ಬದುಕಿನ ಬಗ್ಗೆ ಸುಂದರ ಕಲ್ಪನೆಗಳನ್ನು ಮೂಡಿಸುತ್ತದೆ. ಈ ಪ್ರೀತಯೆಂಬುವುದು ನಾವು ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಕೂಡ ಹುಟ್ಟು ಹಾಕುತ್ತೆ.
ಪ್ರೀತಿ ನಮ್ಮಲ್ಲಿನ ಭಯ ದೂರ ಮಾಡುತ್ತೆ
ಪ್ರೀತಿ ನಮ್ಮಲ್ಲಿನ ಭಯ ದೂರ ಮಾಡುತ್ತೆ, ಪ್ರೀತಿಗೋಸ್ಕರ ಏನು ಸಹಿಸಲು ಸಿದ್ಧ ಎಂಬ ಧೈರ್ಯ ಮೂಡುತ್ತೆ, ಇಡೀ ಪ್ರಪಂಚವೇ ನಮ್ಮ ವಿರುದ್ಧ ನಿಂತರೂ ನನ್ನ ಪ್ರೀತಿಸುವ ಜೀವವೊಂದೇ ಸಾಕು ಬದುಕಬಲ್ಲೇ ಎಂಬ ಧೈರ್ಯ ಮೂಡಿಸುತ್ತೆ. ಮುಂದೆ ಏನು ಎಂಬ ಭಯವಿರಲ್ಲ, ಅಲ್ಲಿ ಚೆನ್ನಾಗಿರುತ್ತೇವೆ ಎಂಬ ಭರವಸೆ ಮಾತ್ರ ಕಾಣುತ್ತೆ.
ಪ್ರೀತಿ ಗೊಂದಲವನ್ನು ಮೂಡಿಸುತ್ತದೆ
ಪ್ರೀತಿ ಧೈರ್ಯವನ್ನು ಮಾತ್ರವಲ್ಲ, ಗೊಂದಲವನ್ನೂ ಮೂಡಿಸುತ್ತದೆ. ಈ ಕಾರಣಕ್ಕೆ ಪ್ರೀತಿಯಲ್ಲಿರುವಾಗ ಸರಿ ತಪ್ಪುಗಳು ಗೊತ್ತಾಗಲ್ಲ, ಕೆಲವೊಮ್ಮೆ ಪ್ರೀತಿಗೋಸ್ಕರ ಕೆಲವುತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ನಂತರ ಪಶ್ಚಾತಾಪ ಪಡುವಂತಾಗುವುದು, ಪ್ರೀತಿಗೋಸ್ಕರ ಅಪ್ಪ-ಅಮ್ಮನಿಂದ ದೂರಾಗಬಾರದಿತ್ತು ಅಯ್ಯೋ ಕುರುಡು ಪ್ರೀತಿಯಲ್ಲಿ ಈತನನ್ನು ಅಥವಾ ಈಕೆಯನ್ನು ಸರಿಯಾಗಿ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಗೊಂದಲ ಉಂಟು ಮಾಡುತ್ತೆ. ಹಾಗಾಗಿ ಪ್ರೀತಿ ಬದುಕಿನಲ್ಲಿ ಹಲವು ಗೊಂದಲಗಳನ್ನೂ ಉಂಟು ಮಾಡುತ್ತೆ.
ಪ್ರೀತಿವೆಂಬುವುದು ನಮ್ಮನ್ನು ನಾವು ಹೆಚ್ಚು ಇಷ್ಟಪಡುವಂತೆ ಮಾಡುತ್ತದೆ
ಪ್ರೀತಿಯಲ್ಲಿರುವಾಗ ನಮ್ಮನ್ನೇ ನಾವು ತುಂಬಾ ಇಷ್ಟಪಡಲಾರಂಭಿಸುತ್ತೇವೆ, ನಮ್ಮನ್ನು ಪ್ರೀತಿಸುವ ಜೀವ ಇರುವಾಗ ನಮಗೇ ನಾವು ತುಂಬಾ ಇಷ್ಟವಾಗಲಾರಂಭಿಸುತ್ತದೆ. ನಾವು ತುಂಬಾನೇ ವಿಶೇಷ ವ್ಯಕ್ತಿ ಎಂಬ ಭಾವನೆ ಮೂಡಿಸುತ್ತದೆ.
ಪ್ರೀತಿಯನ್ನು ಪದಗಳಲ್ಲಿ ಬಣ್ಣಿಸುವುದಕ್ಕಿಂತ ಅದರ ಅನುಭವ ಪಡೆದರಷ್ಟೇ ಪ್ರೀತಿಯೆಂದರೇನು ಎಂದು ತಿಳಿಯುವುದು, ನಿಮಗೂ ಈ ಸುಂದರ ಅನುಭವವಾಗಿದೆಯೇ? ನಮ್ಮೊಂದಿಗೆ ನಿಮ್ಮ ಕತೆ ಹಂಚಿಕೊಂಡರೆ ಪ್ರೇಮಿಗಳ ದಿನಕ್ಕೆ ವಿಸೇಷ ಲೇಖನವಾಗಿ ಪ್ರಕಟಿಸಲಾಗುವುದು... ನಿಮ್ಮ ಅಭಿಪ್ರಾಯ ಕಮೆಂಟ್‌ನಲ್ಲಿ ಹಾಕಿ...



Click it and Unblock the Notifications
