Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರು ಮಹಿಳೆಯರ ಜೊತೆ ಶಾಪಿಂಗ್ ಹೋಗಲು ಇಷ್ಟಪಡದಿರಲು ಬರೋಬರಿ 6 ಕಾರಣಗಳಿವೆ ಗೊತ್ತಾ?
ಶಾಪಿಂಗ್... ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಶಾಪಿಂಗ್ ಅಂದರೆ ಬಹಳ ಇಷ್ಟ. ಅದೆಷ್ಟೋ ಜನ ಶಾಪಿಂಗ್ ಅನ್ನು ಹ್ಯಾಬಿಟ್ ಅಥವಾ ಹವ್ಯಾಸವಾಗಿಸಿಕೊಂಡಿದ್ದಾರೆ. ಬಹಳ ಬೇಸರವಾದಾಗಲೂ ಶಾಪಿಂಗ್ ಹೋಗುವುದು, ಬಹಳ ಖುಷಿಯಾದರೂ, ಶಾಪಿಂಗ್ ಹೋಗುವುದು, ತಿಂಗಳ ಸಂಬಳ ಬಂದ ತಕ್ಷಣ ಶಾಪಿಂಗ್ ಹೋಗುವುದು ಸಾಕಷ್ಟು ಹೆಣ್ಣುಮಕ್ಕಳಿಗೆ ಅಭ್ಯಾಸವಿರುತ್ತದೆ. ಆದರೆ ಅದು ಯಾಕೋ ಏನೋ ಗೊತ್ತಿಲ್ಲ ಪುರುಷರು ಮಾತ್ರ ಹುಡುಗಿಯರ ಜೊತೆಗೆ ಶಾಪಿಂಗ್ ಹೋಗುವುದನ್ನ ಅಷ್ಟಾಗಿ ಇಷ್ಟಪಡುವುದಿಲ್ಲ.

ಮಹಿಳೆಯರ ಜೊತೆಗೆ ಶಾಪಿಂಗ್ ಹೋಗಲು ಹುಡುಗರಿಗೆ ಯಾಕೆ ಇಷ್ಟವಾಗುವುದಿಲ್ಲ ಗೊತ್ತಾ?
ಹೌದು, ಸಾಕಷ್ಟು ಪುರುಷರು ಹುಡುಗಿಯರ ಜೊತೆಗೆ ಶಾಪಿಂಗ್ ಹೋಗುವುದನ್ನ ತಪ್ಪಿಸಿಕೊಳ್ಳುವ ಮಾರ್ಗವನ್ನೇ ಹುಡುಕುತ್ತಾರೆ. ಶಾಪಿಂಗ್ ಹೋಗೋಣ ಎಂದಾಗಿಲ್ಲ ನನಗೆ ಕೆಲಸವಿದೆ ನಾಳೆ ಹೋಗೋಣ, ನಾಡಿದ್ದು ಹೋಗೋಣ, ವೀಕ್ ಎಂಡ್ ನಲ್ಲಿ ಹೋಗೋಣ ಅಂತ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಶಾಪಿಂಗ್ ಎನ್ನುವುದು ಬಹಳ ಉತ್ತಮವಾಗಿರುವ ವಿಷಯ. ಹೆಚ್ಚು ಹಣ ಇರುವವರು ಹೆಚ್ಚು ಶಾಪಿಂಗ್ ಮಾಡಬಹುದು ಆದರೆ ಕಡಿಮೆ ಹಣ ಇರುವವರೆಗೂ ಕೂಡ ಶಾಪಿಂಗ್ ಮಾಡುವುದಕ್ಕೆ ಸ್ಥಳದ ಕೊರತೆ ಏನು ಇಲ್ಲ ಕಡಿಮೆ ಬೆಲೆಗೆ ವಸ್ತುಗಳು ಸಿಗುವ ಸ್ಥಳಗಳು ಕೂಡ ಬೇಕಾದಷ್ಟು ಇದೆ. ಆದರೂ ಕೂಡ ಯಾಕೆ ಪುರುಷರು ಮಾತ್ರ ಶಾಪಿಂಗ್ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ ಎನ್ನುವುದಕ್ಕೆ ಪ್ರಮುಖ ಕಾರಣಗಳು ಇವೆ.
ಸಮಯ ವ್ಯರ್ಥ!
ಸಾಕಷ್ಟು ಪುರುಷರು ಶಾಪಿಂಗ್ ಮಾಡುವುದು ಸಮಯ ವ್ಯರ್ಥ ಎಂದೇ ಭಾವಿಸುತ್ತಾರೆ ಯಾಕೆಂದರೆ ಹುಡುಗಿಯರು ಒಂದು ಶಾಪಿಂಗ್ ಗೆ ಹೋದರೆ ದಿನವಿಡೀ ಅದೇ ಸ್ಥಳದಲ್ಲಿಯೇ ಸಮಯ ಕಳೆಯುತ್ತಾರೆ ಬೇಗ ವಸ್ತು ಖರೀದಿ ಮಾಡಿ ಅಂಗಡಿಯಿಂದ ಹೊರಬರುವುದೇ ಇಲ್ಲ ಹಾಗಾಗಿ ಅವರ ಜೊತೆಗೆ ಹುಡುಗರು ಹೋದಾಗ ಕಾದು ಕಾದು ಸುಸ್ತಾಗುತ್ತೆ ಇದೇ ಕಾರಣಕ್ಕೆ ಹುಡುಗರು ಶಾಪಿಂಗ್ ಹೋಗುವುದನ್ನ ಹೆಚ್ಚಾಗಿ ತಪ್ಪಿಸಿಕೊಳ್ಳಲು ಬಯಸುತ್ತಾರೆ.
ಫ್ಯಾಶನೇಟ್ ಆಗಿಲ್ಲದೆ ಇರುವ ಪುರುಷರು!
ಇನ್ನು ಕೆಲವು ಹುಡುಗರಿಗೆ ಹೆಚ್ಚು ಫ್ಯಾಶನ್ ಬಗ್ಗೆ ಅರಿವು ಇರುವುದಿಲ್ಲ ಅದರಲ್ಲೂ ಕೆಲವು ಹುಡುಗರಿಗೆ ಒಂದೆರಡು ಜೊತೆ ಪ್ಯಾಂಟ್ ಶರ್ಟು ಇದ್ದರೆ ಸಾಕು. ಪದೇ ಪದೇ ಶಾಪಿಂಗ್ ಮಾಡುವುದು ಇಷ್ಟವಾಗುವುದಿಲ್ಲ. ಆದರೆ ಹುಡುಗಿಯರಿಗೆ ಹಾಗಲ್ಲ ಎಷ್ಟು ಬಟ್ಟೆ ಇದ್ದರೂ ಸಾಕು ಎನಿಸುವುದೇ ಇಲ್ಲ ಹೀಗಾಗಿ ಆಗಾಗ ಶಾಪಿಂಗ್ ಹೋಗುವ ಅಭ್ಯಾಸವನ್ನು ಹುಡುಗಿಯರು ಇಟ್ಟುಕೊಂಡಿರುತ್ತಾರೆ. ಆದರೆ ಹುಡುಗರಿಗೆ ಈ ರೀತಿ ಪದೇಪದೇ ಶಾಪಿಂಗ್ ಹೋಗುವುದು ಇಷ್ಟವಾಗುವುದಿಲ್ಲ ಅದರಲ್ಲೂ ಹೆಚ್ಚು ವಿಶೇಷವಾದ ಬಟ್ಟೆಗಳನ್ನು ಇಷ್ಟಪಡದೆ ಇರುವ ಹುಡುಗರಿಗೆ ಶಾಪಿಂಗ್ ಒಂದು ರೀತಿಯಲ್ಲಿ ಕಿರಿಕಿರಿ ಅನ್ನಿಸುತ್ತದೆ.
ಒಂದು ವಸ್ತು ಖರೀದಿಗೆ ಹೋಗಿ ಇನ್ನೊಂದು ವಸ್ತುವನ್ನು ನೋಡುವುದು!
ಸಾಮಾನ್ಯವಾಗಿ ಹುಡುಗಿಯರು ಬಟ್ಟೆ ಖರೀದಿಗೆ ಹೋಗಿ ವಾಷಿಂಗ್ ಮಿಷನ್ ಖರೀದಿಸುವ ಬಗ್ಗೆ ಯೋಚನೆ ಮಾಡುವುದನ್ನು ನೀವು ನೋಡಿರಬಹುದು. ಹುಡುಗರಿಗೆ ಒಂದು ವಸ್ತು ಖರೀದಿಗೆ ಹೋದರೆ ಅದೇ ವಸ್ತು ಖರೀದಿ ಮಾಡಿಕೊಂಡು ಬರಬೇಕು ಅದರ ಬದಲು ಇಡೀ ಅಂಗಡಿ ಸುತ್ತಾಡಿ ಎಲ್ಲಾ ವಸ್ತುಗಳನ್ನು ಪರಿಶೀಲನೆ ಮಾಡುವುದು ಇಷ್ಟವಾಗುವುದಿಲ್ಲ. ಆದರೆ ಹುಡುಗಿಯರಿಗೆ ಹಾಗಲ್ಲ ಮನೆಯಿಂದ ಹೊರಡುವಾಗ ಒಂದು ವಸ್ತು ಖರೀದಿ ಮಾಡಬೇಕು ಎಂದು ಹೇಳಿ ಹೊರಟು ಅಂಗಡಿಗೆ ಹೋದಾಗ ಅಲ್ಲಿ ಇರುವ ಎಲ್ಲಾ ವಸ್ತುಗಳನ್ನು ಪರಿಶೀಲನೆ ಮಾಡುತ್ತಾರೆ, ಎಲ್ಲ ವಸ್ತುಗಳ ಬೆಲೆ ಕೇಳುತ್ತ ಹೆಚ್ಚು ಸಮಯ ಕಳೆಯುತ್ತಾರೆ. ಇದೇ ಕಾರಣಕ್ಕೆ ಹುಡುಗರಿಗೆ ಶಾಪಿಂಗ್ ಹೋಗುವುದು ಇಷ್ಟವಾಗುವುದಿಲ್ಲ. ನಾವು ಯಾವ ವಸ್ತುಗಳನ್ನ ಖರೀದಿ ಮಾಡಲು ಬಂದಿದ್ದೆವೋ, ಅದನ್ನು ಮಾತ್ರ ಖರೀದಿ ಮಾಡಿ ಬರಬೇಕು ಅದನ್ನು ಬಿಟ್ಟು ಉಳಿದ ವಸ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎನ್ನುವುದು ಹುಡುಗರ ಅಭಿಪ್ರಾಯವಾಗಿರುತ್ತದೆ.
ಹುಡುಗರ ಜೇಬಿ ಕತ್ತರಿ!
ಒಮ್ಮೆ ಒಂದು ಶಾಪಿಂಗ್ ಮಾಲ್ ಗೆ ಅಥವಾ ಶಾಪಿಂಗ್ ಮಾರ್ಕೆಟ್ ಗೆ ಹುಡುಗಿಯರು ಕಾಲಿಟ್ಟರೆ ಬ್ಯಾಗ್ ತುಂಬಾ ವಸ್ತು ಖರೀದಿ ಮಾಡಿಕೊಂಡು ಬರುತ್ತಾರೆ ಇದರಿಂದ ಎಷ್ಟೋ ಹುಡುಗರ ಜೇಬಿಗೆ ಕತ್ತರಿ ಬೀಳುತ್ತದೆ. ತಿಂಗಳಿಗೆ ಬೇರೆ ಬಜೆಟ್ ಗಾಗಿ ಹಣ ಇಟ್ಟುಕೊಂಡಿದ್ದರೆ ಅದನ್ನು ಶಾಪಿಂಗ್ ಮಾಡಲು ವ್ಯಯಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಹುಡುಗಿಯರಿಗೆ ತಮ್ಮ ಬಜೆಟ್ ಬಗ್ಗೆ ಹೇಳಲು ಸಾಧ್ಯವಾಗದೆ ಹುಡುಗರು ಪರಿತಪಿಸುತ್ತಾರೆ ಹಾಗಾಗಿ ಶಾಪಿಂಗ್ ಇಂದು ಮಾಡೋಣ ನಾಳೆ ಮಾಡೋಣ ಅಂತ ದಿನವನ್ನು ಮುಂದೂಡಲು ಪ್ರಯತ್ನಿಸುತ್ತಾರೆ.
ಮಕ್ಕಳನ್ನು ನೋಡಿಕೊಳ್ಳುವುದು!
ಮದುವೆಯಾದ ಗಂಡಸರಂತು ಎಲ್ಲರಿಗಿಂತ ಹೆಚ್ಚಾಗಿಯೇ ಶಾಪಿಂಗ್ ಮಾಡುವುದನ್ನ ಹೇಟ್ ಮಾಡುತ್ತಾರೆ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ ಹೆಂಡತಿಯರು ಶಾಪಿಂಗ್ ಮಾಡುತ್ತಾ ತಮ್ಮ ಮಕ್ಕಳ ಬಗ್ಗೆ ಗಮನ ಕೊಡುವುದಿಲ್ಲ ಆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪುರುಷರ ಮೇಲೆಯೇ ಇರುತ್ತದೆ. ಕೆಲವು ತುಂಟ ಮಕ್ಕಳಂತೂ ಇಡೀ ಶಾಪಿಂಗ್ ಮಾಲ್ ಓಡಾಡುತ್ತಾರೆ ಇದು ಪುರುಷರಿಗೆ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಆಗಾಗ ಶಾಪಿಂಗ್ ಎಂದು ಮನೆಯಿಂದ ಹೊರಗಡೆ ಹೋಗುವುದನ್ನೇ ಹೆಚ್ಚು ಪುರುಷರು ಅವಾಯ್ಡ್ ಮಾಡುತ್ತಾರೆ ಎನ್ನಬಹುದು.
ಹುಡುಗರು ಹುಡುಗಿಯರ ಜೊತೆಗೆ ಶಾಪಿಂಗ್ ಹೋಗಲು ಇಷ್ಟಪಡದೇ ಇರಲು ಇಷ್ಟೇಲ್ಲಾ ಕಾರಣಗಳೂ ಇವೆ. ಅದೇನೇ ಇರಲಿ, ಪ್ರತಿಬಾರಿ ತನ್ನ ಹುಡುಗಿಯ ಜೊತೆಗೆ ಶಾಪಿಂಗ್ ಹೋಗುವುದನ್ನ ಹುಡುಗರು ಸುಲಭವಾಗಿ ತಪ್ಪಿಸಿಕೊಳ್ಳಲಂತೂ ಸಾಧ್ಯವೇ ಇಲ್ಲ ಏನಂತೀರಿ!



Click it and Unblock the Notifications
