Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಮಗಳ ದಿನ 2022: ಮಗಳು ತುಂಬಾ ಸ್ಪೆಷಲ್ ಏಕೆ? ಇಲ್ಲಿದೆ ಮನಮುಟ್ಟುವ ಕತೆ
ಸೆಪ್ಟೆಂಬರ್ 25ರಂದು ವಿಶ್ವ ಮಗಳ ದಿನ ಆಚರಿಸಲಾಗುವುದು. ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ಮಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆ ಬೇರೆ-ಬೇರೆ ರಾಷ್ಟ್ರಗಳಲ್ಲಿ ಮಾಡುವುದಾದರೂ ಮೊದಲು ಆಚರಣೆಗೆ ಬಂದಿದ್ದು ಭಾರತದಲ್ಲಿ.

ಭಾರತದ ಕೆಲವು ಕುಟುಂಬಗಳಲ್ಲಿ ಹೆಣ್ಣು ಹುಟ್ಟಿದರೆ ಭಾರವೆಂಬಂತೆ ಪರಿಗಣಿಸುತ್ತಾರೆ. ಇದಕ್ಕಾಗಿ ಎಷ್ಟೋ ಭ್ರೂಣ ಹತ್ಯೆಗಳು ನಡೆಯುತ್ತವೆ. ಸರಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ಕೂಡ ಈಗಲೂ ಎಷ್ಟೋ ಹೆಣ್ಣು ಮಕ್ಕಳು ಭ್ರೂಣದಲ್ಲಿಯೇ ಕಮರಿ ಹೋದರೆ ಇನ್ನು ಕೆಲವರು ಹೆಣ್ಣು ಮಕ್ಕಳು ಹುಟ್ಟಿದರೆ ಅದನ್ನು ಎಸೆದು ಹೋಗುವುದು, ಕೊಂದು ಹಾಕುವುದು ಮುಂತಾದ ಕ್ರೂರ ಮನಸ್ಥಿತಿ ಹೊಂದಿದ್ದಾರೆ.
ವಿಶ್ವದ ಬೇರೆ ಕಡೆ ಈ ಹೆಣ್ಣು ಮಕ್ಕಳಿರುವ ಕುಟುಂಬದಲ್ಲಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಮಗಳು ಬೇಕು ಎನ್ನುವುದು ಇದೇ ಕಾರಣಕ್ಕೆ
ವಿಶ್ವದ ಬೇರೆ ಕಡೆ ಈ ಹೆಣ್ಣು ಮಕ್ಕಳಿರುವ ಕುಟುಂಬದಲ್ಲಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಈ ಸಂದರ್ಭವನ್ನು ಅವರಿಗೆ ಧನ್ಯವಾದ ಹೇಳಲು ಉಪಯೋಗಿಸುತ್ತಾರೆ.
ಹೆಣ್ಣು ಮಗುವೊಂದು ಮನೆಯಲ್ಲಿಯದ್ದರೆ ಆ ಮನೆಯ ಕಳೆಯೇ ಬೇರೆ. ಗಂಡು ಮಕ್ಕಳಿಗಿಂತ ಬೇಗ ಆಕೆ ಅಪ್ಪ-ಅಮ್ಮನ ನೋವು ನಲಿವುಗಳಿಗೆ ಸ್ಪಂದಿಸುತ್ತಾಳೆ ಎಂಬುವುದನ್ನು ತಳ್ಳಿ ಹಾಕುವಂತೆಯೇ ಇಲ್ಲ.
ವಿಶ್ವ ಮಗಳ ದಿನದ ವಿಶೇಷವಾಗಿ ನಾನು ಇಲ್ಲಿ ನಿಮ್ಮೊಂದಿಗೆ ಒಂದು ಸುಂದರ ಕತೆಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಕತೆಯನ್ನು ಬರೆದವರು ಯಾರು ಅಂತ ಗೊತ್ತಿಲ್ಲ, ಆದರೆ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಓದಿದ ಕತೆ, ಹೆಣ್ಣು ಮನಸ್ಸಿನ ಮಹತ್ವವನ್ನು ತಿಳಿಸುವ ಕತೆ ಇದಾಗಿದೆ. ಕತೆ ಶುರು ಮಾಡೋಣವೇ?

ಮದುವೆ
ಅವರಿಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುತ್ತಾರೆ. ತಮ್ಮ ಪ್ರೀತಿಯ ವಿಷಯವನ್ನು ಮನೆಯವರ ಮುಂದೆ ಹೇಳಿದಾಗ ಇಬ್ಬರ ಪೋಷಕರು ಖುಷಿಯಿಂದಲೇ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ. ಮದುವೆ ಅದ್ಧೂರಿಯಾಗಿ ನಡೆಯುತ್ತದೆ.

ಮದುವೆ ಬಳಿಕ ಏಕಾಂತದಲ್ಲಿ ಕಳೆಯ ಬಯಸಿದ ದಂಪತಿ
ಮದುವೆಯ ಬಳಿಕ ಸ್ವಲ್ಪ ಸಮಯ ತಾವಿಬ್ಬರೇ ಕಳೆಯಬೇಕು, ಸ್ವಲ್ಪ ದಿನ ಹೊರ ಜಗತ್ತಿನ ಸಂಪರ್ಕವೇ ನಮಗಿರಬಹುದು. ನಾವು ಪ್ರತಿಯೊಂದು ಕ್ಷಣವನ್ನು ತುಂಬಾ ರೊಮ್ಯಾಂಟಿಕ್ ಆಗಿ ರಸಮಯವಾಗಿ ಕಳೆಯಬೇಕೆಂದು ಒಬ್ಬರು ಮೊದಲೇ ನಿರ್ಧರಿಸಿರುತ್ತಾರೆ. ಹಾಗಾಗಿ ಮದುವೆಯ ಬಳಿಕ ಹನಿಮೂನ್‌ಗೆ ಆ ಮನೆಗೆ ತೆರಳುತ್ತಾರೆ.

ಹನಿಮೂನ್ ಸಮಯ
ಈ ಮನೆಯಲ್ಲಿ ನಾವಿಬ್ಬರೇ, ಯಾರೇ ಬರಲಿ ಒಂದು ವಾರ ಬಾಗಿಲೇ ತೆಗೆಯಬಾರದೆಂದು ಇಬ್ಬರು ಮಾತನಾಡಿಕೊಳ್ಳುತ್ತಾರೆ. ಇಬ್ಬರು ತುಂಬಾ ಖುಷಿ-ಖುಷಿಯಾಗಿ ಎರಡು ದಿನ ಕಳೆಯುತ್ತಾರೆ.

ಹುಡುಗನ ತಂದೆಯ ಆಗಮನ
ಮೂರನೇಯ ದಿನ ಹುಡುಗನ ತಂದೆ ಮಕ್ಕಳು ಹೇಗಿದ್ದಾರೆ ನೋಡಿಕೊಂಡು ಬರೋಣ ಅಂತ ಆ ಮನೆಗೆ ಬರುತ್ತಾರೆ. ಕಾಲಿಂಗ್ ಬೆಲ್ ಒತ್ತುತ್ತಾರೆ. ನೋಡಿದರೆ ಹುಡುಗನ ತಂದೆ, ಇಬ್ಬರು ಮೊದಲೇ ತಾವು ನಿರ್ಧರಿಸಿದಂತೆ ಹನಿಮೂನ್ ಕಳೆಯಬೇಕೆಂದು ಬಯಸಿದ್ದರಿಂದ ಬಾಗಿಲು ತೆಗೆಯುವುದಿಲ್ಲ. ತಂದೆ ಅವರು ಬಾಗಿಲು ತೆರೆಯದೇ ಇದ್ದಾಗ ಮಕ್ಕಳು ಹೊರಗಡೆ ಸುತ್ತಾಡೋಕೆ ಹೋಗಿರಬಹುದೆಂದು ಭಾವಿಸಿ ಹಿಂತಿರುಗುತ್ತಾರೆ.

ಪತ್ನಿಯ ತಂದೆಯ ಆಗಮನ
ಮಾರನೇಯ ದಿನ ಮಗಳು ಹೇಗಿದ್ದಾಳೆ ನೋಡಿಕೊಂಡು ಬರೋಣ ಅಂತ ಹುಡುಗಿಯ ತಂದೆ ಬಂದು ಕಾಲಿಂಗ್ ಬೆಲ್ ಒತ್ತುತ್ತಾನೆ. ಇವರು ನೋಡುತ್ತಾರೆ ಹುಡುಗಿಯ ತಂದೆ. ಅವಳಿಗೆ ಬಾಗಿಲ ಬಳಿ ತನ್ನ ಅಪ್ಪನ ನೋಡಿ ಸಂತೋಷವಾಗುತ್ತದೆ. ಅಯ್ಯೋ ಅಪ್ಪನನ್ನು ಬಾಗಿಲಿನಲ್ಲಿಯೇ ನಿಲ್ಲಿಸುತ್ತಿದ್ದೇನೆ ಎಂದು ಮನಸ್ಸಿಗೆ ನೋವುಂಟಾಗುತ್ತದೆ. ಆಕೆಯ ಕಣ್ಣುಗಳು ತುಂಬಿ ಬರಲಾರಂಭಿಸುತ್ತಾನೆ. ಈತನನ್ನು ತಬ್ಬಿ ಹಿಡಿದು ಸಾರಿ ... ನಂಗೆ ಬಾಗಿಲು ತೆರೆಯದೇ ಇರುವುದಕ್ಕೆ ಸಾಧ್ಯನೇ ಇಲ್ಲ ಎಂದು ಓಡಿ ಹೋಗಿ ಬಾಗಿಲು ತೆರೆದು ಅಪ್ಪನನ್ನು ಅಪ್ಪಿಕೊಳ್ಳುತ್ತಾಳೆ. ಆಕೆಯನ್ನು ನೋಡಿ ಪತಿಯೂ ಏನು ಹೇಳುವುದಿಲ್ಲ.

ಇಬ್ಬರ ಗಂಡು ಮಕ್ಕಳ ಜನನ
ಈ ದಂಪತಿ ಜೀವನ ಖುಷಿ-ಖುಷಿಯಾಗಿಯೇ ಸಾಗುತ್ತದೆ. ಮೊದಲ ಮಗು ಹುಟ್ಟುತ್ತದೆ. ಅದು ಗಂಡು ಮಗುವಾಗಿರುತ್ತದೆ, ಅದರ ಹುಟ್ಟು ಹಬ್ಬ ಆಚರಿಸುತ್ತಾರೆ. ನಂತರ ಮತ್ತೊಂದು ಮಗು ಹುಟ್ಟುತ್ತದೆ ಅದು ಕೂಡ ಗಂಡು ಮಗುವಾಗಿರುತ್ತದೆ ಎರಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಪತಿ ನಮಗೊಂದು ಹೆಣ್ಣು ಮಗು ಹುಟ್ಟಲಿ ಎಂದು ಬಯಸುತ್ತಾನೆ.

ಮಗಳ ಜನನ
ಮೂರನೇಯ ಬಾರಿ ಗರ್ಭ ಧರಿಸುತ್ತಾಳೆ. ಅವರು ಬಯಸಿದಂತೆಯೇ ಮಗಳು ಹುಟ್ಟುತ್ತಾಳೆ. ಪತಿಯ ಸಂಭ್ರಮ ಹೇಳ ತೀರದು. ಅವಳನ್ನು ತುಂಬಾ ಮುದ್ದು ಮಾಡುತ್ತಿರುತ್ತಾನೆ. ಅವಳಿಗೆ ವರ್ಷ ತುಂಬುತ್ತದೆ. ಮಗಳ ಹುಟ್ಟು ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಿಸಲು ಪತಿ ಮುಂದಾಗುತ್ತಾನೆ.

ಮಗಳ್ಯಾಕೆ ಸ್ಪೆಷಲ್?
ಆಗ ಇವಳು ಕೇಳುತ್ತಾಳೆ, ಅಲ್ಲಾ ಇಬ್ಬರು ಮಕ್ಕಳು ಹುಟ್ಟಿದಾಗ ಖುಷಿ ಪಟ್ಟಕ್ಕಿಂತ ಅಧಿಕ ನೀವು ಇವಳು ಹುಟ್ಟಿದಾಗ ಸಂಭ್ರಮ ಪಟ್ಟಿರಿ. ಈಗ ಇವಳ ಹುಟ್ಟು ಹಬ್ಬವನ್ನು ಕೂಡ ಅವರಿಬ್ಬರ ಹುಟ್ಟು ಹಬ್ಬಕ್ಕಿಂತ ತುಂಬಾ ಅದ್ಧೂರಿಯಾಗಿ ಆಚರಿಸುತ್ತಿದ್ದೀರಿ. ಇವಳ ಮೇಲ್ಯಾಕೆ ನಿಮಗೆ ವಿಶೇಷ ಅಕ್ಕರೆ?

ಮಗಳೆಂದರೆ ಪ್ರೀತಿಯ ಭರವಸೆ
ಆಗ ಪತಿ ಮುಗುಳ್ನಕ್ಕು ಹೆಂಡತಿಯ ಗಲ್ಲ ಹಿಡಿದು ಹೇಳುತ್ತಾನೆ 'ಮುಂದೊಂದು ದಿನ ನನ್ನ ಮಗಳು ಮದುವೆಯಾಗಿ ಗಂಡನ ಮನೆಗೆ ಹೋದಾಗ ನನಗಾಗಿ ಖಂಡಿತ ಬಾಗಿಲು ತೆಗೆಯುತ್ತಾಳೆ ಎಂಬ ನಂಬಿಕೆ ನನಗಿದೆ'.



Click it and Unblock the Notifications