Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಣ್ಣು-ಗಂಡಿನ ಸಂಬಂಧದಲ್ಲಿ ಹೊಸ ಟ್ರೆಂಡ್ ಸಿಚುಯೇಷನ್‌ಶಿಪ್: ಈ ಸಂಬಂಧದಲ್ಲಿರುವುದರಿಂದ ಪ್ರಯೋಜನವೇನು, ಅಪಾಯವೇನು?
ಈಗ ಸಂಬಂಧಗಳ ಟ್ರೆಂಡ್ ಬದಲಾಗಿದೆ, ಅದಕ್ಕೆ ಹೊಸ ಹೊಸ ಚೆಂದದ ಹೆಸರನ್ನು ಇಟ್ಟು ಕರೆಯುತ್ತಾರೆ, ಅದನ್ನು ಒಪ್ಪಿಕೊಳ್ಳುವುದು ಒಂದಿfಟು ಮಂದಿಯಾದರೆ ಅದನ್ನು ವಿರೋಧಿಸುವವರು ಒಂದಿಷ್ಟು ಮಂದಿ, ಏಕೆಂದರೆ ಈ ಸಂಬಂಧಗಳಲ್ಲಿ ಪ್ಲಸ್ ಎಷ್ಟಿ ಇರುತ್ತದೋ ಅಪಾಯವೂ ಕೂಡ ಅಷ್ಟೇ ಇರುತ್ತದೆ, ಅಂಥ ರಿಲೇಷನ್‌ಶಿಪ್ ಎಂದರೆ ಸಿಚುವೇಷನ್‌ಶಿಪ್.

ಏನಿದು ಸಿಚುವೇಷನ್‌ಶಿಪ್?
ಇದು ಅತ್ತ ಫ್ರೆಂಡ್‌ಶಿಪ್ ಅಲ್ಲ ಒತ್ತ ಪ್ರೀತಿಯೂ ಅಲ್ಲ, ಇವೆರಡರ ನಡುವೆ ಇರುವ ಇರುವ ಗ್ರೇ ಎರಿಯಾ. ಇಬ್ಬರು ತಮ್ಮ ಎಮೋಷನ್ ಶೇರ್ ಮಾಡ್ತಾರೆ, ದೈಹಿಕ ಸಂಪರ್ಕ ಮಾಡ್ತಾರೆ ಆದರೆ ಆ ಸಂಬಂಧದಲ್ಲಿ ಯಾವುದೇ ಬದ್ಧತೆ ಇರಲ್ಲ, ಇದು ಲೀವ್ ಇನ್ ರಿಲೇಷನ್‌ಶಿಪ್ ಅಲ್ಲ, ಆದರೆ ಅದರಂತೆ ಇರುವ ಒಂದು ಸಂಬಂಧ, ಇನ್ನು ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಬದ್ಧತೆಯೂ ಇದರಲ್ಲಿ ಇರಬೇಕೆಂದಿಲ್ಲ.
ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವಾಗ ಇಬ್ಬರ ನಡುವೆ ಬದ್ಧತೆ ಇರುತ್ತದೆ, ನಂತರ ಬೇಡ ಎಂದಾ ಬೇರೆ ನಡೆಯುತ್ತಾರೆ, ಆದರೆ ಸಿಚುಯೇಷನ್‌ಶಿಪ್‌ನಲ್ಲಿ ಅವರ ಹೊರ ಜಗತ್ತಿನ ಸ್ನೇಹಿತರಾ ಅಥವಾ ಪ್ರೇಮಿಗಳಾ ಎಂದು ಗೊಂದಲ ಮೂಡಿಸುವಂತೆ ಇರುತ್ತಾರೆ. ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಂತೆ ಇರ್ತಾರೆ, ಆದರೆ ಹಚ್ಚಿಕೊಂಡಿರುವುದಿಲ್ಲ.
ಈ ಸಿಚುವೇಷನ್ ರಿಲೇಷನ್‌ಶಿಪ್ ಹೇಗಿರುತ್ತದೆ?
ಇವರಿಬ್ಬರ ನಡುವೆ ಸಂವಹನ ಒಂದೇ ರೀತಿ ಇರುವುದಿಲ್ಲ
ಒಮ್ಮೊಮ್ಮೆ ಪ್ರೇಮಿಗಳಂತೆ ಗಂಟೆಗಟ್ಟಲೆ ಮಾತನಾಡುತ್ತಾರೆ, ಇನ್ನು ಕೆಲವೊಮ್ಮೆ ಇಬ್ಬರ ನಡುವೆ ಯಾವುದೇ ಮಾತುಕತೆ ಇರಲ್ಲ, ಆದರೂ ಈ ವಿಷಯದ ಬಗ್ಗೆ ಬೇಸರ ಇರಲ್ಲ, ಸಿಕ್ಕಾಗ ಖುಷಿಯಾಗಿರುವ ಎಂಬ ಪಾಲಿಸಿ ಪಾಲಿಸುತ್ತಾರೆ.
'
ಭವಿಷ್ಯದ ಬಗ್ಗೆ ಯಾವುದೇ ಪ್ಲ್ಯಾನ್ ಇರಲ್ಲ
ಇಬ್ಬರು ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇಬ್ಬರು ಜೊತೆಯಾಗಿ ಹೂಡಿಕೆ ಮಾಡುವುದು ಮಾಡುವುದಿಲ್ಲ, ಯಾವುದೇ ನಿರ್ಧಾರ ಜೊತೆಯಾಗಿ ತೆಗೆದುಕೊಳ್ಳುವುದಿಲ್ಲ.
ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಪರಿಚಯಿಸಲ್ಲ
ಅವರು ಕುಟುಂಬದವರನ್ನು ಭೇಟಿ ಮಾಡಿಸಲು ಅಥವಾ ಸ್ನೇಹಿತರಿಗೆ ಪರಿಚಯಿಸಲು ಇಷ್ಟಪಡಲ್ಲ, ಒಂದು ವೇಳೆ ನಿಮ್ಮ ಸ್ನೇಹಿತರಿಗೆ ಪರಿಚಯಿಸಿದರೂ ನಿಮ್ಮನ್ನು ಫ್ರೆಂಡ್ ಅಂತಾರೆ.
ವೀಕೆಂಡ್ ಅಥವಾ ಫ್ರೀ ಸಮಯದಲ್ಲಿ ಮಾತ್ರ ಇರುವ ಕಲೆಕ್ಷನ್
ಇವರ ಪ್ಲ್ಯಾನ್‌ಗಳು ವೀಕೆಂಡ್‌ಗೆ, ಹಾಲಿಡೇ ಟ್ರಿಪ್‌ಗೆ ಅಷ್ಟೇ ಸೀಮಿತವಾಗಿರುತ್ತದೆ. ಇವರು ಬದುಕಿನ ಸವಾಲುಗಳನ್ನು ಸ್ವೀಕರಿಸುವುದಿಲ್ಲ, ಭವಿಷ್ಯದ ಚಿಂತೆ ಇರಲ್ಲ, ಈ ದಿನ ನಾವಿಬ್ಬರು ಚೆನ್ನಾಗಿದ್ದೇಎ ಅಷ್ಟೇ ಸಾಕು ಎಂಬ ಭಾವನೆ.
ಈ ಸಿಚುಯೇಷನ್‌ಶಿಪ್ ಗುಣಗಳೇನು?
ಎಮೋಷನಲ್ ಫ್ರೀಡಂ ಇರುತ್ತೆ: ಒಬ್ಬರನ್ನೊಬ್ಬರು ಕಂಟ್ರೋಲ್ ಮಾಡಲ್ಲ, ಯಾವುದೇ ದೊಡ್ಡ ನಿರೀಕ್ಷೆಗಳಿರಲ್ಲ, ಹೀಗಾಗಿ ಯಾವುದೇ ಎಮೋಷನಲ್ ಬರ್ಡನ್ ಎಂಬುವುದು ಇರಲ್ಲ.
ಸಂಬಂಧಕ್ಕಿಂತ ಗುರಿ ಮುಖ್ಯ: ತಮ್ಮ ವೃತ್ತಿ ಬದುಕಿನ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ, ಇಬ್ಬರು ಜೊತೆಯಾಗಿ ಕಳೆಯಬೇಕೆಂದು ಅನಿಸಿದಾಗ ಮಾತ್ರ ಭೇಟಿಯಾಗುತ್ತಾರೆ. ಇಲ್ಲಿ ನಾವು ಮದುವೆಯಾಗಬೇಕು, ಮನೆಯವರನ್ನು ಒಪ್ಪಿಸಬೇಕು ಎಂಬ ಯಾವ ನಿರ್ಬಂಧವೂ ಇರಲ್ಲ.
ಅವರು ಬಿಟ್ಟು ಹೋದರೂ ತುಂಬಾ ನೋವೇನೂ ಆಗಲ್ಲ: ಲವ್ ಫೈಲ್ಯೂರ್ ಆದರೆ ತುಂಬಾನೇ ನೋವುಂಟಾಗುವುದು, ಕೆಲವರು ಈ ಕಾರಣಕ್ಕೆ ಕುಗ್ಗಿ ಹೋಗುತ್ತಾರೆ, ಆದರೆ ಈ ಸಂಬಂಧದಲ್ಲಿ ಆ ರೀತಿ ಏನೂ ಇರಲ್ಲ, ಇಬ್ಬರು ಆರಾಮವಾಗಿಯೇ ಗುಡ್ ಬೈ ಹೇಳಿ ತಮ್ಮ ಮುಂದಿನ ಬದುಕಿನತ್ತ ಹೆಜ್ಜೆ ಹಾಕುತ್ತಾರೆ.
ಈ ಸಿಚುವೇಷನ್‌ಶಿಪ್ ಅಪಾಯವೇನು?
ನಾವು ಬಯಸಿದ ಸಂಪೂರ್ಣ ಪ್ರೀತಿ ಇಂಥ ಸಂಬಂಧದಲ್ಲಿ ಸಿಗಲ್ಲ: ನನ್ನನ್ನೇ ತುಂಬಾ ಪ್ರೀತಿಸಬೇಕು, ನನ್ನ ಜೊತೆ ಮುಂದೆ ಜೀವಿಸಬೇಕು ಎಂದೆಲ್ಲಾ ಅನಿಸಿದರೆ ಅತ್ತ ಕಡೆಯಿಂದ ಅದೇ ಪ್ರೀತಿ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ.
ಮುಂದೆ ಇಂಥ ಸಂಬಂಧ ಮುಂದೆ ಅಪಾಯವನ್ನು ತರಬಹುದು
ನಾವು ಇದೆಲ್ಲಾ ಬಿಟ್ಟು ನಮ್ಮದೇ ಆದ ಬದುಕು ಕಟ್ಟಿಕೊಳ್ಳಬೇಕೆಂದು ಬಯಸಿದಾಗ ಇಂಥ ಸಂಬಂಧ ಮುಳುವಾಗಬಹುದು. ಇವರು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆ ಕೂಡ ಇದೆ ಹಾಗಾಗಿ ಇಂಥ ಸಂಬಂಧದಲ್ಲಿ ರಿಸ್ಕ್ ಹೆಚ್ಚು.
ಹಾಗಾಗಿ ಈ ಸಿಚುವೇಷನ್‌ಶಿಪ್ ಅಂತ ಏನು ಕರೆಯುತ್ತಾರೆ ಅದನ್ನು ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ. ಯಾವತ್ತಿಗೂ ಒಂದು ಗಟ್ಟಿ ಸಂಬಂಧದಲ್ಲಿ ಇದ್ದರೆ ಮಾತ್ರ ನಿಜವಾದ ಪ್ರೀತಿ, ಸಬಂಧದ ಪ್ರೀತಿ ಅರಿಯಲು ಸಾಧ್ಯ.



Click it and Unblock the Notifications