Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಚಂಡಮಾರುತವನ್ನು ಪತ್ನಿಗೆ ವೀಡಿಯೋ ಕಾಲ್‌ನಲ್ಲಿ ತೋರಿಸುತ್ತಿರುವ ಕೊಹ್ಲಿ: ಅದೇನು ದೊಡ್ಡ ವಿಷಯನಾ ಎನ್ನುವುದಾದರೆ... ಹೌದು,
ಒಂದೊಳ್ಳೆ ದಾಂಪತ್ಯ ಹೇಗಿರಬೇಕು, ಹೇಗಿರಬಾರದು ಎಂಬುವುದನ್ನು ಕೆಲವರನ್ನು ನೋಡಿ ಕಲಿಯುತ್ತೇವೆ, ಅನೇಕ ಆದರ್ಶ ದಂಪತಿ ನಾವಾಗಿರಬಹುದು ಅಥವಾ ನಮ್ಮ ಸುತ್ತ ಮುತ್ತ ಇರಬಹುದು, ಆದರೆ ನಾವು ಬೀರುವ ಪ್ರಭಾವಗಿಂತ ಸೆಲೆಬ್ರಿಟಿ ಜೋಡಿ ಬೀರುವ ಪ್ರಭಾವ ಇದೆಯೆಲ್ಲಾ ಅದು ಸಂಪೂರ್ಣ ಭಿನ್ನವಾಗಿರುತ್ತದೆ.
ಏಕೆಂದರೆ ನಾವು ಒಂದು ಹತ್ತು ಜನರ ಮೇಲೆ ಪ್ರಭಾವ ಬೀರಿದರೆ ಅವರು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುತ್ತದೆ, ಅಂಥ ಸೆಲೆಬ್ರಿಟಿಗಳಲ್ಲಿ ಅತ್ಯುತ್ತಮ ಜೋಡಿಯೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿ.

ಒಂದೊಳ್ಳೆಯ ಗಂಡ ಹೇಗಿರಬೇಕು ಎಂಬುವುದನ್ನು ಕೊಹ್ಲಿ ಹಲವಾರು ಬಾರಿ ತೋರಿಸಿಕೊಟ್ಟಿದ್ದಾರೆ
ಹೌದು ಕೊಹ್ಲಿ-ಅನುಷ್ಕಾ ಜೋಡಿ ನೋಡಿದಾಗ ಅವಾಹಿತರ ನಾನು ಕೂಡ ಪ್ರೀತಿಯಲ್ಲಿ ಬೀಳಬೇಕು ಎಂದು ಗುನುಗುವಂತಿದೆ, ವಿವಾಹಿತರು ನಾವು ಕೂಡ ಹೀಗಿರಬೇಕು ಎನ್ನುವಂತಿದೆ, ಒಂದೊಳ್ಳೆಯ ಗಂಡನಿಗೆ ಇರುವ ಜವಾಬ್ದಾರಿಯನ್ನು ಕೊಹ್ಲಿ ಯಾವುದೇ ಕಾರಣಕ್ಕೆ ಮಿಸ್ ಮಾಡಲ್ಲ. ಕೊಹ್ಲಿ ಮನೆಯಿಂದ ಹೊರಬಂದ ಮೇಲೆ ಅವರ ಒಂದೊಂದು ಹೆಜ್ಜೆಯನ್ನು ಕ್ಯಾಮರಾ ಕಣ್ಣುಗಳು ಸೂಕ್ಷ್ಮವಾಗಿ ಗಮನಿಸುತ್ತದೆ, ಕೊಹ್ಲಿ ಅಂತಲ್ಲಾ ಎಲ್ಲಾ ಸೆಲೆಬ್ರಿಟಿಗಳನ್ನು ಗಮನಿಸುತ್ತದೆ, ಅದರಲ್ಲಿ ಸಂಬಂಧದ ವಿಷಯದಲ್ಲಿ ಕೊಹ್ಲಿ ತುಂಬಾನೇ ಕ್ಯೂಟ್ ಆಗಿ ಕಾಣಿಸುತ್ತಾರೆ. ಈಗ ಕೂಡ ಅಂಥದ್ದೇ ವೀಡಿಯೋ ವೈರಲ್ ಆಗಿದೆ.
ಚಂಡಮಾರುತವನ್ನು ವೀಡಿಯೋ ಕಾಲ್ ಮೂಲಕ ಪತ್ನಿಗೆ ತೋರಿಸುತ್ತಿರುವ ವೀಡಿಯೋ
ಭಾರತದ ಕ್ರಿಕೆಟ್ ತಂಡ ಐಸಿಸಿ ವರ್ಕ್ಡ್ ಟಿ20 ಗೆದ್ದ ಬಳಿಕ ಚಂಡಮಾರುತದ ಕಾರಣದಿಂದಾಗಿ ಬಾರ್ಬಡೋಸ್‌ನಲ್ಲಿ ಉಳಿದುಕೊಂಡಿದ್ದರು, ಆವಾಗ ಬೆರ್ಲಿ ಚಂಡ ಮಾರುತ ಹೇಗೆ ಬೀಸುತ್ತಿದೆ ಎಂಬುವುದನ್ನು ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿ ತೋರಿಸುತ್ತಿರುವ ದೃಶ್ಯವದು, ಅದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗಾಳಿ ಎಷ್ಟೊಂದು ವೇಗವಾಗಿ ಬೀಸುತ್ತಿದೆ, ಅದಕ್ಕೆ ಬಾಗುತ್ತಿರುವ ತೆಂಗಿನ ಮರಗಳು ಇವುಗಳೆನ್ನೆಲ್ಲಾ ಅನುಷ್ಕಾಗೆ ವೀಡಿಯೋ ಕರೆ ಮಾಡಿ ತೋರಿಸಿದ್ದಾರೆ.
ಅಷ್ಟಕ್ಕೂ ಇದೇನು ದೊಡ್ಡ ವಿಷಯನಾ?
ಹೌದು ಕೊಹ್ಲಿ ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿ ಚಂಡ ಮಾರುತ ತೋರಿದ್ದು ದೊಡ್ಡ ವಿಷಯನಾ ಅಂತ ಕೇಳುವವರೂ ಇದ್ದಾರೆ. ಆದರೆ ಎಷ್ಟೋ ಗಂಡಂದಿರು ಮದುವೆಯ ಬಳಿಕ ತಮ್ಮ ಭಾವನೆಯನ್ನು ಪತ್ನಿ ಜೊತೆ ಹಂಚಿಕೊಳ್ಳುವುದನ್ನೇ ಮರೆತಿರುತ್ತಾರೆ, ಇನ್ನು ಕೆಲವರು ಪ್ರಮುಖ ವಿಷಯಗಳನ್ನು ಕೂಡ ಹೆಂಡತಿ ಜೊತೆ ಹಂಚಿಕೊಳ್ಳುವುದಿಲ್ಲ, ಬ್ಯುಸ್‌ನೆಸ್ ಟ್ರಿಪ್ ಅಂತ ಎಷ್ಟೋ ಜನರು ಹೋಗುತ್ತಾರೆ ಅವರಲ್ಲಿ ಎಷ್ಟು ಜನರು ತನ್ನ ಪತ್ನಿಗೆ ಕರೆ ಮಾಡಿ ಲವರ್ ಬಾಯ್‌ಯಂತೆ ಅಲ್ಲಿ ತಾನು ಕಂಡು ವಸ್ತುಗಳನ್ನು , ಅಲ್ಲಿಯ ವಿಶೇಷತೆಗಳನ್ನು ಹಂಚುತ್ತಾರೆ, ಕೆಲವೇ ಕೆಲವು ಗಂಡಸರು ಮಾತ್ರ... ಹಾಗಾಗಿ ಕೊಹ್ಲಿ ಮಾಡಿರುವುದು ದೊಡ್ಡ ವಿಷಯವೇ ಅಲ್ವಾ?
ಜನ ಕಿಕ್ಕೆರಿದ ಸ್ಟೇಡಿಯಂನಲ್ಲಿ ಕೊಹ್ಲಿ ಕಣ್ಣುಗಳು ಹುಡುಕುವುದು ಅನುಷ್ಕಾಗಾಗಿ
ಹೌದು ಅಂಥ ರೊಮ್ಯಾಂಟಿಕ್ ಸೀನ್‌ಗಳನ್ನು ಮೂವಿಯಲ್ಲಿ ನೋಡುತ್ತೇವೆ, ಆದರೆ ನಿಜ ಜೀವನದಲ್ಲಿಯೂ ಸಾಧ್ಯ ಎಂಬುವುದನ್ನು ಕೊಹ್ಲಿ ತೋರಿಸಿದ್ದಾರೆ. ಅಲ್ಲಿ ಎಷ್ಟೊಂದು ಜನರಿರುತ್ತಾರೆ, ಆದರೆ ಕೊಹ್ಲಿ ಆಟದಿಂದ ಸ್ವಲ್ಪ ಬಿಡುವು ಸಿಕ್ಕರೆ ಪತ್ನಿ ಜೊತೆ ಸನ್ನೆಗಳ ಮೂಲಕ ಮಾತನಾಡುತ್ತಾರೆ, ತನ್ನ ಜಯವನ್ನು ಮೈದಾನದಲ್ಲಿ ಇದ್ದೇ ಹೆಂಡತಿಗೆ ತಲುಪಿಸುತ್ತಾರೆ ಇವೆಲ್ಲಾ ನೋಡಲು ಎಷ್ಟೊಂದು ಚೆನ್ನಾಗಿದೆ ಅಲ್ವಾ?
ತನ್ನವರಿಗಾಗಿ ಕೊಹ್ಲಿ ಬ್ಯುಸಿ ಅಲ್ವೇ ಅಲ್ಲ
ಆ ವೀಡಿಯೋ ವೈರಲ್ ಆದ ಮೇಲೆ ಗಂಡಸರು ನಾನು ಬ್ಯುಸಿ ಎಂದು ಹೇಳಲು ಭಯಪಡುತ್ತಿದ್ದಾರೆ. ಮೈದಾನದಲ್ಲಿಯೇ ವೀಡಿಯೋ ಕಾಲ್ ಮಾಡಿ ಮಗಳಿಗೆ ಮುದ್ದು ಮಾಡುತ್ತಾ ಮಾತನಾಡುತ್ತಿರುವ ವೀಡಿಯೋ ತುಂಬಾನೇ ವೈರಲ್ ಆಗಿತ್ತು. ಆವಾಗ ಎಲ್ಲರೂ ಹೇಳಿದ್ದು ಒಂದೇ ಬ್ಯುಸಿ ಎಂಬುವುದು ನೆಪವಷ್ಟೇ, ಪ್ರೀತಿಯಿದ್ದರೆ ಬ್ಯುಸಿಯಲ್ಲೂ ಸಮಯ ಕಂಡುಕೊಳ್ಳುತ್ತಾರೆ.
ಮುರಿದು ಹೋಗುತ್ತಿರುವ ಎಷ್ಟೋ ಸಂಬಂಧಗಳ ನಡುವೆ ಇಂಥ ಸಂಬಂಧಗಳು ನಿಜವಾಗಲೂ ಯುವ ಜನತೆಗೆ ಉತ್ತಮ ಉದಾಹರಣೆಯಾಗುತ್ತಿದೆ ಅಲ್ವಾ ಅದೇ ಖುಷಿ...



Click it and Unblock the Notifications
