Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
Viral Video: ಕಪ್ ಗೆದ್ದ ಖುಷಿ.. ಪತ್ನಿಗೆ ಅಪ್ಪಿ, ಮುತ್ತಿಟ್ಟ ಕೊಹ್ಲಿ! ಒಂದು ಹಗ್ ಇಷ್ಟೆಲ್ಲಾ ಮ್ಯಾಜಿಕ್ ಮಾಡುತ್ತಾ?
ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಟ್ರೋಫಿಗೆ ಮುತ್ತಿದೆ. ಈ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತು. ಇನ್ನು ಕಳೆದ 18 ವರ್ಷಗಳಿಂದ ವಿರಾಟ್ ಕೊಹ್ಲಿ (Virat Kohli) ಆರ್‌ಸಿಬಿ ತಂಡಕ್ಕೆ ಲಾಯಲ್ ಆಗಿದ್ದಾರೆ. ಕೊನೆಗೂ ಕೊಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ನಿನ್ನೆಯ ಫೈನಲ್ ಪಂದ್ಯದ ಗೆಲುವಿನ ಬಳಿಕ, ವಿರಾಟ್ ಕೊಹ್ಲಿ ಅವರು ಓಡಿಬಂದು ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ತಬ್ಬಿಕೊಂಡರು. ಅನುಷ್ಕಾ ಶರ್ಮಾ ಅವರು ಪತಿಯ ಕಣ್ಣೀರು ಒರೆಸಿದ ಕ್ಷಣಗಳು ಭಾರೀ ವೈರಲ್ ಆಗಿವೆ.
ಹೌದು, ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್‌ಸಿಬಿ (royal challengers bengaluru) ಪ್ರಶಸ್ತಿಯನ್ನು ಜಯಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ (ಜೂನ್ 3) ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ, ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಯಿತು. ಈ ಪಂದ್ಯದ ಗೆಲುವು ಕೊಟ್ಯಂತರ ಅಭಿಮಾನಿಗಳ ಕಣ್ಣಲ್ಲಿ ನೀರು ತಂದಿದೆ. ಅದೇ ರೀತಿ ವಿರಾಟ್ ಕೊಹ್ಲಿಯ ಕಣ್ಣಲ್ಲೂ ನೀರು ಬಂತು. ಆಗ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಅಪ್ಪಿಕೊಳ್ಳಲು ಮೈದಾನದಿಂದ ಸ್ಟ್ಯಾಂಡ್‌ಗೆ ಓಡಿಹೋಗುತ್ತಿರುವುದು ಮತ್ತು ತಮ್ಮ ಪತ್ನಿಯನ್ನು ಅಪ್ಪಿಕೊಳ್ಳುವಾಗ (Virat Kohli hugs Anushka Sharma) ಭಾವುಕರಾಗುತ್ತಿರುವ ವಿಡಿಯೋಗಳು ಎಲ್ಲರ ಮನಸ್ಸು ಮುಟ್ಟಿವೆ. ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಪಕ್ಕದಲ್ಲಿದ್ದು, ಪ್ರಯಾಣದುದ್ದಕ್ಕೂ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.

ನನ್ನ ಹೃದಯ ಬೆಂಗಳೂರಿನಲ್ಲಿದೆ - ಕೊಹ್ಲಿ ಭಾವುಕ
'ನನ್ನ ಹೃದಯ ಬೆಂಗಳೂರಿನಲ್ಲಿದೆ. ನನ್ನ ಆತ್ಮ ಬೆಂಗಳೂರಿನಲ್ಲಿದೆ. ನಾನು ಆರ್‌ಸಿಬಿಗಾಗಿ, ಆರ್‌ಸಿಬಿ ನನಗಾಗಿ..' ಇದು 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿರುವ ಆರ್‌ಸಿಬಿ ಅಭಿಮಾನಿಗಳ ಪಾಲಿನ ಮನೆಮಗ ವಿರಾಟ್ ಕೊಹ್ಲಿ ಅವರ ಭಾವುಕ ನುಡಿಗಳು. ಹೌದು, ಐಪಿಎಲ್ 2025 ಫೈನಲ್ ಪಂದ್ಯದ ಬಳಿಕ ಭಾವುಕರಾಗಿ ಮಾತನಾಡಿರುವ ವಿರಾಟ್ ಕೊಹ್ಲಿ ಅವರು, 'ಆರ್‌ಸಿಬಿ ತಂಡಕ್ಕಾಗಿ ನನ್ನ ಯೌವನವನ್ನೇ ಧಾರೆ ಎರೆದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ಈ ಮಧ್ಯಯೇ ಪತ್ನಿ ಅನುಷ್ಕಾ ಶರ್ಮಾ ಅವರನ್ನು ಅಪ್ಪಿಕೊಂಡು ಅವರ ಹಣೆಗೆ ಮುತ್ತು ನೀಡಿದ ಕ್ಷಣಗಳು ಭಾರೀ ವೈರಲ್ ಆಗಿವೆ. ಈ ಜೋಡಿಯ ಪ್ರೀತಿ ಮತ್ತು ಬಾಂಧವ್ಯವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ನೀವು ನಿಮ್ಮ ಸಂಗಾತಿಯನ್ನು ತಬ್ಬಿಕೊಂಡಾಗ ನಿಜವಾಗಿ ಏನಾಗುತ್ತದೆ? ಈ ಬಗ್ಗೆ ನಿಮಗೆ ತಿಳಿದಿದೆಯೇ? ನಿಮ್ಮ ಸಂಗಾತಿಯನ್ನು ತಬ್ಬಿಕೊಳ್ಳುವುದು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ಮಾತ್ರವಲ್ಲ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಪ್ಪಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಬನ್ನಿ, ಈ ಅಪ್ಪುಗೆಯ ಐದು ಅದ್ಭುತ ಪ್ರಯೋಜನಗಳನ್ನು ತಿಳಿಯೋಣ.
ಅಪ್ಪುಗೆಯಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ
ಬೆಚ್ಚಗಿನ ಅಪ್ಪುಗೆಯು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು ಪ್ರೀತಿಯ ಹಾರ್ಮೋನ್ ಎಂದು ಸಹ ಕರೆಯಲಾಗುತ್ತದೆ. ಇದು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ. ಇದುರಿಂದ ನಿಮಲ್ಲಿ ಶಾಂತ ಮತ್ತು ಸಂತೋಷದ ಭಾವನೆ ನೀಡುತ್ತದೆ. ಎಂತಹದ್ದೇ ಕಠಿಣ ಸಮಯವನ್ನು ಎದುರಿಸುತ್ತಿರಲಿ, ಈ ಬಿಗಿಯಾದ ಅಪ್ಪುಗೆಯು ಎಲ್ಲವನ್ನೂ ಮರೆಯಲು ಸಹಾಯ ಮಾಡುತ್ತದೆ.
ಸಂಗಾತಿಗಳ ನಡುವಿನ ಭಾವನಾತ್ಮಕ ಬಂಧ ಬಲಪಡಿಸುತ್ತದೆ
ಅಪ್ಪುಗೆಯು ಸಂಗಾತಿಗಳ ನಡುವಿನ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. ಇದು ನಂಬಿಕೆ ಮತ್ತು ಸುರಕ್ಷತೆಯ ಭಾವವನ್ನು ಬೆಳೆಸುತ್ತದೆ. ಇದು ಪರಸ್ಪರ ಇರುವ ಭಾವನೆಯನ್ನು ನೀಡುತ್ತದೆ. ಸಂವಹನ ಇಲ್ಲದಿದ್ದರೂ ಸಹ, ಈ ಅಪ್ಪುಗೆಯು ಸಾವಿರ ಪದಗಳ ಅರ್ಥವನ್ನು ತಿಳಿಸುತ್ತದೆ.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಬಿಗಿಯಾದ ಅಪ್ಪುಗೆಯು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕಲೆವು ಅಧ್ಯಯನಗಳಲ್ಲಿಯೂ ಬಹಿರಂಗವಾಗಿದೆ. ಆಕ್ಸಿಟೋಸಿನ್ ಬಿಡುಗಡೆಯು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಹಾಗೆಯೇ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನೀವು ಆಗಾಗ್ಗೆ ಅಪ್ಪಿಕೊಳ್ಳುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಳವಾಗಬಹುದು. ಒಂದು ಅಧ್ಯಯನದ ಪ್ರಕಾರ, ಆಗಾಗ್ಗೆ ಅಪ್ಪಿಕೊಳ್ಳುವ ಜನರು ಕಡಿಮೆ ಒತ್ತಡದಲ್ಲಿರುತ್ತಾರೆ. ಇದು ಅವರ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ದೀರ್ಘಕಾಲದ ನೋವು ನಿವಾರಣೆ
ನೀವು ದೀರ್ಘಕಾಲದ ನೋವಿನಿಂದ ಬಳಲುತ್ತಿದ್ದರೆ, ಈ ಅಪ್ಪುಗೆಯು ಸ್ವಲ್ಪ ಪರಿಹಾರವನ್ನು ನೀಡುತ್ತದೆ. ಇದು ಕೆಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಆಕ್ಸಿಟೋಸಿನ್ ನೈಸರ್ಗಿಕ ನೋವು ನಿವಾರಕವಾಗಿ ಕೆಲಸ ನಿರ್ವಹಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ.



Click it and Unblock the Notifications