Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವ್ಯಾಲೆಂಟೈನ್ಸ್ ವೀಕ್ ರೋಸ್ ಡೇ: ಈ ದಿನ ಎಷ್ಟು ರೋಸ್ ಕೊಟ್ಟರೆ ಏನರ್ಥ? 12 ರೋಸ್ ನೀಡುವುದರ ಒಳಾರ್ಥವೇನು?
ವ್ಯಾಲೆಂಟೈನ್ಸ್ ವೀಕ್ ಫೆಬ್ರವರಿ 7ರಿಂದ ಶುರು... ಫೆಬ್ರವರಿ 7ರಿಂದ-14ರವರೆಗೆ ವ್ಯಾಲೆಂಟೈನ್ಸ್ ವೀಕ್ ಎಂದು ಆಚರಿಸಲಾಗುವುದು.
ಪ್ರೇಮಿಗಳಿಗೆ ಈ ವಾರವನ್ನು ಮತ್ತಷ್ಟು ಸ್ಪೆಷಲ್ ಆಗಿಸುವುದು ಹೇಗೆ?ಎಂಬ ಚಿಂತೆಯಾದರೆ, ತಮ್ಮ ಪ್ರೀತಿಯನ್ನು ಇನ್ನೂ ಹೇಳಿಕೊಳ್ಳದವರಿಗೆ ಈ ವಾರ ಏನಾದರು ಆಗಲಿ ನಮ್ಮ ಪ್ರೀತಿಯನ್ನು ಹೇಳಿಕೊಳ್ಳಲೇಬೇಕೆಂಬ ಕಾತರ ಒಟ್ಟಿನಲ್ಲಿ ಪ್ರೇಮ ಜ್ವರದ ವಾರ ಈ ಪ್ರೇಮಿಗಳ ವಾರ, ಅದು ಶುರುವಾಗುವುದು ರೋಸ್ ಡೇಯಿಂದ.
ನಿಮ್ಮನ್ನು ಪ್ರೀತಿಸುತ್ತಿರುವವರೆಗೆ ರೋಸ್ ನೀಡಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ದಿನ. ಆದರೆ ನೀವು ಎಷ್ಟು ರೋಸ್ ನೀಡುತ್ತೀರಿ ಎಂಬುವುದು ಕೂಡ ಮುಖ್ಯವಾಗಿದೆ, ಎಷ್ಟು ರೋಸ್‌ಗಳನ್ನು ನೀಡಿದರೆ ಏನರ್ಥ ಎಂದು ನಿಮಗೆ ಗೊತ್ತಿದೆಯೇ, ಇಲ್ಲಾ ಅಂದ್ರೆ ಇಲ್ಲಿದೆ ಮಾಹಿತಿ:

1 ರೋಸ್: ಒಂದು ರೋಸ್ ಸರಳವಾಗಿ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವಾಗಿದ, ಅಲ್ಲದೆ ಇದು ಲವ್ ಎಟ್ ಫಸ್ಟ್ ಸೈಟ್ , ನಿಮಗೆ ಅವರು ಒಂದೇ ನೋಟದಲ್ಲಿ ಇಷ್ಟವಾದಾಗ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನ ಅದಾಗಿದೆ.
3 ರೋಸ್: ಮೂರು ಗುಲಾಬಿಯನ್ನು ಇಟ್ಟು ಬೊಕ್ಕೆ ಮಾಡಿ ಪ್ರೀತಿಯನ್ನು ವ್ಯಕ್ತ ಪಡಿಸಲಾಗುವುದು. ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದೆ ಎಂಬುವುದನ್ನು ಸೂಚಿಸುತ್ತದೆ.
4 ರೋಸ್: ಈ ನಾಲ್ಕು ರೋಸ್ ಪ್ರಕೃತಿಯನ್ನು ಸೂಚಿಸುತ್ತದೆ. ಇದು ವರ್ಷದ ನಾಲ್ಕು ಕಾಲವನ್ನು ಸೂಚಿಸುತ್ತದೆ. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ,ವಸಂತ ಕಾಲ ಈ ಎಲ್ಲಾ ಸಮಯದಲ್ಲಿಯೂ ನಾನು ನಿನ್ನ ಜೊತೆಗಿರುವೆ ಎಂಬ ಸಂದೇಶವನ್ನು ಸಾರುತ್ತದೆ.
5 ರೋಸ್: ನಿಮ್ಮ ಪ್ರೀತಿ ಹಾಗೂ ಮೆಚ್ಚುಗೆಯನ್ನು ಈ 5 ರೋಸ್‌ಗಳ ಬೊಕ್ಕೆಯನ್ನು ನೀಡುವ ಮೂಲಕ ವ್ಯಕ್ತಪಡಿಸಲಾಗುವುದು. ನಿಮ್ಮ ಬದುಕಿನಲ್ಲಿ ಎಂಥದ್ದೇ ಸಂದರ್ಭ ಬರಲಿ ಪ್ರೀತಿ ಜೊತೆ ಸದಾ ನಿಲ್ಲುತ್ತೇನೆ ಎಂಬುವುದರ ಸೂಚನೆಯಾಗಿದೆ.
10 ರೋಸ್: ನಿಮ್ಮ ಪ್ರೀತಿಯನ್ನು ತುಂಬಾ ಹಚ್ಚಿಕೊಂಡಿದ್ದೀರಿ, ಅಲ್ಲದೆ ನಿಮ್ಮ ಸಂಗಾತಿ ನಿಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ,ಅದರ ಬಗ್ಗೆ ನಿಮಗೆ ಮೆಚ್ಚುಗೆಯಿದೆ, ಅಭಿಮಾನವಿದೆ ಎಂಬುವುದನ್ನು ಈ 10 ರೋಸ್ ಸೂಚಿಸುತ್ತದೆ.
12 ರೋಸ್: ನಿಮ್ಮ ಪ್ರೀತಿಯನ್ನು ತುಂಬಾನೇ ರೊಮ್ಯಾಂಟಿಕ್ ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನ ಇದಾಗಿದ. ಈ 12 ರೋಸ್ ನೀಡುವ ಮೂಲಕ ನೀವು ಅವರನ್ನು ತುಂಬಾ ಪ್ರೀತಿಸುತ್ತೀರಿ, ಅವರು ನಿಮ್ಮ ಬದುಕಿನಲ್ಲಿ ಸಿಕ್ಕಿರುವುದು ನಿಮ್ಮ ಅದೃಷ್ಟ ಎಂಬುವುದನ್ನು ಭಾವಿಸಿದ್ದೀರಿ ಎಂಬುವುದನ್ನು ಈ 12 ರೋಸ್‌ಗಳ ಗುಚ್ಛ ಸೂಚಿಸುತ್ತದೆ.
100 ರೋಸ್: ನಿಮ್ಮ ಪ್ರೀತಿಯನ್ನು ಎಷ್ಟು ವ್ಯಕ್ತಪಡಿಸಿದರೂ ಸಾಲದು, ನೀವು ನಿಮಗಿಂತ ಅವರನ್ನು ತುಂಬಾ ಪ್ರೀತಿಸುತ್ತೀರಿ, ಏನೇ ಸವಾಲುಗಳು ಬರಲಿ ಸದಾ ನಿನ್ನ ಜೊತೆ ನಿಲ್ಲುತ್ತೇನೆ ಎಂಬುವುದನ್ನು ಸೂಚಿಸುತ್ತದೆ.
ಇವೆಲ್ಲಾ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನಗಳಷ್ಟೇ, ಒಂದು ರೋಸ್ ಕೊಟ್ಟರೆ ಕಡಿಮೆ, 100 ರೋಸ್ ಕೊಟ್ಟರೆ ತುಂಬಾ ಪ್ರೀತಿ ಅಂತಲ್ಲ, ಪ್ರೀತಿ ಎಂಬುವುದು ಸುಂದರವಾದ ಭಾವನೆ, ನೀವು ಎಷ್ಟು ಪ್ರೀತಿಸುತ್ತೀರಿ ಎಂಬುವುದು ನಿಮಗೆ ಗೊತ್ತಿದ್ದರೆ ಸಾಕು, ಅಲ್ಲದೆ ನಿಮ್ಮ ಪ್ರೀತಿಯನ್ನು ಬೇರೆಯವರಿಗಾಗಿ ಫ್ಯಾಂಟಸಿ ಮಾಡುವ ಅಗ್ಯತವೂ ಇಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ನಿಮ್ಮ ನಡುವೆ ಬಾಂಧವ್ಯ ಚೆನ್ನಾಗಿರಲಿದೆ.
ಈ ರೋಸ್ ಡೇ ಎಂದರೆ ಅದು ಪ್ರೇಮಿಗಳಿಗೆ ಮಾತ್ರವಲ್ಲ, ಮದುವೆಯಾದವರು ತಮ್ಮ ಸಂಗಾತಿಗೆ ರೋಸ್ ಅನ್ನು ರೊಮ್ಯಾಂಟಿಕ್ ಆಗಿ ನೀಡಿ ಅವರಿಗೂ ಖುಷಿಯಾಗುವುದು. ರೋಸ್‌ನಂತೆ ನಿಮ್ಮ ಪ್ರೀತಿ ಸುಂದರವಾಗಿರಲಿ, ಬದುಕಿನಲ್ಲಿ ಏನೇ ಸವಾಲುಗಳು ಬಂದರೂ ನಿಮ್ಮ ಪ್ರೀತಿಯೇ ಗೆಲ್ಲುವಂತಾಗಲಿ.



Click it and Unblock the Notifications
