Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Valentines Day 2025: ಕಿಸ್ ಡೇ ಆಚರಿಸೋದ್ಯಾಕೆ? ಚುಂಬನಕ್ಕಿರುವ ಶಕ್ತಿ ಏನು ಗೊತ್ತಾ?
ಪ್ರೇಮಿಗಳ ದಿನದ ಆಚರಣೆಗೂ ಮುನ್ನ ನಮ್ಮ ನಡುವೆ ಪ್ರೇಮಿಗಳು ಇಡೀ ವಾರ ಒಂದೊಂದು ಆಚರಣೆ ಮಾಡುತ್ತಾರೆ. ಅದರಲ್ಲೂ ಪ್ರೇಮಿಗಳ ದಿನದ ಹಿಂದಿನ ದಿನ ಕಿಸ್ ಡೇ ಆಚರಿಸಲಾಗುತ್ತದೆ. ಈ ಕಿಸ್ ಡೇಯನ್ನು ಫೆಬ್ರವರಿ 13ರಂದು ಆಚರಿಸಲಾಗುತ್ತದೆ. ಸಂಬಂಧಗಳು ಗಟ್ಟಿಯಾಗಲು ಕಿಸ್ ಡೇ ಕೂಡ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಮುತ್ತು ಅನ್ಯೋನ್ಯತೆ, ಮಾಧುರ್ಯ, ಪ್ರೀತಿ, ವಾತ್ಸಲ್ಯದ ಸಂಕೇತವಾಗಿದೆ. ಸಂಬಂಧಗಳಲ್ಲಿ ಗಟ್ಟಿತನ, ಹೃದಯಗಳ ಬೆಸೆಯುವ ಒಂದು ಸಾಧನ ಅಂದರೂ ತಪ್ಪಾಗುವುದಿಲ್ಲ. ಕಿಸ್ ಅನ್ನು ಸಾಮಾನ್ಯವಾಗಿ ಗಡಿಗಳು, ಸಂಸ್ಕೃತಿಗಳು ಮತ್ತು ಯುಗಗಳನ್ನು ಮೀರಿದ ಸಾರ್ವತ್ರಿಕ ಭಾಷೆಯಾಗಿ ನೋಡಲಾಗುತ್ತದೆ. ಯಾವ ಮಾತುಕತೆ ಇಲ್ಲದೆ, ಭಾವನೆಗಳ ವ್ಯಕ್ತಪಡಿಸುವುದು ಈ ಕಿಸ್‌ನಿಂದಾಗಿಯೇ.

ಹಾಗಾದ್ರರೆ ಈ ಕಿಸ್ ಡೇ ಇತಿಹಾಸ ನಿಮಗೆ ಗೊತ್ತಾ ಯಾವಾಗ ಆರಂಭವಾಗಿತ್ತು ಎಂಬುದು ನಿಮಗೆ ತಿಳಿದಿದ್ಯಾ? ಕಿಡ್ ಡೇ ಯಾವಾಗ? ಯಾರಿಂದ ಹುಟ್ಟಿಕೊಂಡಿತ್ತು ಎನ್ನುವುದಕ್ಕೆ ಎಲ್ಲಿಯೂ ದಾಖಲೆಗಳಿಲ್ಲ. ಆದ್ರೆ 20ನೇ ಶತಮಾನದ ಅಂತ್ಯದಲ್ಲಿ ಬಹಳ ಜನಪ್ರಿಯವಾಗಿತ್ತು. ತಮ್ಮ ಪ್ರೀತಿ ವ್ಯಕ್ತಪಡಿಸಲು, ಜೊತೆಯಾಗಿ ನಿಲ್ಲುವ ಪ್ರಾಮಿಸ್ ಮಾಡುವ ಒಂದು ಭಾಗವಾಗಿ ಈಗ ಆಚರಣೆಯಲ್ಲಿದೆ.
ಮುತ್ತು ಭಾವನೆಯನ್ನು ವ್ಯಕ್ತಪಡಿಸಲಾಗದೆ ಇರುವ ಸ್ಥಿತಿಯಲ್ಲೂ ನಿಮ್ಮ ಮೂಲಕ ಮತ್ತೊಬ್ಬರಿಗೆ ಸಿಗುವಂತಹ ಭಾವನೆಯಾಗಿದೆ. ಚುಂಬನ ಎಂಬುದು ಎಲ್ಲರಲ್ಲೂ ಒಮ್ಮೆಯಾದರು ಕಾಡುವ ಮಧುರವಾದ ಭಾನೆಯಾಗಿರುತ್ತೆ. ಪರಿಸ್ಪರ ಚುಂಬನವು ವ್ಯಕ್ತಿಯ ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದಂತೆ.
ಇತಿಹಾಸದಲ್ಲಿ ಅತ್ಯಂತ ದೀರ್ಘ ಚುಂಬನ ಕುರಿತು ನಿಮಗೆ ಗೊತ್ತಾ?
ಕಿಸ್ ಎಂಬುದು ಕೆಲವು ಸೆಕೆಂಡ್‌ನಿಂದ ಗಂಟೆಗಳ ಕಾಲ ನಡೆಯುವ ಸಿಹಿಯಾದ ಅನುಭವ. ಇನ್ನು ಸುದೀರ್ಘವಾಗಿ ಚುಂಬಿಸಿ ದಾಖಲೆಗಳ ಬರೆದವರಿಗೇನು ಕಡಿಮೆ ಇಲ್ಲ. ಇತಿಹಾಸದಲ್ಲಿ ಅತಿ ದೀರ್ಘವಾಗಿ ಅಂದರೆ ಬರೋಬ್ಬರಿ 58 ಗಂಟೆ 35 ನಿಮಿಷ ಮತ್ತು 58 ಸೆಕೆಂಡ್‌ಗಳ ಕಾಲ ಚುಂಬಿಸಿ ದಾಖಲೆ ಬರೆದವರಿದ್ದಾರೆ. ಚುಂಬನವು ಪ್ರೀತಿ, ಗೌರವ, ಬದ್ಧತೆಯು ಸಂಕೇತ ಎಂದು ಪರಿಗಣಿಸಲಾಗಿದೆ. ಚುಂಬನವು ಕ್ಯಾಲೋರಿಗಳನ್ನು ಕರಗಿಸುವಷ್ಟು ಶಕ್ತಿ ಹೊಂದಿದೆ ಎಂಬುದನ್ನು ನೀವು ಕೂಡ ತಿಳಿದಿರಬಹುದು.
ಚುಂಬನದ ಆರೋಗ್ಯಕರ ಲಾಭಗಳೇನು ಗೊತ್ತಾ?
ಒಂದು ಚುಂಬನವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಚುಂಬನವು ಆಕ್ಸಿಟೋಸಿನ್ ಮತ್ತು ಡೋಪಮೈನ್ ಹಾರ್ಮೋನ್ ಬಿಡುಗಡೆಗೆ ಪ್ರಚೋದನೆ ನೀಡುತ್ತದೆ. ಇದು ಒತ್ತಡ, ಆಯಾಸ ಕಡಿಮೆ ಮಾಡಲು ಸಹಕಾರಿಯಾಗಿದೆ, ಹಾಗೆ ವಿಶ್ರಾಂತಿಯ ಭಾವನೆ ಹೆಚ್ಚಾಗುವಂತೆ ಮಾಡುತ್ತದೆ. ಮನದಲ್ಲಿನ ಒತ್ತಡ, ನೋವು ಮರೆಸಿ ಕ್ಷಣಕಾಲ ಶಾಂತವಾಗಿ ಯೋಚಿಸುವಂತೆ ಮಾಡುತ್ತದೆ.
ರೋಗನಿರೋಧಕ ವ್ಯವಸ್ಥೆಯನ್ನು ಚುಂಬನವು ಬಲಪಡಿಸುತ್ತದೆ. ನಿಮ್ಮಲ್ಲಿ ಹೊಸ ಬಗೆಯ ಚೈತನ್ಯ ತರಲು ಹಾಗೆ ಹಾರ್ಮೋನ್ ಪ್ರಚೋದನೆಯ ಕಾರಣದಿಂದಾಗಿ ಎಲ್ಲಾ ಕೋಶಗಳು ಮತ್ತೆ ಕಾರ್ಯ ಪ್ರವೃತ್ತಿಯಾಗಲು ಇದು ಸಹಕಾರಿಯಾಗಿದೆ.
ಹಾಗೆ ಚುಂಬನವು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಉತ್ಸಾಹಭರಿತ ಚುಂಬನವು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸಲಿದೆ, ಹಾಗೆ ರಕ್ತದೊತ್ತಡ ಕಡಿಮೆ ಮಾಡುವ ಶಕ್ತಿ ಹೊಂದಿದೆ.
ಕ್ಯಾಲೋರಿ ಕರಗಿಸಲು ಸಹಕಾರಿಯಾಗಿದೆ. ಒಂದು ಚುಂಬನದಿಂದ ನೀವು ಇಡೀ ದಿನ ವ್ಯಾಯಾಮ ಮಾಡಿ ಕರಗಿಸಿದಷ್ಟು ಕ್ಯಾಲೋರಿಗಳ ಕರಗಿಸಬಹುದಂತೆ, ದೀರ್ಘ ಚುಂಬನದಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.



Click it and Unblock the Notifications











