Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
Valentines Day 2025: ಹಗ್ ಡೇ ಆಚರಿಸೋದ್ಯಾಕೆ? ಒಂದೇ ಒಂದು ಅಪ್ಪುಗೆಗೆ ಎಷ್ಟು ಶಕ್ತಿ ಇದೆ ಗೊತ್ತಾ?
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಫೆಬ್ರವರಿ 12ರಂದು ಹಗ್ ಡೇ ಅಂದರೆ ಅಪ್ಪುಗೆಯ ದಿನವೆಂದು ಆಚರಿಸಲಾಗುವುದು. ಪ್ರೇಮಿಗಳ ದಿನಕ್ಕೂ 2 ದಿನ ಮೊದಲು ಈ ಹಗ್ ಡೇ ಬರುತ್ತದೆ. ಈ ದಿನ ಪರಸ್ಪರ ಪ್ರೀತಿಯ ಅಪ್ಪುಗೆ ನೋಡಬಹುದು. ಅಪ್ಪುಗೆ ಬರಿ ದೈಹಿಕವಾಗಿ ಪ್ರಾಮುಖ್ಯತೆ ಅಷ್ಟೇ ಅಲ್ಲ ಮಾನಸಿಕವಾಗಿಯೂ ಅಪ್ಪುಗೆ ಅನ್ನೋದು ಬಹಳ ಮುಖ್ಯ.
ಪ್ರೀತಿ, ಸ್ನೇಹದ ಸಂಕೇತವಾಗಿಯೂ ಅಪ್ಪುಗೆ ಸ್ಥಾನ ಪಡೆದಿದೆ. ಒಂದು ಪ್ರೀತಿಯ ಅಪ್ಪುಗೆ ಹತ್ತಾರು ಸಮಸ್ಯೆಗಳ ದೂರ ಮಾಡಬಹುದು. ನಿಮ್ಮ ನೋವು ಕಡಿಮೆ ಮಾಡಬಹುದು ಅಷ್ಟೊಂದು ಶಕ್ತಿ ಇದಕ್ಕಿದೆ. ಪ್ರೀತಿಯ ಒಂದು ಅಪ್ಪು ನಾನು ನಿನ್ನೊಂದಿಗೆ ಇರುವೆ ಎಂಬ ಧೈರ್ಯ ನೀಡುತ್ತದೆ. ನೊಂದವರಿಗೆ ಸಾಂತ್ವನ ಹೇಳುತ್ತೆ. ಅಪ್ಪುಗೆಯಲ್ಲಿ ಬಹಳಷ್ಟು ಶಕ್ತಿ ಇದೆ ಎಂದು ನಂಬಲಾಗಿದೆ.

ಹಗ್ ಅನ್ನೋದು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಪ್ರೀತಿ ಪಾತ್ರರಲ್ಲಿ ಮತ್ತಷ್ಟು ನಂಬಿಕೆ ಹುಟ್ಟಿಸುತ್ತದೆ. ಸೋತವರಗೆ, ಗೆದ್ದವರಿಗೆ ಈ ಅಪ್ಪುಗೆ ಮತ್ತೊಮ್ಮೆ ಬದುಕುವ ಮತ್ತೊಮ್ಮೆ ಸಾಧಿಸುವ ಚಲ ನೀಡಲಿದೆ.
ಅಪ್ಪುಗೆಯ ಹಿಂದಿದೆ ಬಹುದೊಡ್ಡ ಶಕ್ತಿ
ಅಪ್ಪುಗೆ ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಬಹಳ ಒಳ್ಳೆಯ ಅಭ್ಯಾಸವಂತೆ. ಯಾರಾದರು ಭಯ ಪಡುತ್ತಿದ್ದರೆ ಅಪ್ಪುಗೆಯಿಂದ ಅವರ ಹೃದಯ ಬಡಿತ ಕಡಿಮೆ ಮಾಡುವ ಶಕ್ತಿ ಹೊಂದಿದೆ. ನಮ್ಮ ದೇಹದಲ್ಲಿ ಒತ್ತಡದ ಹಾರ್ಮೋನ್, ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಪ್ಪುಗೆಯು ನಮ್ಮನ್ನು ಶಾಂತ, ಸುರಕ್ಷಿತ ಮತ್ತು ನಿರಾಳ ಭಾವನೆಯನ್ನು ನೀಡುತ್ತದೆ. ಮೆದುಳಿನ ರಾಸಾಯನಿಕ ಕ್ರಿಯೆಯನ್ನು ಇದು ನಿಯಂತ್ರಿಸುವ ಶಕ್ತಿ ಹೊಂದಿದೆ. ಯಾರಾದರು ಅತಿಯಾದ ಸಿಟ್ಟಿನಿಂದ ನಿಮ್ಮ ಮೇಲೆ ಕೂಗಾಡುತ್ತಿದ್ದರೆ ಅಥವಾ ರೇಗಾಡುತ್ತಿದ್ದರೆ ಅವರನ್ನು ಅಪ್ಪಿಕೊಳ್ಳುವುದು ಶಾಂತತೆ ಕಾಪಾಡುವ ಒಂದು ಮಾರ್ಗವಾಗಿದೆ.
ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನ ಸಂಶೋಧಕರು ಸ್ಪರ್ಶದ ಕುರಿತು 200ಕ್ಕೂ ಹೆಚ್ಚು ಅಧ್ಯಯನಗಳ ನಡೆಸಿದ್ದು, ಅಪ್ಪುಗೆ ಎಂಬುದು ನೋವು, ಆತಂಕ, ಖಿನ್ನತೆ ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡಿದ್ದಾರೆ. ಈ ಅಧ್ಯಯನಕ್ಕಾಗಿ ಅವರು 10 ಸಾವಿರ ಮಂದಿಯನ್ನು ಒಳಗೊಂಡ ಒಂದು ಗುಂಪನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಗುಂಪಿನಲ್ಲಿ ಅಪ್ಪಿಕೊಳ್ಳುವುದರಿಂದ ಅವರ ಮನಸ್ಸಿನಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ 2024 ಏಪ್ರಿಲ್‌ನಲ್ಲಿ ಈ ಅಧ್ಯಯನದ ವರದಿಯನ್ನು ಕೂಡ ಬಿಡುಗಡೆ ಮಾಡಿದ್ದರು.
ವಿಶ್ವ ಅಪ್ಪುಗೆಯ ದಿನ ಆಚರಣೆ ಬಗ್ಗೆ ಗೊತ್ತಾ?
ಹಗ್ ಹಾಲಿಡೆ ಎಂದು ಪ್ರತಿ ವರ್ಷ ಜೂನ್ 29ರಂದು ಆಚರಿಸಲಾಗುತ್ತೆ. ಈ ದಿನದಂದು ಅಪ್ಪುಗೆಯ ಕುರಿತು ಜಾಗೃತಿ ಮೂಡಿಸಲಾಗುತ್ತೆ ಅಂದ್ರೆ ನೀವು ನಂಬುತ್ತೀರಾ? ಹೌದು ಈ ದಿನದಂದು ಅಪ್ಪುಗೆಯಿಂದ ಆಗುವಂತ ಲಾಭಗಳನ್ನು ತಿಳಿಸಲಾಗುತ್ತೆ. ಅಪ್ಪುಗೆಯ ಆರೋಗ್ಯಕರ ಲಾಭಗಳು, ಹಾಗೆ ಈ ಅಭ್ಯಾಸ ಉತ್ತೇಜಿಸುವ ಸಲುವಾಗಿ ಹಗ್ ಹಾಲಿಡೆ ಪ್ರತಿ ವರ್ಷ ಆಚರಿಸಲಾಗುತ್ತೆ.
ಅಂದರೆ ಪ್ರತಿ ವರ್ಷ ಎರಡು ಬಾರಿ ಹಗ್ ಡೆ ಆಚರಣೆಯಾದಂತಾಗುತ್ತದೆ. ಪ್ರೇಮಿಗಳ ದಿನಕ್ಕೂ 2 ದಿನ ಮುನ್ನ ಹಾಗೂ ಜೂನ್ 29ರಂದು ಕೂಡ ಆರಿಸಲಾಗುತ್ತದೆ, ಪ್ರೇಮಿಗಳ ವಾರದಲ್ಲಿ ಬರುವಂತಹ ಈ ಆಚರಣೆಗೆ ಈಗ ಹೆಚ್ಚು ಮಹತ್ವವಿದೆ.



Click it and Unblock the Notifications
