Latest Updates
-
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ!
Valentines Day 2025: ಪ್ರಪೋಸ್ ಡೇ ಆಚರಿಸೋದ್ಯಾಕೆ? ಮೊದಲು ಪ್ರಪೋಸ್ ಮಾಡಿದ್ಯಾರು ಗೊತ್ತಾ?
ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ವಾರ ಮೊದಲೇ ಆಚರಣೆಗಳು ಶುರುವಾಗಿವೆ. ಪ್ರೇಮಿಗಳ ವಾರವಾಗಿರುವುದರಿಂದ ಈ ವಾರದ ಎರಡನೇ ದಿನ ಪ್ರಪೋಸ್ ಡೇ ಆಗಿದೆ. ನಿನ್ನೆ ರೋಸ್ ಡೇ ದಿನ ಗುಲಾಬಿ ಹೂವು ನೀಡಿ ಪ್ರೀತಿ ವ್ಯಕ್ತಪಡಿಸಿರುವವರು ಇಂದು ಪ್ರಪೋಸ್ ಮಾಡುವ ದಿನವಂತೆ. ಈ ವಾರದಲ್ಲಿ ಪ್ರೇಮಿಗಳು ತಮ್ಮ ಮನದ ಆಸೆ ತನ್ನ ಗೆಳೆಯ ಗೆಳತಿಯೊಡನೆ ನಿವೇದನೆ ಮಾಡಿಕೊಳ್ಳುವ ಸಮಯವಾಗಿದೆ.
ಫೆಬ್ರವರಿ 7 ರಂದು ರೋಸ್ ಡೇ ಪ್ರಾರಂಭವಾಗಿ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಕೊನೆಗೊಳ್ಳುತ್ತದೆ, ಈ ವಾರ ಒಂದೊಂದು ವಿಚಾರವಾಗಿ ಮಹತ್ವ ಪಡೆದಿದೆ. ಅದೇ ರೀತಿ ಇಂದು ಪ್ರಪೋಸ್ ಡೇ ತನ್ನದೇ ಮಹತ್ವ ಹೊಂದಿದೆ. ಹಾಗಾದ್ರೆ ಈ ಎರಡನೇ ದಿನವಾಗಿರುವ ಪ್ರಪೋಸ್ ಡೇ ಮಹತ್ವವೇನು? ಇದನ್ನು ಮೊದಲು ಆರಂಭಿಸಿದ್ದು ಯಾರು? ಇತಿಹಾಸಲ್ಲಿ ಪ್ರಪೋಸ್ ಡೇ ಕುರಿತ ಉಲ್ಲೇಖ ಎಲ್ಲಿದೆ ಎಂಬ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ.

ಪ್ರಪೋಸ್ ಡೇ ಯಾವಾಗ ಆರಂಭಗೊಂಡಿತ್ತು ಎಂಬುದು ಇತಿಹಾಸದಲ್ಲಿ ಎಲ್ಲಿಯೂ ಸರಿಯಾಗಿ ಉಲ್ಲೇಖವಿಲ್ಲ. ಆದರೆ ತನ್ನ ಪ್ರೀತಿಯೊಂದು ಹೇಳಿಕೊಳ್ಳು ಪ್ರೇಮಿಗಳು ಒಂದು ದಿನವನ್ನು ಆರಿಸಿಕೊಳ್ಳುತ್ತಾರೆ ಅನ್ನೋದು ಶತಮಾನದಿಂದಲೂ ಹಿಂದಿನದು. 1477ರಲ್ಲಿ ಆಸ್ಟ್ರೀಯಾದ ಆರ್ಚ್‌ಡ್ಯೂಕ್ ಮ್ಯಾಕ್ಸಿಮಿಲಿಯನ್ ಬರ್ಗಂಡಿಯ ಮೇರಿಗೆ ವಜ್ರದ ಉಂಗುರ ನೀಡಿ ತನ್ನ ಮನದಾಳದ ಪ್ರೀತಿ ವ್ಯಕ್ತಪಡಿಸಿದ್ದ ಇದು ಮೊದಲ ಪ್ರಪೋಸ್ ಡೇ ಎಂಬುದಾಗಿ ಕರೆಯಾಗಿತ್ತು ಎಂಬ ಉಲ್ಲೇಖ ನೋಡಬಹುದು.
ಇದಾದ ಬಳಿಕ ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಸಂಪ್ರದಾಯ ನಡೆದು ಬಂದಿದೆ ಎಂದು ಹೇಳಲಾಗಿದೆ. ಕಾಲ ಕ್ರಮೇಣ, ಗೆಳೆಯ ಅಥವಾ ಗೆಳತಿ ತನ್ನ ಪ್ರೀತಿ ಹೇಳಿಕೊಳ್ಳುವಾಗ ಈ ಉಂಗುರು ನೀಡಿ ಮದುವೆಯಾಗುವುದಾಗಿ ನಿವೇದನೆ ಮಾಡಿಕೊಳ್ಳುವುದಾಗಿ ನಡೆದು ಬಂದಿದೆ. ಇದು ನಂತರದ ದಿನಗಳಲ್ಲಿ ಪ್ರಪೋಸ್ ಡೇ ಆಗಿ ಬದಲಾಗಿತ್ತು ಎನ್ನಲಾಗಿದೆ.
ಇನ್ನು ಪ್ರೇಮಿಗಳು ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಒಂದು ದಿನ ಆಯ್ಕೆ ಮಾಡಿಕೊಳ್ಳುತ್ತಾರೆ ಆ ದಿನವನ್ನೇ ಪ್ರಪೋಸ್ ಡೇ ಎಂದು ಕೂಡ ಕರೆಯಲಾಗಿದೆ, ಪ್ರೇಮಿಗಳ ವಾರದಲ್ಲಿ ಈ ದಿನಕ್ಕೆ ಬಹಳ ಮಹತ್ವವಿದೆ.
ಪ್ರಪೋಸ್ ಡೇ ಆಚರಿಸುವುದು ಹೇಗೆ?
ಇನ್ನು ನಿನ್ನೆಯ ರೋಸ್ ಡೇ ಅನ್ನು ಗುಲಾಬಿ ಹೂವು ನೀಡಿ ಆರಿಸಲಾಗುತ್ತದೆ. ಆದ್ರೆ ಪ್ರಪೋಸ್ ಡೇ ಆಚರಿಸುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಪ್ರಪೋಸ್ ಡೇ ದಿನ ನೀವು ಹೇಗೆ ಆಚರಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಈ ದಿನದಿಂದು ಕ್ಯಾಂಡಲ್ ನೈಟ್ ಡಿನ್ನರ್ ಬಹಳ ವಿಶೇಷ. ಬಹುತೇಕ ಪ್ರೇಮಿಗಳು ಪ್ರಪೋಸ್ ಡೇ ದಿನ ಕ್ಯಾಂಡಲ್ ನೈಟ್ ಡಿನ್ನರ್‌ಗೆ ತೆರಳಲು ಇಷ್ಟಪಡುತ್ತಾರೆ.
ಕ್ಯಾಂಡಲ್ ನೈಟ್ ಡಿನ್ನರ್ ಹೊರತುಪಡಿಸಿದರೆ ಪ್ರೇಮಿಗಳು ಈ ದಿನದಂದು ಶಾಪಿಂಗ್, ಸಿನಿಮಾ ಕಡೆ ಹೆಚ್ಚು ಒಲವು ಹೊಂದಿರುತ್ತಾರೆ. ಹೀಗಾಗಿ ಪ್ರಪೋಸ್ ಡೇ ದಿನ ಸಿನಿಮಾ ಮತ್ತು ಶಾಪಿಂಗ್ ಪ್ರೇಮಿಗಳ ಮೆಚ್ಚಿನ ವಿಚಾರಗಳು. ಹಾಗೆ ಪಾರ್ಕ್, ದೇವಸ್ಥಾನ ಕೂಡ ಅವರ ಮೆಚ್ಚಿನ ತಾಣಗಳು, ಇದಿಷ್ಟು ಪ್ರಪೋಸ್ ಡೇ ದಿನವನ್ನು ಇನ್ನಷ್ಟು ಸ್ಪೆಷಲ್ ಮಾಡುವ ವಿಚಾರಗಳಾಗಿವೆ.



Click it and Unblock the Notifications