Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
Valentines Day 2025: ಪ್ರಾಮಿಸ್ ಡೇ ಆಚರಿಸೋದ್ಯಾಕೆ? ಇದರ ಇತಿಹಾಸ ಗೊತ್ತಾ?
ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ನಡುವೆ ಪ್ರೇಮಿಗಳ ವಾರದಲ್ಲಿ 5ನೇ ದಿನದಂದು ನಾವು ಪ್ರಾಮಿಸ್ ಡೇ ಆಚರಣೆ ನೋಡಬಹುದು. ಈ ದಿನ ಪ್ರೇಮಿಗಳ ಪಾಲಿಗೆ ಪ್ರಮುಖ ದಿನವಾಗುತ್ತೆ. ಫೆಬ್ರವರಿ 11ರಂದು ಪ್ರಾಮಿಸ್ ಡೇ ಆಚರಿಸಲಾಗುತ್ತಿದೆ. ಈ ದಿನ ನೀವು ನಿಮ್ಮ ಪ್ರೇಮಿಗೆ ಕೆಲವೊಂದು ಪ್ರಾಮಿಸ್ ನೀಡಬೇಕು ಎಂದು ಬಯಸುತ್ತಾರೆ. ಈ ದಿನ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಾರೆ.
ಈ ದಿನದಂದು ಪ್ರೇಮಿಗಳು ತಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿ ಎಂಬ ಕಾರಣಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುವ ಪ್ರಾಮಿಸ್ ಮಾಡುತ್ತಾರೆ. ಹಾಗೆ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಮುಂದಾಗುತ್ತಾರೆ, ನಾವಿಂದು ಈ ಪ್ರಾಮಿಸ್ ಡೇ ಆರಂಭವಾಗಿದ್ದು ಏಕೆ? ಇದರ ಹಿಂದಿನ ಇತಿಹಾಸವೇನು? ಈ ದಿನ ಯಾವೆಲ್ಲಾ ಉಡುಗೊರೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಪ್ರೇಮಿಗಳ ದಿನದ ಈ ಪ್ರಾಮಿಸ್ ಡೇ ಅನ್ನು ಇತಿಹಾಸದಲ್ಲು ಹುಡುಕಿದರೆ ಎಲ್ಲಿಯೂ ನಿಖರ ಉಲ್ಲೇಖಗಳ ನೋಡಲು ಸಾಧ್ಯವಿಲ್ಲ. ಆದ್ರೆ 18 ನೇ ಶತಮಾನದ ಆರಂಭದಲ್ಲಿ ಪ್ರಾಮಿಸ್ ಡೇ ಯೂರೋಪ್‌ನಲ್ಲಿ ಪ್ರೇಮಿಗಳ ದಿನದ ಬದಲು ಕ್ರಿಸ್‌ಮಸ್ ಕಾಲದಲ್ಲಿ ಬಳಕೆಗೆ ಬಂದಿರಬಹುದು ಎಂದು ಊಹಿಸಲಾಗಿದೆ. ಸೇನೆಯಲ್ಲಿರುತ್ತಿದ್ದ ಸದಸ್ಯರು ಮನೆಗೆ ಬರುವುದಾಗಿ ಪ್ರಾಮಿಸ್ ಮಾಡುತ್ತಿದ್ದರು ಎಂಬುದಾಗಿ ಕೆಲವು ಕಡೆ ಉಲ್ಲೇಖಗಳಿವೆ.
ಆದರೆ ಬರು ಬರುತ್ತಾ ಇದು ಪ್ರೇಮಿಗಳ ದಿನದಂದು ಪ್ರಾಮಿಸ್ ದಿನ ಆಚರಣೆ ಹುಟ್ಟಿಕೊಂಡಿತು. ಆತ ಅಥವಾ ಆಕೆ ಈ ದಿನ ಇಡಿ ಜೀವನದ ಉದ್ದಕ್ಕೂ ಜೊತೆಗಿರುವ ಪ್ರಾಮಿಸ್ ಮಾಡುತ್ತಾನೆ. ಹಾಗೆ ಭವಿಷ್ಯದಲ್ಲಿ ಎಷ್ಟು ಪ್ರೀತಿ ನೀಡಬೇಕು ಎಂಬ ಪ್ರಾಮಿಸ್ ಮಾಡುತ್ತಾನಂತೆ.
ಪ್ರಾಮಿಸ್ ಡೇ ಮಹತ್ವ
ಯಾವುದೇ ಸಂಬಂಧದಲ್ಲಿ ವಿಶೇಷವಾಗಿ ಪ್ರೀತಿಯಲ್ಲಿ ಬಿದ್ದವರು, ಪ್ರಾಮಿಸ್ ಡೇಗೆ ಕಾಯುತ್ತಾರೆ. ಮುಂದಿನ ದಿನಗಳ ಭರವಸೆ ನೀಡುವ ದಿನವಾಗಿ ಇದನ್ನು ಆಚರಿಸುತ್ತಾರೆ. ಹಾಗಾದ್ರೆ ಈ ದಿನದಂದು ಯಾವೆಲ್ಲಾ ರೀತಿಯ ಪ್ರಾಮಿಸ್ ಮಾಡುತ್ತಾರೆ.
ಬದ್ಧತೆ ಮತ್ತು ನಿಷ್ಠೆ: ಪ್ರೀತಿಯ ದಾರಿಯಲ್ಲಿ ಯಾವುದೇ ಅಡ್ಡಿ ಎದುರಾದರು ಕೊನೆವರೆಗೂ ಜೊತೆಗಿರುವುದಾಗಿ ಪ್ರಾಮಿಸ್ ಮಾಡುವುದು. ಸಂಬಂಧಗಳ ಉಳಿಸಲು ಬದ್ಧತೆ, ನಿಷ್ಠೆಯಿಂದ ಇರುವ ಪ್ರಾಮಿಸ್ ಮಾಡುವುದು.
ಕಠಿಣ ಸಮಯದಲ್ಲಿ ಜೊತೆ ಇರುವುದು: ಪ್ರೀತಿ ಎಂದರೆ ಸುಖವಿದ್ದಾಗ, ಹಣವಿದ್ದಾಗ ಮಾತ್ರ ಎಂಬುದಲ್ಲ. ಎಂತಹ ಪರಿಸ್ಥಿತಿಯಲ್ಲೂ ಜೊತೆಗಿದ್ದು ಕೈ ಹಿಡಿದು ಜೊತೆಯಾಗಿ ನಿಲ್ಲವುದು, ಕಷ್ಟಗಳ ಎದುರಿಸುವಾಗಿ ಪ್ರಾಮಿಸ್ ಮಾಡುವುದು.
ಪ್ರಾಮಾಣಿಕತೆ ಮತ್ತು ಪಾರದರ್ಶಕತೆ: ಸಂವಹನದಲ್ಲಿ ಯಾವಾಗಲೂ ಮುಕ್ತ ಮತ್ತು ಪ್ರಾಮಾಣಿಕವಾಗಿರಲು ಬದ್ಧರಾಗಿರಿ, ಸಂಬಂಧದಲ್ಲಿ ಯಾವುದೇ ರಹಸ್ಯಗಳ ಇಟ್ಟುಕೊಳ್ಳದೆ ಎಲ್ಲಾ ವಿಚಾರದಲ್ಲು ಪಾರದರ್ಶಕವಾಗಿ ಇರುವ ಪ್ರಾಮಿಸ್ ಮಾಡುವುದು.
ಪರಸ್ಪರ ಗೌರವಿಸುವ ಪ್ರತಿಜ್ಞೆ: ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಗೌರವಿಸುವುದು, ಎಲ್ಲರ ಭಾವನೆಯನ್ನು ತನ್ನದೆ ಎಂಬ ಭಾವದಲ್ಲಿ ನೋಡುವುದು ಕೂಡ ಮುಖ್ಯವಾಗುತ್ತದೆ, ಈ ದಿನ ಈ ರೀತಿಯ ಪ್ರಾಮಿಸ್ ಮಾಡಿ.



Click it and Unblock the Notifications