Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Valentines Day 2025: ಟೆಡ್ಡಿ ದಿನದ ವಿಶೇಷ ಏನ್ ಗೊತ್ತಾ? ಕರಡಿ ಬೇಟೆಗೂ ಈ ದಿನಕ್ಕೂ ಇದೆ ನಂಟು..!!
ಪ್ರೇಮಿಗಳ ದಿನಕ್ಕೆ ದಿನಗಣನೆ ಆರಂಭವಾಗಿದೆ, ಈಗ ದಿನಕ್ಕೊಂದು ಆಚರಣೆ ನಡೆದಯುತ್ತಿದೆ. ಪ್ರೇಮಿಗಳ ವಾರದ ನಾಲ್ಕನೇ ದಿನದಂದು ಟೆಡ್ಡಿ ಡೇ ನಡೆಯಲಿದೆ. ಈ ಹಿಂದಿನ ಮೂರು ದಿನಗಳಲ್ಲಿ ರೋಸ್ ಡೇ, ಪ್ರಪೋಸ್ ಡೇ, ಚಾಕೋಲೆಟ್ ಡೇ ಆಚರಿಸಿಕೊಂಡಿದ್ದಾರೆ. ಪ್ರೇಮಿಗಳ ಫೆಬ್ರವರಿ 14ರ ವರೆಗೆ ಒಂದಲ್ಲಾ ಒಂದು ಆಚರಣೆಯಲ್ಲಿ ಕಳೆಯುತ್ತಾರೆ. ಅದರಲ್ಲೂ ಈ ಟೆಡ್ಡಿ ಡೇ 4ನೇ ದಿನದ ಆಚರಣೆಯಾಗಿದೆ.
ಈ ದಿನಂದು ಪ್ರೇಮಿಗಳು ಪರಿಸ್ಪರ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು ನೋಡಬಹುದು ಅದರಲ್ಲೂ ಹೆಚ್ಚಾಗಿ ಹುಡುಗರು ತನ್ನ ಪ್ರೇಯಸಿಗೆ ಟೆಡ್ಡಿಯನ್ನು ಗಿಫ್ಟ್ ಆಗಿ ನೀಡುವ ದಿನವಾಗಿದೆ. ಈ ದಿನ ಯಾವುದಾದರು ಗೊಂಬೆ, ಪ್ರಾಣಿ, ಪಕ್ಷಿ, ಹಾರ್ಟ್ ಆಕಾರದ ಟೆಡ್ಡಿಯನ್ನು ನೀಡುವ ಸಂಪ್ರದಾಯವಿದೆ. ಮಕ್ಕಳಿಂದ ಹಿಡಿದು ಹುಡುಗಿಯರಿಗೆ ಈ ಟೆಡ್ಡಿಗಳೆಂದರೆ ಬಹಳ ಇಷ್ಟವಿರುತ್ತೆ.

ಪ್ರತಿ ವರ್ಷ ಬರುವಂತೆ ಈ ವರ್ಷ ಕೂಡ ಟೆಡ್ಡಿ ದಿನ ಆಚರಿಸಲಾಗುತ್ತೆ. ಈ ದಿನ ಪ್ರೇಮಿಗಳು ಸಂತಸದಲ್ಲಿ ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವುದು ನೋಡಬಹುದು. ಪ್ರೀತಿಯ ಸವಿ ನೆನಪಿಗಾಗಿ ಈ ದಿನ ಟೆಡ್ಡಿಯನ್ನು ನೀಡಲಾಗುತ್ತದೆ. ಆದರೆ ಈ ಟೆಡ್ಡಿ ದಿನ ಆಚರಿಸುವುದು ಏಕೆ? ಯಾರು ಮೊದಲು ಆರಂಭಿಸಿದ್ದರು ಎಂಬ ಕುರಿತ ಇತಿಹಾಸ ನಿಮಗೆ ಗೊತ್ತಿದ್ಯಾ?
ಟೆಡ್ಡಿ ಡೇ ಅನ್ನೋದು ಬಹಳ ಹಿಂದಿನ ಇತಿಹಾಸಕ್ಕೆ ಕರೆದೊಯ್ಯುತ್ತೆ. ನೀವು ಟೆಡ್ಡಿ ಬೇರ್ ಹೆಸರು ಕೇಳುತ್ತಲೇ ಇರುತ್ತೀರಿ. ಅಂದರೆ ಒಂದು ಸುಂದರ ಕರಡಿ ಎನ್ನಬಹುದು. ಟೆಡ್ಡಿ ಬೇರ್ ಎನ್ನುವ ಹಸರು ಕೂಡ ಹಾಗೆಯೇ ಹುಟ್ಟಿಕೊಂಡಿದಲ್ಲ. ಅದಕ್ಕೊಂದು ಇತಿಹಾಸದ ಕಥೆ ಇದೆ. 1902ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಥಿಯೋಡರ್ ಟೆಡ್ಡಿ ರೂಸ್ವೆಲ್ಟ್ ಹೆಸರು ಈ ಟೆಡ್ಡಿ ಬೇರ್ ಎಂಬ ಹೆಸರಿಗೆ ಕಾರಣವಾಗಿದೆ.
ಹಾಗಾದ್ರೆ ಈತ ಯಾರು? ಈತನಿಗೂ ಟೆಡ್ಡಿ ಬೇರ್‌ಗೂ ಇರುವ ಸಂಬಂಧವೇನು ಅನ್ನೋದೆ ಕುತೂಹಲಕಾರಿ ಸಂಗತಿಯಾಗಿದೆ. 1902ರಲ್ಲೀ ಈ ಥಿಯೋಡರ್ ಟೆಡ್ಡಿ ರೂಸ್ವೆಲ್ಟ್ ಬೇಟೆಯಾಡಲು ಕಾಡಿಗೆ ಹೋದರು. ಆದರೆ ಅಲ್ಲಿ ಅವರಿಗೆ ಒಂದು ಕರಡಿಯನ್ನು ಕಟ್ಟಿ ಹಾಕಿ ಅದಕ್ಕೆ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವಂತೆ ಹೇಳಲಾಯಿತು. ಆದರೆ ಕಟ್ಟಿ ಹಾಕಿದ್ದ ಕರಡಿ ನೋಡಿ ಟೆಡ್ಡಿ ಗುಂಡು ಹಾರಿಸದೆ ಇರಲು ಮುಂದಾದರು.
ಕರಡಿ ಅವರತ್ತ ನೋಡುತ್ತಿದ್ದಂತೆ ಬಂದೂಕು ಕೆಳಗಿಳಿಸಿ ಕರಡಿಯನ್ನು ಹೊಡೆಯುವುದಿಲ್ಲ ಎಂದು ಅದನ್ನು ಬಿಟ್ಟುಬಿಡುವಂತೆ ಹೇಳಿ ಕಾಡಿನಿಂದ ವಾಪಾಸು ಬಂದರಂತೆ. ಅಧ್ಯಕ್ಷ ಟೆಡ್ಡಿ ರೂಸ್ವೆಲ್ಟ್ ಅವರ ಕರುಣಾಜನಕ ಕಥೆ ಕ್ಲಿಫರ್ಡ್ ಬೆರ್ರಿಮನ್ ಎಂಬುವರ ಗಮನ ಸೆಳೆಯಿತು. ಅವರು ಕಾರ್ಟೂನ್ ಚಿತ್ರ ರಚಿಸುವವರಾಗಿದ್ದರು. ಅವರು ಟೆಡ್ಡಿ ಹಾಗೂ ಬೇರ್ ಎಂದು ಕರೆದು ಕಾರ್ಟೂನ್ ರಚಿಸಿದರು.
ಅವರು ರಚಿಸಿದ ಕಾರ್ಟೂನ್ ಬಹಳ ಫೇಮಸ್ ಆಗಿತ್ತು. ಅನಂತರ ಆ ಕರಡಿಯ ಮೃದುವಾದ ಟೆಡ್ಡಿಗಳು ಮಾರುಕಟ್ಟೆಗೆ ಬಂದವು. ಎಲ್ಲರು ಅದನ್ನು ಟೆಡ್ಡಿ ಬೇರ್ ಎಂದು ಕರೆಯಲು ಆರಂಭಿಸಿದರು. ಇದಾದ ಬಳಿಕ ಪ್ರಪಂಚದಾದ್ಯಂತ ಈ ಟೆಡ್ಡಿ ಬೇರ್ ಫೇಮಸ್ ಆಗಿಬಿಟ್ಟಿತು. ಅನಂತರ ಈ ಟೆಡ್ಡಿ ಬೇರ್ ಹಲವು ರೂಪಾಂತರಗೊಂಡು ಮಕ್ಕಳು ಹಿರಿಯರು ಇಷ್ಟಪಡುವ ಆಟಿಕೆಯಾಯಿತು.
ಈಗ ಪ್ರೇಮಿಗಳ ದಿನದಂದು ಕೂಡ ಟೆಡ್ಡಿ ಬೇರ್ ನೀಡುವ ಸಂಪ್ರದಾಯ ನಡೆದು ಬಂದಿದೆ.



Click it and Unblock the Notifications
