Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
Valentines Day 2025: ಚಾಕೋಲೆಟ್ ಡೇ ಆರಂಭವಾಗಿದ್ದು ಹೇಗೆ? 2 ಸಾವಿರ ವರ್ಷದ ಇತಿಹಾಸ ಇದಕ್ಕಿದೆ!
ಪ್ರೇಮಿಗಳ ದಿನಕ್ಕೆ ದಿನಗಣನೆ ಆರಂಭವಾಗಿದೆ. ಪ್ರೇಮಿಗಳ ವಾರದಲ್ಲಿ ಈಗಾಗಲೇ 2 ದಿನ ಕಳೆದಿದೆ. ಹೀಗಾಗಿ ಎಲ್ಲಾ ದಿನದಲ್ಲೂ ಪ್ರೇಮಿಗಳು ಒಂದೊಂದು ಆಚರಣೆಯಲ್ಲಿ ತೋಡಗಿದ್ದಾರೆ. ರೋಸ್ ಡೇ ಹಾಗೂ ಪ್ರಪೋಸ್ ಡೇ ಕೂಡ ಮುಕ್ತಾಯಗೊಂಡಿದೆ. ಈಗ ಪ್ರೇಮಿಗಳ ವಾರದ 3ನೇ ದಿನವಾ ಚಾಕೋಲೆಟ್ ಡೇ ಆಚರಿಸಲಾಗುತ್ತಿದೆ. ಇಂದು ಪ್ರೇಮಿಗಳಿಗೆ ಚಾಲೋಲೆಟ್ ದಿನದ ಸಂಭ್ರಮ.
ಪ್ರೇಮಿಗಳ ವಾರದ ಮೂರನೇ ದಿನವನ್ನು ಚಾಕೋಲೆಟ್ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವ ಜೊತೆಗೆ ಅವರಿಗೆ ಇಷ್ಟವಾದ ಚಾಕೋಲೆಟ್ ನೀಡಿ ಅವರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಚಾಕೋಲೆಟ್ ಸಿಹಿಯ ಜೊತೆಗೆ ಪ್ರೀತಿಯನ್ನು ಕೂಡ ಹಂಚಿಕೊಳ್ಳುವ ವಸ್ತುವಾಗಲಿದೆ.

ಚಾಕೋಲೆಟ್ ಜೊತೆಗೆ ಯವುದಾದರು ಗಿಫ್ಟ್ ನೀಡಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ದಿನ ಕಳೆಯೋದು ಪ್ರೇಮಿಗಳ ದಿನದ ಸ್ಪೆಷಲ್ ಎನ್ನಬಹುದು. ಚಾಕೋಲೆಟ್ ಅನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈಗಂತು ದುವಾರಿ ಬೆಲೆಯ ಚಾಕೋಲೆಟ್ ಮಾರುಕಟ್ಟಗೆ ಬಂದಿವೆ. ಅದರಲ್ಲೂ ಪ್ರೇಮಿಗಳ ದಿನದಂದೇ ನೀಡಲು ವಿಶೇಷ ಚಾಕೋಲೆಟ್ ಸಹ ಇವೆ.
ಹಾಗಾದ್ರೆ ಈ ಚಾಕೋಲೆಟ್ ದಿನ ಆರಂಭವಾಗಿದ್ದು ಹೇಗೆ? ಪ್ರೇಮಿಗಳ ವಾರದಲ್ಲಿ ಈ ಚಾಕೋಲೆಟ್ ದಿನ ಆಚರಣೆ ಮಾಡುವುದೇಕೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಚಾಕೋಲೆಟ್ ದಿನವು 16ನೇ ಶತಮಾನದ ಆರಂಭದಲ್ಲಿ ಮೊದಲ ಬಾರಿಗೆ ನೋಡಬಹುದು. ಯೂರೋಪನ್‌ನಲ್ಲಿ ಮೊದಲು ಈ ಚಾಕೋಲೆಟ್ ನೀಡಿ ತಮ್ಮ ಪ್ರೀತಿ ಹೇಳಿಕೊಳ್ಳುವ ಅಥವಾ ವ್ಯಕ್ತಪಡಿಸುವ ಪರಿಪಾಠ ಆರಂಭಗೊಂಡಿತ್ತು ಎಂದು ಹೇಳಲಾಗಿದೆ.
ಆರಂಭದಲ್ಲಿ ಚಾಕೋಲೆಟ್ ಸಿಹಿ ಇರಲಿಲ್ಲ
ಮೊದಲು ಚಾಕೋಲೆಟ್ ಈಗಿನಂತೆ ಸಕ್ಕರೆಯಂತಹ ಸಿಹಿಯಾಗಿರಲಿಲ್ಲ. ಬದಲಿಗೆ ಎಲ್ಲಾ ಚಾಕೋಲೆಟ್‌ಗಳು ಕಹಿಯಾಗಿದ್ದವು. ಅಚ್ಚರಿ ಎನಿಸಿದರು ಇದು ಸತ್ಯ. ಮೊದಲು ಚಾಕೋಲೆಟ್‌ಗಳು ಕಹಿಯಾಗಿದ್ದವು. ಅಮೆರಿಕದಲ್ಲಿ ಕೋಕೋ ಬೀನ್ಸ್ ಅನ್ನು ಪುಡಿ ಮಾಡಿ ಮಸಾಲೆಗಳು ಮತ್ತು ಮೆಣಸಿನಕಾಯಿಗಳೊಂದಿಗೆ ಬೆರೆಸಿ ಮಸಾಲೆಯುಕ್ತ ಚಾಕೊಲೇಟ್ ತಯಾರಿಸಲಾಗುತ್ತಿತ್ತು.
ಈಗಲೂ ಕೂಡ ಕೆಲವು ಕೋಕೋ ಚಾಕೋಲೆಟ್‌ಗಳು ಸಕ್ಕರೆ ರಹಿತವಾಗಿ ಕೋಕೋ ಬಳಕೆಯಿಂದ ಕಹಿಯಾಗಿಯೇ ಇರುತ್ತದೆ. ಆದ್ರೆ ಈ ಹಿಂದೆ ಎಲ್ಲಾ ಚಾಕೋಲೆಟ್‌ಗಳು ಕಹಿಯಾಗಿಯೇ ಇರುತ್ತವೆ. 2 ಸಾವಿರ ವರ್ಷಗಳ ಹಿಂದೆ ಅಮೆರಿಕದಲ್ಲಿ ಮೊದಲು ಚಾಕೋಲೆಟ್‌ಗಳು ಮಾರುಕಟ್ಟೆಗೆ ಬಂದವು. ಕೋಕೋ ಮರದಿಂದ ಬರುವ ಹಣ್ಣುಗಳ ಮೂಲಕ ಪಡೆಯಲಾದ ಬೀಜದಿಂದ ಕಹಿಯಾದ ಚಾಕೋಲೆಟ್‌ಗಳು ಮಾರುಕಟ್ಟೆಗೆ ಬಂದಿದ್ದವು.
ಚಾಕೋಲೆಟ್‌ಗಳು ಕಹಿಯಾಗಿದ್ದರು ಕೂಡ ಜನರ ಮೆಚ್ಚುಗೆ ಗಳಿಸಿದರು. ಅಮೆರಿಕದಲ್ಲಿ ಅದರಲ್ಲೂ ಮೆಕ್ಸಿಕೋದಿಂದ ಬೇಡಿಕೆ ಪಡೆಯಲು ಆರಂಭವಾಗಿತ್ತು. ಹಾಗೆ ಸ್ಪೇನ್‌ನಲ್ಲಿ ಈ ಚಾಕೋಲೆಟ್‌ಗಳು ಹೆಸರುವಾಸಿಯಾದವು. ಅನಂತರ ಪ್ರಪಂಚದಾದ್ಯಂತ ಹರಡಿತು. ವಿಶ್ವದೆಲ್ಲೆಡೆ ಹರಡುವ ಕಾಲಾವಧಿಯಲ್ಲಿ ಚಾಕೋಲೆಟ್ ರೂಪಾಂತರಗೊಂಡಿತ್ತು. ಕಹಿಯಾಗಿದ್ದ ಚಾಕೋಲೆಟ್‌ಗಳು ಸಿಹಿ ರೂಪ ಪಡೆದಿದ್ದರು.
ಇದಾದ ಬಳಿಕ ಸಿಹಿ ಚಾಕೋಲೆಟ್‌ಗಳು ಶುಭದ ಸಂಕೇತವಾದವು, ಸ್ನೇಹ, ಪ್ರೀತಿ ಹೀಗೆ ಪ್ರತಿಯೊಂದು ವಿಚಾರದಲ್ಲೂ ಸಿಹಿ ಚಾಕೋಲೆಟ್‌ಗಳು ಸ್ಥಾನ ಪಡೆದವು. ಈಗಿನ ಟ್ರೆಂಡ್‌ನಲ್ಲಿ ಡಾರ್ಕ್ ಚಾಕೋಲೆಟ್‌ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ.
ಈ ಡಾರ್ಕ್ ಚಾಕೋಲೆಟ್‌ಗಳು ಆರೋಗ್ಯದ ದೃಷ್ಟಿಯಲ್ಲೂ ಬಹಳ ಉತ್ತಮ. ಇವು ನಮ್ಮ ಸಿರೊಟೋನಿನ್ ಮತ್ತು ಡೋಪಮೈನ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗುತ್ತದೆ. ಇದು ನಗು ಹಾಗೂ ಸಂತೋಷ ಹೆಚ್ಚಿಸುವಂತಹ ಹಾರ್ಮೋನ್‌ಗಳಾಗಿವೆ.



Click it and Unblock the Notifications
